Friday, July 1, 2022

‘ಟಿಪ್ಪು ಸುಲ್ತಾನ್ ಪ್ರತಾಪನಂತೆ ಬೆತ್ತಲೆ ಲೇಖನಿ ಸಿಂಹವಲ್ಲ’- ಕೆ.ಅಶ್ರಫ್

ಮಂಗಳೂರು: ಬೆತ್ತಲೆ ಜಗತ್ತಿನಲ್ಲಿ ಸುಳ್ಳುಗಳನ್ನು ಪೋಣಿಸಿ ಬರೆದು ಇಸ್ಲಾಮೂ ಫೋಬಿಯಾದ ಮೂಲಕ ಈ ರಾಜ್ಯದ ಹಿಂದುಳಿದ, ದಲಿತರ, ಪರಿಶಿಷ್ಟರ ಮತ್ತು ಬುಡಕಟ್ಟು ಜನಾಂಗದ ದೃಷ್ಟಿಯಲ್ಲಿ ಈ ದೇಶದ ಮುಸ್ಲಿಮರ ಬಗ್ಗೆ ವೈರತ್ವವನ್ನು ಸೃಷ್ಟಿಸಿ,ಕೇಶವ ಕೃಪಾದಿಗಳಿಂದ ಮೆಚ್ಚಿಸಿಕೊಂಡು, ಸಂಸದ ದೀಕ್ಷೆ ಪಡೆದ ಪ್ರತಾಪ ಬೆತ್ತಲೆ ಲೇಖನಿ ಸಿಂಹನಿಗೆ ಏನು ಅರಿವಿದೆ ಟಿಪ್ಪುವಿನ ಹುಲಿಯ ಖಡ್ಗ ಘರ್ಜನೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.


ಲೇಖಕ ಪ್ರತಾಪಸಿಂಹನಿಗೆ ತಿರುಗೇಟು ನೀಡಿ ಮಾತನಾಡಿದ ಅವರು ‘ಪ್ರತಾಪನು ಇಂದು ಸಲ್ಲಿಸುತ್ತಿರುವ ವೈದಿಕ ನಿಷ್ಟೆಯಂತೆಯೆ ಅಂದು ಟಿಪ್ಪುವಿನ ಆಚೆಗಿನ ಪ್ರಾಂತ್ಯ ರಾಜರು, ಪೇಶ್ವೆ ವೈದಿಕರಿಗೆ ನಿಷ್ಠೆ ಸೂಚಿಸಿದ ಕಾರಣಕ್ಕೆ ಭಾರತವು ಬ್ರಿಟಿಷರಿಂದ ಸ್ವಾತಂತ್ರ ಹೊಂದಲು ನೂರ ಐವತ್ತು ವರುಷ ತಡವಾಯಿತು.

ಟಿಪ್ಪು ಈ ನಾಡಿನ ನೈಜ ಸ್ವಾತಂತ್ರ್ಯ ಹೋರಾಟಗಾರ,ಟಿಪ್ಪು ಅನುಷ್ಟಾನ ಗೊಳಿಸಿದ ಪೊಲೀಸ್ ವ್ಯವಸ್ಥೆ, ಭೂ ಸುಧಾರಣೆ ಕಾಯ್ದೆ,ಪಾಳೇಗಾರಿಕೆ ರದ್ದತಿ,ಕೃಷಿ ಕ್ಷೇತ್ರದ ಉತ್ತೇಜನ, ಉದ್ದಿಮೆ ಪ್ರಗತಿಯಿಂದಾಗಿಯೆ, ಬಹುಷ್ಯ ಪ್ರತಾಪನ ವೈದಿಕ ಪೂರ್ವಜರಿಗೆ ಸೋಮಾರಿತನದಿಂದ ಜನರನ್ನು ಜೀತದ ಆಳುಗಳಾಗಿ ಮಾಡಿ ಅವರನ್ನು ಪೀಳಿಗೆಗಳಿಂದ ಪೀಳಿಗೆವರೆಗೆ ಲೂಟಿ ಮಾಡಿ ಭಕ್ಷಿಸುವ ವ್ಯವಸ್ಥೆ ತಪ್ಪಿ ಹೋಯಿತೆಂದು ಪರಿತಪಿಸಿ, ಪ್ರತಾಪನಲ್ಲಿ ಹೇಳಿ, ಕೇಶವ ಕೃಪಾದಿಗಳು, ಟಿಪ್ಪುವಿನ ವಿರುದ್ಧ ಹೇಳಿಕೆ ನೀಡಲು ಫರ್ಮಾನು ಹೊರಡಿಸಿರಬಹುದು.

ಅಂದು ಮೈಸೂರಿನ ಚಿಕ್ಕ ದೇವ ಅರಸುರ ವರಿಗೆ ಬೆಂಗಾವಲು ಆಗಿ ಹೈದರ್ ಆಲಿ ನಿಂತರೆ,ಆಮೇಲಿನ ಟಿಪ್ಪು ಆಡಳಿತದ ಇತಿಹಾಸದ ಅದ್ಬುತ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉದ್ದೇಶಿತ ಜಲಾಶಯಕ್ಕೆ ಅಡಿಗಲ್ಲು ಹಾಕಿದ ಅಂದಿನ ಯೋಜನೆ ಟಿಪ್ಪು ಸರಕಾರದ ಕಾರ್ಯಕ್ರಮವಾಗಿದ್ದು ಬ್ರಿಟಿಷ್ ಇತಿಹಾಸಕಾರರಿಂದ ಮೇಕಿಂಗ್ ಹಿಸ್ಟರಿ’ ಆಗಿದ್ದನ್ನು ಪ್ರತಾಪ ಸರಿಯಾಗಿಯೇ ಅರಿಯಲಿ.

ಹೈದರ್ ಪುತ್ರ, ಫತೇ ಮೊಹಮ್ಮದ್ ಎಂಬ ಧೀರ ದಕ್ಷಿಣ ಏಷಿಯಾದ ಜನಪ್ರೆಮಿ ರಾಜನಿಗೆ ‘ ಮೈಸೂರಿನ ಹುಲಿ ‘ ಎಂದು ಬಿರುದು ನೀಡಿದ್ದು, ಭಾರತ ಉಪಖಂಡದ ಯಾವುದೇ ಆರ್ಯರಲ್ಲ,
ಬದಲಾಗಿ ಹದಿನೆಂಟನೇ ಶತಮಾನದಲ್ಲಿ ಒಂದು ಬೃಹತ್ ವಸಾಹತು ಶಾಹಿ ಚಕ್ರಾಧಿಪತ್ಯ ಹೊಂದಿದ್ದ, ಅಂತರ್ ಖಂಡ ಪಾರಮತ್ಯ ಹೊಂದಿದ್ದ, ಸೂರ್ಯ ಮುಳುಗದ ನಾಡಿನ ಆಳ್ವಿಕೆ ಹೊಂದಿದ್ದ,

ಲಕ್ಷ ಗಟ್ಟಲೆ ಭೂ ಕಾಲಾಳು ಸೈನ್ಯ, ಹತ್ತಾರು ಜಲ ಯುದ್ದ ನೌಕೆ,ಸಾವಿರಾರು ಯುದ್ದ ಫಿರಂಗಿಗಳನ್ನು ಹೊಂದಿದ್ದ, ತನ್ನ ಸೇನೆ ಅದೇ ಫತೇ ಮೊಹಮ್ಮದ್ ನಿಂದಾಗಿ ಎರಡು ಬಾರಿ ಸೋತು ಶರಣಾದ, ಅದೇ ಫತೇ ಮೊಹಮ್ಮದ್ ನ ಪರಾಕ್ರಮವನ್ನು ಇತರರಿಂದ ಕೇಳಿ ಬೆಚ್ಚಿ ಬೀಳುತ್ತಿದ್ದ, ಫತೇ ಮೊಹಮ್ಮದ್ ಯುದ್ದ ರಣಾಂಗಣದಲ್ಲಿ ಹೋರಾಡಿ ವೀರ ಮರಣ ಹೊಂದಿ ಹುತಾತ್ಮನಾದ ಎಂದು ನಂಬಲು ತಯಾರಿಲ್ಲದ ಆ ಬೃಹತ್ ಬ್ರಿಟಿಷ್ ಸೇನೆಯ ಉನ್ನತರು ಪ್ರಧಾನಗೈದ ಬಿರುದು ಆಗಿದೆ.

‘ದಿ ಟೈಗರ್ ಆಫ್ ಮೈಸೂರ್ ‘. ಟಿಪ್ಪು ಎಂಬುದು ಅಪೇಕ್ಷಿಸಿ ಪಡೆದ ಬಿರುದು ಅಲ್ಲ, ಬದಲಾಗಿ ಟಿಪ್ಪುವಿನ ಆಡಳಿತ ವೈರಿಗಳು ನೀಡಿದ ಬಿರುದು. ಪ್ರತಾಪ ಟಿಪ್ಪುವನ್ನು ಹುಲಿಯಲ್ಲ ಎಂದು ಹೇಳುವ ಭರದಲ್ಲಿ ಈಗಾಗಲೇ, ಅದೇ ಪ್ರತಾಪ ತನ್ನ ಬೆತ್ತಲೆ ಜಗತ್ತಿನ ತನ್ನ ಲೇಖನಿಯಲ್ಲಿ ತನ್ನ ಸಿಂಹತನವನ್ನು ಕಳೆದುಕೊಂಡು ನರಿ ಆದದ್ದು ವಿಪರ್ಯಾಸ. ಹುಲಿ, ಹುಲಿಯೆ, ನರಿ ನರಿಯೇ,ಪ್ರತಾಪ ಅರಿಯಲಿ.

LEAVE A REPLY

Please enter your comment!
Please enter your name here

Hot Topics

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಸೇವೆಗೆ ರಾಜ್ಯಪಾಲರಿಂದ ಸಂಕಲ್ಪ..!

ಕಡಬ : ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ದ.ಕ ಜಿಲ್ಲೆಯ ಕಡಬ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ಧಾರೆ.ಕ್ಷೇತ್ರದಲ್ಲಿ ಶ್ರೀ ದೇವರ ದರುಶನ ಪಡೆದು ದೇವಸ್ಥಾನದಲ್ಲಿ...

ವಿಶ್ವಾಸಮತಕ್ಕೆ ಮುನ್ನವೇ ಮಹಾರಾಷ್ಟ್ರ ಸಿಎಂ ರಾಜೀನಾಮೆ ಘೋಷಣೆ

ಮಹಾರಾಷ್ಟ್ರ: ಸುಪ್ರೀಂಕೋರ್ಟ್ ವಿಶ್ವಾಸ ಮತಯಾಚನೆ ಮಾಡಲು ಆದೇಶಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿದ್ದಾರೆ.ತಡರಾತ್ರಿ ರಾಜ್ಯಪಾಲರ ನಿವಾಸಕ್ಕೆ ಆಗಮಿಸಿದ ಠಾಕ್ರೆ ಭಗತ್ ಸಿಂಗ್ ಕೋಶಿಯಾ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿ...

ಕರಾವಳಿಯಲ್ಲಿ ರಣಭೀಕರ ಮಳೆಗೆ ಹೈರಾಣಾದ ಜನತೆ-ಅಪಾರ ಹಾನಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಅನೇಕ ನಗರಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇಂದು ಮುಂಜಾನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ...