ಮೀನುಪ್ರಿಯರಿಗೆ ಬಿಗ್ ರಿಲೀಫ್: ಮೀನುಗಾರಿಕೆ ಮಾಡಲು ಅಡ್ಡಿಯಿಲ್ಲವೆಂದ ಸರ್ಕಾರ
ಮೀನುಪ್ರಿಯರಿಗೆ ಬಿಗ್ ರಿಲೀಫ್: ಮೀನುಗಾರಿಕೆ ಮಾಡಲು ಅಡ್ಡಿಯಿಲ್ಲವೆಂದ ಸರ್ಕಾರ
ಮಂಗಳೂರು: ರಾಜ್ಯದಲ್ಲಿ ಮೀನುಗಾರಿಕೆಗೆ ಕೊರೋನ ಸೋಂಕು ಹರಡುವಿಕೆ ಸಂಬಂಧ ಹಾಕಲಾಗಿದ್ದ ತಾತ್ಕಲಿಕ ನಿರ್ಬಂಧವನ್ನು ಇದೀಗ ಸರ್ಕಾರ ತೆರವುಗೊಳಿದೆ.
ಪ್ರೋಟಿನ್ ಯುಕ್ತ ಉತ್ತಮ ಮೀನು ಲಭ್ಯತೆ ದೃಷ್ಟಿಯಿಂದ ರಾಜ್ಯದಲ್ಲಿ ಮೀನುಗಾರಿಕೆ ಪ್ರಕ್ರಿಯೆಗೆ ಶರತುಬದ್ದ ಅನುಮತಿ ನೀಡಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ, ರಾಜ್ಯದಲ್ಲಿರುವ ಸುಮಾರು 9 ಸಾವಿರಕ್ಕೂ ಅಧಿಕ ಕರಾವಳಿ ನಾಡ ಮೀನುಗಾರರು ಹಾಗೂ ಸಹಸ್ರಾರು ಒಳನಾಡು ಮೀನುಗಾರರ ಜೀವನೋಪಾಯ ರಕ್ಷಿಸುವ ದೃಷ್ಟಿಯಿಂದ
ನಿರ್ಬಂಧಿತ ರೀತಿಯಲ್ಲಿ ಎ.14ರ ವರೆಗೆ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜಲಾಶಯಗಳಲ್ಲಿ ಪರವಾನಿಗೆ ಪಡೆದ ಮೀನುಗಾರರು ತಮ್ಮ ಹರಿಗೋಲುಗಳ ಮೂಲಕ ಮೀನು ಹಿಡುವಳಿ ಕೈಗೊಳ್ಳಬಹುದಾಗಿದೆ.
ಹಿಡಿದ ಮೀನುಗಳನ್ನು ಸಾಧ್ಯವಾದಷ್ಟು ಪ್ರತ್ಯೇಕ ಇಳುವರಿ ಕೇಂದ್ರಗಳಲ್ಲಿ, ತೀರ ಪ್ರದೇಶಗಳಲ್ಲಿ ಮಾಡತಕ್ಕದ್ದು ಎಂದು ಅವರು ಸಲಹೆ ನೀಡಿದ್ದಾರೆ.
ಮೀನು ಮಾರಾಟ ಸಂದರ್ಭದಲ್ಲಿ ಜನಸಂದಣಿಯಾಗದಂತೆ, ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವುದು.
ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಮನೆ ಮನೆಗೆ ಮಾರಾಟ ಮಾಡುವ ಬಗ್ಗೆ ಹಾಗೂ ಮಾರುಕಟ್ಟೆ ಮಳಿಗೆಗಳಲ್ಲಿ ಮಾರಾಟ ಮಾಡುವ ಬಗ್ಗೆ ಸ್ಥಳೀಯ ಪ್ರಾಧಿಕಾರಗಳ ಅನುಮತಿ ಮೇರೆಗೆ ಮಾಡತಕ್ಕದ್ದು.
ಜೊತೆಗೆ ಮೀನು ಸಾಗಾಟ ಸಂಗ್ರಹಣೆ ಮತ್ತು ಜೋಪಾನದ ಬಗ್ಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು ಮತ್ತು ಕರ್ನಾಟಕ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಮೈಸೂರು ಈ ಸಂಸ್ಥೆಗಳ ಸಹಕಾರ ಪಡೆಯಬೇಕು.
ಮೀನುಗಾರಿಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ನಿಗದಿತ ಪಾಸ್ ನೀಡಲು, ಅಂಗಡಿಗಳಲ್ಲಿ ಮೀನು ಮಾರಾಟ ಮಾಡಲು ಪೂರಕ ಕ್ರಮ ಜರುಗಿಸಬೇಕಾಗಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
LATEST NEWS
ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ
ಬೆಂಗಳೂರು: ತಿರುಪತಿ ತಿರುಮಲ ದೇಗುಲದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ರಾಜ್ಯದ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳಲ್ಲಿ ಪ್ರಸಾದ ತಯಾರಿಗೆ ನಂದಿನಿ ತುಪ್ಪವನ್ನೇ ಬಳಸುವಂತೆ ಶುಕ್ರವಶರ ಸುತ್ತೋಲೆ ಹೊರಡಿಸಿತ್ತು. ಇದೀಗ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳ ಪ್ರಸಾದವನ್ನು ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಒಳಪಡಿಸುವಂತೆ ಆದೇಶಿಸಿದೆ.
ಮುಜರಾಯಿ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ 34,000 ಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ, 205 ದೇಗುಲಗಳ ವಾರ್ಷಿಕ ಆದಾಯ 25 ಲಕ್ಷ ರೂ.ಗಿಂತ ಹೆಚ್ಚಿದ್ದು, ವರ್ಗ-ಎ ಎಂದು ವರ್ಗೀಕರಿಸಲ್ಪಟ್ಟಿವೆ. 193 ದೇಗುಲಗಳನ್ನು 5 ಲಕ್ಷದಿಂದ ರೂ. 25 ಆದಾಯದೊಂದಿಗೆ ವರ್ಗ-ಬಿ ಎಂದು ಗುರುತಿಸಲಾಗಿದೆ. ಉಳಿದವುಗಳನ್ನು 5 ಲಕ್ಷ ರೂ. ಆದಾಯದೊಂದಿಗೆ ವರ್ಗ-ಸಿ ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ದೇವಾಲಯಗಳು ಭಕ್ತರಿಗೆ ಪ್ರಸಾದವನ್ನು ನೀಡುತ್ತವೆ.
bengaluru
ಜೈಲಿನಲ್ಲೇ ಮೊಬೈಲ್ ಬಳಕೆ !
ಮಂಗಳೂರು/ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪ್ರಕರಣ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಸೆಂಟ್ರಲ್ ಜೈಲ್ಗೆ ಮೊಬೈಲ್ ರವಾನೆ ಮಾಡುತ್ತಿದ್ದ ಖೈದಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೋಲಾರದ ಕೆಜಿಎಫ್ ನ ವಿಜಯ್ನನ್ನು ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಆಗ್ನೇಯ ವಿಭಾಗದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದರು.
ಜೈಲಿನೊಳಗೆ ವಿಜಯ್ ಸಿಬ್ಬಂದಿಯೊಬ್ಬರ ನೆರವು ಪಡೆದು ಸ್ಮಾರ್ಟ್ ಫೋನ್ಗಳನ್ನು ಹೊರಗಿನಿಂದ ಖರೀದಿಸಿಕೊಂಡು ಅವುಗಳನ್ನು ಜೈಲಿನಲ್ಲಿರುವ ಇತರ ಖೈದಿಗಳಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ವಿಜಯ್ ಮೊಬೈಲ್ ಪೂರೈಸುವುದಕ್ಕೆ ಸಾಕ್ಷ್ಯಗಳು ಸಿಕ್ಕ ಬೆನ್ನಲ್ಲೇ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಸ್ಟಡಿಯಲ್ಲಿದ್ದ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್ ಹಾಗೂ ವೇಲು ಅವರ ವಿಚಾರಣೆಯೂ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ವಿಜಯ್ ಜೈಲು ಅಧಿಕಾರಿಗಳ ಸಹಾಯದಿಂದಲೇ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್ಗಳು ಸಾವಿರಾರು ಹಣ ಕೊಟ್ಟು ಈತನಿಂದ ಮೊಬೈಲ್ ಖರೀದಿಸುತ್ತಿದ್ದರು ಎಂಬ ವಿಚಾರದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೆ. 15 ರಂದು ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 26 ಮೊಬೈಲ್ ಪತ್ತೆಯಾಗಿದ್ದವು. ಇನ್ನಷ್ಟು ತನಿಖೆ ನಡೆಸಿದಾಗ ವಿಜಯ್ ಮೊಬೈಲ್ ಪೂರೈಸುತ್ತಿದ್ದ ಎಂಬುವುದು ಖಚಿತವಾಗಿದೆ ಎಂದು ವರದಿಯಾಗಿದೆ
LATEST NEWS
ಬಾಲಕನ ಮರ್ಮಾಂಗದೊಂದಿಗೆ ಸಹಪಾಠಿಗಳ ಆಟ; ಆಸ್ಪತ್ರೆಗೆ ದಾಖಲಾದ ಬಾಲಕ
ಸುಳ್ಯ: ಹಾಸ್ಟೇಲ್ನಲ್ಲಿ ಉಳಿದು ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ ಮರ್ಮಾಂಗವೆಳೆದು ಗೆಳೆಯರು ಆಟವಾಡಿದ ಪರಿಣಾಮವಾಗಿ ಮರ್ಮಾಂಗಕ್ಕೆ ಹಾನಿಯಾಗಿರುವ ಘಟನೆ ಸಂಪಾಜೆಯಲ್ಲಿ ನಡೆದಿದೆ.
ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷದ ಬಾಲಕ ಕೆಲ ಸಮಯದಿಂದ ಕೊಡಗು ಸಂಪಾಜೆಯ ಹಾಸ್ಟೇಲ್ನಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಸೆ.14 ರಂದು ಇಬ್ಬರು ಸಹಪಾಠಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು. ಬಳಿಕ ಬಾಲಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವು ಬಂತೆಂದು ಮನೆಗೆ ಮರಳಿದ್ದಾನೆ.
ತಾಯಿಯೊಡನೆ ವಿಷಯ ಹೇಳಿಕೊಂಡಾಗ ತಕ್ಷಣವೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಬಾಲಕ ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ