ಬ್ರಿಟನ್: 18ನೇ ಶತಮಾನದಲ್ಲಿ ಮೈಸೂರು ರಾಜ್ಯವನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ ಬಳಸುತ್ತಿದ್ದ ಸಿಂಹಾಸನದ ಕಳಸವೊಂದನ್ನು ಬ್ರಿಟನ್ ಸರ್ಕಾರ ಹರಾಜಿಗೆ ಇಟ್ಟಿದೆ.
ಸಿಂಹಾಸನದಲ್ಲಿ ಒಟ್ಟು 9 ಕಳಸಗಳಿದ್ದವು, ಆ ಪೈಕಿ ಹುಲಿಯ ತಲೆಯುಳ್ಳ ಈ ಐತಿಹಾಸಿಕ ಕಳಸಕ್ಕೆ ಒಂದನ್ನು ಈಗ ಹರಾಜಿಗೆ ಇಡಲಾಗಿದೆ.
ಮೈಸೂರಿನಲ್ಲಿ ಇರಬೇಕಿದ್ದ ಸಿಂಹಾಸನ ಲಂಡನ್ ಸೇರಿದ್ದು ಹೇಗೆ ಎಂದರೆ ಇದನ್ನು ಹಲವಾರು ದಶಕಗಳ ಹಿಂದೆ ಭಾರತದಿಂದ ಲೂಟಿ ಮಾಡಲಾಗಿತ್ತು.
ಮೈಸೂರಿನಿಂದ ಲೂಟಿ ಮಾಡಿ ಈ ಅಪೂರ್ವ ಸಿಂಹಾಸನವನ್ನು ಲಂಡನ್ ತನ್ನ ಕಡೆ ಇಟ್ಟುಕೊಂಡಿದ್ದು, ಇದೀಗ ಹರಾಜಿಗೆ ಇಟ್ಟಿದೆ.
ಹರಾಜಿನ ಬೆಲೆ 1.5 ಮಿಲಿಯನ್ ಪೌಂಡ್, ರೂಪಾಯಿ ಲೆಕ್ಕದಲ್ಲಿ ಸುಮಾರು 15 ಕೋಟಿ!ಆದರೆ ಬ್ರಿಟನ್ ಸರ್ಕಾರ ಒಂದು ಸಮಸ್ಯೆಯನ್ನು ಎದುರಿಸುತ್ತಿದೆ.
ಅದೇನೆಂದರೆ, ಹರಾಜಿಗೆ ಇಟ್ಟರೂ ಇದನ್ನು ಬೇರೆ ದೇಶಕ್ಕೆ ರಫ್ತು ಮಾಡಲು ಕೆಲವೊಂದು ತಾಂತ್ರಿಕ ತೊಂದರೆಗಳು ಇವೆಯಂತೆ.
ಇದೇ ಕಾರಣಕ್ಕೆ ಇದನ್ನು ಬ್ರಿಟನ್‌ನ್ನವರೇ ಖರೀದಿ ಮಾಡಬೇಕಿದೆ. ಆದ್ದರಿಂದ ತನ್ನ ದೇಶದ ಖರೀದಿದಾರರನ್ನು ಸರ್ಕಾರ ಹುಡುಕುತ್ತಿದೆ.