ಲಾಹೋರ್: ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ ಪಕ್ಷದ ಮಹಿಳಾ ಶಾಸಕಿಯೊಬ್ಬರ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,
ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಪಾಕಿಸ್ತಾನದ ಪಂಜಾಬ್ ನ ತಕ್ಷಿಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಸಾನಿಯಾ ಆಶಿಖ್ ಅವರ ವಿಡಿಯೋ ಇದಾಗಿದೆ ಎಂದು ಹೇಳಲಾಗಿದ್ದು,
ಕಳೆದ ಕೆಲ ದಿನಗಳಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಚಾರ ಶಾಸಕಿಯ ಗಮನಕ್ಕೆ ಬಂದಿದ್ದು. ದುರುದ್ದೇಶದಿಂದ ತಿರುಚಿ ಮಾಡಿರುವ ವಿಡಿಯೋವಾಗಿದ್ದು,
ಈ ಬಗ್ಗೆ ತನಿಖೆ ನಡೆಸಬೇಕೆಂದು ಸಾನಿಯಾ ಫೆಡರಲ್ ಇನ್ವೆಷ್ಟಿಗೇಷನ್ ಸಂಸ್ಥೆಗೆ ದೂರು ನೀಡಿದ್ದರು.
ಅಶ್ಲೀಲ ವಿಡಿಯೋದಲ್ಲಿ ಪಿಎಂಎಲ್ ಎನ್ ಶಾಸಕಿ ಸಾನಿಯಾ ಇದ್ದಿರುವುದಾಗಿ ಆರೋಪಿಸಲಾಗಿತ್ತು. ಆದರೆ ಶಾಸಕಿ ಆರೋಪವನ್ನು ಅಲ್ಲಗಳೆದಿದ್ದಾರೆ.
ದೂರಿನ ನಂತರ ಪಂಜಾಬ್ ಪ್ರಾಂತ್ಯದ ಎಫ್ ಐಎ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ನಂತರ ಪೊಲೀಸರು ಲಾಹೋರ್ ಮೂಲದ ವ್ಯಕ್ತಿಯನ್ನು ಬಂಧಿಸಿದ್ದರು.