Thursday, June 30, 2022

ಆಂಟಿಯೊಂದಿಗೆ ಸರಸವಾಡಿ ಉಂಡು ಹೋದ ಕೊಂಡು ಹೋದ ಫಯಾಝ್‌..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರಿಗೆ ಸಹಾಯದ ನೆಪದಲ್ಲಿ ಬಲೆಗೆ ಬೀಳಿಸಿ ನಿರಂತರ ಅತ್ಯಾಚಾರಗೈದು 1.50 ಕೋಟಿ ವಂಚನೆಗೈದ ಪ್ರಕರಣದಲ್ಲಿ ಮಂಗಳೂರು ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಫಯಾಝ್ (30) ಬಂಧಿತ ಆರೋಪಿ. ಈತ ಮೂಲತಃ ವಿಟ್ಲದ ಬೈರಿಕಟ್ಟೆ ನಿವಾಸಿಯಾಗಿದ್ದಾನೆ.
ಫಯಾಜ್‌ನ ಭಾವನಿಗೆ ಮಂಗಳೂರು ನಗರದ ಬುರ್ಖಾ ಅಂಗಡಿ ಇದ್ದು,

ಆ ಬುರ್ಖಾ ಅಂಗಡಿಗೆ ಈ ವಿವಾಹಿತ ಮಹಿಳೆಗೆ ಖರೀದಿಗಾಗಿ ಬರುತ್ತಿದ್ದಳು. ವಿವಾಹಿತ ಮಹಿಳೆಯ ಗಂಡ ಉದ್ಯಮಿಯಾಗಿದ್ದು, ಅಂಗಡಿಗೆ ಬರುತ್ತಿದ್ದ ಮಹಿಳೆಯ ಜೊತೆ 2012ರಲ್ಲಿ ಪಯಾಝ್‌ಗೆ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿದೆ.

ವಿವಾಹಿತ ಮಹಿಳೆಗೆ 3 ಮಕ್ಕಳಿದ್ದು, ಇಬ್ಬರು ಬುದ್ದಿಮಾಂದ್ಯರಾಗಿದ್ದರು. ಆ ಮಕ್ಕಳ ಬಗ್ಗೆ ಕರುಣೆ ತೋರುವ ನಾಟಕವಾಡಿದ ಫಯಾಝ್‌ ಆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು ಸೇರಿದಂತೆ ಸಹಾಯ ಮಾಡುತ್ತಿದ್ದ, ಇದರಿಂದ ಆ ಕುಟುಂಬಕ್ಕೆ ನಂಬಿಕಸ್ಥನಾದ ಯುವಕ ಮಹಿಳೆ ಜೊತೆಗೆ ಕಾರಿನಲ್ಲಿ ಸುತ್ತಾಡುತ್ತಿದ್ದ.

ಈ ಮಧ್ಯೆ ಆಕೆಯನ್ನು ವಿಶ್ವಾಸದಿಂದ ಬಲೆಗೆ ಬೀಳಿಸಿ ‘ನಿನ್ನನ್ನೇ ಮದುವೆಯಾಗುತ್ತೇನೆಂದು’ ಆಕೆಯ ಮೇಲೆ ನಿರಂತರ ಅತ್ಯಾಚಾರಗೈದಿದ್ದಾನೆ.

ಮಹಿಳೆಯ ಗಂಡ ಉದ್ಯಮಿಯಾಗಿದ್ದರಿಂದ ಹಣಕ್ಕೇನೂ ಕೊರತೆಯಿರದ ಕಾರಣ ಮಹಿಳೆಯ ಕೈಯಿಂದ 1.50 ಕೋಟಿ ವಸೂಲಿ ಮಾಡಿದ್ದಾನೆ.

ಸುರತ್ಕಲ್‌ನಲ್ಲಿ ವಾಸವಾಗಿದ್ದ ಮಹಿಳೆ 4 ವರ್ಷದ ಹಿಂದೆ ನಗರದ ಫ್ಲ್ಯಾಟ್‌ಗೆ ಸ್ಥಳಾಂತರ ಮಾಡಿದ್ದರಿಂದ ಈತನ ಕಾಮದಾಟಕ್ಕೆ ಮತ್ತಷ್ಟು ಅನುಕೂಲವಾಗಿದೆ.

ಮಹಿಳೆಯಿಂದ ಕೋಟ್ಯಂತರ ರೂ. ಪಡೆದ ಆರೋಪಿ ಫಯಾಜ್ ಇತ್ತೀಚೆಗೆ ಬೇರೊಂದು ಯುವತಿಯ ಜತೆ ಮದುವೆಗೆ ಪ್ಲ್ಯಾನ್ ಮಾಡಿದ್ದ. ಇದು ಮಹಿಳೆಯ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ನಗರ ಪೊಲೀಸ್ ಕಮಿಷನರ್ ದೂರು ನೀಡಿದ್ದು,

ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಡಲೇ ಕಾರ್ಯಾಚರಣೆ ನಡೆಸಿದ ಮಹಿಳಾ ಠಾಣಾ ಇನ್‌ಸ್ಪೆಕ್ಟರ್ ಲೋಕೇಶ್ ನೇತೃತ್ವದ ತಂಡ ಮಂಗಳವಾರ ಆರೋಪಿಯನ್ನು ಬಂಧಿಸಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಸೇವೆಗೆ ರಾಜ್ಯಪಾಲರಿಂದ ಸಂಕಲ್ಪ..!

ಕಡಬ : ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ದ.ಕ ಜಿಲ್ಲೆಯ ಕಡಬ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ಧಾರೆ.ಕ್ಷೇತ್ರದಲ್ಲಿ ಶ್ರೀ ದೇವರ ದರುಶನ ಪಡೆದು ದೇವಸ್ಥಾನದಲ್ಲಿ...

ದ.ಕ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಕಾಲೇಜುಗಳಿಗೆ ರಜೆ ಘೋಷಣೆ: ರೆಡ್‌ ಅಲರ್ಟ್‌ ಘೋಷಣೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ.ಆದ್ದರಿಂದ ಮತ್ತೆ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಕೆಲವು ಕಡೆ...

ಸುಳ್ಯ: ಭೂಕಂಪನ ಪೀಡಿತ ಗ್ರಾಮಕ್ಕೆ ಸಚಿವ ಅಂಗಾರ ಭೇಟಿ

ಸುಳ್ಯ: ಇತ್ತೀಚೆಗೆ ಕೊಡಗು ಜಿಲ್ಲೆಯ ಚೆಂಬುವಿನಲ್ಲಿ ಉಂಟಾದ ಭೂಕಂಪನದಿಂದಾಗಿ ಸುಳ್ಯ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ್ದು ಇದರ ಪರಿಣಾಮವಾಗಿ ತಾಲೂಕಿನ ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಹಾನಿಯಾದ ಪ್ರದೇಶಗಳಲ್ಲಿನ ಮನೆಗಳಿಗೆ ಸಚಿವರಾದ ಎಸ್. ಅಂಗಾರರವರು...