Connect with us

    Sports

    IPL 2024: ಆರ್ ಸಿ ಬಿಯ 11 ವರ್ಷದ ಹಿಂದಿನ ದಾಖಲೆ ಮುರಿದ ಹೈದರಾಬಾದ್ ತಂಡ! ಒಂದೇ ಪಂದ್ಯದಲ್ಲಿ ಹಲವು ದಾಖಲೆ!

    Published

    on

    ಹೈದರಾಬಾದ್ : ತವರು ನೆಲದಲ್ಲಿ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲೇ ವಿನೂತನ ದಾಖಲೆ ಬರೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಎಸ್ ಆರ್ ಹೆಚ್ ತಂಡ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದೆ. ಇದು ಐಪಿಎಲ್ ನ ಇತಿಹಾಸದಲ್ಲೇ ಗರಿಷ್ಠ ಮೊತ್ತದ ರನ್ ಆಗಿದೆ. ಈ ಮೂಲಕ ಸುಮಾರು 11 ವರ್ಷಗಳಿಂದ ಆರ್‌ಸಿಬಿ ಹೆಸರಿನಲ್ಲಿದ್ದ ಗರಿಷ್ಠ ರನ್ ದಾಖಲೆ ಮುರಿದಿದೆ.

    ಅತಿವೇಗದ ಅರ್ಧ ಶತಕ!

    ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅವರು 18 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದರು. ಜೊತೆಗೆ ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದ್ದಾರೆ. ಇದು ಕೂಡಾ ದಾಖಲೆ ಬರೆದಿದ್ದು, ಅತಿ ವೇಗದ ಅರ್ಧ ಶತಕ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

    ಅಧಿಕ ಸಿಕ್ಸರ್!

    ಹೈದರಾಬಾದ್ ನಲ್ಲಿ ನಡೆದ ಐಪಿಎಲ್ 2024, 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹೈದರಾಬಾದ್ ತಂಡ 31 ರನ್ ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಒಟ್ಟು 38 ಸಿಕ್ಸರ್‌ಗಳು ದಾಖಲಾದವು. ಈ ಮೂಲಕ 2013ರಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ನಡೆದ ಪಂದ್ಯದಲ್ಲಿ ದಾಖಲಾಗಿದ್ದ 33 ಸಿಕ್ಸರ್‌ಗಳ ದಾಖಲೆಯನ್ನು ಮೀರಿ ನಿಂತಿತು.

    Click to comment

    Leave a Reply

    Your email address will not be published. Required fields are marked *

    Sports

    ಟೆನಿಸ್ ವೃತ್ತಿ ಬದುಕಿಗೆ ರಫೆಲ್ ನಡಾಲ್ ಭಾವುಕ ವಿದಾಯ

    Published

    on

    ಮಂಗಳೂರು/ಸ್ಪೇನ್  : ಟೆನಿಸ್ ದಿಗ್ಗಜ, ದಿ ಕಿಂಗ್ ಆಫ್ ಕ್ಲೇ ರಫೆಲ್ ನಡಾಲ್ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ನ.19 ರಂದು ನಡೆದ ನೆದರ್‌ಲ್ಯಾಂಡ್ ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರು. ಇದರೊಂದಿಗೆ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.

    ನಿವೃತ್ತಿ ಘೋಷಿಸಿದ ಬಳಿಕ ಸ್ಪ್ಯಾನಿಷ್ ರಾಷ್ಟ್ರಗೀತೆಯ ಸಂದರ್ಭದಲ್ಲಿ ರಫೆಲ್ ಭಾವುಕರಾಗಿದ್ದು ಕಂಡು ಬಂತು. ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಅಭಿಮಾನಿಗಳು ‘ರಾಫಾ, ರಾಫಾ’  ಎಂದು ಕೂಗುವ ಮೂಲಕ ತಮ್ಮ ನೆಚ್ಚಿನ ಸಾಧಕನನ್ನು ಬೀಳ್ಕೊಟ್ಟಿದ್ದಾರೆ.

    ಇದನ್ನೂ ಓದಿ : IPL 2025 : ಎಲ್ಲಾ ತಂಡಗಳ ಕಣ್ಣು ಈ ಆಟಗಾರನ ಮೇಲೆ ?

    2004ರಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ರಫೆಲ್ 30 ಡೇವಿಸ್ ಕಪ್ ಸಿಂಗಲ್ಸ್  ಪಂದ್ಯಗಳಲ್ಲಿ 29 ಪಂದ್ಯಗಳನ್ನು ಆಡಿದ್ದಾರೆ.  23 ವರ್ಷಗಳ ಟೆನಿಸ್ ಜೀವನದಲ್ಲಿ ನಡಾಲ್ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.  ನೆದರ್‌ಲ್ಯಾಂಡ್ ನ ಬೋಟಿಕ್ ವ್ಯಾನ್ ಡೆ ಝಾಂಡ್ ಸ್ಕಲ್  ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ1-2 ರ ಅಂತರದಲ್ಲಿ ಸೋಲುವ ಮೂಲಕ ಈ ಮೊದಲೇ ಹೇಳಿದ್ದಂತೆ ತಮ್ಮ ವೃತ್ತಿ ಬದುಕಿಗೆ ಗುಡ್ ಬಾಯ್ ಹೇಳಿದ್ದಾರೆ.

    Continue Reading

    Sports

    IPL 2025 : ಎಲ್ಲಾ ತಂಡಗಳ ಕಣ್ಣು ಈ ಆಟಗಾರನ ಮೇಲೆ ?

    Published

    on

    ಮಂಗಳೂರು/ಮುಂಬೈ : ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಸೀಸನ್-18ರ ಮೆಗಾ ಹರಾಜಿನ ಮಾರ್ಕ್ಯೂ ಲಿಸ್ಟ್ ನ ಮೊದಲ ಸೆಟ್ ನಲ್ಲಿ 6 ಆಟಗಾರರು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಇಂಗ್ಲೆಂಡ್ ನ ಈ ಆಟಗಾರನೇ ಮೊದಲ ಸ್ಥಾನದಲ್ಲಿರೋದು ವಿಶೇಷ. ಹತ್ತು ಫ್ರಾಂಚೈಸಿಗಳ ಕಣ್ಣು ಈ ಆಟಗಾರನ ಮೇಲೆ ಬಿದ್ದಿದೆ.

    ಯಾರು ಆ ಆಟಗಾರ?

    ಐಪಿಎಲ್ ನಲ್ಲಿ ಎಲ್ಲಾ ಫ್ರಾಂಚೈಸಿಗಳು ತಾವು ಬಯಸುವ ಆಟಗಾರರನ್ನು ಮಾರ್ಕ್ಯೂ ಲಿಸ್ಟ್ ನಲ್ಲಿ ಸೇರ್ಪಡೆಗೊಳಿಸುವ ಕ್ರಮವಿದೆ. ಅದರಂತೆ ಈ ಬಾರಿ ಕೂಡ 12 ಆಟಗಾರರು ಮಾರ್ಕ್ಯೂ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಎಲ್ಲಾ ಫ್ರಾಂಚೈಸಿಗಳ ಫೇವರೇಟ್ ಆಟಗಾರನಾಗಿ ಜೋಸ್ ಬಟ್ಲರ್ ಕಾಣಿಸಿಕೊಂಡಿದ್ದಾರೆ.
    2024ರ ಸೀಸನ್ ನಲ್ಲಿ ರಾಜಸ್ತಾನ್ ರಾಯಲ್ಸ್ ಪರ 11 ಪಂದ್ಯಗಳನ್ನಾಡಿದ ಬಟ್ಲರ್ 2 ಶತಕಗಳೊಂದಿಗೆ ಒಟ್ಟು 359 ರನ್ ಕಲೆಹಾಕಿದ್ದಾರೆ. ಇದುವರೆಗೂ 107 ಐಪಿಎಲ್ ಪಂದ್ಯಗಳಿಂದ ಒಟ್ಟು 3582 ರನ್ ಗಳಿಸಿದ್ದಾರೆ. ಅದರಲ್ಲಿ 7 ಶತಕ ಹಾಗೂ 19 ಅರ್ಧಶತಕಗಳು ಸೇರಿವೆ. ಅದಲ್ಲದೆ, ಬಟ್ಲರ್ ಖರೀದಿಯಿಂದ ಮೂರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬಹುದು ಎಂಬುದು ಫ್ರಾಂಚೈಸಿಗಳ ಬಯಕೆಯಾಗಿದೆ. ಹೀಗಾಗಿ ಜೋಸ್ ಬಟ್ಲರ್ ಖರೀದಿಗಾಗಿ ಭರ್ಜರಿ ಪೈಪೊಟಿಯನ್ನು ಅಪೇಕ್ಷಿಸಬಹುದು.

     

     

     

    Continue Reading

    Sports

    ಟೀಮ್ ಇಂಡಿಯಾದಿಂದ ಬ್ಯಾನ್ ಆಗ್ತಾರಾ ಮೊಹಮ್ಮದ್ ಶಮಿ!?

    Published

    on

    ಮಂಗಳೂರು/ಮುಂಬೈ : ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ ಎಂದರೆ ಸಾಕು ಎದುರಾಳಿ ಬ್ಯಾಟ್ಸ್ ಮ್ಯಾನ್ ನಡುಗಿಬಿಡುತ್ತಾನೆ. ಅವರು ಬೌಲಿಂಗ್ ನಲ್ಲಿ ಮಾಡುವ ಮೋಡಿ ಎಲ್ಲರಿಗೂ ಚಿರಪರಿಚಿತ. ಆದರೆ 2023ರ ಏಕದಿನ ವಿಶ್ವಕಪ್ ಬಳಿಕ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಇತ್ತೀಚೆಗೆ ಗಾ*ಯದಿಂದ ಚೇತರಿಸಿಕೊಂಡು ರಣಜಿ ಟೂರ್ನಿಯ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿ, ಮೊದಲ ಪಂದ್ಯದಲ್ಲೇ 7 ವಿಕೆಟ್ ಪಡೆದುಬಂಗಾಳ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈಗ ಶಮಿ ವಿರುದ್ದ ಗಂಭೀ*ರ ಆರೋಪ ಕೇಳಿಬಂದಿದೆ. ಅದುವೇ ವಯಸ್ಸು ಮರೆಮಾಚಿದ ಆರೋಪ.

    ಹೌದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ  ಕೃಷ್ಣ ಮೋಹನ್ ಎಂಬವರು,  ಮೊಹಮ್ಮದ್ ಶಮಿ ತಮ್ಮ  ವಯಸ್ಸು ಮರೆಮಾಚಿದ್ದಾರೆ ಎಂದು ಗಂಭೀ*ರ ಆರೋಪ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಹಮ್ಮದ್ ಶಮಿ ಅವರ ಡ್ರೈವಿಂಗ್ ಲೈಸನ್ಸ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದರೆ, ಶಮಿ ತನಿಖೆಗೆ ಒಳಪಡಲಿದ್ದಾರೆ. ಒಂದು ವೇಳೆ  ಈ ಆರೋಪ ನಿಜವಾದರೆ ಟೀಮ್ ಇಂಡಿಯಾದಿಂದ ಬ್ಯಾನ್ ಆಗುವ ಸಾಧ್ಯತೆ ಕೂಡ ಇದೆ.

    ಬಿಸಿಸಿಐ ನಿಯಮ ಏನು ?

    ಬಿಸಿಸಿಐ ನಿಯಮದ ಪ್ರಕಾರ, ವಯಸ್ಸನ್ನು ಮರೆಮಾಚುವುದು ಗಂಭೀರ ಅಪರಾಧ. ಈ ಹಿಂದೆಯೂ ಕೂಡ ಸಾಮಾನ್ಯವಾಗಿ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ತಮ್ಮ ವಯಸ್ಸನ್ನು ಒಂದು ಅಥವಾ ಎರಡು ವರ್ಷ ಕಡಿಮೆ ಎಂದು ಘೋಷಿಸುತ್ತಾರೆ. ವಯಸ್ಸು ಬದಲಿಸಿ ಈ ಹಿಂದೆಯೂ ಕೂಡ ಹಲವಾರು ಆಟಗಾರರು ಸಿಕ್ಕಿಬಿದ್ದಿದ್ದರು. ಅಂತಹ ಆಟಗಾರರನ್ನು ಬಿಸಿಸಿಐ ಅಮಾನತುಗೊಳಿಸಿತ್ತು.

    Continue Reading

    LATEST NEWS

    Trending