Connect with us

    LATEST NEWS

    WATCH VIDEO : ಮದುವೆಯಲ್ಲಿ ಪುರೋಹಿತರಿಗೆ ಯುವಕರ ಕೀಟಲೆ; ಛೇ! ಹೀಗೂ ಮಾಡ್ಬೋದಾ? ಎಂದ ನೆಟ್ಟಿಗರು

    Published

    on

    ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಅದೇ ರೀತಿ ನಾವು ಮಾಡುವಂತಹ ತಮಾಷೆಗಳು ಕೂಡಾ ಅತಿರೇಕಕ್ಕೆ ಏರಿದರೆ ಅದರ ಪರಿಣಾಮವೂ ಋಣಾತ್ಮಕವಾಗಿರುತ್ತದೆ. ಇದಕ್ಕೆ ಸೂಕ್ತ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ತಮಾಷೆಯ ನೆಪದಲ್ಲಿ ಯುವಕರ ಗುಂಪೊಂದು ಮದುವೆ ಮಂಟಪದಲ್ಲಿಯೇ ಪುರೋಹಿತರೊಬ್ಬರಿಗೆ ಅವಮಾನ ಮಾಡಿದ್ದಾರೆ. ಪುರೋಹಿತರಿಗಾದ ಅವಮಾನವನ್ನು ಕಂಡು ನೆಟ್ಟಿಗರು ಕೆಂಡಮಂಡಲವಾಗಿದ್ದಾರೆ.


    ಸಾಮಾನ್ಯವಾಗಿ ಮದುವೆ ಕಾರ್ಯಕ್ರಮಗಳಲ್ಲಿ ವಧು ವರರ ಗೆಳೆಯರು ಅಥವಾ ಸಂಬಂಧಿಕರು ತರ್ಲೆ ತಮಾಷೆಗಳನ್ನು ಮಾಡುತ್ತಿರುತ್ತಾರೆ. ಕೆಲವೊಬ್ಬರು ಪುರೋಹಿತರೊಂದಿಗೂ ತಮಾಷೆ ಮಾಡುವುದಿದೆ. ಆದರೆ. ಇಲ್ಲಿ ಅದು ಅತಿರೇಕಕ್ಕೆ ಏರಿದೆ. ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರ ವೀಡಿಯೋವಿದು. ಈ ವೀಡಿಯೋ ನೋಡಿದವರು ಖಂಡಿತ ಯುವಕರ ವರ್ತನೆಯನ್ನು ಖಂಡಿಸೋದು ಸಹಜ. ತಮಾಷೆ ಇರಬೇಕು ನಿಜ, ಆದರೆ ಹೀಗಾ? ಎಂದು ಕಿಡಿಕಾರುತ್ತಿದ್ದಾರೆ ನೆಟ್ಟಿಗರು.

    ವೀಡಿಯೋದಲ್ಲಿ ಏನಿದೆ?

    ವೈರಲ್ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ಪುರೋಹಿತರೊಬ್ಬರು ವಧುವರರನ್ನು ಕೂರಿಸಿ ಪೂಜಾ ವಿಧಿವಿಧಾನಗಳನ್ನು ಸುಸೂತ್ರವಾಗಿ ನಡೆಸಿಕೊಡುತ್ತಿರುವ ವೇಳೆಯಲ್ಲಿ ಇಬ್ಬರು ಯುವಕರು ತಮಾಷೆಯ ನೆಪದಲ್ಲಿ ಪುರೋಹಿತರ ತಲೆಗೆ ಗೋಣಿ ಚೀಲವನ್ನು ಹಾಕುವ ದೃಶ್ಯವನ್ನು ಕಾಣಬಹುದು.

    ಇಷ್ಟು ಸಾಲದ್ದಕ್ಕೆ ಪುರೋಹಿತರ ಮೇಲೆ ಕುಂಕುಮ, ಅಕ್ಷತೆ, ಬೆಡ್ ಶೀಟ್ ಕೂಡಾ ಎಸೆದಿದ್ದಾರೆ. ಪುರೋಹಿತರಿಗೆ ಇಷ್ಟೆಲ್ಲಾ ಅವಮಾನ ಮಾಡುತ್ತಿದ್ದರೂ ಅಲ್ಲಿ ನೆರೆದಿದ್ದವರು ಇದನ್ನು ಕಂಡು ನಗುತ್ತಿದ್ದರೇ ಹೊರತು, ಯಾರೊಬ್ಬರು ಯುವಕರನ್ನು ಹೀಗೆ ಮಾಡಬೇಡಿ ಎಂದು ತಡೆಯಲಿಲ್ಲ. ಕೊನೆಯಲ್ಲಿ ಅವಮಾನವನ್ನು ಸಹಿಸಲಾರದೆ ಪುರೋಹಿತರು ಮಂಟಪದಿಂದ ಎದ್ದು ಹೋಗಿದ್ದಾರೆ.

    ಇದನ್ನೂ ಓದಿ : ಮದುವೆ ಮಂಟಪದಿಂದ ವಧುವಿನ ಕಣ್ಣಿಗೆ ಖಾರದ ಪುಡಿ ಹಾಕಿ ಕಿಡ್ನಾಪ್..! ವೀಡಿಯೋ ವೈರಲ್

    ಬೇಸರ ವ್ಯಕ್ತಪಡಿಸಿದ ನೆಟ್ಟಿಗರು :

    ಪುರೋಹಿತರಿಗಾದ ಈ ಅವಮಾನ ಎಂತಹವರಿಗೂ ಬೇಸರ ತರಿಸುವಂತಿದೆ. ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ನಿಮ್ಮ ಕೈಯಲ್ಲಿ ಪುರೋಹಿತರಿಗೆ ಗೌರವ ಕೊಡಲು ಸಾಧ್ಯವಾಗದಿದ್ದರೆ, ದಯವಿಟ್ಟು ಅವರನ್ನು ಕರೆದು ಈ ರೀತಿ ಅವಮಾನ ಮಾಡಬೇಡಿ ಎಂದು ಕಿಡಿಕಾರಿದ್ದಾರೆ. ಇನ್ನೂ ಅನೇಕರು ಪುರೋಹಿತರಿಗಾದ ಅವಮಾನವನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

    watch video : 

    1 Comment

    Leave a Reply

    Your email address will not be published. Required fields are marked *

    LATEST NEWS

    ಚಿನ್ನದ ಅಂಗಡಿಗೆ ಬಂದು ಬೆಲೆಬಾಳುವ ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆದ ಕಳ್ಳ

    Published

    on

    ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಮಾಂಗಲ್ಯ ಸರದೊಂದಿಗೆ ಪರಾರಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

    ಸಪ್ಟೆಂಬರ್ 11 ರಂದು ಈ ಘಟನೆ ನಡೆದಿದ್ದು, ಮಾಂಗಲ್ಯ ಸರ ಖರೀದಿಯ ನೆಪದಲ್ಲಿ ಆರೋಪಿ ಅಂಗಡಿಗೆ ಬಂದಿದ್ದ. ಉಡುಪಿ ಜಿಲ್ಲೆಯ ಕಾರ್ಕಳದ ಉಷಾ ಜ್ಯುವೆಲ್ಲರಿಗೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಆರೋಪಿ ಎಂಟ್ರಿಕೊಟ್ಟಿದ್ದ. ಅಲ್ಲಿದ್ದ ಸಿಬ್ಬಂದಿ ಯುವತಿಯ ಬಳಿ ಮಾಂಗಲ್ಯ ಸರ ತೋರಿಸುವಂತೆ ಕೇಳಿ ಬಳಿಕ ಅದರ ರೇಟ್‌ ಕೂಡಾ ಕೇಳಿದ್ದ. ಸೇಲ್ಸ್‌ ಗರ್ಲ್ ಮಾಂಗಲ್ಯ ಸರಕ್ಕೆ 1 ಲಕ್ಷದ 37 ಸಾವಿರ ರೂಪಾಯಿಗಳಾಗುತ್ತವೆ ಎಂದು ಹೇಳಿದಾಗ ನಗುತ್ತಲೇ ಸರ ಕೈಗೆತ್ತಿಕೊಂಡ ಆರೋಪಿ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ.

    ಸೇಲ್ಸ್‌ ಗರ್ಲ್‌ ತಕ್ಷಣ ಕಳ್ಳ ಕಳ್ಳ ಅಂತ ಬೊಬ್ಬೆ ಹೊಡೆದು ಹೊರಗಿದ್ದ ಜನರನ್ನು ಎಚ್ಚರಿಸಿದ್ದಾಳೆ. ಈ ವೇಳೆ ಸಾರ್ವಜನಿಕರ ಕೈಗೆ ಆರೋಪಿ ಸಿಕ್ಕಿ ಹಾಕಿಕೊಂಡಿದ್ದು, ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ಹೆರ್ಮುಂಡೆ ಗ್ರಾಮದ ನಿವಾಸಿ ಜಯರಾಮ್‌ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಸದ್ಯ ಆರೋಪಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾರಣ ಮಾಂಗಲ್ಯ ಸರವನ್ನು ಜ್ಯುವೆಲ್ಲರಿ ಮಾಲಕರಿಗೆ ಒಪ್ಪಿಸಲಾಗಿದೆ.

    Continue Reading

    LATEST NEWS

    ದೈತ್ಯಾಕಾರದ ಬಾಡಿ ಬಿಲ್ಡರ್ ಇನ್ನಿಲ್ಲ

    Published

    on

    ಮಂಗಳೂರು/ಹೊಸದಿಲ್ಲಿ: ಜಗತ್ತಿನ ಫೇಮಸ್ ಆಂಡ್ ಫೇವರೇಟ್ ಬಾಡಿ ಬಿಲ್ಡರ್ ಇಲಿಯಾ ಗೋಲೆಮ್ ಯಾಫೆಮ್‌ಚೆಕ್(36) ಹೃದಯಘಾತದಿಂದ ನಿಧನರಾಗಿದ್ದಾರೆ.


    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಡಿ ಬಿಲ್ಡರ್ :
    ಸೆ.6 ರಂದು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6 ಅಡಿ ಎತ್ತರ ಹಾಗೂ 154 ಕೆ.ಜಿ ತೂಕದವನ್ನು ಹೊಂದಿದ್ದರು. ದಿ ಮ್ಯೂಟಂಟ್ ಎಂದು ಪ್ರಸಿದ್ಧಿಯಾಗಿದ್ದ ಇಲಿಯಾ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕೋಮಾಗೆ ಹೋಗಿದ್ದರು. ಕೊನೆಗೆ ಸೆ.11ರಂದು ಕೊನೆಯುಸಿರೆಳೆದರು ಎಂಬುವುದಾಗಿ ವರದಿಯಾಗಿದೆ.

    Continue Reading

    LATEST NEWS

    ಉತ್ತರಾಖಂಡದಲ್ಲಿ ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್

    Published

    on

    ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ, ಬದರಿನಾಥ ರಾಷ್ಟ್ರೀಯ ಹೆದ್ದಾರಿಯು ಬಂದ್ ಆಗಿದೆ ಎಂದು ಜಿಲ್ಲಾಡಳಿತ ಇಂದು ತಿಳಿಸಿದೆ.

    ಭೂಕುಸಿತ ಸಂಭವಿಸಿ ಬೆಟ್ಟಗಳಿಂದ ಕಲ್ಲುಗಳು ಉರುಳಿ ರಸ್ತೆಗಳ ಮೇಲೆ ಬಿದ್ದಿದೆ. ಪರಿಣಾಮ ಲಂಬಗಡ, ನಂದಪ್ರಯಾಗ, ಸೋನಾಳ ಮತ್ತು ಬ್ಯಾರೇಜ್ ಕುಂಜ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ ಹೇಳಿದೆ. ಜೊತೆಗೆ ಸಾಕೋಟ್-ನಂದಪ್ರಯಾಗ ನಡುವಿನ ಮಾರ್ಗವನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನು ಕಾಮೇದಾ ಬಳಿಯ ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಚಮೋಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಇತ್ತೀಚೆಗೆ ಕೇದಾರನಾಥದ ಬಳಿಯ ಲಿಂಚೋಲಿಯಲ್ಲಿನ ಶಿಬಿರದಲ್ಲಿ ಭೂಕುಸಿತ ಉಂಟಾಗಿತ್ತು. ಋಷಿಕೇಶದ ಶಿವಮಂದಿರ ಮತ್ತು ಮೀರಾನಗರ ಪ್ರದೇಶಗಳ ಬಳಿ ಹೊಳೆಗಳಲ್ಲಿ 2 ಮೃತದೇಹಗಳು ಪತ್ತೆಯಾಗಿದ್ದವು.

    Continue Reading

    LATEST NEWS

    Trending