Connect with us

    LATEST NEWS

    ಗಿನ್ನಿಸ್ ದಾಖಲೆ ಬರೆದ ಬುದ್ಧಿವಂತ ಕೋಳಿ..!!

    Published

    on

    ಕೆನಡಾ/ಮಂಗಳೂರು: ಇಲ್ಲೊಂದು ಕೋಳಿ ಸಂಖ್ಯೆಗಳು, ಬಣ್ಣಗಳು ಹಾಗೂ ಅಕ್ಷರಗಳನ್ನು ಗುರುತಿಸುವ ಮೂಲಕ ಅಚ್ಚರಿಯನ್ನುಂಟುಮಾಡಿದೆ. ಹೌದು, ಸಾಧಾರಣವಾಗಿ ಕೋಳಿಗಳಿಗೆ ಬುದ್ಧಿವಂತಿಕೆ ಕಮ್ಮಿ ಅನ್ನುವ ಮಾತಿದೆ. ಆದರೆ ಇಲ್ಲೊಂದು ಮಹಿಳೆ ತಾನು ಸಾಕಿರುವ ಕೋಳಿಗೆ ಬುದ್ಧಿ ಕಲಿಸಿ ಆಶ್ಚರ್ಯ ಪಡುವಂತೆ ಮಾಡಿದ್ದಾಳೆ.

    ಬ್ರಿಟಿಷ್ ಕೊಲಂಬಿಯಾ(ಕೆನಡಾ)ದ ಕೋಳಿಯೊಂದು ಸಂಖ್ಯೆಗಳು, ಬಣ್ಣಗಳು ಮ್ತತು ಅಕ್ಷರಗಳನ್ನು ಗುರುತಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದೆ. ಗ್ಯಾಬ್ರಿಯೊಲಾ ದ್ವೀಪದ ಪಶುವೈದ್ಯೆ ಎಮಿಲಿ ಕ್ಯಾರಿಂಗ್ಟನ್ ಅವರು ಮೊಟ್ಟೆಗಳಿಗಾಗಿ ಐದು ಹೈಲೈನ್ ಕೋಳಿಗಳನ್ನು ಖರೀದಿ ಮಾಡಿದ್ದರು. ಬಳಿಕ ಈ ಕೋಳಿಗಳಿಗೆ ಅಕ್ಷರಗಳನ್ನು ಗುರುತಿಸಲು ತರಬೇತಿ ನೀಡಿದ್ದಾರೆ. ಇದೀಗ ಈ ಕೋಳಿಗಳ ಕೆಲಸ ಅಕ್ಷರಗಳು ಹಾಗೂ ಸಂಖ್ಯೆಗಳನ್ನು ಗುರುತಿಸುವುದು ಆಗಿದೆ ಎಂದು ವೈದ್ಯೆ ಹೇಳಿದ್ದಾರೆ.

    ಮನೆ ಬಾಲ್ಕನಿಯನ್ನೇ ಬಾಡಿಗೆ ನೀಡಿದ ವ್ಯಕ್ತಿ..! ಬಾಡಿಗೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

    ತನ್ನ ಎಲ್ಲಾ ಕೋಳಿಗಳು ಒಂದೇ ನಿಮಿಷದಲ್ಲಿ ಅಕ್ಷರಗಳು, ಸಂಖ್ಯೆಗಳನ್ನು ಗುರುತಿಸಿ ವಿಶ್ವ ದಾಖಲೆ ಮಾಡಬೇಕು ಎಂದು ವೈದ್ಯೆ ನಿರ್ಧರಿಸಿದ್ದರು. ಆದರೆ ಲೇಸಿ ಎಂಬ ಹೆಸರಿನಿ ಕೋಳಿ ಒಂದು ನಿಮಿಷದಲ್ಲಿ ಆರು ಅಕ್ಷರಗಳು, ಸಂಖ್ಯೆಗಳನ್ನು ಮತ್ತು ಬಣ್ಣಗಳನ್ನು ಗುರುತಿಸಿ ಗಿನ್ನಿಸ್ ರೆಕಾರ್ಡ್‌ ಅನ್ನು ಮಾಡಿದೆ.

    ಇದೀಗ ಕ್ಯಾರಿಂಗ್ಟನ್ ತನ್ನ ಯೂಟ್ಯೂಬ್ ಚಾನೆಲ್ ದಿ ಥಿಂಕಿಂಗ್‌ ಚಿಕನ್‌ ಅನ್ನು ನಡೆಸುತ್ತಾರೆ. ಜನರು ಕೋಳಿಗಳಿಗೆ ಬುದ್ದಿ ಇಲ್ಲಾ ಎಂದು ಹೇಳಬಾರದು. ಕೋಳಿಗಳಿಗೆ ಸಾಕಷ್ಟು ಬುದ್ದಿ ಇದೆ ಎಂದು ಹೇಳಿದ್ದಾರೆ. ಕೋಳಿಗಳಿಗೆ ಬುದ್ಧಿ ಇದೆ ಅನ್ನುವುದಕ್ಕೆ ನನ್ನ ಕೋಳಿ ಮಾಡಿರುವ ವಿಶ್ವ ದಾಖಲೆಯೇ ಸಾಕ್ಷಿಯಾಗಿದೆ ಎಂದು ಕ್ಯಾರಿಂಗ್ಟನ್ ಹೇಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಸಂಸದ ಕೋಟ ಹೆಸರಿನಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು

    Published

    on

    ಉಡುಪಿ : ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆಸರಿನಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆಸರಿನಲ್ಲಿ ಅವರ ಫೋಟೋವನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣ ಇಸ್ಟಗ್ರಾಮ್ ನಲ್ಲಿ ನಕಲಿ ಖಾತೆ ತೆರೆದಿದ್ದು, ಈ ಮೂಲಕ ಸಾರ್ವಜನಿಕರಿಂದ ಹಣಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದರು ಎಂದು ದೂರಲಾಗಿದೆ. ದುರುದ್ದೇಶಪೂರ್ವಕವಾಗಿ ಅಕ್ರಮ ಹಣವನ್ನು ಸಂಪಾದಿಸುವ ಹಾಗೂ ಹೆಸರನ್ನು ಕೆಡಿಸುವ ಉದ್ದೇಶದಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಸದರ ವಕೀಲ ಶ್ಯಾಮಸುಂದರ ನಾಯರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    Continue Reading

    DAKSHINA KANNADA

    ಮಂಗಳೂರು : ಖಾಸಗಿ ಬಸ್ಸಿಗೆ ‘ಇಸ್ರೇಲ್‌’ ಹೆಸರು; ತೀವ್ರ ಆಕ್ಷೇಪದ ಬಳಿಕ ‘ಜೆರುಸಲೇಂ’ ಎಂದು ಬದಲಾಯಿಸಿದ ಮಾಲಕ

    Published

    on

    ಮಂಗಳೂರು: ‘ಇಸ್ರೇಲ್ ಟ್ರಾವೆಲ್ಸ್’ ಎಂಬ ಹೆಸರು ಮುಲ್ಕಿ-ಮೂಡುಬಿದಿರೆ ಸಂಚರಿಸುವ ಖಾಸಗಿ ಬಸ್ಸಿಗೆ ಇಟ್ಟಿದಕ್ಕೆ ಅಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಆ ಹೆಸರನ್ನೇ ಬದಲಾಯಿಸಲಾಗಿದೆ.


    ಇಸ್ರೇಲ್‌ನಲ್ಲಿ ಸುಮಾರು 12 ವರ್ಷಗಳಿಂದ ಉದ್ಯೋಗದಲ್ಲಿರುವ ಮೂಲತಃ ಕಟೀಲಿನವರಾದ ಲೆಸ್ಟರ್ ಕಟೀಲು ಅವರು ಮಂಗಳೂರಿನಲ್ಲಿ ಬಸ್ ಖರೀದಿಸಿ ಅದಕ್ಕೆ ‘ಇಸ್ರೇಲ್ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದರು. ಇತ್ತೀಚಿಗೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಉಂಟಾಗಿದ್ದ ಹಿನ್ನಲೆಯಲ್ಲಿ ಕೆಲವರು ‘ಇಸ್ರೇಲ್ ಟ್ರಾವೆಲ್ಸ್’ ಹೆಸರಿಗೆ ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.
    ಈ ಬಗ್ಗೆ ಪ್ರತಿಕ್ರಿಯಿಸಿದ ಲೆಸ್ಟರ್ “ಇಸ್ರೇಲ್ನಲ್ಲಿ ಕೆಲಸ ಮಾಡಿದ ಹಾಗೂ ಆ ದೇಶದ ವ್ಯವಸ್ಥೆಯನ್ನು ನೋಡಿ ಅಭಿಮಾನದಿಂದ ಬಸ್ಸಿಗೆ ಇಸ್ರೇಲ್ ಹೆಸರಿಟ್ಟಿದ್ದೆ. ಇದಕ್ಕೆ ಆಕ್ಷೇಪ ವ್ಯಕ್ತವಾದುದರಿಂದ ಬೇಸರವಾಗಿ ಬಸ್ ಹೆಸರು ಬದಲಿಸಿದ್ದೇನೆ. ಜೇರುಸಲೆಂ ಪವಿತ್ರ ಭೂಮಿ. ಅದು ಇಸ್ರೇಲ್‌ನಲ್ಲಿ ಇದೆ” ಎಂದರು.
    ‘ಇಸ್ರೇಲ್ ಟ್ರಾವೆಲ್ಸ್’ ಹೆಸರಿಗೆ ವಿರೋಧ ವ್ಯಕ್ತವಾಗಿರುವುದು, ಪೊಲೀಸರ ಗಮನಕ್ಕೆ ಬಂದಿದ್ದು, ಮುಂದೆ ದ್ವೇಷ ಹೊರಡುವುದು ಬೇಡವೆಂಬ ಕಾರಣಕ್ಕೆ ಪೊಲೀಸರು ಬಸ್‌ನ ಮಾಲಿಕನಿಗೆ ಹೆಸರು ಬದಾಲಾಯಿಸಲು ಸೂಚನೆ ನೀಡಿದ್ದರು. ಹಾಗಾಗಿ ಲೆಸ್ಟರು ‘ಜೇರುಸಲೆಂ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದಾರೆ.

    Continue Reading

    DAKSHINA KANNADA

    ಮಾಜಿ ಶಾಸಕ ಮೋಯಿದ್ದೀನ್ ಬಾವ ಸಹೋದರ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಮಮ್ತಾಜ್ ಅಲಿ ಕಾರು ಪತ್ತೆ

    Published

    on

    ಕೂಳೂರು: ಮಾಜಿ ಶಾಸಕ ಮೋಯಿದ್ದೀನ್ ಬಾವ ಅವರ ಸಹೋದರ ಮಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಅ.6 ರ ರವಿವಾರ ಬೆಳಿಗ್ಗೆ ಕೂಳೂರು ಸೇತುವೆ ಮೇಲೆ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ.
    ಈ ಹಿನ್ನಲೆಯಲ್ಲಿ, ಅವರು ನದಿಗೆ ಹಾರಿರಬಹುದು ಅಥವಾ ಯಾರಾದರು ಎಸೆದಿರಬಹುದು ಎಂಬ ಶಂಕೆಯಿಂದ ನದಿಯಲ್ಲಿ ಎ.ಸ್.ಡಿ.ಆರ್.ಎಫ್. ಅಗ್ನಿಶಾಮಕ ದಳದ ತಂಡದವರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಾರು ಪತ್ತೆಯಾದ ಸ್ಥಳಕ್ಕೆ ಮಾಜಿ ಶಾಸಕ ಮೋಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದ್ದಾರೆ.


    ಘಟನೆ ಸಂಭವಿಸುವ ಮೊದಲು, ಮಮ್ತಾಜ್ ಅಲಿ ಮಗಳಿಗೆ ವಾಟ್ಸಾಪ್ ಮೂಲಕ ‘ಇನ್ನು ಹಿಂತಿರುಗಿ ಬರುವುದಿಲ್ಲ’ ಎಂಬ ಸಂದೇಶ ರವಾನಿಸಿರುವುದು ಆತಂಕಕ್ಕೆ ಕಾರಣವಾಗಿದೆ.
    ಸ್ಥಳಕ್ಕೆ ಮಂಗಳೂರು ಕಮೀಷನರ್ ಅನುಪಮ್ ಅಗರ್ವಾಲ್ ಆಗಮಿಸಿ ಪರಿಶೀಲನೆ ನಡೆಸಿದ್ದು, “ಮಮ್ತಾಜ್ ಅವರು ಮುಂಜಾನೆ ಮೂರು ಗಂಟೆಗೆ ಮನೆಯಿಂದ ಬಿಎಂಡಬ್ಲೂ ಕಾರ್ ಚಲಾಯಿಸಿಕೊಂಡು ಬಂದಿದ್ದರು. 5 ಗಂಟೆ ಸುಮಾರಿಗೆ ಕೂಳೂರು ಸೇತುವೆಯಲ್ಲಿ ಕಾರು ಅಪಘಾತವಾದ ಸ್ಥಿತಿಯಲ್ಲಿ ಕಂಡಿದ್ದು, ಅವರು ನಾಪತ್ತೆಯಾಗಿದ್ದಾರೆ.

    ಅವರ ಮಗಳು ಈ ಕುರಿತು ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ” ಎಂದರು.
    ನದಿಗೆ ಹಾರಿರುವ ಬಗ್ಗೆ ಸಂಶಯವಿದ್ದು ಶೋಧಕಾರ್ಯ ನಡೆಸಿದ್ದು, ಎಫ್.ಎಸ್.ಎಲ್ ಅಧಿಕಾರಿಗಳು ಆಗಮಿಸಿ ಕಾರು ಪರಿಶೀಲನೆ ಮಾಡಿದ್ದಾರೆ. ಕುಟುಂಬದ ಸದಸ್ಯರಿಂದಲೂ ಕೆಲವೊಂದು ಮಾಹಿತಿ ದೊರಕಿದ್ದು,ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    Continue Reading

    LATEST NEWS

    Trending