Connect with us

    LATEST NEWS

    ಗ್ಯಾಸ್‌ ಲೈಟರ್‌ ಕೆಲಸ ಮಾಡ್ತಿಲ್ಲ ಅಂತ ಹೊಸತು ಖರೀದಿಸುವ ಮೊದಲು ಈ ಟ್ರಿಕ್ಸ್‌ ಟ್ರೈ ಮಾಡಿ

    Published

    on

    ಮಂಗಳೂರು: ಅಡುಗೆಮನೆಯಲ್ಲಿ ಗ್ಯಾಸ್‌ ಇಲ್ಲ ಎನ್ನುವುದನ್ನು ಊಹಿಸಲು ಆಗುವುದಿಲ್ಲ. ಗ್ಯಾಸ್‌ನಷ್ಟೇ ಮುಖ್ಯವಾದ ಇನ್ನೊಂದು ವಸ್ತು ಗ್ಯಾಸ್‌ ಲೈಟರ್‌. ಗ್ಯಾಸ್‌ ಹಚ್ಚಲು ಗ್ಯಾಸ್‌ ಲೈಟರ್‌ ಬೇಕೇ ಬೇಕು. ಅಪರೂಪಕ್ಕೊಮ್ಮೆ ಬೆಂಕಿಕಡ್ಡಿ ಗೀರಿ ಗ್ಯಾಸ್‌ ಹಚ್ಚಬಹುದು. ಹಾಗಂತ ಪ್ರತಿದಿನ ಅದನ್ನೇ ಮಾಡಲು ಸಾಧ್ಯವಿಲ್ಲ. ಆದ್ರೆ ಈ ಗ್ಯಾಸ್‌ ಲೈಟರ್‌ಗಳು ಪದೇ ಪದೇ ಕೈ ಕೊಡುತ್ತವೆ. ಎಷ್ಟೆ ಉತ್ತಮ ಗುಣಮಟ್ಟದ ಲೈಟರ್‌ ತಂದರೂ ಬೆಂಕಿ ಹಿಡಿಯುವುದಿಲ್ಲ.

    ಗ್ಯಾಸ್‌ ಲೈಟರ್‌ ಹಾಳಾಗಲು ಕಾರಣಗಳು ಹಲವು. ಕೆಲವೊಮ್ಮೆ ಸರಿಯಾಗಿ ನಿರ್ವಹಣೆ ಮಾಡದೇ ನೀರು ಸೇರುವುದು ಕೂಡ ಗ್ಯಾಸ್‌ ಲೈಟರ್‌ ಕೆಲಸ ಮಾಡದೇ ಇರಲು ಕಾರಣವಾಗಬಹುದು. ಒಂದೆರಡು ಬಾರಿ ಇದನ್ನು ಸರಿಪಡಿಸಲು ಪ್ರಯತ್ನಿಸಿ ನಂತರ ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಮುಂದಿನ ಸಲ ಗ್ಯಾಸ್‌ ಲೈಟರ್‌ ಹಾಳಾದರೆ ಅದನ್ನು ಎಸೆಯುವ ಬದಲು ಈ ಟ್ರಿಕ್ಸ್‌ಗಳನ್ನ ಬಳಸಿ ನೋಡಿ. ಖಂಡಿತ ನಿಮ್ಮ ಗ್ಯಾಸ್‌ ಲೈಟರ್‌ ವರ್ಕ್‌ ಆಗುತ್ತೆ.

    ಲೈಟರ್‌ಗೆ ಶಾಖ ನೀಡಿ

    ಹಲವು ಬಾರಿ ಗ್ಯಾಸ್‌ ಲೈಟರ್‌ ಶೀತ ಮತ್ತು ತೇವಾಂಶದ ಕಾರಣದಿಂದ ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಲೈಟರ್ ಅನ್ನು ಕಸಕ್ಕೆ ಎಸೆಯುವ ಮೊದಲು, ಅದನ್ನು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಇರಿಸಿ. ಆದರೆ ಯಾವುದೇ ಕಾರಣಕ್ಕೂ ಬೆಂಕಿ ಹಿಡಿಯುವುದು ಮಾಡಬೇಡಿ. ಇದರಿಂದ ಸಂಪೂರ್ಣ ಹಾಳಾಗುತ್ತದೆ ನೆನಪಿರಲಿ.

    ಲೈಟರ್ ಸ್ವಚ್ಛ ಮಾಡಿ

    ಲೈಟರ್ ಅನ್ನು ಕೆಲವು ತಿಂಗಳುಗಳವರೆಗೆ ಬಳಸಿದ ನಂತರ ಅದರೊಳಗೆ ಕೊಳಕು ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಲೈಟರ್ ಕೆಲವೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಲೈಟರ್ ಅನ್ನು ಎಸೆಯುವ ಮೊದಲು, ಅದನ್ನು ಒಳಗಿನಿಂದ ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದಕ್ಕಾಗಿ ಸ್ಕ್ರೂಡ್ರೈವರ್ ಅನ್ನು ಬಳಸಬಹುದು.

    ಪೆಟ್ರೋಲ್ ಅಥವಾ ಸೀಮೆ ಎಣ್ಣೆಯನ್ನು ಬಳಸಿ

    ಗ್ಯಾಸ್ ಲೈಟರ್ ಒಳಗೆ ಸಂಗ್ರಹವಾದ ಕೊಳೆಯನ್ನು ಸ್ವಚ್ಛಗೊಳಿಸಲು, ಹಿಂಭಾಗದಲ್ಲಿ ರಬ್ಬರ್ ಹ್ಯಾಂಡಲ್ ಅನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ನೀವು ಅದನ್ನು ಎಳೆಯಬಹುದು. ಇದಾದ ನಂತರ ಲೈಟರ್‌ನಲ್ಲಿರುವ ಸ್ಪ್ರಿಂಗ್ ಕೂಡ ಹೊರಬರುತ್ತದೆ. ಎಲ್ಲಾ ವಸ್ತುಗಳನ್ನು ಹೊರತೆಗೆದು ಅದರಲ್ಲಿ ಎರಡು-ನಾಲ್ಕು ಹನಿ ಸೀಮೆಎಣ್ಣೆ ಅಥವಾ ಪೆಟ್ರೋಲ್ ಸೇರಿಸಿ ಮತ್ತು ಸ್ಕ್ರೂಡ್ರೈವರ್ ಮತ್ತು ಒಣ ಹತ್ತಿ ಬಟ್ಟೆಯ ಸಹಾಯದಿಂದ ತಿರುಗಿಸುವ ಮೂಲಕ ಲೈಟರ್‌ನ ಪೈಪ್ ಅನ್ನು ಸ್ವಚ್ಛಗೊಳಿಸಿ. ಇದರ ನಂತರ, ಲೈಟರ್‌ನ ಎಲ್ಲಾ ಘಟಕಗಳನ್ನು ಮೊದಲಿನ ರೀತಿಯಲ್ಲಿಯೇ ಜೋಡಿಸಿ. ಆದರೆ ಸ್ಪಿಂಗ್‌ ಕಟ್‌ ಆದರೆ ಲೈಟರ್‌ ವರ್ಕ್‌ ಆಗುವುದಿಲ್ಲ ನೆನಪಿರಲಿ.

    ಒಣ ಬಟ್ಟೆಯಿಂದ ಸ್ವಚ್ಛ ಮಾಡಿ

    ಲೈಟರ್ ಎಷ್ಟು ಸಮಯ ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದು ಅದರ ನಿರ್ವಹಣೆಯ ಮೇಲೆ ಅವಲಂಬಿತವಾಗಿರುತ್ತದೆ. ಅಡುಗೆಮನೆಯ ಮುಖ್ಯ ವಸ್ತುವಾಗಿರುವ ಲೈಟರ್‌ ತುಂಬಾ ಸಮಯ ಬಾಳಿಕೆ ಬರಬೇಕು ಅಂದ್ರೆ ಪ್ರತಿ ಬಳಕೆಯ ನಂತರ ಅದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ. ನೀರು ತಾಕದಂತೆ ನೋಡಿಕೊಳ್ಳಿ. ಇದಲ್ಲದೇ ಲೈಟರ್ ಬಳಸಿದ ನಂತರ ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ.

    ಈ ಮೇಲಿನ ಸರಳ ಟ್ರಿಕ್ಸ್‌ಗಳನ್ನು ಅನುಸರಿಸುವ ಮೂಲಕ ಗ್ಯಾಸ್‌ ಲೈಟರ್‌ ಹಾಳಾಗದಂತೆ ತುಂಬಾ ದಿನಗಳವರೆಗೆ ಬಳಸಬಹುದು.

    DAKSHINA KANNADA

    ದತ್ತಿ ಇಲಾಖೆ ದೇವಸ್ಥಾನದಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ..!

    Published

    on

    ಮಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕದ ದತ್ತಿ ಇಲಾಖೆ ಫುಲ್ ಅರ್ಲರ್ಟ್‌ ಆಗಿದೆ. ಕರ್ನಾಟಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.

    ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ದತ್ತಿ ಇಲಾಖೆ ದೇವಸ್ಥಾನದ ಸೇವೆಗಳಿಗೆ , ದೀಪಗಳಿಗೆ, ಪ್ರಸಾದ ತಯಾರಿಗೆ ಮತ್ತು ಅನ್ನಛತ್ರದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚಿಸಿದೆ.

    ತಿರುಪತಿ ದೇವಾಲಯದ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪವೇ ರವಾನೆ ಆಗುತ್ತಿದೆ. ಆದ್ರೆ ಜಗನ್‌ ರೆಡ್ಡಿಯ ಸರ್ಕಾರದ ನಾಲ್ಕು ವರ್ಷ ನಂದಿನಿ ತುಪ್ಪ ತಿರುಪತಿಗೆ ಪೂರೈಕೆ ಮಾಡಿರಲಿಲ್ಲ. ಹೀಗಾಗಿ ತಿರುಪತಿ ಲಡ್ಡುವಿಗೆ ಬಳಕೆ ಮಾಡಿದ ತುಪ್ಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಭಂಧ ಇಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಹೇಳಿದ್ದಾರೆ.

    Continue Reading

    LATEST NEWS

    ನಾಲ್ಕನೇ ಮಗುವೂ ಹೆಣ್ಣಾಯಿತೆಂದು ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದ ತಂದೆ

    Published

    on

    ಮಂಗಳೂರು/ ಇಟ್ವಾ: ಹೆಣ್ಣು ಮಕ್ಕಳು ಹುಟ್ಟಿದರೆ ಮನೆಗೆ ಲಕ್ಷ್ಮಿ ಬಂದಳು ಎಂಬ ಸಂಭ್ರಮ ಹೆಚ್ಚಿನ  ಮನೆಗಳಲ್ಲಿ ಇರುತ್ತದೆ. ಭೇಟಿ ಬಚಾವೋ, ಭೇಟಿ ಪಡಾವೋ ಎಂಬುದಾಗಿ ಸರ್ಕಾರ ಹೆಣ್ಣು ಮಕ್ಕಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ ಕಡಿಮೆ ಆಗಿಲ್ಲ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆ ಸಾಕ್ಷಿ.

    ನಾಲ್ಕನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ತಂದೆಯೇ ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದಿರುವ ಕ್ರೂ*ರ ಘಟನೆ ನಡೆದಿದೆ. ಇಟ್ವಾ ಎಂಬಲ್ಲಿ ಈ ಕ್ರೌ*ರ್ಯ ನಡೆದಿದೆ.

    ನೆಲಕ್ಕೆ ಬಡಿದು ಕೊಂದ ಪಾಪಿ!

    30 ವರ್ಷದ ಬಬ್ಲು ದಿವಾಕರ್​ ಈ ಕೃ*ತ್ಯ ಎಸಗಿದ ತಂದೆ.  ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ಹೆಣ್ಣು ಮಕ್ಕಳ ಬಳಿಕ ದಿವಾಕರ್​ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ. ಆದರೆ, ನಾಲ್ಕನೇ ಮಗುವೂ ಹೆಣ್ಣಾಯಿತು. ಇದರಿಂದ ಕೋಪಗೊಂಡ ಆತ ಭಾನುವಾರ(ಸೆ.15) ತಿಂಗಳ ಶಿಶುವನ್ನು ನೆಲಕ್ಕೆ ಎಸೆದಿದ್ದಾನೆ.

    ಮೊದಲ ಹೆಂಡತಿಯಿಂದ ಈಗಾಗಲೇ ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ದಿವಾಕರ್​ ಇದೇ ಕಾರಣದಿಂದ ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೂ ಮೊದಲ ಮಗು ಹೆಣ್ಣಾಗಿತ್ತು. ಇದೀಗ ಎರಡನೇ ಮಗುವೂ ಹೆಣ್ಣಾಗಿದೆ. ಒಂದು ತಿಂಗಳ ಹಿಂದೆ ಮಗು ಜನಿಸಿದ್ದು, ಭಾನುವಾರ ಮಗು ತಾಯಿಯ ಮಡಿಲಲ್ಲಿ ಮಲಗಿತ್ತು. ಈ ವೇಳೆ ಡ ದಿವಾಕರ್​ ತಾಯಿಯಿಂದ ಮಗುವನ್ನು ಕಸಿದು, ನೆಲಕ್ಕೆ ಬಡಿದಿದ್ದಾನೆ. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಗು ಅದಾಗಲೇ ಗಂಭೀ*ರ ಗಾ*ಯದಿಂದ ಮೃ*ತಪಟ್ಟಿತ್ತು.

    ಇದನ್ನೂ ಓದಿ : ಹನಿಟ್ರ್ಯಾಪ್ : ಸುಂದರಿ ಮನೆಗೆ ಕರೆದಳೆಂದು ಹೋಗಿ 40 ಲಕ್ಷ ಕಳೆದುಕೊಂಡ ಉದ್ಯಮಿ

    ಇದೀಗ ಹೆಂಡತಿ ನೀಡಿರುವ ದೂರಿನ ಆಧಾರದ ಮೇಲೆ. ಬಿಎನ್​ಎಸ್​ ಸೆಕ್ಷನ್​ 105ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

    Continue Reading

    LATEST NEWS

    ಮಂಗಳೂರು: ಮೂರು ದಿನದ ಬಿಎನ್‌ಐ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ-2024ಗೆ ಚಾಲನೆ

    Published

    on

    ಮಂಗಳೂರು: ಉದ್ಯಮಿಗಳ ಮತ್ತು ವೃತ್ತಿಪರರ ಸಂಘಟನೆ ಬಿಸ್‌ನೆಸ್‌ ನೆಟ್‌ವರ್ಕ್ ಇಂಟರ್ ನ್ಯಾಶನಲ್‌ – ಬಿಎನ್ಐ ಮಂಗಳೂರು ಮತ್ತು ಉಡುಪಿ ವತಿಯಿಂದ ಬಿಗ್ ಬ್ರಾಂಡ್ಸ್ ಎಕ್ಸ್‌ಪೊ – 2024 ಪ್ರದರ್ಶನ ಇಂದು ಮಂಗಳೂರಿನ ಡಾ. ಟಿ.ಎಂ.ಎ. ಪೈ ಇಂಟರ್ ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ ನಲ್ಲಿ ಆರಂಭಗೊಂಡಿತು. ಮೂರು ದಿನಗಳ ಕಾಲ ನಡೆಯುವ ಎಕ್ಸ್‌ಪೋವನ್ನು ರಿಬ್ಬನ್ ಕತ್ತರಿಸುವ ಮೂಲಕ ಸ್ಪೀಕರ್ ಯು ಟಿ ಖಾದರ್ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಖಾದರ್‌, ಇಂತಹ ಎಕ್ಸ್‌ಪೋಗಳು ನಮ್ಮ ರಾಜ್ಯ, ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ಆರ್ಥಿಕವಾದ ಚಲನವಲನಗಳು ಎಲ್ಲಿ ಹೆಚ್ಚಾಗಿ ಆಗುತ್ತದೆಯೋ ಅಲ್ಲಿ ಉದ್ಯೋಗಾವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಎಕ್ಸ್‌ಪೋ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ನುಡಿದರು.

    ಬಿಎನ್‌ಐ ಎಕ್ಸ್‌ಪೋದಲ್ಲಿ ವಿಶೇಷ ಪುರವಣಿಯನ್ನು ಕೂಡಾ ಬಿಡುಗಡೆಗೊಳಿಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಇದನ್ನು ಬಿಡುಗಡೆಗೊಳಿಸಿದರು. ಈ ಬಗ್ಗೆ ಮಾತನಾಡಿದ ಅವರು, 125ಕ್ಕೂ ಹೆಚ್ಚಿನ ಮಳಿಗೆಗಳು ಈ ಎಕ್ಸ್‌ಪೋ ಯಶಸ್ವಿಯಾಲೆಂದು ಹಾರೈಸಿದರು. ಇಂತಹ ಎಕ್ಸ್‌ಪೋಗಳ ಪ್ರದರ್ಶನಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ಆರ್ಥಿಕತೆಯ ವಿಚಾರದಲ್ಲಿ ಮುಂಚೂಣಿ ನಗರವಾಗಿರುವ ಮಂಗಳೂರಿನಲ್ಲಿ ಇಂತಹ ಎಕ್ಸ್‌ಪೋ ಮಾಡಲು ಪ್ರತ್ಯೇಕ ವ್ಯವಸ್ಥೆ ಆಗಬೇಕು ಎಂದರು.

    ಬಿಎನ್‌ಐ ಕಾರ್ಯ ನಿರ್ವಾಹಕ ನಿರ್ದೇಶಕ ಗಣೇಶ್ ಶರ್ಮಾ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್‌. ಆಭರಣಗಳು, ವಿಮೆ, ಗಾರ್ಮೆಂಟ್ಸ್‌, ಐಟಿ ಉತ್ಪನ್ನಗಳು, ಸಾಫ್ಟ್‌ವೇರ್‌, ಕಚೇರಿ ಮತ್ತು ಗೃಹ ಪೀಠೋಪಕರಣಗಳು, ಆಹಾರ ಉತ್ಪನ್ನಗಳು ಸೇರಿದಂತೆ 120 ಕ್ಕೂ ಆಧಿಕ ಉದ್ಯಮಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಪ್ರದರ್ಶನ ಇರುತ್ತದೆ ಎಂದರು.

    ಬಿಎನ್‌ಐ ಸದಸ್ಯರಾಗಿರುವ ಹಾಗೂ ಎಕ್ಸ್‌ಪೋದಲ್ಲಿ ಪಾಲ್ಗೊಂಡ ಉದ್ಯಮಿಗಳನ್ನು ಇದೇ ವೇಳೆ ಗೌರವಿಸಲಾಯಿತು. ವಿವಿಧ ಕಂಪೆನಿಗಳಿಂದ ನೀಡಲಾಗುತ್ತಿರುವ ಆಫರ್‌ಗಳನ್ನು ಪ್ರಕಟಿಸಲಾಯಿತು. ಮಂಗಳೂರು- ಉಡುಪಿ ಜಗತ್ತಿನ ಉದ್ಯಮಿಗಳ ಸಂಘಟನೆ ಬಿಸ್‌ನೆಸ್‌ ನೆಟ್‌ವರ್ಕ್ ಇಂಟರ್ ನ್ಯಾಶನಲ್‌ ನ ಭಾಗವಾಗಿದ್ದು, ನೂರಕ್ಕೂ ಅಧಿಕ ವಿವಿಧ ವ್ಯಾಪಾರ- ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 310 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ವರ್ಷದ ಎಕ್ಸ್‌ಪೊ ಈ ಸರಣಿಯ 3 ನೇ ಆವೃತ್ತಿಯಾಗಿದೆ. ಕಾರ್ಯಕ್ರಮದಲ್ಲಿ ಎಕ್ಸ್ಪೋ ಅಧ್ಯಕ್ಷ ಮೋಹನ್ ರಾಜ್‌, ಬಿಎನ್ ಐ ಸದಸ್ಯ ಮಹೇಶ್ ಶೆಟ್ಟಿ, ನಿರ್ದೇಶಕ ಸುನಿಲ್ ದತ್ ಪೈ, ಪ್ರಜ್ವಲ್ ಶೆಟ್ಟಿ, ಡಾ. ಸಚಿನ್ ನಡ್ಕ , ಪ್ರೀತಿ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.

    Continue Reading

    LATEST NEWS

    Trending