Ancient Mangaluru
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
Published
2 minutes agoon
By
NEWS DESKಮಂಗಳೂರು : ವೆಣೂರಿನ ಬರ್ಕಜೆ ಸಮೀಪದಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮದ್ಯಾಹ್ನದ ಊಟ ಮುಗಿಸಿ ಸಮೀಪದ ನದಿಗೆ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂಡಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಮೂಡಬಿದ್ರೆಯ ಲಾರೆನ್ಸ್ 20 ವರ್ಷ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ 19 ವರ್ಷ, ಹಾಗೂ ಬಂಟ್ವಾಳದ ವಗ್ಗ ಗ್ರಾಮದ ಜೈಸನ್ 19 ವರ್ಷ ಈ ಮೂವರು ಹೋಗಿದ್ದಾರೆ. ಮದ್ಯಾಹ್ನದ ಊಟವನ್ನು ಮುಗಿಸಿದ ಇವರು ಜೊತೆಯಾಗಿ ಬರ್ಕಜೆ ಸಮೀಪದ ಡ್ಯಾಂ ಬಳಿ ನದಿಯಲ್ಲಿ ಈಜಲು ಹೋಗಿದ್ದಾರೆ. ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೂವರೂ ನೀರುಪಾಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ರಕ್ಷಣೆಗೆ ನದಿಗೆ ದುಮಿಕಿದ್ದಾರೆ. ಆದ್ರೆ ಮೂವರನ್ನು ನದಿಯಿಂದ ಮೇಲೆತ್ತುವ ಮೊದಲೇ ಇ*ಹಲೋಕ ತ್ಯಜಿಸಿದ್ದಾರೆ. ಮೂವರೂ ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
Ancient Mangaluru
ಕಾರ್ಕಳ: ಕಟ್ಟಡವೊಂದರಲ್ಲಿ ಭಾರೀ ಶಬ್ದದೊಂದಿಗೆ ಭೀಕರ ಸ್ಫೋಟ, ಬೆಚ್ಚಿಬಿದ್ದ ಕಾರ್ಕಳ ಜನತೆ.!
Published
4 months agoon
28/07/2024By
NEWS DESK4ಕಾರ್ಕಳ: ಕಾರ್ಕಳ ಬೈಪಾಸ್ ಸಮೀಪದ ಕಟ್ಟಡವೊಂದರಲ್ಲಿ ಭಾರೀ ಶಬ್ದದೊಂದಿಗೆ ಭೀಕರ ಸ್ಫೋಟವೊಂದು ಸಂಭವಿಸಿದ್ದು ರಾತ್ರಿ ಸುಮಾರು 11.25 ರ ವೇಳೆಗೆ ಕಾರ್ಕಳದ ಸುತ್ತಮುತ್ತ 3 ಕಿಲೋಮೀಟರ್ ದೂರದ ವರೆಗೂ ಸ್ಪೋಟದ ಶಬ್ದ ಕೇಳಿಸಿದೆ.
ಮನೆಯ ಬಾಲ್ಕನಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಸಿಲಿಂಡರ್ ಸ್ಪೋಟಕ್ಕೆ ನಿಖರ ಕಾರಣ ತಿಳಿದಿಲ್ಲ. ಅಕ್ಕ ಪಕ್ಕದ ನಾಲ್ಕೈದು ಮನೆಗೆ ಹಾನಿಯಾಗಿದ್ದು, ಮನೆಯವರಿಗೆ ಯಾವುದೇ ರೀತಿಯ ಜೀವ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ತುರ್ತು ಸೇವೆಯ ಆಂಬುಲೆನ್ಸ್ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಸ್ಪೋಟದ ತೀವ್ರತೆಗೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿ ರಸ್ತೆ ಬದಿಯಲ್ಲಿ ಬಿದ್ದಿರುವುದು ದೃಶ್ಯದಲ್ಲಿ ಕಂಡುಬಂದಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.
WATCH VIDEO
Ancient Mangaluru
ಮೇ.10 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನೆ
Published
7 months agoon
09/05/2024By
NEWS DESK4ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪುರಸ್ಕಾರ ಪಡೆದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನಾ ಸಮಾರಂಭ ಮೇ 10 ರಂದು ಮಧ್ಯಾಹ್ನ 12 ಗಂಟೆಗೆ ಮುಲ್ಕಿಯ ಲಘುವಿ ಕಾಂಪ್ಲೆಕ್ಸ್ ಮುಖ್ಯರಸ್ತೆ ಪಕ್ಷಿಕೆರೆಯಲ್ಲಿ ನಡೆಯಲಿದೆ.
ಮುಲ್ಕಿ ಮೂಡುಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಪಕ್ಷಿಕೆರೆ ಸಂತ ಜುದರ ಪುಣ್ಯಕ್ಷೇತ್ರ ಧರ್ಮಗುರು ಅತಿ ವಂದನೀಯ ಗುರುಗಳು ಮೆಲ್ವಿನ್ ನೊರೊಹ್ನಾ ದ್ವೀಪ ಪ್ರಜ್ವಲಿಸಲಿದ್ದಾರೆ. ಪಕ್ಷಿಕೆರೆ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀ ಕೆ.ಸೀತಾರಾಮ್ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ ಗಣಕೀಕೃತ ಬ್ಯಾಂಕಿಂಗ್ ಗೆ ಚಾಲನೆ ನೀಡಲಿದ್ದಾರೆ. ಪಕ್ಷಿಕೆರೆ, ಎಸ್ ಕೋಡಿ, ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಹರಿಪಾದೆ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ಎರಡನೇ ಸ್ಥಾನ
ಸಮಾಜಸೇವಕ ಧನಂಜಯ ಶೆಟ್ಟಿಗಾರ್ ಇ-ಮುದ್ರಾಂಕ ಸೇವೆಗೆ, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಆವರ್ತನ ಠೇವಣಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಸ್ತೂರಿ ಪಂಜ ಉಳಿತಾಯ ಖಾತೆಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಟ್ಟಡದ ಮಾಲಕ ಶ್ರೀನಿವಾಸ ಕೋಟ್ಯಾನ್ ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.
Ancient Mangaluru
ಮಂಗಳೂರು ವಿಮಾನ ನಿಲ್ದಾಣವಿನ್ನು ನಿಶ್ಶಬ್ದ ವಲಯ!
Published
7 months agoon
01/05/2024By
NEWS DESK4ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇನ್ನು ಮುಂದೆ ನಿಶ್ಶಬ್ದ ವಲಯವಾಗಿರಲಿದೆ. ಹೌದು, ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ಏರ್‌ಲೈನರ್‌ಗಳಿಂದ ಯಾವುದೇ ಪ್ರಯಾಣಿಕರ ಮಾಹಿತಿ ಕುರಿತ ಅನೌನ್ಸ್ ಮೆಂಟ್ ಇರುವುದಿಲ್ಲ. ಪ್ರಯಾಣಿಕರು ಫ್ಲೈಟ್ ಇನ್ಫಾರ್ಮೇಶನ್ ಡಿಸ್‌ಪ್ಲೇ ಸಿಸ್ಟಂ ಫಲಕಗಳನ್ನು ನೋಡಿ ಮಾಹಿತಿ ಪಡೆದುಕೊಳ್ಳ ಬೇಕಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಸಹಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕು?
ವಿಮಾನ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದೆ ವಿಮಾನಗಳ ಹಾರಾಟದ ಮಾಹಿತಿಗಳು ಫ್ಲೈಟ್ ಇನ್ಫಾರ್ಮೇಶನ್ ಡಿಸ್‌ಪ್ಲೇ ಸಿಸ್ಟಂ ಫಲಕಗಳಲ್ಲಿ ಅನಾವರಣಗೊಳ್ಳಲಿದೆ. ವಿಮಾನ ನಿಲ್ದಾಣದ ಹಲವು ಕಡೆಗಳಲ್ಲಿ ಈ ಡಿಸ್‌ಪ್ಲೇಗಳನ್ನು ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ‘ಮೇ ಐ ಹೆಲ್ಪ್ ಯು’ ಡೆಸ್ಕ್ ನಿರ್ವಹಿಸುವ ಸಿಬಂದಿ, ಗ್ರಾಹಕ ಸೇವೆ ಮತ್ತು ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕರು, ಪ್ರಣಾಮ್ ಸಿಬಂದಿ ಕೂಡಾ ಮಾಹಿತಿಯೊಂದಿಗೆ ಪ್ರಯಾಣಿಕರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ.
ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?
ಎಸ್.ಎಂ.ಎಸ್ ಮೂಲಕ ಮಾಹಿತಿ :
ಎಲ್ಲಾ ಏರ್‌ಲೈನ್ ಚೆಕ್-ಇನ್ ಕೌಂಟರ್‌ಗಳು, ಬೋರ್ಡಿಂಗ್ ಗೇಟ್‌ಗಳಲ್ಲಿ ವಿಮಾನದ ಮಾಹಿತಿಯನ್ನು ವೀಕ್ಷಿಸ ಬಹುದು. ಬೋರ್ಡಿಂಗ್ ಗೇಟ್ ಬದಲಾವಣೆಗಳು/ ವಿಮಾನ ಮರು ವೇಳಾಪಟ್ಟಿ ವಿವರಗಳನ್ನು ಎಸ್.ಎಂ.ಎಸ್. ಮೂಲಕ ಪ್ರಯಾಣಿಕರ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಲ್ಲೂ ಕೂಡಾ ಏರ್‌ಲೈನ್ ಹಂಚಿಕೊಳ್ಳಲಿದೆ ಎಂದು ವಿವರಿಸಿದ್ದಾರೆ.
LATEST NEWS
ಸರಕಾರಿ ಕೆಲಸದ ಹುಡುಗನೇ ಬೇಕೆಂದು ಮಂಟಪದಲ್ಲೇ ವರನನ್ನು ತಿರಸ್ಕರಿಸಿದ ವಧು !!
ನಂಬಿದವರ ಕೈ ಬಿಡದ ಪದಾಳ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ
ನಿಮ್ಮ ನಾಯಿಗಳನ್ನು ಪಾರ್ಕ್ಗೆ ಕೊಂಡೊಯ್ಯುತ್ತೀರಾ? ಹೈಕೋರ್ಟ್ ಹೊಸಮಾರ್ಗಸೂಚಿ ಗಮನಿಸಿ!
ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿ ಕೊಟ್ಟ ಈ ಮಹಿಳೆ ಯಾರು ?
ಎಟಿಎಂ ಹೊತ್ತೊಯ್ದರೂ ಸಿಗದ ಹಣ; ನೀಲಗಿರಿ ತೋಪಿನಲ್ಲಿ ಯಂತ್ರ ಬಿಟ್ಟು ಪರಾರಿಯಾದ ಖದೀಮರು
ಬೆಚ್ಚಿ ಬೀಳಿಸಿದ ಯುವತಿ ಕೊ*ಲೆ ಪ್ರಕರಣ; ಪ್ರೇಯಸಿಯ ಶ*ವದೊಂದಿಗೆ ಒಂದು ದಿನ ಕಳೆದಿದ್ದ ಯುವಕ!
Trending
- Baindooru5 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION6 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS4 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru4 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ