LATEST NEWS
ಕಾರ್ಕಳದಲ್ಲಿ ಮನೆ ಮಂದಿ ಮೆಹೆಂದಿಗೆ ಹೋಗಿದ್ದಾಗ ಲಕ್ಷಾಂತರ ಮೌಲ್ಯದ ಸೊತ್ತು ಕಳವು: ಕಳ್ಳ-ಕಳ್ಳಿ ಅರೆಸ್ಟ್
ಉಡುಪಿ: ಮನೆಯವರು ಮೆಹಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಡುಗೆ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕಂಗಿತ್ತು ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂದ ಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಅರಂಬೋಡಿ ಕಾಂತರಬೆಟ್ಟು ನಿವಾಸಿ ಪ್ರಸಾದ್ (34) ಹಾಗು ಕಳ್ಳತನಕ್ಕೆ ಸಹಕರಿಸಿದ ಆರೋಪದಲ್ಲಿ ಶಿಬಾ (39) ಎಂಬಾಕೆ ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ.
ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕಂಗಿತ್ತುವಿನ ಉಷಾ ಜಗದೀಶ್ ಆಂಚನ್ ಅವರ ಮನೆಯಲ್ಲಿ ಡಿಸೆಂಬರ್ 3ರಂದು ಈ ಕಳವು ಪ್ರಕರಣ ನಡೆದಿತ್ತು.
ಅಂದು ಮನೆಯ ಗಾದ್ರೆಜ್‌ನಲ್ಲಿ ಇರಿಸಿದ್ದ ಸುಮಾರು 4.50 ಲಕ್ಷ ರೂ. ಮೌಲ್ಯದ ಸುಮಾರು 156 ಗ್ರಾಂ ತೂಕದ ಬಂಗಾರದ ಒಡವೆ ಸಹಿತ 9,75,000 ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಬಂಧಿತರಾದ ಇಬ್ಬರು ಆರೋಪಿ ಗಳಿಂದ ಕಳ್ಳತನವಾಗಿದ್ದ 9,75,000 ರೂ. ಮೌಲ್ಯದ 216 ಗ್ರಾಂ ಬಂಗಾರದ ಒಡವೆಗಳು ಮತ್ತು 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪ್ರಸಾದ್ ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡುಬಿದಿರೆ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡುಬಿದಿರೆ ಠಾಣೆಯಲ್ಲಿ ಸುದರ್ಶನ ಜೈನ್ ಅವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು.ಕಳ್ಳತನವಾದ ಮನೆಯ ಮಾಲಕಿ ಉಷಾ ಅಂಚನ್ ಹಾಗೂ ಕಳ್ಳತನಕ್ಕೆ ಸಹಕರಿಸಿದ ಶಿಬು ಹಲವು ವರ್ಷಗಳ ಪರಿಚಯಸ್ಥರು. ಆಪ್ತ ಸ್ನೇಹಿತರು.
ಇಬ್ಬರ ಮನೆಗಳ ನಡುವಿನ ಅಂತರ ಸುಮಾರು 50 ಮೀ. ದೂರವಷ್ಟೆ ಇರುವುದು.ಮೊದಲಿನಿಂದಲೂ ಅವರಿಬ್ಬರು ಜತೆಯಾಗಿ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು.ಕಳ್ಳತನವಾದ ದಿನ ರಾತ್ರಿ ಇಬ್ಬರು ಜತೆಯಾಗಿ ಪರಿಸರದಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು.
ಈ ಮೊದಲು ತೆರಳುವಾಗ ಸ್ಕೂಟಿಯಲ್ಲಿ ತೆರಳುತಿದ್ದರು. ಅವತ್ತು ನಾವು ನಡೆದಾಡಿಕೊಂಡು ಆರಾಮವಾಗಿ ಮಾತಾಡಿಕೊಂಡು ಹೋಗುವ ಅಂದಿದ್ದಳು. ಆಕೆಯ ಮರುಳು ಮಾತಿಗೆ ಉಷಾ ಒಪ್ಪಿ ನಡೆದುಕೊಂಡೆ ಇಬ್ಬರು ಇನ್ನಿತರರ ಜತೆ ಸೇರಿ ಹೋಗಿದ್ದರು.
ದೊಡ್ಡ ಕರಿಮಣಿ ಹಾಕುವುದು ಬೇಡವೆಂದೂ ಶಿಬಾ ಹೇಳಿದ್ದಳು. ಅದರಂತೆ ಅದನ್ನು ಮನೆಯಲ್ಲೇ ಇರಿಸಿ ಸಣ್ಣ ಕರಿಮಣಿ ಹಾಕಿದ್ದರು.
ಮೊದಲೇ ಯೋಜನೆ ರೂಪಿಸಿದ್ದ ಶಿಬಾ ಇನ್ನೊಂದು ಕಡೆ ಸಂಬಂದಿ ಪ್ರಸಾದ್‌ಗೆ ಮಾಹಿತಿ ನೀಡಿದ್ದಳು. ಆಕೆಯ ಮಾಹಿತಿ ಆಧರಿಸಿ ಆತ ಕಳ್ಳತನಗೈದಿದ್ದ. ಕಳ್ಳತನವಾದ ಬಳಿಕವೂ ಆರೋಪಿತೆ ಶಿಬು ನಾಟಕವಾಡಿದ್ದಳು.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೆ ಮಚ್ಚಿಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
DAKSHINA KANNADA
Mangaluru: ಸಮುದ್ರಪಾಲಾದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ..!
ಮಂಗಳೂರು: ಸಮುದ್ರ ವಿಹಾರಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾದ ಘಟನೆ ಸೋಮೇಶ್ವರ ಅಲಿಮಕಲ್ಲು ಸಮುದ್ರ ತೀರದ ಬಳಿ ನಡೆದಿದೆ.
ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಅವರ ಪುತ್ರ ಯಶ್ವಿತ್ (18) ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಅವರ ಪುತ್ರ ಯುವರಾಜ್ (18) ನೀರುಪಾಲದ ವಿದ್ಯಾರ್ಥಿಗಳು.
ಶನಿವಾರದಂದು 6 ಮಂದಿ ವಿದ್ಯಾರ್ಥಿಗಳು ಕಾಲೇಜು ಮುಗಿಸಿ ಸೋಮೇಶ್ವರ ದೇವಾಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಊಟ ಮುಗಿಸಿ ಉಚ್ಚಿಲದ ಕಡೆಗೆ ಸುಮಾರು ಒಂದು ಕಿ. ಮೀ ಒಂದು ಕಿ. ಮೀ.ಸಮುದ್ರದ ಬದಿಯಲ್ಲೇ ನಡೆದು ಕೊಂಡು ಹೋಗಿದ್ದು, ಸೋಮೇಶ್ವರ ಅಲಿಮಕಲ್ಲು ಬಳಿ ಸಮುದ್ರಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ನಾಲ್ವರು ಸಮುದ್ರ ಬದಿಯಲ್ಲಿ ಕುಳಿತಿದ್ದರೆ, ಯುವರಾಜ್ ಮತ್ತು ಯಶ್ವಿತ್ ಸಮುದ್ರದ ನೀರಿಗಿಳಿದು, ಕಲ್ಲಿನ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಸಮುದ್ರದ ಅಲೆಯೊಂದಕ್ಕೆ ಯುವರಾಜ್ ಜಾರಿ ಬಿದ್ದು ಸಮುದ್ರ ಪಾಲಾದಾಗ ಯಶ್ವಿತ್ ಆತನನ್ನು ರಕ್ಷಿಸಲು ಹೋಗಿ ಸಮುದ್ರ ಪಾಲಾಗಿದ್ದಾರೆ. ಈ ವೇಳೆ ಅವರು ಮುಳುಗಿತ್ತಿದ್ದನ್ನು ಕಂಡ ಸ್ನೇಹಿತರು ಅಲ್ಲೇ ಪಕ್ಕದ ಶೆಡ್‍ನಲ್ಲಿಟ್ಟಿದ್ದ ಟಯರ್ ಟ್ಯೂಬ್ ಬಳಸಿ ಅವರನ್ನು ರಕ್ಷಿಸಲು ಎಂದು ಸಮುದ್ರಕ್ಕೆ ಇಳಿದಿದ್ದಾರೆ. ಆದರೆ ಅವರಿಗೆ ಸಾಧ್ಯವಾಗದ ಕಾರಣ ಬೊಬ್ಬೆ ಹಾಕಿದ್ದಾರೆ. ಈ ವೇಳೆ ಸ್ಥಳೀಯ ಈಜುಗಾರರು ಹುಡುಕಾಟ ನಡೆಸಿದ್ದಾರೆ. ವಿದ್ಯಾರ್ಥಿಗಳ ಪತ್ತೆಗಾಗಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಉಳ್ಳಾಲ ಪೋಲಿಸರು ಕಾರ್ಯಚಾರಣೆ ನಡೆಸಿದ್ದು, ರಾತ್ರಿವರೆಗೂ ಪತ್ತೆಯಾಗಿರಲಿಲ್ಲ. ಬಳಿಕ ಇಂದು ಬೆಳಗ್ಗೆ ಹುಡುಕಾಡಿದಾಗ ಅದೇ ಸ್ಥಳದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
FILM
ಬದುಕಿನ ಕೊನೆಯವರೆಗೂ ನೋವು, ತಾತ್ಸಾರ, ಅಪವಾದಗಳೇ ಹೆಚ್ಚು-ಸ್ವರ್ಗದಲ್ಲಾದರೂ ನೆಮ್ಮದಿ ಸಿಗಲಿ ಅಮ್ಮಾ…
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಕಲಿತದ್ದು ಕೇವಲ ಎರಡನೇ ತರಗತಿವರೆಗು ಮಾತ್ರ. 9ನೇ ವಯಸ್ಸಿಗೆ ತಂದೆ ಹಾಗೂ ತಾಯಿಯನ್ನು ಕಳೆದುಕೊಳ್ಳುತ್ತಾರೆ..
ಅವರನ್ನು ಕ್ರೈಸ್ತ ಕುಟುಂಬವೊಂದು ಆರೈಕೆ ಮಾಡಿದ್ದರು.
ತುತ್ತು ಅನ್ನಕ್ಕಾಗಿ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಿ, ಚಾಕರಿ ಮಾಡಿ ಆಕೆ ತನ್ನ ಬಾಲ್ಯವನ್ನು ಕಳೆದರು.
ತುಳು ಚಿತ್ರರಂಗದಲ್ಲಿ ಅಂದಿಗೆ ತುಳು ಸಿನಿಮಾಗಳು ಆರಂಭ ಆದವು. ಹೊಟ್ಟೆ ಹಸಿವನ್ನು ನೀಗಿಸಲು ಚಂದದ ಹೆಣ್ಣು ಮಗಳೋರ್ವಳು ಸಿನಿಮಾದಲ್ಲಿ ಅವಕಾಶ ಕೊಡುವಂತೆ ಅಂಗಲಾಚುತ್ತಾಳೆ. ಅವಳೇ ಮುದ್ದು ಮುದ್ದು ಲೀಲಾ ಕಿರಣ್ ಅಲಿಯಾಸ್ ಇಂದಿನ ಲೆಜೆಂಡೆರಿ ಆಕ್ಟ್ರೆಸ್ ಲೀಲಾವತಿ ಅಮ್ಮ. ಇದರ ಪರಿಣಾಮವಾಗಿ ‘ಸಾವಿರೊಡೊರ್ತಿ ಸಾವಿತ್ರಿ, ದಾರೆದ ಬುಡೆದಿ, ಬಿಸತ್ತಿ ಬಾಬು ಮೊದಲಾದ ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಬಣ್ಣದ ಬದುಕಿ ಕಟ್ಟಿಕೊಂಡು ಅವಕಾಶ ಪಡೆದು ಜೀವನ ಸಾಗಿಸಬಹುದು ಎಂಬ ಕನಸಿನೊಂದಿಗೆ ಬೆಂಗಳೂರಿಗೆ ಹೋದ ಲೀಲಮ್ಮ ಅಲ್ಲಿ ಬರಬಾರದ ಕಷ್ಟಗಳನ್ನು ಅನುಭವಿಸಿದ್ರು.
ಆಗ ಆಸರೆಯಾಗಿದ್ದೇ ಮಹಾನ್ ಕಲಾವಿದ ಆಗಿದ್ದ ಮಹಾಲಿಂಗ ಭಾಗವತರ್ ಅವರ ಪ್ರಸಿದ್ಧ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮ ಕಂಪೆನಿ. ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅವರು ಅಭಿನಯ ಮಾಡುತ್ತಿದ್ದರು ಲೀಲಾವತಿ ಅಮ್ಮ. ಸುಬ್ಬಯ್ಯ ನಾಯ್ಡು ಅವರ ಪರಿಚಯ ಆಗಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಒಂದು ಪಾತ್ರವನ್ನು ಗಿಟ್ಟಿಸಿಕೊಂಡರು.
ಅದೇ ಸಂದರ್ಭದಲ್ಲಿ ಮಹಾಲಿಂಗ ಭಾಗವತರ್ ಅವರನ್ನು ಮದುವೆ ಆದ ಲೀಲಾವತಿ ಆ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆಗ ಹೆಚ್ಚಿನ ನಟಿಯರು ತಮ್ಮ ಬೇಡಿಕೆ ಉಳಿಸಿಕೊಳ್ಳಲು ಮದುವೆಯನ್ನು ಬಹಿರಂಗ ಮಾಡುತ್ತಿರಲಿಲ್ಲ. ಮುಂದೆ ಲೀಲಾವತಿ ಜೀವನದಲ್ಲಿ ಮಹಾಲಿಂಗ ಭಾಗವತರ್ ಅವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು.
ಡಾ. ರಾಜ್ ಕುಮಾರ್ ಹಾಗೂ ಲೀಲಾವತಿ ಅವರದ್ದು ಸೂಪರ್ ಡೂಪರ್ ಕಾಂಬಿನೇಷನ್. ಇವರಿಬ್ಬರ ಅದ್ಭುತ ಅಭಿನಯವನ್ನು ಕಂಡು ರಾಜ್ – ಲೀಲಾವತಿ ಅವರನ್ನು ಗಂಡ ಹೆಂಡತಿ ಎಂದೇ ಕರೆಯಲು ಆರಂಭಿಸಿದರು.
ಆದ್ರೆ ಲೀಲಾವತಿ ಅಮ್ಮ ರಾಜ್ ಅವರನ್ನು ಭಕ್ತಿಯಿಂದ ‘ದೊಡ್ಡೋರು’ ಎಂದೇ ಭಕ್ತಿಯಿಂದ ಕರೆಯುತ್ತಿದ್ದರು. ಡಾ. ರಾಜ್ ಅವರಿಗೆ ಮಾತ್ರ ಲೀಲಾವತಿ ಅಂದರೆ ಬಹಳ ಪ್ರೀತಿ..ಅವರೇ ಲೀಲಾವತಿಯವರಿಗರ ಬರೆದ ಪತ್ರಗಳು ವೈರಲ್ ಆಗಿದ್ದವು.ಇದೀಗ ಲೀಲಾವತಿ ಅಮ್ಮ ನಮ್ಮನೆಲ್ಲಾ ಬಿಟ್ಟು ಬಾರದ ಊರಿಗೆ ತೆರಳಿದ್ದಾರೆ. ಇಂದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ಬದುಕಿದ್ದಾಗ ಅಷ್ಟೇನೂ ಸುಖ ಕಾಣದ ಲೀಲಾವತಿ ಅಮ್ಮನವರಿಗೆ ಸ್ವರ್ಗದಲ್ಲಾದರೂ ಸುಖ ನೆಮ್ಮದಿ ಸಿಗಲಿ.
DAKSHINA KANNADA
ಡಿ. 14ರಿಂದ 17 ರವರೆಗೆ “ಆಳ್ವಾಸ್ ವಿರಾಸತ್”
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ಡಿ.14ರಿಂದ 17ರವರೆಗೆ ಮೂಡಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದೊಂದಿಗೆ ನಡೆಯುವ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿ.14ರಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ವಿರಾಸತ್ ಉದ್ಘಾಟಿಸಲಿದ್ದು,ಈ ಬಾರಿಯ ವಿರಾಸತ್ ನಲ್ಲಿ ಬೆನ್ನಿದಯಾಲ್, ವಿಜಯಪ್ರಕಾಶ್, ಶ್ರೇಯಾ ಘೋಷಾಲ್ ಸ್ವರ ಮಾಧುರ್ಯ, ಪ್ರತಿನಿತ್ಯ 13 ಗಂಟೆಗಳ ಕಾಲ 750 ಮಳಿಗೆಗಳಲ್ಲಿ ಪ್ರದರ್ಶನ ಹಾಗೂ ಮಾರಾಟಗಳು ನಡೆಯಲಿವೆ. ಭವ್ಯ ಸಾಂಸ್ಕೃತಿಕ ಮೆರವಣಿಗೆ ಬಳಿಕ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪದರ್ಶನ ಮೇಳ, ಚಿತ್ರಕಲಾ ಮೇಳಗಳು ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಸ್ಕೌಟ್ಸ್ ಗೈಡ್ಸ್ ಸಾಹಸಮಯ ಚಟುವಟಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾ ಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
- bangalore7 days ago
ಆಸ್ಟ್ರೇಲಿಯಾ ಬೀಚ್ ನಲ್ಲಿ ಮಂಗ್ಳೂರು ಬೆಡಗಿ ಅನುಶ್ರೀ…
- bangalore7 days ago
“ಎಂಚ ಉಲ್ಲಾರ್ ಮರ್ರೆ”…. ಎಂದು ತುಳುವಿನಲ್ಲಿ ಮಾತನಾಡಿದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್
- LATEST NEWS7 days ago
ಪ್ರಿಯತಮೆಯ ಕೊಂದು ಆಕೆಯ ಮೃತದೇಹವನ್ನು ಸ್ಟೇಟಸ್ ಹಾಕಿದ ಕ್ರೂರಿ..!
- FILM4 days ago
ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ