Connect with us

    LATEST NEWS

    ರಾಯರ ದರ್ಶನಕ್ಕೆ ಹೋದವರ ಮನೆಗೆ ಕನ್ನ; ಮಂಜುನಾಥನ ಸನ್ನಿಧಿಯಲ್ಲಿ ಅರೆಸ್ಟ್​

    Published

    on

    ಮಂಗಳೂರು/ಬೆಂಗಳೂರು : ಆ ಐನಾತಿ ಕಳ್ಳರು ಪ್ರವಾಸಕ್ಕೆ ತೆರಳುವ ಮಂದಿಯ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.  ಆದರೆ, ಈ ಬಾರಿ ಕೆಲಸ ಕೈ ಕೊಟ್ಟಿದೆ. ರಾಯರ ದರ್ಶನಕ್ಕೆ ಹೋದವರ ಮನೆಯಲ್ಲಿ ಕದ್ದು ಮಂಜುನಾಥನ ದರ್ಶನಕ್ಕೆ ಹೋದವರು ತಗಲಾಕ್ಕೊಂಡಿದ್ದಾರೆ.

    ಆರೋಪಿ ಸನ್ಯಾಸಿಮಠ ನಂದೀಶ್ ಮತ್ತು ನಂದೀಶ್ ಪ್ರತಾಪ್ ಬಂಧಿತ ಆರೋಪಿಗಳು. ಹನುಮೇಗೌಡ ಎಂಬಾತ  ಪರಾರಿಯಾಗಿದ್ದಾನೆ. ಕಳ್ಳತನ ಮಾಡಿದ 12 ಗಂಟೆಯಲ್ಲೇ ಸುಬ್ರಮಣ್ಯ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಸುಬ್ರಮಣ್ಯ ನಗರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದವರಿಗೆ ಆರೋಪಿ ಸನ್ಯಾಸಿಮಠ ನಂದೀಶ್​​ ಸಂಬಂಧಿಕನಾಗಿದ್ದ. “ತಮ್ಮ ಮನೆಯ ಮಾಲೀಕರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ” ಎಂದು ಮನೆ ಕೆಲಸದವರು ಮಾತನಾಡಿಕೊಳ್ಳುತ್ತಿದ್ದರು. ಇವರ ಮಾತನ್ನು ಪಕ್ಕದಲ್ಲೇ ನಿಂತು ಸನ್ಯಾಸಿಮಠ ನಂದೀಶ್​ ಕದ್ದು ಕೇಳಿಸಿಕೊಂಡಿದ್ದ. ಈ ವಿಚಾರವನ್ನ ಸನ್ಯಾಸಿಮಠ ನಂದೀಶ್​ ತನ್ನ ಸ್ನೇಹಿತರಿಗೆ ಹೇಳಿ, ಕನ್ನ ಹಾಕಲು ಯೋಜನೆ ರೂಪಿಸಿದ್ದರು.

    ಚಿನ್ನ ಎಗರಿಸಿ ಪರಾರಿ :

    ಮನೆಯವರು ಮಂತ್ರಾಲಯಕ್ಕೆ ಯಾವಾಗ ಹೋಗುತ್ತಾರೆ ಅಂತ ಮನೆ ಬಳಿ ನಿತ್ಯ ಪರೇಡ್​ ಮಾಡಿದ್ದಾನೆ. ಒಂದು ದಿನ ಮನೆಯವರು ಮಂತ್ರಾಲಯಕ್ಕೆ ಹೋಗಿದ್ದಾರೆ.  ಇತ್ತ ಖದೀಮರು ಮನೆಯ ಹಿಂಬದಿ ಕಿಟಕಿಯನ್ನು ಗ್ಯಾಸ್ ಕಟರ್​ನಿಂದ ಕಟ್ ಮಾಡಿ ಮನೆಯೊಳಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ 1 ಕೆಜಿ 800 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಕದ್ದ ಎಲ್ಲ ಚಿನ್ನವನ್ನು ಸನ್ಯಾಸಿಮಠ ನಂದೀಶ್​ ತನ್ನ ರೂಂನಲ್ಲಿ ಇಟ್ಟಿದ್ದ. ಬಳಿಕ, ಚಿನ್ನ ಕದ್ದ ಖುಷಿಯಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದಾನೆ.

    ಇದನ್ನೂ ಓದಿ : ದೇಗುಲ ಆಗಿರಲಿ, ದರ್ಗಾ ಆಗಿರಲಿ ಅಕ್ರಮವಾಗಿ ಕಟ್ಟಿದ್ದರೆ ತೆರವು : ಸುಪ್ರೀಂ ಕೋರ್ಟ್

    ಮನೆ ಮಾಲೀಕರು ಮಂತ್ರಾಲಯದಿಂದ ವಾಪಸು ಬಂದು ನೋಡಿದಾಗ, ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮನೆ ಮಾಲೀಕರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ಪೊಲೀಸರು ಆರೋಪಿಗಳ ಬೆನ್ನು ಹತ್ತಿದ್ದಾರೆ. ಸನ್ಯಾಸಿಮಠ ನಂದೀಶ್​ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಬಳಿಕ, ಇನ್ನೋರ್ವ ಆರೋಪಿ ನಂದೀಶ್​ ಪ್ರತಾಪ್​ನನ್ನು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು 1ಕೆಜಿ 800 ಗ್ರಾಂ ಚಿನ್ನ ಸೇರಿದಂತೆ 18 ಸಾವಿರ ರೂ. ನಗದು ವಶಕ್ಕೆ ಪಡೆದಿದ್ದಾರೆ.

    LATEST NEWS

    ಪರಿಷತ್ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಆಯ್ಕೆ

    Published

    on

    ಮಂಗಳೂರು: ಅಕ್ಟೋಬರ್ 24 ರಂದು ನಡೆಯಲಿರುವ ಪರಿಷತ್ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮ ಗೊಳಿಸಿದೆ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

    ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದರು. ಬಳಿಕ ಪಕ್ಷದಲ್ಲಿ ವಿವಿಧ ಜವಾಬ್ದಾರಿ ವಹಿಸಿಕೊಂಡಿದ್ದ ಕಿಶೋರ್ ಕುಮಾರ್ ಪಕ್ಷ ಕಟ್ಟುವಲ್ಲಿ ಶ್ರಮ ವಹಿಸಿದ್ದರು.

    ಇತ್ತೀಚೆಗೆ ವಿಧಾನಸಭಾ ಚುನಾವಣಾ ಸಮಯದಲ್ಲೂ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕಿಶೋರ್ ಕುಮಾರ್‌ಗೆ ಸಿಗಲಿದೆ ಎಂಬ ಸುದ್ದಿ ಹರಡಿತ್ತು. ಆದ್ರೆ ಇದೀಗ ಇವರ ಪರಿಶ್ರಮವನ್ನು ಗುರುತಿಸಿದ ಪಕ್ಷ ವಿಧಾನ ಪರಿಷತ್ ಉಪ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಹೆಸರು ಘೋಷಣೆ ಮಾಡಿದೆ.

    Continue Reading

    LATEST NEWS

    ಐಫೋನ್​ಗೆ ಹಣ ಕೊಡಬೇಕಲ್ಲಾ ಎಂದು ಡೆಲಿವರಿ ಏಜೆಂಟ್​ನನ್ನೇ ಕೊಂ*ದ ವ್ಯಕ್ತಿ

    Published

    on

    ಉತ್ತರ ಪ್ರದೇಶ: ಐಫೋನ್​ಗೆ ಹಣ ಕೊಡಬೇಕಲ್ಲಾ ಎಂದು ಡೆಲಿವರಿ ಏಜೆಂಟ್​ನನ್ನೇ ಹ*ತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


    ವ್ಯಕ್ತಿ ಫ್ಲಿಪ್​ಕಾರ್ಟ್​ ಮೂಲಕ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಐಫೋನ್​ನ್ನು ಕ್ಯಾಶ್​ ಆನ್ ಡೆಲಿವರಿಯಲ್ಲಿ ಆರ್ಡರ್ ಮಾಡಿದ್ದ, ಡೆಲಿವರಿ ಏಜೆಂಟ್​ ಅವರ ಮನೆಗೆ ಬಂದು ಐಫೋನ್ ಕೊಟ್ಟಿದ್ದಾರೆ ಆದರೆ ಆತನಿಗೆ ಹಣಕೊಡಬೇಕಲ್ಲಾ ಎಂದು ಚಿಂತಿಸಿ ಡೆಲಿವರಿ ಏಜೆಂಟ್​ನನ್ನೇ ಹ*ತ್ಯೆ ಮಾಡಿ ಕಾಲುವೆಗೆ ಎಸೆದಿದ್ದಾನೆ.

    ನಿಶಾತ್‌ಗಂಜ್ ನಿವಾಸಿಯಾದ ಡೆಲಿವರಿ ಬಾಯ್ ಭರತ್ ಸಾಹು ಫೋನ್ ಡೆಲಿವರಿ ಮಾಡಲು ಅವರ ಮನೆಗೆ ಹೋಗಿದ್ದರು. ಅಲ್ಲಿ ಗಜಾನನ ಮತ್ತು ಅವನ ಸಹಚರರು ಅವರನ್ನು ಕೊ*ಲೆ ಮಾಡಿದ್ದಾರೆ. ಸಾಹುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಮೃ*ತದೇಹವನ್ನು ಗೋಣಿಚೀಲದಲ್ಲಿ ತುಂಬಿ ಇಂದಿರಾ ಕಾಲುವೆಗೆ ಎಸೆದಿದ್ದಾರೆ.

    ಎರಡು ದಿನಗಳ ಕಾಲ ಸಾಹು ಮನೆಗೆ ಬಾರದಿದ್ದಾಗ, ಆತನ ಕುಟುಂಬದವರು ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಸಾಹುವಿನ ಕಾಲ್ ಡಿಟೇಲ್ಸ್ ಸ್ಕ್ಯಾನ್ ಮಾಡಿ ಆತನ ಲೊಕೇಶನ್ ಹುಡುಕಿ ಪೊಲೀಸರು ಗಜಾನನ ನಂಬರ್ ಪತ್ತೆ ಮಾಡಿ ಆತನ ಸ್ನೇಹಿತ ಆಕಾಶ್​ನನ್ನು ತಲುಪಿದ್ದಾರೆ.

    ವಿಚಾರಣೆ ವೇಳೆ ಆಕಾಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಅಧಿಕಾರಿ ತಿಳಿಸಿದ್ದಾರೆ. ಹತ್ಯೆಯ ನಂತರ ಆಕಾಶ್ ಕೂಡ ಮುಂಬೈಗೆ ಪರಾರಿಯಾಗಿದ್ದ. ಆದರೆ, ಪೊಲೀಸರಿಗೆ ಇನ್ನೂ ಶ*ವ ಪತ್ತೆಯಾಗಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವು ಕಾಲುವೆಯಲ್ಲಿ ದೇಹವನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

    Continue Reading

    BIG BOSS

    BBK11: ಬಿಗ್‌ಬಾಸ್‌ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್‌ ಸುರೇಶ್‌ ಬಳಿ ಇರುವುದೇನು?

    Published

    on

    ಬೆಂಗಳೂರು: ಮೊದಲ ದಿನದಂದಲೇ ಬಿಗ್‌ ಬಾಸ್‌ ಕಾರ್ಯಕ್ರಮ ರಂಗೇರಿದೆ. ಸ್ವರ್ಗ ಹಾಗೂ ನರಕದ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ವಾಗ್ವಾದ ಶುರುವಾಗಿದೆ. ಮನೆಯೊಂದು ಬಾಗಿಲು ಎರಡು ಎಂಬಂತೆ ಸ್ವರ್ಗ–ನರಕದ ನಿವಾಸಿಗಳ ನಡುವೆ ಕಿತ್ತಾಟ ಶುರುವಾಗಿದೆ.

    ಕಳೆದ ಸೀಸನ್‌ನಲ್ಲಿ ಹುಲಿ ಉಗುರು ಪ್ರಕರಣದಿಂದ ಸದ್ದಾಗಿದ್ದ ಬಿಗ್‌ ಬಾಸ್‌ ಮನೆ ಈ ಬಾರಿಯೂ ಹುಲಿ ಉಗುರಿನ ವಿಚಾರದಿಂದ ಸುದ್ದಿ ಆಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಉತ್ತರ ಕರ್ನಾಟಕ ಮೂಲದಿಂದ ಬಂದು ಬಿಗ್‌ ಬಾಸ್‌ ಮನೆಯೊಳಗೆ ಹೋಗಿರುವ ʼಗೋಲ್ಡ್‌ ಸುರೇಶ್‌ʼ.

     

    ಬಿಗ್‌ ಬಾಸ್‌ ಈ ಬಾರಿ ಪ್ರಿಮಿಯರ್‌ ಆಗುವ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಿತ್ತು. ಅದರಲ್ಲಿ ʼಗೋಲ್ಡ್‌ ಸುರೇಶ್‌ʼ ಕೂಡ ಇದ್ದರು. ಬೆಳಗಾವಿ ಮೂಲದವರಾದ ಗೋಲ್ಡ್‌ ಸುರೇಶ್‌ ಮೈತುಂಬಾ ಚಿನ್ನಾಭರಣ ತೊಟ್ಟುಕೊಂಡೇ ಬಿಗ್‌ ಬಾಸ್‌ ಮನೆಯೊಳಗೆ ಹೋಗಿದ್ದಾರೆ. ಅವರನ್ನು ನೋಡಿ ಇವರು ವರ್ತೂರು ಸಂತೋಷ್‌ 2.0 ಎಂದು ಕಮೆಂಟ್‌ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ವರ್ತೂರು ಸಂತೋಷ್‌ ಕೂಡ ಇದೇ ರೀತಿ ಚಿನ್ನವನ್ನು ಧರಿಸಿಕೊಂಡು ದೊಡ್ಮನೆಯೊಳಗೆ ಹೋಗಿದ್ದರು.

    ಆದರೆ ಕೆಲ ಸಮಯದ ಬಳಿಕ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ ಕಾರಣಕ್ಕೆ ಅರಣ್ಯ ಇಲಾಖೆಗೆ ಅಧಿಕಾರಿಗಳ ಅವರ ವಿರುದ್ಧ ದೂರು ದಾಖಲಿಸಿಕೊಂಡು, ಬಿಗ್‌ ಬಾಸ್‌ ಮನೆಯಿಂದಲೇ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈ ವಿಚಾರ ಎಲ್ಲೆಡೆ ಸುದ್ದಿ ಆಗಿತ್ತು. ವಿಚಾರಣೆ ಎದುರಿಸಿ ವರ್ತೂರು ಸಂತೋಷ್‌ ಮತ್ತೆ ಬಿಗ್‌ ಬಾಸ್‌ ಮನೆಯೊಳಗೆ ಬಂದಿದ್ದರು.

     

    ಆದರೆ ಇದೀಗ ಬಿಗ್‌ ಬಾಸ್‌ ಕನ್ನಡ -11ನಲ್ಲಿ ಸ್ಪರ್ಧಿ ಆಗಿರುವ ʼಗೋಲ್ಡ್‌ ಸುರೇಶ್‌ʼ ಕೂಡ ಚಿನ್ನಾಭರಣಗಳ ಜತೆ ಹುಲಿ ಉಗುರಿನ ಪೆಂಡೆಂಟ್‌ ವೊಂದನ್ನು ಧರಿಸಿದ್ದಾರೆ. ಅವರ ವಿಟಿಯಲ್ಲಿ ಇದನ್ನು ತೋರಿಸಲಾಗಿದೆ. ಇದು ಅಸಲಿಯೂ ಅಥವಾ ನಕಲಿಯೂ ಅಥವಾ ಫೈಬರ್‌ ನದ್ದೂ ಎನ್ನುವ ಪ್ರಶ್ನೆ ಕಾಡಿದೆ.

    ವಿಟಿಯಲ್ಲಿ ಹುಲಿ ಉಗುರಿನ ಪೆಂಡೆಂಟ್‌ ತೋರಿಸಲಾಗಿದ್ದು, ಇದನ್ನು ಅವರು ಬಿಗ್‌ ಬಾಸ್‌ ಮನೆಯೊಳಗೆ ತೆಗೆದುಕೊಂಡು ಹೋಗಿದ್ದಾರಾ ಅಥವಾ ತೆಗೆದಿಟ್ಟಿದ್ದಾರಾ ಎನ್ನುವುದನ್ನು ಸ್ಪಷ್ಟ ಪಡಿಸಿಕೊಳ್ಳಲು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬಿಗ್‌ ಬಾಸ್‌ ಮನೆಯೊಳಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಇದು ಅಸಲಿ ಹುಲಿ ಉಗುರಿನ ಪೆಂಡೆಂಟ್ ವೋ ಅಥವಾ ಪೈಬರ್‌ ರೂಪದಲ್ಲಿರುವ ಪೆಂಡೆಂಟ್‌ ವೋ ಎನ್ನುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ. ವೈಲ್ಡ್‌ ಲೈಫ್ ಕಾನೂನು ಪ್ರಕಾರ ಹುಲಿ ಉಗುರು ಧರಿಸುವುದು ಅಪರಾಧವಾಗಿದೆ.

    ಯಾರು ಈ ಗೋಲ್ಡ್‌ ಸುರೇಶ್?

    ಇವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಮೊದಲಿನಿಂದಲೂ ಚಿನ್ನಾಭರಣದ ಮೇಲೆ ವ್ಯಾಮೋಹ ಇಟ್ಟುಕೊಂಡಿರುವ ಅದನ್ನು ಸದಾ ಮೈಯಲ್ಲಿ ಧರಿಸಿರುತ್ತಾರೆ. ಆರ್ ಎಸ್‌ ಎಸ್‌ ಪೂರ್ಣವಧಿ ಕಾರ್ಯಕರ್ತನಾಗಿದ್ದ ಸುರೇಶ್‌, ಬಡತನದ ಹಿನ್ನೆಲೆಯಿಂದಲೇ ಬಂದವರು. ನಿರ್ಮಾಣ ಸಂಸ್ಥೆಯನ್ನು ಮುನ್ನಡಿಸಿ ದೊಡ್ಡಮಟ್ಟದ ಯಶಸ್ಸು ಕಂಡವರು. ವಿವಾಹಿತ ಆಗಿರುವ ಇವರು ಒಂದು ಮಗುವಿನ ತಂದೆ ಆಗಿದ್ದಾರೆ.

    Continue Reading

    LATEST NEWS

    Trending