Connect with us

    LATEST NEWS

    ಪೇಜರ್‌ ಸ್ಫೋ*ಟದ ಹಿಂದೆ ಕೇರಳದ ವ್ಯಕ್ತಿಯ ಹೆಸರು..?

    Published

    on

    ಮಂಗಳೂರು/ಕೇರಳ : ಪೇಜರ್ ಸ್ಫೋ*ಟದ ಬಳಿಕ ನಡೆದಿದ್ದ ಪ್ರಾಥಮಿಕ ತನಿಖೆಯಲ್ಲಿ ತೈವಾನ್ ಮೂಲದ ಗೋಲ್ಡ್‌ ಅಪೋಲೋ ಈ ಪೇಜರ್ ತಯಾರಿಸಿದ್ದಾಗಿ ಹೇಳಲಾಗಿತ್ತು. ಆದ್ರೆ, ಕಂಪೆನಿ ಇದು ಹಂಗೇರಿಯ ಬುಡಾಪೆಸ್ಟ್‌ ಮೂಲದ BAC ಕನ್ಸಲ್ಟಿಂಗ್ KFT ಕಂಪನಿ ತಯಾರಿಸಿದ್ದಾಗಿ ಹೇಳಿತ್ತು. ಇದಕ್ಕೆ ಟ್ರೇಡ್‌ ಮಾರ್ಕ್‌ ಸಾಕ್ಷಿಯಾಗಿದೆ ಎಂದು ವಾದಿಸಿತ್ತು.

    ತನಿಖೆ ನಡೆಸಿದಾಗ ಇದು ನಾರ್ಟಾ ಗ್ಲೋಬಲ್‌ ಲಿಮಿಟೆಡ್‌ ಈ ಸ್ಫೋ*ಟಕ ನೀಡಿದೆ ಎಂದು ಹೇಳಲಾಗಿದೆ. 2022 ರಲ್ಲಿ ಸೋಫೀಯಾದಲ್ಲಿ ಆರಂಭವಾದ ಈ ಕಂಪೆನಿಯು ನಾರ್ವೇಜಿಯನ್‌ನಲ್ಲಿರುವ ರಿನ್ಸನ್‌ ಜೋಸ್ ಒಡೆತನದ ಕಂಪೆನಿ ಎಂದು ಮಾಹಿತಿ ಲಭ್ಯವಾಗಿದೆ.

    ರಿನ್ಸನ್ ಜೋಸ್​​​ ನಾರ್ವೆಗೆ ಬಂದಿದ್ದೇಕೆ?

    ಸುದ್ದಿ ಸಂಸ್ಥೆ IANS ವರದಿಯ ಪ್ರಕಾರ, ಜೋಸ್  ಡಿಜಿಟಲ್ ವ್ಯಾಸಾಂಗ ಮಾಡಲು ನಾರ್ವೆಗೆ ಹೋಗಿದ್ದಾರೆ. ಇದಕ್ಕೂ ಮೊದಲು ಅವರು ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ.

    ಡಿಜಿಟಲ್ ಕಂಪೆನಿಯಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ್ದ ಜೋಸ್‌ ತನ್ನ ಪತ್ನಿಯೊಂದಿಗೆ ಓಸ್ಲೋದಲ್ಲಿ ನೆಲೆಸಿದ್ದಾನೆ. ಇಬ್ಬರು ಸಹೋದರರು ಲಂಡನ್‌ನಲ್ಲಿದ್ದು, ಕಳೆದ ಮೂರು ದಿನಗಳಿಂದ ಸಹೋದರರ ಸಂಪರ್ಕಕ್ಕೂ ಜೋಸ್ ಸಿಕ್ಕಿಲ್ಲ ಎಂದು ಹೇಳಲಾಗಿದೆ.

    ಇದನ್ನೂ ಓದಿ : ನಿಫಾ ಆತಂಕ; 41 ಜನರಿಗೆ ಹೋಂ ಐಸೊಲೇಷನ್

    ಜೋಸ್ ಸಹೋದರರು ಈ ಆರೋಪವನ್ನು ತಳ್ಳಿ ಹಾಕಿದ್ದು, ಜೋಸ್ ನೇರವಾದ ವ್ಯಕ್ತಿಯಾಗಿದ್ದು, ಅವರಿಗೂ ಈ ಸ್ಫೋ*ಟಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಿಸಿದ ಸರಕಾರ

    Published

    on

    ಬೆಂಗಳೂರು/ಮಂಗಳೂರು: ಇನ್ನೇನು ನಾಡಹಬ್ಬ ದಸರಾ ಸಮೀಪಿಸುತ್ತಿದೆ. ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರಕಾರ ಸಿದ್ಧತೆ ನಡೆಸುತ್ತಿದೆ. ಖ್ಯಾತ ಸಾಹಿತಿ ಹಂಪ ನಾಗರಾಜಯ್ಯನವರು ಈ ಬಾರಿಯ ದಸರಾವನ್ನು ಉದ್ಘಾಟಿಸಿಲಿದ್ದಾರೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈಗಾಗಲೇ ಘೋಷಣೆ ಮಾಡಿದ್ದಾರೆ.

     

    ಶಾಲಾ ಮಕ್ಕಳಿಗೆ ರಜೆ ಘೋಷಣೆ:
    ದಸರಾ ಹಬ್ಬಕ್ಕೆ ಶಾಲಾ ಮಕ್ಕಳಿಗೆ ಸರಕಾರ ರಜೆ ಘೋಷಣೆ ಮಾಡಿದೆ. ಅ.3ರಿಂದ ಅ.20ರವರೆಗೆ ದಸರಾ ರಜೆ ಘೋಷಣೆ ಮಾಡಿದ್ದು, ಸರಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ಖಾಸಗಿ ಶಾಲೆಗಳಿಗೆ ಈ ರಜೆ ಅನ್ವಯವಾಗಲಿದೆ. ಹೊರತಾಗಿ ಸಿಬಿಎಸ್‌ಸಿ ಹಾಗೂ ಐಎಸ್‌ಸಿಎಸ್ ಶಾಲೆಗಳಿಗೆ ದಸರಾ ರಜೆ ಅನ್ವಯವಾಗುವುದಿಲ್ಲ. ಯಾಕಂದ್ರೆ ಇವೆರಡು ಕೇಂದ್ರ ಪಠ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿರುವುದರಿಂದ ಶಾಲಾ ರಜೆ ದಿನಾಂಕ ಹಾಗೂ ರಜಾ ಅವಧಿ ಬೇರೆಯಾಗಿರುತ್ತದೆ.

    Continue Reading

    LATEST NEWS

    ಶಿರೂರು ಗುಡ್ಡ ಕುಸಿತ; ಕೊನೆಗೂ ನಾಪತ್ತೆಯಾಗಿದ್ದ ಟ್ರಕ್‌ ಪತ್ತೆ

    Published

    on

    ಕಾರವಾರ: ಶಿರೂರು ಭೂ ಕುಸಿತದ ಬಳಿಕ ಗಂಗಾವಳಿ ನದಿಯಾಳದಲ್ಲಿ ಬಿದ್ದ ಟ್ರಕ್‌ ಕೊನೆಗೂ ಪತ್ತೆಯಾಗಿದೆ.

    ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್‌ ಚಲಾಯಿಸುತ್ತಿದ್ದ ಟ್ರಕ್‌ ಗಂಗಾವಳಿ ನದಿಗೆ ಬಿದ್ದಿತ್ತು. ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್‌ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್‌ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು.

    ಈಗ ಟ್ರಕ್‌ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಸಿಕ್ಕಿ ಬಿದ್ದಿದೆ. ಟ್ರಕ್‌ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣುಗಳಿವೆ. ಹೀಗಾಗಿ ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಟ್ರಕ್‌ ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ.

    ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಅರ್ಜುನ್ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ ಕೋಝಿಕ್ಕೋಡ್‌ ಕಡೆಗೆ ಹೋಗುತ್ತಿದ್ದರು.

    Continue Reading

    FILM

    ಜಾನಿ ಮಾಸ್ಟರ್ ಪತ್ನಿಗೂ ಬಂತು ಕಂಟಕ..! ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್..!!

    Published

    on

    ಹೈದರಾಬಾದ್/ಮಂಗಳೂರು: ಜಾನಿ ಮಾಸ್ಟರ್ ಮೇಲಿರುವ ನೃತ್ಯ ನಿರ್ದೇಶಕಿಯ ಅತ್ಯಾಚಾರ ಆರೋಪಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಾನಿ ಮಾಸ್ಟರ್ ಪತ್ನಿ ಆಯಿಷಾ ಮೇಲೂ ಕ್ರಮಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

    ಈಗಾಗಲೇ ಜಾನಿ ಮಾಸ್ಟರ್‌ ನನ್ನು ಡ್ಯಾನ್ಸ್‌ ನಿರ್ದೇಶಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಗೋವಾ ಪೊಲೀಸರು ಬಂಧಿಸಿ ಹೈದರಾಬಾದ್‌ನ ಚಂಚಲ್‌ ಗುಡಾ ಜೈಲಿಗೆ ಕಳುಹಿಸಿದ್ದಾರೆ. ನೃತ್ಯ ಸಂಯೋಜಕಿಯೊಬ್ಬಳು ನನ್ನ ಮೇಲೆ ಜಾನಿ ಮಾಸ್ಟರ್ ಅತ್ಯಾಚಾರವೆಸಗಿದ್ದಾರೆ ಹಾಗೂ ಅವರ ಪತ್ನಿ ಆಯಿಷಾ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನರಸಿಂಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅರೆಸ್ಟ್..!

    ಪ್ರಕರಣದಲ್ಲಿ ಆಯೇಷಾರನ್ನು ಆರೋಪಿಯನ್ನಾಗಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ ಶನಿವಾರ(ಸೆ.21) ನರಸಿಂಗಿ ಪೊಲೀಸರು, ಜಾನಿ ಮಾಸ್ಟರ್ ನನ್ನು ಕಸ್ಟಡಿಗೆ ನೀಡುವಂತೆ ಉಪ್ಪಾರಪಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಹತ್ತು ದಿನಗಳ ಕಾಲ ಕಸ್ಟಡಿಗೆ ಕೋರುವ ಸಾಧ್ಯತೆ ಇದೆ. ಫೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದರಿಂದ ಆತನನ್ನು ಸಂಪೂರ್ಣವಾಗಿ ಪ್ರಶ್ನಿಸಲು ಪೊಲೀಸರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಅಲ್ಲದೆ, ಆತನ ಪತ್ನಿ ವಿರುದ್ಧವೂ ಆರೋಪ ಕೇಳಿ ಬಂದಿರುವುದರಿಂದ ಬಂಧನವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    Continue Reading

    LATEST NEWS

    Trending