Connect with us

    LATEST NEWS

    ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಸಂಭ್ರಮ; ರಥೋತ್ಸವಕ್ಕೆ ಹಣತೆಗಳಿಂದ ಅಲಂಕಾರಗೊಂಡ ರಥಬೀದಿ

    Published

    on

    ಅಪರೂಪದ ಸಂಪ್ರದಾಯಗಳಿಗೆ ಹೆಸರಾಂತ ಜಾಗ ಉಡುಪಿ. ಇಲ್ಲಿನ ಕೃಷ್ಣಮಠ‌ದಲ್ಲಿ ಲಕ್ಷದೀಪಗಳಿಂದ ಸಂಭ್ರಮ. ಕಡಗೋಲು ಕೃಷ್ಣನ ಮೊದಲ ರಥೋತ್ಸವಕ್ಕೆ ಅಷ್ಟಮಠಗಳ ರಥಬೀದಿ ಅಲಂಕಾರಗೊಂಡು ಹಣತೆಯ ದೀಪಗಳಿಂದ ಕಂಗೊಳಿಸುತ್ತಿದೆ. ಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ನಡುವೆ ಕೃಷ್ಣನ ದೇವರ ಮೆರವಣಿಗೆಯನ್ನ ನಡೆಸಲಾಯ್ತು. ಅಲ್ಲಿನ ರಥಬೀದಿಗಳಲ್ಲಿ ಲಕ್ಷದೀಪೋತ್ಸವ ಕಂಡು ಭಕ್ತರು ಭಕ್ತಿಯ ಮಳೆಯಲ್ಲಿ ನೆನೆದರು.

    ಆ ಭಗವಂತನ ಸ್ವಾಗತಕ್ಕೆ ಉಡುಪಿಯ ಅಷ್ಟಮಠಗಳ ರಥಬೀದಿ ದೀಪಗಳಿಂದ ಕಂಗೊಳಿಸುತ್ತಿದ್ದು, ಭಕ್ತರು ಕೃಷ್ಣನಿಗೆ ಹಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಿದ್ರು. ಕೃಷ್ಣ ದೇವರು ಯೋಗ ನಿದ್ರೆಯಲ್ಲಿರುತ್ತಾನೆ ಅನ್ನೋದು ಇಲ್ಲಿಯವರ ನಂಬಿಕೆ. ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನ ಬರಮಾಡಿಕೊಳ್ಳಲು ನಡೆದಿರುವ ತಯಾರಿ ಇದು.

    ಈ ಮಹೋತ್ಸವವನ್ನ ಲಕ್ಷದೀಪೋತ್ಸವ ಎನ್ನುತ್ತಾರೆ. ಇಳಿ ಹೊತ್ತಲ್ಲಿ ಭಕ್ತರೆಲ್ಲರೂ ಸೇರಿ ರಥಬೀದಿಯಲ್ಲಿ ಸಾವಿರಾರು ದೀಪಗಳನ್ನ ಬೆಳಗಿದರು. ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನೆರವೇರಿತು. ಆ ಬಳಿಕ ಮಠದಿಂದ ಹೊರ ಬರುವ ಕೃಷ್ಣ ದೇವರ ಉತ್ಸವ ಮೂರ್ತಿಯನ್ನ ಮಧ್ವ ಸರೋವರಕ್ಕೆ ಕೊಂಡೊಯ್ಯಲಾಯ್ತು. ಸಾಲು ಸಾಲು ದೀಪಗಳ ನಡುವೆ ಕೃಷ್ಣ ದೇವರ ಮೆರವಣಿಗೆ ನಡಿಯಿತು.. ರಥದ ಮುಂಭಾಗದಲ್ಲಿ ಚಂಡೆಗಳ ನಾದ ವೈಭವ ಮೇಳೈಸಿತು.

    ಈ ಬಾರಿಯ ಲಕ್ಷದೀಪೋತ್ಸವದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ಸಹಿತ ಹಲವು ಮಠಗಳ ಯತಿಗಳು ಭಾಗವಹಿಸಿದ್ರು. ನೂರಾರು ಭಕ್ತರು ಸೇರಿ ಎರಡೂ ರಥಗಳನ್ನ ಎಳೆದರು. ಸಾವಿರಾರು ಸಂಖ್ಯೆಯಲ್ಲಿ ಕೃಷ್ಣ ಮಠಕ್ಕೆ ಬಂದ ಭಕ್ತರು ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಮೂರು ದಿನಗಳ ಕಾಲ ಸಮಾನ ವೈಭವದಿಂದ ಲಕ್ಷದೀಪೋತ್ಸವ ನಡೆಯುತ್ತೆ. ಅಷ್ಟಮಠಗಳ ರಥಬೀದಿಯಲ್ಲಿ ಸೇವಾರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರಲಿದೆ.

    LATEST NEWS

    ರಾಜ್ಯದಲ್ಲಿ ಪೈಶಾಚಿಕ ಕೃ*ತ್ಯ; ವೃದ್ಧನಿಂದ ಬಾಲಕಿಯ ಅ*ತ್ಯಾಚಾರ !!

    Published

    on

    ಮಂಗಳೂರು/ಕಲಬುರ್ಗಿ : 15 ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ಅ*ತ್ಯಾಚಾರ ಎಸಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ನರೋಣ ಪಟ್ಟಣದಲ್ಲಿ ನಡೆದಿದೆ.

    ಗೋರಕ್ ನಾಥ ಚೌವ್ಹಾಣ (65) ಆರೋಪಿ ಎಂಬುವುದು ಗುರುತಿಸಲಾಗಿದೆ.

    ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ 15 ವರ್ಷದ ಬಾಲಕಿಯ ಮೇಲೆ ಪಾಪಿ ವೃದ್ಧ ಅ*ತ್ಯಾಚಾರ ಎಸಗಿರುವುದು ಸಾಬೀತಾಗಿದೆ.

     

    ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಯುವಕನ ಮೇಲೆರಗಿ ಬಾಲಕಿಯ ರಕ್ಷಿಸಿದ ಕೋತಿಗಳು!

     

    ಆರೋಪಿ ಗೌರವತ್ನಾಥ್‌ನನ್ನು ಪೊಲೀಸರು ಬಂಧಿಸಿದ್ದು, ಘಟನೆ ಕುರಿತಂತೆ ಪೋಕ್ಸೋ ಕಾಯ್ದೆಯಡಿ ನರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ `FIR’ ದಾಖಲು.!

    Published

    on

    ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

    ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕೆ.ಎಸ್. ಈಶ್ವರಪ್ಪ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲೀಮರಿಗೆ ಶೇಕಡಾ 4 ರಷ್ಟು ಮಿಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ. ಇವರೇನು ಹಿಂದುಸ್ಥಾನವನ್ನು ಪಾಕಿಸ್ಥಾನ ಮಾಡಲು ಹೊರಟಿದ್ದಾರ? ಇದು ಹೀಗೆ ಮುಂದುವರೆದರೆ ಕಾಂಗ್ರೆಸಿಗರನ್ನು ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಹೆಚ್.ಎಂ.ಸಿದ್ದೇಗೌಡ ಪ್ರಕರಣ ದಾಖಲಿಸಿದ್ದಾರೆ.

    Continue Reading

    LATEST NEWS

    ವರನ ಸೋಗಿನಲ್ಲಿ ಯುವತಿಯರಿಗೆ ವಂಚನೆ; ಆರೋಪಿ ಬಂಧನ

    Published

    on

    ಮಂಗಳೂರು/ದಾವಣಗೆರೆ: ವರನ ಸೋಗಿನಲ್ಲಿ ಅಮಾಯಕ ಯುವತಿಯರಿಗೆ 62 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

     

    ಮಂಡ್ಯ ತಾಲೂಕಿನ ಮಾಚನಹಳ್ಳಿ ನಿವಾಸಿ ಎಂ.ಮಧು (31) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

    ವಧು-ವರ ಶೋಧ ತಾಣಗಳಾದ ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಬಳಿಕ, “ನಿಮಗೆ ಸರ್ಕಾರಿ ನೌಕರಿ ಕೊಡಿಸಿ, ನಂತರ ಮದುವೆ ಆಗುತ್ತೇನೆ” ಎಂದು ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ್ದಾನೆ.

    ದಾವಣಗೆರೆ ಮೂಲದ ಯುವತಿಯೊಬ್ಬಳಿಗೆ ಮೈಸೂರು ರೇಲ್ವೆ ವರ್ಕಶಾಪ್​ನಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಮಧು 21 ಲಕ್ಷ ರೂಪಾಯಿ ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ. ಹಣ ಖಾತೆಗೆ ಬಂದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ತಾನು ವಂಚನೆಗೆ ಒಳಗಾಗಿರವುದಾಗು ಯುವತಿ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

    ಆರೋಪಿ ಮಧು, ಚಿಕ್ಕಮಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಯುವತಿಯಿಂದ 3.80 ಲಕ್ಷ ರೂ., ಮಂಡ್ಯ ಸಿಇಎನ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿನ ಯುವತಿಯಿಂದ 26 ಲಕ್ಷ ರೂ., ಬೆಂಗಳೂರು ಕಾಟನ್ ಪೇಟ್​ ಠಾಣೆ ವ್ಯಾಪ್ತಿಯಲ್ಲಿನ ಯುವತಿಯಿಂದ 2.8 ಲಕ್ಷ ರೂ., ಮೈಸೂರು ಸಿಇಎನ್ ಠಾಣೆಯ ಸೇರಿದಂತೆ ಏಳು ‌ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಯುವತಿರಿಂದ ಒಟ್ಟು 62 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ.

    ಮ್ಯಾಟ್ರಿಮೋನಿಗಳ ಮೂಲಕ ವಂಚಕರು ಪರಿಚಯ ಮಾಡಿಕೊಂಡು ಹೆಣ್ಣು ಮಕ್ಕಳಿಗೆ ನಯವಾಗಿ ಮಾತನಾಡಿ ವಂಚಿಸುವವರ ಬಗ್ಗೆ ಹಾಗೂ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುವವರ ಬಗ್ಗೆ ಜಾಗೃತರಾಗಿರಿ. ಇಂತಹ ಘಟನೆಗಳು ಕಂಡುಬಂದರೆ ಕೂಡಲೇ ಸ್ಥಳೀಯ ಠಾಣೆಗೆ ಹೋಗಿ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

    Continue Reading

    LATEST NEWS

    Trending