Thursday, August 11, 2022

ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್, ಅಶ್ಲೀಲ ಬರಹ ಹಾಕಿದ ಆರೋಪಕ್ಕೆ ಮೃತ ನವಾಝ್ ಕುಟುಂಬದ ಉತ್ತರ ಇದು,,!

ಮಂಗಳೂರು : ಮಂಗಳೂರು ನಗರದ ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್, ಅಶ್ಲೀಲ ಬರಹ ಹಾಕಿದ ಆರೋಪದಲ್ಲಿ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಆದರೆ ಅದರಲ್ಲಿ ಓರ್ವ ಆರೋಪಿ ಎಂದು ಗುರುತ್ತಿಸಿದ್ದ ನವಾಝ್ ರಕ್ತ ಕಾರಿ ಸತ್ತಿದ್ದಾನೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಸಂಪೂರ್ಣ ಸುಳ್ಳೂ ಮತ್ತು ಆಧಾರ ರಹಿತ ಎಂದು ಮೃತ ನವಾಜ್ ಕುಟುಂಬಸ್ತರು ಹಾಗೂ ಸ್ವೇಹಿತರು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಖಾಸಾಗಿ ವಾಹಿನಿಗೆ ಈ ಬಗ್ಗೆ ಮಾತನಾಡಿದ ಮೃತ ನವಾಝ್ ಯಾಯಿ ಬೀಫಾತುಮ್ಮ, ಮತ್ತು ಆತನ ಅಕ್ಕ ಝೀನತ್ ಅವರು ಪೊಲೀಸ್ ಅಧಿಕಾರಿಗಳ ಬೇಜಾಬ್ದಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿದ್ದಾರೆ,

ನವಾಝ್ ಅವರು 40 ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಅವರು ಕಳೆದ ಒಂದುವರೆ ವರ್ಷದಿಂದ ಏಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಿಂದ ಎಲ್ಲಿಗೂ ಹೋಗಲು ಅಶಕ್ತರಾಗಿದ್ದರು.

2 ವರ್ಷ ವಿದೇಶದಲ್ಲಿದ್ದ ನವಾಝ್ ಬಳಿಕ ಊರಿಗೆ ಮರಳಿದ್ದ ಆದರೆ ಅದಾಗಲೇ ಅವನನ್ನು ಮಾರಣಾಂತಿಕ ರೋದ ಹೆಚ್‌ ಐ ವಿ ಭಾದಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದ್ದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಆದರೆ ಮಂಗಳೂರು ಪೊಲೀಸ್ ಕಮಿಷನರ್ ಸೇರಿ ಹಿರಿಯ ಅಧಿಕಾರಿಗಳು ಆತ ದೈವ ಕ್ಷೇತ್ರಗಳ ಮಲಿನ ಮಾಡಿದ್ದ ಆರೋಪಿ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ನಿಜವಾಗಿಯೂ ಆತಂಕಕಾರಿ ಬೆಳವಣಿಗೆಯಾಗಿದೆ.

ಯಾವುದೇ ಪೊಲೀಸ್ ಸಿಬಂದಿಗಳು ಅಥವಾ ಅಧಿಕಾರಿಗಳು ಮನೆಯವರನ್ನು ಇದುವರೆಗೂ ಸಂಪರ್ಕಿಸಲಿಲ್ಲ, ಯಾವುದೇ ಹೇಳಿಕೆ ಪಡೆಯಲಿಲ್ಲ ಆದರೂ ನವಾಝ್ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ ಇದು ನಿಜವಾಗಿಯೂ ಬೇಸರ ಮತ್ತು ಅಘಾತ ತಂದಿದೆ ಎಂದರು.
ಕೊರಗಜ್ಜನ ಕ್ಷೇತ್ರ ಮಲಿನಗೊಳಿಸಿದ ಘಟನೆಗೆ ಸಂಬಂಧಿಸಿ ಇಬ್ಬರು ಯುವಕರು ಎಮ್ಮೆಕೆರೆಯ ಕೊರಗಜ್ಜನ ಕ್ಷೇತ್ರದಲ್ಲಿ ಹಾಜರಾಗಿ ತಪ್ಪೊಪ್ಪಿಕೊಂಡಿರುವುದನ್ನು ಆಧರಿಸಿ ಪೊಲೀಸ್ ಆಯುಕ್ತ ಶಶಿಕುಮಾರ್ ವಸ್ತುಸ್ಥಿತಿ ಅರಿತುಕೊಳ್ಳದೆ ಮಾಧ್ಯಮದ ಮುಂದೆ ಹೇಳಿಕೆ ನೀಡಿರುವ ಕ್ರಮ ಸಮರ್ಥನೀಯವಲ್ಲ.

ಪೊಲೀಸ್ ಆಯುಕ್ತರು ಹೇಳಿಕೆ ನೀಡುವ ಮುನ್ನ ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಿ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ,

ಕಾರ್ನಿಕಗಳ ಆಚೆಗೆ ವಸ್ತುನಿಷ್ಟ ತನಿಖೆ ನಡೆಸಿ ಕೊರಗಜ್ಜನ ಕ್ಷೇತ್ರ ಮಲಿನ ಪ್ರಕರಣದ ಹಿಂದಿರುವ ಸತ್ಯಗಳನ್ನು ಪೂರ್ಣವಾಗಿ ಹೊರ ತರಬೇಕು.

ಆರೋಪಿಗಳು ದಿಢೀರ್ ತಪ್ಪೊಪ್ಪಿಗೆ ನೀಡಲು ಅಜ್ಜನ ಕ್ಷೇತ್ರಕ್ಕೆ ಆಗಮಿಸಿದುದರ ಹಿಂದೆ ಕಾಣದ ಕೈಗಳೇನಾದರು ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು.

ರಾಜಕೀಯ ಶಕ್ತಿಗಳಿಗೆ ಕೈ ಆಡಿಸಲು ಅವಕಾಶ ನೀಡಬಾರದು ಎಂದು ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಸ್ವಾತಂತ್ರ್ಯೋತ್ಸವ ಹಿನ್ನೆಲೆ ಜಗಮಗಿಸುತ್ತಿದೆ ಮಂಗಳೂರು ಸಿಟಿ ಕಾರ್ಪೊರೇಶನ್

ಮಂಗಳೂರು: ಆಜಾದಿ ಕಾ ಅಮೃತ್‌ಮಹೋತ್ಸವದ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬರುತ್ತಿದೆ.ನಿನ್ನೆ ರಾತ್ರಿಯಿಂದ ಮಂಗಳೂರು ನಗರ ಪಾಲಿಕೆ ಕಚೇರಿಯಲ್ಲಿ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದ್ದು, ಇದೀಗ ಪಾಲಿಕೆ ಕಚೇರಿ ಜಗಮಗಿಸುತ್ತಿದೆ. ಹರ್‌ಘರ್‌ತಿರಂಗಾ...

ಕೃಷಿಕರೇ ಗಮನಿಸಿ: ಕಿಸಾನ್ ಸಮ್ಮಾನ್ ನಿಧಿಯ ಪರಿಹಾರಕ್ಕಾಗಿ ಆ. 15 ರೊಳಗೆ ಇ-ಕೆವೈಸಿ ಕಡ್ಡಾಯ

ಮಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ನಾಗರಿಕರ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಅಥವಾhttp://pmkisan.gov.in ಪೋರ್ಟಲ್‌ನ ಫಾರ್ಮರ್ಸ್ ಕೋರ್ನರ್ ಮೂಲಕ ಆಧಾರ್ ಸಂಖ್ಯೆ ಹಾಗೂ ಮೊಬೈಲ್...

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು,ತೆಂಕಕಾರಂದೂರು ಇದರ ವತಿಯಿಂದ ನಡೆಯುವ 35 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್  ಬಳಂಜದಲ್ಲಿ ...