ವೇಣೂರಿನ ಬರ್ಕಜೆ ಮಣ್ಣಲ್ಲಿ ಅಬ್ಬರಿಸಿದ ನವಗುಳಿಗ ದೈವಗಳು..!
The Navaguliga deities embedded in the Barkaja soil of Venur..!
ಮಂಗಳೂರು: ಮಂಗಳೂರಿನ ಕರಾವಳಿಯಲ್ಲಿ ಗುಳಿಗ ದೈವದ ಕೋಲ ಸೇವೆಯೇ ವಿಶಿಷ್ಟ. ಅಬ್ಬರ, ಆರ್ಭಟಕ್ಕೆ ಗುಳಿಗನಿಗೆ ಗುಳಿಗನೇ ಸಾಟಿ ಎನ್ನಬೇಕು.
ಅಂಥದ್ರಲ್ಲಿ ಒಂದೇ ಬಾರಿಗೆ ಒಂಬತ್ತು ಗುಳಿಗ ದೈವಗಳು ಅಬ್ಬರಿಸಲು ತೊಡಗಿದರೆ ಹೇಗಿರಬೇಡ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ . ಒಂಬತ್ತು ಗುಳಿಗ ದೈವಗಳ ಏಕಕಾಲದ ಸೇವೆ ತುಳುನಾಡಿನಲ್ಲಿ ಅತಿ ವಿಶಿಷ್ಟ ಸೇವೆಗಳಲ್ಲಿ ಒಂದು.
ತುಳುನಾಡು ಹಲವು ಜಾನಪದ ಸಾಂಸ್ಕ್ರತಿಕ ಸಂಪನ್ನಗಳ ನೆಲೆಬೀಡು. ತನ್ನದೇ ಆದ ವಿಶಿಷ್ಟ ಜಾನಪದ ಕಲೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ತಾಣ ಯಕ್ಷಾಧಾರವಾಗಿ ಆದಿಶಕ್ತಿ ಪಾರ್ವತಿ ದೇವಿ ಸಪ್ತ ಕನ್ನಿಕೆಯರ ರೂಪತಾಳಿ ಭೂಲೋಕ ಸಂಚಾರಕ್ಕೆ ಹೊರಟಾಗ ಕರ್ಮಭೂಮಿಗೆ ಬರಲು ಸುರಗಂಗೆಯ ಮಾರ್ಗವಾಗಿ ಪಯಣವನ್ನು ಪ್ರಾರಂಭಿಸುತ್ತಾಳೆ.
ಆಗ ಶಿವಗಣದಲ್ಲಿದ್ದ ಈ ಗುಳಿಗನನ್ನು ನಾವಿಕನನ್ನಾಗಿ ನೇಮಿಸಿ ಶಿವಗಂಗೆಯಿಂದ ಹೊರಟು ಸಪ್ತ ಸಾಗರವನ್ನು ದಾಟಿ ಪವಿತ್ರವಾದ ಪರಶುರಾಮ ಸೃಷ್ಟಿಯಾದ ತುಳುನಾಡಿಗೆ ಬರುವಾಗ ಇಲ್ಲಿನ ಪವಿತ್ರತೆಯನ್ನು ಕಂಡು ಮನಮೋಹಗೊಂಡು ವಿವಿಧ ಸ್ಥಳಗಳಲ್ಲಿ ಲಿಂಗರೂಪಿಯಾಗಿ ಕೊನೆ ನಿಲ್ಲುತ್ತಾಳೆ. ಆಗ ಸ್ವಾಮಿ ಭಕ್ತ ಗುಳಿಗನಿಗೆ ತಾನಿರುವ ಕಡೆಯಲ್ಲಿ ಕ್ಷೇತ್ರ ರಕ್ಷಕನಾಗಿ ನೀನು ನೆಲೆ ನಿಲ್ಲು ಎಂದು ಅಪ್ಪಣೆ ಮಾಡುತ್ತಾಳೆ.
ವಿಶೇಷ ಗೌರವ- ಭಯ ಭಕ್ತಿಯಿಂದ ಆಸ್ತಿಕರು ಕ್ಷೇತ್ರ ರಕ್ಷಣಾ ದೈವವಾಗಿರುವ ಗುಳಿಗನನ್ನು ಆರಾಧಿಸುತ್ತಾರೆ.
ಕರಾವಳಿಯಲ್ಲಿ ಗುಳಿಗ ದೈವದ ಕೋಲ ಸೇವೆಯೇ ವಿಶಿಷ್ಟ. ಕರಾವಳಿಯ ಇತಿಹಾಸದಲ್ಲೇ ಅತ್ಯಂತ ವಿಶೇಷ ಆಗಿರುವ ಇಂಥ ವಿದ್ಯಮಾನ ವರ್ಷಕ್ಕೊಮ್ಮೆ ಜರಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ನಿಟ್ಟೆಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ, ನವಗುಳಿಗ ಕ್ಷೇತ್ರದಲ್ಲಿ ನಡೆಯುವ ಒಂಬತ್ತು ಗುಳಿಗ ದೈವಗಳ ಏಕಕಾಲದ ಸೇವೆ ತುಳುನಾಡಿನಲ್ಲಿ ಅತಿ ವಿಶಿಷ್ಟ ಸೇವೆಗಳಲ್ಲಿ ಒಂದು.
ಈ ಬಾರಿಯ ವಾರ್ಷಿಕ ಉತ್ಸವ ರಾತ್ರಿ ನಡೆದಿದ್ದು ಒಂಬತ್ತು ಗುಳಿಗ ದೈವಗಳ ಗಗ್ಗರ ಸೇವೆ. ಆ ಒಂಭತ್ತು ಗುಳಿಗಗಳ ಅಬ್ಬರದ ಸೇವೆಯಾಟ ನೋಡುವುದೇ ಒಂದು ಕಣ್ಣಿಗೆ ಹಬ್ಬ….
.
ಒಟ್ಟಿಗೆ ಅಬ್ಬರಿಸುತ್ತಲೇ ಗಗ್ಗರದ ಜೊತೆಗೆ ಹಾರಾಟ ನಡೆಸುವ ಗುಳಿಗ ದೈವಗಳ ಈ ರೀತಿಯ ನರ್ತನವಾಗಲೀ, ಅರಚಾಟವಾಗಲೀ ಬೇರೆ ಯಾವ ಕೋಲದಲ್ಲೂ ಅಷ್ಟಾಗಿ ಕಂಡುಬರುವುದಿಲ್ಲ. ಅತ್ಯಂತ ವಿಶೇಷವೆನಿಸಿರುವ ಈ ಕೋಲ ಸೇವೆಯನ್ನು ನೋಡಲು ಕರಾವಳಿಯ ಉದ್ದಗಲದಿಂದ ಜನತೆ ಬರುತ್ತಾರೆ
ಅತ್ಯಂತ ವಿಶೇಷವಾಗಿರುವ ವರ್ಷಕ್ಕೊಮ್ಮೆ ಮಾತ್ರ ನಡೆಯುವ ಈ ನವಗುಳಿಗರ ಸೇವೆಯಾಟಕ್ಕೆ ಬಂದು ಗುಳಿಗನ ಅಬ್ಬರಕ್ಕೆ ಅಚ್ಚರಿಯೊಂದಿಗೆ ಸಾಕ್ಷಿಯಾಗುತ್ತಾರೆ ಊರ ಪರಊರ ಜನತೆ.
ಹೀಗಾಗಿ ಬರ್ಕಜೆ ಎಂಬ ಈ ಪುಟ್ಟ ಊರು ಒಂಬತ್ತು ಗುಳಿಗನ ಕಾರಣಕ್ಕಾಗಿಯೇ ಭಾರೀ ಪ್ರಸಿದ್ಧಿ ಪಡೆಯುತ್ತಿದೆ.