ಭಾರತೀಯ ವಾಯುಸೇನೆಗೆ ಸೇರಿದ ಮಿಗ್ 21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಪತನಗೊಂಡಿದೆ.
ಹನುಮಾನ್‌ಗಢ: ಭಾರತೀಯ ವಾಯುಸೇನೆಗೆ ಸೇರಿದ ಮಿಗ್ 21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಪತನಗೊಂಡಿದೆ.
ಸೂರತ್ ಗಢ ವಾಯುನೆಲೆಯಿಂದ ಟೇಕ್ ಆಫ್ ಆದ್ ಕೆಲವೇ ಕ್ಷಣದಲ್ಲಿ ಮಿಗ್-21 ಯುದ್ಧ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.
ಹನುಮಾನ್‌ಗಢ್ ನಲ್ಲಿರುವ ಮನೆ ಮೇಲೆ ಯುದ್ಧ ವಿಮಾನ ಪತನವಾಗಿದ್ದು, ಆದ ಕಾರಣ ಆ ಸ್ಥಳದಲ್ಲಿದ್ದ ನಾಲ್ವರು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ.
ಆದರೆ ಪೈಲೆಟ್ ಅದೃಷ್ಟವಶಾತ್ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾಜಸ್ಥಾನ ಹಳ್ಳಿಯಲ್ಲಿ ಮಿಗ್-21 ಪತನಗೊಳ್ಳುತ್ತಿದ್ದಂತೆ ಯುದ್ಧ ವಿಮಾನ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಮನೆಯ ಬಳಿ ಬೆಂಕಿ ಹೊತ್ತಿಕೊಂಡಿದೆ.
ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ, ಬೆಂಕಿ ಹಾರಿಸಲು ಹರಸಾಹಸ ಪಟ್ಟಿದ್ದಾರೆ.
ಬಳಿಕ ಭಾರತೀಯ ವಾಯುಪಡೆ ಈ ಘಟನೆಯ ಕುರಿತು ತನಿಖೆ ನಡೆಸುತ್ತಿದೆ.