ಕೇರಳದ ನೈಜ ಘಟನೆಯನ್ನು ಬಿಂಬಿಸುವ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಪ್ರದರ್ಶಿಸಿದ ಕಾಸರಗೋಡಿನ ಚಿತ್ರಮಂದಿರದ ಮಾಲಕನಿಗೆ ಭಯೋತ್ಪಾದಕರು ಚಿತ್ರ ಪ್ರದರ್ಶಿಸದಂತೆ ಬೆದರಿಕೆ ಹಾಕಿದ್ದು, ಕೇಸರಿ ಶಾಲು ಹಾಕಿದ ನಾವು ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ಚಿತ್ರವನ್ನು ಮತ್ತೆ ಪ್ರದರ್ಶಿಸುವಂತೆ ಮಾಡಿದ್ದೇವೆ ಎಂದು ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಹೇಳಿದರು.
ಪುತ್ತೂರು: ಕೇರಳದ ನೈಜ ಘಟನೆಯನ್ನು ಬಿಂಬಿಸುವ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಪ್ರದರ್ಶಿಸಿದ ಕಾಸರಗೋಡಿನ ಚಿತ್ರಮಂದಿರದ ಮಾಲಕನಿಗೆ ಭಯೋತ್ಪಾದಕರು ಚಿತ್ರ ಪ್ರದರ್ಶಿಸದಂತೆ ಬೆದರಿಕೆ ಹಾಕಿದ್ದು, ಕೇಸರಿ ಶಾಲು ಹಾಕಿದ ನಾವು ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ಚಿತ್ರವನ್ನು ಮತ್ತೆ ಪ್ರದರ್ಶಿಸುವಂತೆ ಮಾಡಿದ್ದೇವೆ ಎಂದು ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಹೇಳಿದರು.
ಉಪ್ಪಿನಂಗಡಿಯಲ್ಲಿ ಮೇ 8 ರಂದು ನಡೆದ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ರಾಲಿಯನ್ನು ಉದ್ಧೇಶಿಸಿ ಮಾತನಾಡಿದರು.
ಕಾಂಗ್ರೇಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಶೇಧಿಸುವ ಭರವಸೆ ನೀಡಿದೆ.
ದೇಶ ಉಳಿಯಬೇಕು, ಸಂಸ್ಕಾರ ಉಳಿಯಬೇಕು ಎಂದು ಹೋರಾಡುವ ಸಂಘಟನೆ ಭಜರಂಗದಳವಾಗಿದ್ದು, ಪಕ್ಕದ ಕೇರಳದ ನೈಜ ಘಟನೆಯನ್ನು ಕೇರಳ ಸ್ಟೋರಿ ಚಿತ್ರ ತೋರಿಸಿಕೊಟ್ಟಿದೆ.
ಆದರೆ ಕೇರಳದಲ್ಲಿ ಕೇವಲ 20 ಚಿತ್ರಮಂದಿರಗಳಲ್ಲಿ ಮಾತ್ರ ಈ ಚಿತ್ರ ಪ್ರದರ್ಶನ ಕಾಣುತ್ತಿದೆ.
ಕಾಸರಗೋಡಿನ ಒಂದು ಚಿತ್ರಮಂದಿರದಲ್ಲಿ ಮಾತ್ರ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಲಾಗಿತ್ತು.
ಆದರೆ ಭಯೋತ್ಪಾದಕರು ಆ ಚಿತ್ರಮಂದಿರದ ಮಾಲಕನಿಗೆ ಚಿತ್ರ ಪ್ರದರ್ಶಿಸದಂತೆ ಬೆದರಿಕೆ ಹಾಕಿದಾಗ, ಕೇಸರಿ ಶಾಲು ಧರಿಸಿದ ನಾವು ಅದಕ್ಕೆ ತಕ್ಕ ಉತ್ತರ ನೀಡಿ ಚಿತ್ರ ಪ್ರದರ್ಶಿಸುವಂತೆ ಮಾಡಿದ್ದೇವೆ.
ಬಿಜೆಪಿ ಪಕ್ಷ ಧರ್ಮ, ಹಿಂದೂ ಸಾಮಾಜದ ಉಳಿವಿಗಾಗಿ ಕೆಲಸ ಮಾಡುತ್ತಿದ್ದು, ಸಂಘಕ್ಕಾಗಿ ಮನೆಯ ಸದಸ್ಯರನ್ನೇ ನೀಡಿದ ಮನೆತನದ ಆಶಾ ತಿಮ್ಮಪ್ಪರನ್ನು ಮತದಾರರು ಗೆಲ್ಲಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.