Friday, July 1, 2022

ಮುಂಬೈನಲ್ಲಿ ಗೋಕುಲ ಬ್ರಹ್ಮಕಲಶೋತ್ಸವ ಸಂಭ್ರಮ

ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಅಧ್ಯಕ್ಷ ಡಾ. ಸುರೇಶ್ ಎಸ್.ರಾವ್ ಕಟೀಲು ಸಾರಥ್ಯದಲ್ಲಿ ಗೋಕುಲ ಬ್ರಹ್ಮಕಲಶೋತ್ಸವ ಸಾಯನ್ ಪೂರ್ವದ ಕಿಂಗ್‍ಸರ್ಕಲ್‍ನ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ನಡೆಯಿತು.

ಕೇಂದ್ರ ಸರಕಾರದ ರಾಜ್ಯ ವಿತ್ತ ಸಚಿವ ಡಾ. ಭಗತ್‍ಕೃಷ್ಣ ರಾವ್ ಕರಾಡ್ ಗೋಕುಲದಲ್ಲಿ ಶ್ರೀಗೋಪಾಲಕೃಷ್ಣನ ದರ್ಶನ ಪಡೆದು ಗೋಕುಲ ಬ್ರಹ್ಮಕಲಶೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ‌ ಮಾತನಾಡಿ ಮುಖದ್ವಾರದ ಆರಂಭದಿಂದ ನಿರ್ಗಮನದವರೆಗೂ ಮಂದಿರದೊಳಗಿನ ಶಾಸ್ತ್ರಾಭವ್ಯತೆ ಅನುಭವಿಸಿ ದನ್ಯನೆಣಿಸಿದೆ. ಶ್ರೀಕೃಷ್ಣ ವಿವಿಧ ಲೀಲೆ, ರೂಪಗಳನ್ನು ಇಲ್ಲಿ ಕೆತ್ತನೆಯ ಮೂಲಕ ಸೃಷ್ಠಿಸಿ ಪ್ರತಿಷ್ಠಾಪಿಸಲ್ಪಟ್ಟಿವೆ. ಅಜಂತಾ, ಎಲ್ಲೋರಾ ಗುಹೆಗಳಲ್ಲಿನ ಕೆತ್ತನೆಕ್ಕಿಂತಲೂ ಮಿಗಿಲಾದ ವರ್ಣನೆ ಇಲ್ಲಿ ರೂಪಿಸಲ್ಪಟ್ಟಿವೆ.

ಮಥುರಾ ಉತ್ತರ ಪ್ರದೇಶದಲ್ಲಿದೆ ಆದರೆ ಈ ಗೋಕುಲ ಮಹಾರಾಷ್ಟ್ರದ ಮಥುರಾವಾಗಿದೆ. ಜನರ ಒಳ್ಳೆಯ ಭಾವನೆಗಳಿಂದ ಬದುಕು ಪಾವನಗೊಂಡಂತೆ ಇಂತಹ ದೇವಾಲಯಗಳಿಂದಲೂ ರಾಷ್ಟ್ರವು ವಿಕಾಸಗೊಳ್ಳುತ್ತದೆ. ಎಲ್ಲಾ ಹಿಂದು ಜನತೆ ಭಗವಂತನನ್ನು ನಂಬುವ, ಪೂಜಿಸುವ ಜನರಾಗಿದ್ದು, ನಮ್ಮಲ್ಲಿ ಸಕಲ ಐಶ್ವರ್ಯ ಶ್ರೇಷ್ಠರೇ ಇದ್ದಾರೆ. ಇವೆಲ್ಲರಿಗೂ ಶಾಂತಿ ನೆಮ್ಮದಿ ಸಿಗುವಂತಿದ್ದರೆ ಅದು ಮಠ ಮಂದಿರಗಳಲ್ಲಿ ಮಾತ್ರ. ಆದುದರಿಂದ ಭಗವಂತನ ರೂಪ ಕಾಣಲು ದೇಗುಲಗಳು ಶ್ರದ್ಧಾ ಕೇಂದ್ರಗಳಾಗಿವೆ. ಜನ್ಮ ಭೂಮಿಯಲ್ಲಿ ರುಗ್ಣಾಲಯ, ಕರ್ಮಭೂಮಿಯಲ್ಲಿ ದೇವಾಲಯ ನಿರ್ಮಿಸಿ ಭಗದ್ಭಕ್ತನಾದ ಡಾ. ಸುರೇಶ್ ರಾವ್ ಅವರ ಸಾಧನೆ ಶ್ರೇಷ್ಠವಾಗಿದೆ ಎಂದು ತಿಳಿಸಿದರು.
ದಿ. ಹೆಚ್.ಬಿ ಎಲ್ ರಾವ್ ಪರಿಕಲ್ಪನೆಯಲ್ಲಿ ಅರಳಿ ಕೆ.ಎಲ್ ಕುಂಡಂತಾಯ ಪ್ರಧಾನ ಸಂಪಾದಕತ್ವದಲ್ಲಿ ಪ್ರಸಾಶಿತ `ಶ್ರೀ ಕೃಷ್ಣ ದರ್ಶನ’ ಬೃಹತ್ ಗ್ರಂಥವನ್ನು ಉಡುಪಿ ಶ್ರೀ ಪಲಿಮಾರು ಮಠಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನಾವರಣ ಗೊಳಿಸಿದರು.

ನಂತರ ಮಾತನಾಡಿದ ಅವರು ಇದೊಂದು ವೈಭವದ ಧರ್ಮ ಕಲಾಭಿಷೇಕ. ಕೃಷ್ಣ ಅಂದರೆನೇ ಅದು ಆಕಾರ್ಷಣೀಯವಾದುದು. ಕೃಷ್ಣ ಉತ್ತರಪ್ರದೇಶದವನು. ಆದರೆ ಇವರ್ರು ದಕ್ಷಿಣದ ತನಕ ಎಲ್ಲರನ್ನೂ ತನ್ನ ಬುಟ್ಟಿಯಲ್ಲಿ ಹಾಕಿಕೊಂಡ ಶ್ರೇಷ್ಠ ದೇವರು. ಮಹಾರಾಷ್ಟ್ರವನ್ನು ಕೂಡಾ ಎಳೆದಿದೆ ಅಂದರೆ ತನ್ನ ಬುಟ್ಟಿಗೆ ಅಂತಾದರೆ ಇದೊಂದು ಕೊಂಡಿ ದೇವರು ಗೋಪಾಲಕೃಷ್ಣ. ಇಲ್ಲಿ ದೇವಸ್ಥಾನ ಎಲ್ಲಾ ಹೊಸತು ಆದರೆ ದೇವರು ಮಾತ್ರ ಹಳತು. ಸಾಮಾನ್ಯವಾಗಿ ದೇವರು ಹೊಸತಾಗುತ್ತಾನೆ ಇದು ಸಲ್ಲದು. ಬದಲಾಗಿ ಹಳೆ ದೇವರು ಗುಡಿಮಾತ್ರ ಹೊಸತಾಗಿರಬೇಕು. ನಾವು ಹಳಬರಾಗಬೇಕು ನಮ್ಮ ಉಡುಪು ಹಳೆಯದಾಗಿರಬೇಕು. ಹಾಗೆಯೇ ನಮ್ಮ ಭಗವಂತ ಹಳತ್ತಾಗಿ ಬಿಟ್ಟರೆ ಆ ದೇವಸ್ಥಾನಕ್ಕೊಂದು ಕಳೆ, ಊರಿಗೊಂದು ತಾಕತ್ತುನಮ್ಮ ರಾಷ್ಟ್ರಕ್ಕೆನೇ ಒಂದು ದೊಡ್ಡ ಸಂಪತ್ತು ಈ ಗೋಪಾಲಕೃಷ್ಣ ಎಂದರು.
ಡಾ. ಸುರೇಶ್ ರಾವ್ ಪ್ರಸ್ತಾವನೆಗೈದು ಮಾತನಾಡಿ ಈ ಗೋಕುಲದ ಪುನರ್ ನಿರ್ಮಾಣ ಬಿಎಸ್‍ಕೆಬಿ-ಜಿಕೆಪಿ ಪರಿವಾರದ ತ್ಯಾಗ, ಪರಿಶ್ರಮ ಮತ್ತು ಪ್ರತಿಯೊಂದು ಭಕ್ತರ ವರದಾನದಿಂದ ನಿರ್ಮಾಣಗೊಂಡಿದೆ. ಜೊತೆಗೆ ನನ್ನ ತಾಯಿ ಕತ್ಯಾಯಿಣಿ, ಪತ್ನಿ ವಿಜಯಲಕ್ಷಿ ್ಮೀ ಮತ್ತು ಸುಪುತ್ರಿ ಡಾ. ಶ್ರುತಿ ಹೆಬ್ಬಾರ್ ಅವರ ಸಹಯೋಗದ ಫಲವಾಗಿದೆ. ದಾನಿಗಳ, ಪ್ರಾಯೋಜಕರ, ಹಿರಿಯ ವಾಸ್ತು ಶಿಲ್ಪಿ ಅವಿನಾಶ್ ದಹಣುಕರ್, ವಾಸ್ತುಶಿಲ್ಪಿ ಸುದರ್ಶನ ಶಬರಾಯ, ಶಿಲ್ಪಕಾರರು, ಕಟ್ಟಡದ ಎಲ್ಲಾ ಗುತ್ತಿಗೆದಾರರಿಗೆ ಗೋಕುಲದ ಯಶಸ್ಸು ಸಲ್ಲುತ್ತದೆ ಎಂದರು.


ಶ್ರೀ ಕ್ಷೇತ್ರ ಕಟೀಲು ಇದರ ಅನುವಂಶಿಕ ಅರ್ಚಕ ಶ್ರೀ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ
ಕರ್ನಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್ ಮಹಾಬಲೇಶ್ವರ ಭಟ್, ಅಜಂತಾ ಫಾರ್ಮ ಮುಂಬಯಿ ಸಂಸ್ಥೆಯ ಉಪಾಧ್ಯಕ್ಷ ಮಧುಸೂಧನ ಅಗರ್ವಾಲ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಚರೀಶ್ಮಾ ಬಿಲ್ಡರ್ಸ್‍ನ ಕಾರ್ಯಾಧ್ಯಕ್ಷ ಮೂಲ್ಕಿ ಪಡುಮನೆ ಸುಧೀರ್ ವಿ.ಶೆಟ್ಟಿ, ಎಸ್‍ಬಿಐ ಲೈಫ್ ಇನ್ಸೂರೆನ್ಸ್ ಕಂಪೆನಿಯ ಕಾರ್ಯನಿರ್ವಹಕ ನಿರ್ದೇಶಕ ಆನಂದ ಪೇಜಾವರ, ಹಿರಿಯ ಪತ್ರಕರ್ತ ಕೆ.ಎಲ್ ಕುಂಡಂತಾಯ ಪ್ರಧಾನ ಅಭ್ಯಾಗತರಾಗಿ ವೇದಿಕೆಯಲ್ಲಿದ್ದರು.
ಬಿಎಸ್‍ಕೆಬಿ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಸದಸ್ಯರುಗಳಾದ ಎ. ಶ್ರೀನಿವಾಸ ರಾವ್, ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಎಸ್.ಎನ್ ಉಡುಪ ಜೆರಿಮೆರಿ, ಜೊತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಜೊತೆ ಕೋಶಾಧಿಕಾರಿ ಪಿ.ಬಿ ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯ ಭಕ್ತಾದಿಗಳು ಹಾಜರಿದ್ದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಸಿದ್ಧ ನೃತ್ಯ ನರ್ತಕಿ ಮತ್ತು ಸಂಯೋಜಕಿ ಸೋನಿಯಾ ಪರಚುರೆ ಇವರಿಂದ ಸಂಕೇತ್ ಅಜ್ವೆಕರ್ ಅಭಿನಯದಲ್ಲಿ ಕೃಷ್ಣ ಬ್ಯಾಲೆ ಹಾಗೂ ಮದನ್ ಮೋಹನ್ ಬಳಗವು ಅಂತಿಮ ಮಧುರ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

LEAVE A REPLY

Please enter your comment!
Please enter your name here

Hot Topics

ಪುತ್ತೂರಿನಲ್ಲಿ ಸ್ವಿಫ್ಟ್ ಮತ್ತು ಓಮ್ನಿ ಕಾರು ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ

ಪುತ್ತೂರು: ಪುತ್ತೂರಿನ ಮುಂಡೂರು ಗ್ರಾಮದ ಪಂಜಳದಲ್ಲಿ ಸ್ವಿಫ್ಟ್ ಮತ್ತು ಮಾರುತಿ ಓಮ್ನಿ ನಡುವೆ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಹಲವು ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.ಗಾಯಗೊಂಡ ಓಮ್ನಿ ಮತ್ತು ಕಾರಿನಲ್ಲಿದ್ದವರನ್ನು ಪುತ್ತೂರಿನ...

ಮಂಗಳೂರು ನಗರ ಡಿಸಿಪಿಯಾಗಿ ಆಂಶು ಕುಮಾರ್ ನೇಮಕ

ಬೆಂಗಳೂರು: ಮಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಆಂಶು ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.2018ರ ಐಪಿಎಸ್‌ ಬ್ಯಾಚ್‌ನ ಅಧಿಕಾರಿಯಾದ ಇವರು ಕರಾವಳಿ ಭದ್ರತಾ...

ಟೈಲರ್ ಕನ್ನಯ್ಯ ಲಾಲ್ ಕೊಲೆಗೈದವರಿಗೆ ಮರಣದಂಡನೆ ವಿಧಿಸಿ: ಶಾಸಕ ಕಾಮತ್‌ ಆಗ್ರಹ

ಮಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಬಡ ಟೈಲರ್ ಕನ್ನಯ್ಯ ಲಾಲ್ ಹತ್ಯೆಗೈದು ಪ್ರಧಾನಮಂತ್ರಿಗಳಿಗೆ ಬೆದರಿಕೆಯೊಡ್ಡಿದ ಹಂತಕರಿಗೆ ಮರಣ ದಂಡನೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಮಂಗಳೂರು...