Connect with us

    Sports

    IPL 2024: ಆರ್ ಸಿ ಬಿಯ 11 ವರ್ಷದ ಹಿಂದಿನ ದಾಖಲೆ ಮುರಿದ ಹೈದರಾಬಾದ್ ತಂಡ! ಒಂದೇ ಪಂದ್ಯದಲ್ಲಿ ಹಲವು ದಾಖಲೆ!

    Published

    on

    ಹೈದರಾಬಾದ್ : ತವರು ನೆಲದಲ್ಲಿ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲೇ ವಿನೂತನ ದಾಖಲೆ ಬರೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಎಸ್ ಆರ್ ಹೆಚ್ ತಂಡ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದೆ. ಇದು ಐಪಿಎಲ್ ನ ಇತಿಹಾಸದಲ್ಲೇ ಗರಿಷ್ಠ ಮೊತ್ತದ ರನ್ ಆಗಿದೆ. ಈ ಮೂಲಕ ಸುಮಾರು 11 ವರ್ಷಗಳಿಂದ ಆರ್‌ಸಿಬಿ ಹೆಸರಿನಲ್ಲಿದ್ದ ಗರಿಷ್ಠ ರನ್ ದಾಖಲೆ ಮುರಿದಿದೆ.

    ಅತಿವೇಗದ ಅರ್ಧ ಶತಕ!

    ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅವರು 18 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದರು. ಜೊತೆಗೆ ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದ್ದಾರೆ. ಇದು ಕೂಡಾ ದಾಖಲೆ ಬರೆದಿದ್ದು, ಅತಿ ವೇಗದ ಅರ್ಧ ಶತಕ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

    ಅಧಿಕ ಸಿಕ್ಸರ್!

    ಹೈದರಾಬಾದ್ ನಲ್ಲಿ ನಡೆದ ಐಪಿಎಲ್ 2024, 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹೈದರಾಬಾದ್ ತಂಡ 31 ರನ್ ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಒಟ್ಟು 38 ಸಿಕ್ಸರ್‌ಗಳು ದಾಖಲಾದವು. ಈ ಮೂಲಕ 2013ರಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ನಡೆದ ಪಂದ್ಯದಲ್ಲಿ ದಾಖಲಾಗಿದ್ದ 33 ಸಿಕ್ಸರ್‌ಗಳ ದಾಖಲೆಯನ್ನು ಮೀರಿ ನಿಂತಿತು.

    LATEST NEWS

    ಕಾಪು ಮಾರಿಯಮ್ಮನ ಆಶೀರ್ವಾದ; ಟಿ20 ನಾಯಕನಾದ ಸೂರ್ಯಕುಮಾರ್ ಯಾದವ್

    Published

    on

    ಉಡುಪಿ : ಜುಲೈ 27 ರಿಂದ ಭಾರತ – ಶ್ರೀಲಂಕಾ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕರಾಗಿ ನೇಮಕಗೊಂಡಿದ್ದಾರೆ. ಕೆಲದಿನಗಳ ಹಿಂದಷ್ಟೇ ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ಉಡುಪಿಯ ಕಾಪುನಲ್ಲಿರುವ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು.


    ಈ ಸಂದರ್ಭ ಹೊಸ ಮಾರಿಗುಡಿ ದೇವಸ್ಥಾನದ ಅರ್ಚಕರು, ” ಮತ್ತೊಮ್ಮೆ ಕಾಪುವಿಗೆ ಬರುವಾಗ ಟೀಂ ಇಂಡಿಯಾ ನಾಯಕರಾಗಿ ಬರುವಂತಾಗಲಿ” ಎಂದು ಶುಭ ಹಾರೈಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೂರ್ಯ, “ತಂಡದ ನಾಯಕನಾಗುವುದು ನಮ್ಮ ಕೈಯಲ್ಲಿ ಇಲ್ಲ. ಆದರೆ ದೇಶಕ್ಕಾಗಿ ಆಡುವುದಷ್ಟೇ ನಮ್ಮ ಗುರಿ. ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ” ಎಂದು ಹೇಳಿದ್ದರು.

    ಇದನ್ನೂ ಓದಿ : ಖ್ಯಾತ ನಟ, ನಿರ್ಮಾಪಕನ ಪುತ್ರಿ ಕ್ಯಾನ್ಸರ್‌ಗೆ ಬ*ಲಿ

    ಇದಾಗಿ ಕೇವಲ 10 ದಿನಗಳಾಗುವ ಮೊದಲೇ ಅಚ್ಚರಿ ಎಂಬಂತೆ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಇದು ಕ್ಷೇತ್ರದ ಮಹಿಮೆ ಎಂಬ ಮಾತು ಕೇಳಿ ಬರುತ್ತಿದೆ.

    ಶ್ರೀಲಂಕಾ ವಿರುದ್ದದ ಟಿ20 ಸರಣಿಗೆ ಭಾರತ ತಂಡ :

    ಸೂರ್ಯಕುಮಾರ್ ಯಾದವ್(ನಾಯಕ), ಶುಭಮನ್ ಗಿಲ್(ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್, ಖಲೀಲ್ ಅಹಮ್ಮದ್, ಮೊಹಮ್ಮದ್ ಸಿರಾಜ್

    Continue Reading

    LATEST NEWS

    ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌

    Published

    on

    ಮಂಗಳೂರು : ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌ ಆದ ನಂದಿನಿ ಜಾಗತಿಕ ಬ್ರಾಂಡ್ ಆಗಿ ಲಗ್ಗೆ ಇಟ್ಟಿದೆ. ವಿಶ್ವಕಪ್ ಟಿ-ಟ್ವೆಂಟಿ ಪಂದ್ಯಕೂಟದಲ್ಲಿ ನಂದಿನಿ ಹೆಸರು ರಾರಾಜಿಸಲಿದೆ. ಹೌದು, ನಂದಿನಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಕೃಷಿಕರ ಶ್ರಮವನ್ನು ಹಾಗೂ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ವಿಶ್ವಕ್ಕೆ ಸಾರುವ ಯತ್ನದಲ್ಲಿದೆ.


    ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಟೂರ್ನಿಯಲ್ಲಿ ನಂದಿನಿ :

    ಜೂನ್ ೧ ರಿಂದ ಆರಂಭವಾಗಲಿರುವ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಟೂರ್ನಿ ಅಮೆರಿಕದಲ್ಲಿ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರ ಜರ್ಸಿಯಲ್ಲಿ ಭಾರತೀಯ ಭಾಷೆಯೊಂದು ಪ್ರದರ್ಶಿಸಲಾಗುತ್ತಿದೆ. ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ ಆಟಗಾರರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕೆಎಂಎಫ್‌ನ ನಂದಿನಿಯ ಲಾಂಛನವಿರುವ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ.


    ಸಿಎಂ ಟ್ವೀಟ್ :

    ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ ಟಿ೨೦ ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ.

    ಇದನ್ನೂ ಓದಿ : ಅಂಜಲಿ ಹಂ*ತಕನ ಬಂಧನ; ರೈಲಿನಲ್ಲಿ ಪ್ರಯಾಣಿಸುತ್ತಿದ್ದವನ ಪೊಲೀಸರು ಬಂಧಿಸಿದ್ದು ಹೇಗೆ?!

    ರಾಜ್ಯದ ಜನರ ಮನೆ-ಮನ ಗೆದ್ದಿರುವ ನಂದಿನಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಂದಿನಿ ಉತ್ಪನ್ನಗಳು ಕ್ರಿಕೆಟ್ ಆಟಗಾರರ ಹಾಗೂ ಕ್ರಿಕೆಟ್ ಪ್ರೇಮಿಗಳ ಮನ ಗೆಲ್ಲುವುದಂತು ನಿಜ ಸಂಗತಿ ಎಂದು ಬರೆದುಕೊಂಡಿದ್ದಾರೆ.

    Continue Reading

    FILM

    ಚಂದನವನದತ್ತ ಕೂಲ್ ಕ್ಯಾಪ್ಟನ್ ಒಲವು; ಕನ್ನಡ ಸಿನಿಮಾ ಮಾಡ್ತಾರಂತೆ ಧೋನಿ!

    Published

    on

    ಕೂಲ್ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಕನ್ನಡ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಡ್ತಾರೆ ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡ್ತಾ ಇದೆ. ಕ್ರಿಕೆಟ್‌ನಂತೆ ಸಿನೆಮಾ ಮೇಲೂ ಒಲವು ಇಟ್ಟುಕೊಂಡಿರುವ ಧೋನಿ ಈಗಾಗಲೇ ಧೋನಿ ಎಂಟರ್‌ಟೇನ್‌ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ತಮಿಳು ಭಾಷೆಯಲ್ಲಿ ಈಗಾಗಲೇ ಒಂದು ಸಿನೆಮಾ ಮಾಡಿದ್ದು, ಅದು ಅಷ್ಟೊಂದು ಗೆಲುವು ಕಂಡಿಲ್ಲ. ಹೀಗಾಗಿ ಕನ್ನಡ ಸಿನಿ ಇಂಡಸ್ಟ್ರಿ ಕಡೆ ಧೋನಿ ಒಲವು ತೋರಿಸಿದ್ದಾರೆ ಎನ್ನಲಾಗಿದೆ.

    ಕನ್ನಡ ಸಿನಿಮಾದತ್ತ ಚಿತ್ತ:
    ತಮಿಳು ಭಾಷೆಯ ‘ಲೆಟ್ಸ್ ಗೆಟ್ ಮ್ಯಾರೀಡ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದ ಧೋನಿ ಅದರಲ್ಲಿ ದೊಡ್ಡ ಯಶಸ್ಸು ಕಂಡಿಲ್ಲ. ಹೀಗಾಗಿ ಕನ್ನಡ ಇಂಡಸ್ಟ್ರಿಯಲ್ಲಿ ಅವರ ನಿರ್ಮಾಣ ಸಂಸ್ಥೆಯಿಂದ ಒಂದು ಉತ್ತಮ ಕನ್ನಡ ಸಿನೆಮಾ ಮಾಡಲಿದ್ದಾರೆ. ಈ ವಿಚಾರ ಕೇಳಿ ಧೋನಿ ಫ್ಯಾನ್‌ಗಳಂತು ಸಕತ್ ಥ್ರಿಲ್ ಆಗಿದ್ದು ಯಾವಾಗ ಸಿನೆಮಾ ಮಾಡಲಿದ್ದಾರೆ ಅಂತ ಕುತೂಹಲದಿಂದ ಕಾಯುತ್ತಿದ್ದಾರೆ.

    ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಿದೆ. ‘ಕೆಜಿಎಫ್’, ‘ಕಾಂತಾರ’, ‘777 ಚಾರ್ಲಿ’, ‘ಕಾಟೇರ’ ರೀತಿಯ ಸಿನಿಮಾಗಳಿಂದ ಪರಭಾಷೆಯವರೂ ಕನ್ನಡ ಚಿತ್ರರಂಗದತ್ತ ಮುಖಮಾಡುವಂತೆ ಆಗಿದೆ. ಹೀಗಾಗಿ, ಪರಭಾಷೆಯ ನಿರ್ಮಾಪಕರು ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಧೋನಿ ಕೂಡಾ ಕನ್ನಡ ಸಿನಿ ರಂಗದ ಕಡೆ ಒಲವು ತೋರಿಸುತ್ತಿದ್ದಾರೆ.

    ಐಪಿಎಲ್ ಬಿಝಿ :
    ಧೋನಿ ಅವರು ಸದ್ಯ ಐಪಿಎಲ್​ನಲ್ಲಿ ಬ್ಯುಸಿ ಇದ್ದಾರೆ. ಇಷ್ಟು ವರ್ಷ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಕ್ಯಾಪ್ಟನ್ ಆಗಿದ್ದ ಅವರು, ಈಗ ಕ್ಯಾಪ್ಟನ್​ ಸ್ಥಾನದಿಂದ ಇಳಿದಿದ್ದಾರೆ. ಇದು ಅವರ ಕೊನೆಯ ಐಪಿಎಲ್ ಸೀಸನ್ ಆಗಿರಲಿದೆ ಎಂದು ಕೂಡ ಹೇಳಲಾಗುತ್ತಿದೆ. ಒಂದೊಮ್ಮೆ ಅವರು ಐಪಿಎಲ್​ನಿಂದಲೂ ನಿವೃತ್ತಿ ಪಡೆದರೆ ಸಿನಿಮಾ ನಿರ್ಮಾಣದತ್ತ ಹೆಚ್ಚು ಗಮನ ಹರಿಸಲಿದ್ದಾರೆ.

    Continue Reading

    LATEST NEWS

    Trending