Connect with us

    LATEST NEWS

    ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌‌ಗೆ ಬೈಕ್ ಡಿ*ಕ್ಕಿ; ಮೂವರ ದು*ರ್ಮರಣ

    Published

    on

    ಮಂಗಳೂರು/ಕಲಬುರಗಿ : ರಸ್ತೆ ಬದಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌‌ಗೆ ಬೈಕ್ ಡಿ*ಕ್ಕಿಯಾಗಿ ಮೂವರು ಸವಾರರು ಮೃ*ತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ಬುಧವಾರ(ಅ.10) ರಾತ್ರಿ ಸಂಭವಿಸಿದೆ.

    ಗುರೂಜಿ ತಾಂಡಾ ನಿವಾಸಿಗಳಾದ ಅರ್ಜುನ್ ರಾಠೋಡ್, ರೋಹಿತ್ ಹಾಗೂ ಕೃಷ್ಣ ಮೃ*ತ ದುರ್ದೈವಿಗಳು. ಮೂವರು ಲಾಡ್ಲಾಪುರ ಗ್ರಾಮದಿಂದ ತಾಂಡಾಕ್ಕೆ ಹೋಗುತ್ತಿದ್ದರು. ಟ್ರ್ಯಾಕ್ಟರ್‌‌ಗೆ ಬೈಕ್​ ಡಿ*ಕ್ಕಿ ಹೊಡೆದ ಪರಿಣಾಮ ತೀವ್ರ ಗಾ*ಯಗೊಂಡ ಮೂವರೂ ಸ್ಥಳದಲ್ಲೇ ಕೊ*ನೆಯುಸಿರೆಳೆದಿದ್ದಾರೆ.

    ಇದನ್ನೂ ಓದಿ : ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರು ಸಿಗರೇಟ್ ಸೇದ್ತಾರೆ, ಆದರೆ ತೋರಿಸಲ್ಲ!

    ಸ್ಥಳಕ್ಕೆ ವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    LATEST NEWS

    ಮಹಿಳೆಯ ಕೊ*ಲೆಗೈದು ಶ*ವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆಟೋ ಚಾಲಕ

    Published

    on

    ಮುಳಬಾಗಿಲು(ಕೋಲಾರ): ಮಹಿಳೆಯನ್ನು ಕೊಲೆ ಮಾಡಿದ ಆಟೋ ಚಾಲಕನೊಬ್ಬ ಶ*ವದೊಂದಿಗೇ ಅತ್ಯಾ*ಚಾರವೆಸಗಿದ ಕೃ*ತ್ಯ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಬೆಳಕಿಗೆ ಬಂದಿದೆ.

    ಮುಳಬಾಗಿಲು ತಾಲೂಕಿನ ಹೈದರಿನಗರದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಆಟೋ ಚಾಲಕ ಸೈಯ್ಯದ್ ಸುಹೇಲ್ ಎಂಬಾತ ಸುಶೀಲಮ್ಮ ಎಂಬ ಮಹಿಳೆಯನ್ನು ಕೊ*ಲೆ ಮಾಡಿ ಬಳಿಕ ಅತ್ಯಾ*ಚಾರ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

    ಸೆಪ್ಟೆಂಬರ್ 24 ರಂದು ಮುಳಬಾಗಿಲಿನ ಹೈದರಿನಗರದಲ್ಲಿ 50 ವರ್ಷದ ಸುಶೀಲಮ್ಮ ಎಂಬ ಮಹಿಳೆಯನ್ನು ಕೊ*ಲೆ ಮಾಡಿ ಆಟೋ ಚಾಲಕ ಸೈಯ್ಯದ್ ಸುಹೇಲ್ ಬಳಿಕ ಶ*ವದೊಂದಿಗೆ ಅತ್ಯಾ*ಚಾರವೆಸಗಿದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಮುಳಬಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    Continue Reading

    LATEST NEWS

    ಜಮ್ಮು- ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ‘ಒಮರ್ ಅಬ್ದುಲ್ಲಾ’ ಆಯ್ಕೆ

    Published

    on

    ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ನಾಯಕರಾಗಿ ಒಮರ್ ಅಬ್ದುಲ್ಲಾ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಗುರುವಾರ ಪ್ರಕಟಿಸಿದ್ದಾರೆ.

    “ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅಲ್ಲಿ ಎಲ್ಲರೂ ಒಮರ್ ಅಬ್ದುಲ್ಲಾ ಅವರನ್ನ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು ಎಂದು ಅವರು ತಿಳಿಸಿದ್ದಾರೆ. ಹೊಸ ಸರ್ಕಾರ ರಚಿಸುವ ಪ್ರಕ್ರಿಯೆಯನ್ನು ಮುಂದುವರಿಸಲು ಚುನಾವಣಾ ಪೂರ್ವ ಮೈತ್ರಿ ಸದಸ್ಯರ ಸಭೆಯನ್ನು ಶುಕ್ರವಾರ ನಿಗದಿಪಡಿಸಲಾಗಿದೆ ಎಂದು ಅವರು ಘೋಷಿಸಿದರು.

    ಇದಕ್ಕೂ ಮುನ್ನ, ನ್ಯಾಷನಲ್ ಕಾನ್ಫರೆನ್ಸ್ (NC)ನಿಂದ ಹೊಸದಾಗಿ ಆಯ್ಕೆಯಾದ ಶಾಸಕರು ಪಕ್ಷದ ಪ್ರಧಾನ ಕಚೇರಿ ನವಾ-ಇ-ಸುಬಾದಲ್ಲಿ ಸಭೆ ಸೇರಿ ತಮ್ಮ ನಾಯಕನನ್ನ ಆಯ್ಕೆ ಮಾಡಿದರು. ಒಮರ್ ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ.

    Continue Reading

    LATEST NEWS

    ಟೆನ್ನಿಸ್‌ʼ ನಿಂದ ನಿವೃತ್ತಿ ಘೋಷಿಸಿದ ರಫೆಲ್‌ ನಡಾಲ್‌

    Published

    on

    ಟೆನಿಸ್ ಸೂಪರ್‌ಸ್ಟಾರ್ ರಫೆಲ್‌ ನಡಾಲ್ ನಿವೃತ್ತಿ ಘೋಷಿಸಿದ್ದು, ನವೆಂಬರ್‌ನಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್ ತನ್ನ ಕೊನೆಯದು ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

    ‘ಎಲ್ಲರಿಗೂ ಧನ್ಯವಾದಗಳು’ ಎಂದು ಅವರು ಪೋಸ್ಟ್ನಲ್ಲಿ ಬರೆದಿದ್ದಾರೆ. “ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ವಾಸ್ತವವೆಂದರೆ ಇದು ಕೆಲವು ಕಷ್ಟಕರ ವರ್ಷಗಳು, ವಿಶೇಷವಾಗಿ ಕಳೆದ ಎರಡು ವರ್ಷಗಳು, “ಎಂದು ನಡಾಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.

    “ಇದು ಕಠಿಣ ನಿರ್ಧಾರವಾಗಿದೆ, ನನಗೆ ಸ್ವಲ್ಪ ಸಮಯ ತೆಗೆದುಕೊಂಡಿದೆ. ಆದರೆ ಈ ಜೀವನದಲ್ಲಿ ಪ್ರತಿಯೊಂದಕ್ಕೂ ಪ್ರಾರಂಭ ಮತ್ತು ಅಂತ್ಯವಿದೆ” ಎಂದು ಅವರು ತಿಳಿಸಿದ್ದಾರೆ. ನಡಾಲ್ ಅವರು ಸ್ಪೇನ್‌ನ ಮಲಗಾದಲ್ಲಿ ನಡೆಯಲಿರುವ ಡೇವಿಸ್ ಕಪ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪೂರ್ಣಗೊಳಿಸಲು ಉತ್ಸುಕರಾಗಿದ್ದಾರೆ.

    ನಡಾಲ್ ಐದು ಬಾರಿ ವಿಶ್ವದ ನಂಬರ್ ಒನ್ ಆಗಿದ್ದರು ಮತ್ತು 2005 ರಿಂದ ಈ ವರ್ಷದ ಮಾರ್ಚ್ ವರೆಗೆ ಟಾಪ್ 10 ಅನ್ನು ಬಿಟ್ಟು ಹೋಗಿರಲಿಲ್ಲ. ವಾಸ್ತವವಾಗಿ, ಸ್ಪೇನ್ ಆಟಗಾರ ಪ್ಯಾರಿಸ್ ಒಲಿಂಪಿಕ್ಸ್‌ನ ನಂತರ ಆಡಿಲ್ಲ, ಅಲ್ಲಿ ಅವರು ಸಿಂಗಲ್ಸ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಹಳೆಯ ಪ್ರತಿಸ್ಪರ್ಧಿ ಜೊಕೊವಿಕ್‌ಗೆ ಸೋತರು ಮತ್ತು ಕಾರ್ಲೋಸ್ ಅಲ್ಕಾರಾಜ್ ಅವರೊಂದಿಗೆ ಪುರುಷರ ಡಬಲ್ಸ್‌ನ ಕ್ವಾರ್ಟರ್‌ ಫೈನಲ್ ತಲುಪಿದ್ರುದರು.

    Continue Reading

    LATEST NEWS

    Trending