Tuesday, July 5, 2022

ಬಂಟ್ವಾಳ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ ಕಲ್ಲಡ್ಕ ಪ್ರಭಾಕರ್ ಭಟ್

ಬಂಟ್ವಾಳ: ಕಲ್ಲಡ್ಕ ಡಾ ಪ್ರಭಾಕರ ಭಟ್ ನಿನ್ನೆ ಮಂಗಳೂರಿನ ಮಲ್ಟಿಫ್ಲೆಕ್ಸ್‌ನಲ್ಲಿ  ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾವನ್ನು ವೀಕ್ಷಿಸಿದರು.

ಬಂಟ್ವಾಳ ‌ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಬಿಜೆಪಿ ಕಾರ್ಯಕರ್ತರಿಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿದ್ದು, 700 ಕ್ಕಿಂತಲೂ ಅಧಿಕ ಮಂದಿ ಏಕಕಾಲದಲ್ಲಿ ಎರಡು ಪರದೆಗಳಲ್ಲಿ ಚಿತ್ರ ವೀಕ್ಷಿಸಿದರು.


ಬಂಟ್ವಾಳದಲ್ಲಿ ಚಿತ್ರ ಮಂದಿರ ಇಲ್ಲದ ಕಾರಣ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಂಗಳೂರಿನ ಭಾರತ್ ಮಹಲ್ ನ ಎರಡು ಥಿಯೇಟರ್ ಗಳಲ್ಲಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಹತ್ತಕ್ಕೂ ಅಧಿಕ ಬಸ್ ಗಳನ್ನು ಚಿತ್ರ ವೀಕ್ಷಣೆಗೆ ಉಚಿತವಾಗಿ ಅವಕಾಶ ಮಾಡಿಕೊಟ್ಟಿದ್ದರು.

ಸಿನಿಮಾ ನೋಡಿದ ಬಳಿಕ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ “ಕಾಶ್ಮೀರಿ ಫೈಲ್ಸ್ ಸಿನಿಮಾ ಕೇವಲ ಕಾಶ್ಮೀರಕ್ಕೆ ಸೀಮಿತವಲ್ಲ, ಜಗತ್ತಿನಲ್ಲಿ ಮುಸ್ಲಿಮರ ನಡವಳಿಕೆಯನ್ನು ಈ ಚಿತ್ರದಲ್ಲಿ ವಿಶ್ಲೇಷಿಸಲಾಗಿದೆ ಎಂದು ಚಿತ್ರ ವೀಕ್ಷಣೆ ಮಾಡಿದ ಬಳಿಕ ಅವರು ಹೇಳಿದರು.

ನಂತರ ‘ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಧಿಕ್ಕರಿಸಿ ಸಂವಿಧಾನ ವಿರೋಧ ವಾದ, ನ್ಯಾಯವಿರೋಧಿ ಪ್ರತಿಭಟನೆ ನಡೆಸಿರುವುದು ಇವರ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗೆ ಬೆಂಬಲ ನಿಂತಿರುವುದು ಸ್ಪಷ್ಟವಾದ ಸಾಕ್ಷಿಯನ್ನು ನೀಡುತ್ತದೆ ಎಂದು ಅವರು ಹೇಳಿದರು.

ಕಾಶ್ಮೀರದಲ್ಲಿ ನ್ಯಾಯಾಧೀಶರನ್ನು ಕೊಂದ ರೀತಿಯಲ್ಲಿಯೇ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ನ್ಯಾಯಧೀಶರಿಗೆ ಬೆದರಿಕೆ ಕರೆ ಬಂದಿದೆ. ಇಂತಹ ಕೃತ್ಯಗಳನ್ನು ತಡೆಯದಿದ್ದರೆ ಇಡೀ ಹಿಂದೂ ಸಮಾಜವನ್ನು ನಾಶಮಾಡುತ್ತಾರೆ ಎಂದು ಎಚ್ಚರಿಕೆ ಕರೆಯನ್ನು ನೀಡಿದರು.

‘ಮುಸ್ಲಿಂ ಸಮುದಾಯಕ್ಕೆ ಮಸೀದಿಯಲ್ಲಿ ಭಯೋತ್ಪಾದನೆಯ ಶಿಕ್ಷಣ ಸಿಗುತ್ತಿದೆ. ಮಿತ್ರನೇ ಭಯೋತ್ಪಾದಕರಿಗೆ ಕೊಲ್ಲಲು ಸಹಕಾರ ನೀಡುವಂತೆ ಇಲ್ಲಿಯೂ ಸ್ನೇಹಿತನಂತೆ ದೇವ ದ್ರೋಹದ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.

ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಒಳಚರಂಡಿ ನಿಗಮ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಭಟ್, ಪ್ರಮುಖರಾದ ರವೀಂದ್ರ ಕಂಬಳಿ,ಪ್ರಸಾದ್ ಕುಮಾರ್ ರೈ, ಪ್ರಕಾಶ್ ಅಂಚನ್, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ,

ಚೆನ್ನಪ್ಪ ಕೊಟ್ಯಾನ್, ದಿನೇಶ್ ಅಮ್ಟೂರು, ಪ್ರಭಾಕರ ಪ್ರಭು, ದೇವಪ್ಪ ಪೂಜಾರಿ, ಡೊಂಬಯ್ಯ ಅರಳ,ರಶ್ಮಿತ್ ಶೆಟ್ಟಿ, ಹರ್ಷಿಣಿ ಪುಷ್ಪಾನಂದ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...

ಬಂಟ್ವಾಳ: ಯುವಕನನ್ನು ಇರಿದು ಮುಗಿಸಿದ ಸ್ನೇಹಿತರು…

ಬಂಟ್ವಾಳ: ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡು ಮಾರಕಾಸ್ತ್ರಗಳಿಂದ ಕೊಲೆ ನಡೆಸಿದ ಘಟನೆ ನಿನ್ನೆ ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ನಡೆದಿದೆ.ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ.ಆತನ ಸ್ನೇಹಿತ...

ಮಂಗಳೂರು: ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿಯಾದ ಘಟನೆ ಮಂಗಳೂರು ನಗರ ಹೊರವಲಯದ ಕುಲಶೇಖರದ ಬಜ್ಜೋಡಿ ಎಂಬಲ್ಲಿ ನಡೆದಿದೆ.ಭಾರೀ ಮಳೆ ಹಿನ್ನಲೆ ವರ್ಕ್ ಶಾಪ್...