ಉಪ್ಪಿನಂಗಡಿ: ಕಳೆದ ಒಂದು ವರ್ಷದಿಂದ ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಕೂಡಾ ಹೃದಯಾಘಾತದಿಂದಾಗಿ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ಮಂಗಳೂರಿನಲ್ಲಿ ನಡೆದಿದೆ. 34 ನೆಕ್ಕಿಲಾಡಿ...
ಮಂಗಳೂರು: ಕ್ರೇನ್ ಢಿಕ್ಕಿಯಾಗಿ ಎಮ್ಆರ್ಪಿಎಲ್ ಉದ್ಯೋಗಿಯೋರ್ವರು ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಮಂಗಳೂರಿನಲ್ಲಿ ನಡೆದಿದೆ. ಎಮ್ಆರ್ಪಿಎಲ್ ಉದ್ಯೋಗಿ ಕೇಶವ ಕೋಟ್ಯಾನ್ (40) ಮೃತ ದುರ್ದೈವಿ. ಎಮ್ಆರ್ಪಿಎಲ್ ನ ಒಳಗೆ ವರ್ಕ್ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕ್ರೇನ್...
ಬೆಳ್ಮಣ್: ಜೀಪು ಪಲ್ಟಿಯಾಗಿ ಯುವತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಸಮೀಪ ನಿನ್ನೆ ಸಂಜೆ ನಡೆದಿದೆ. ಕಿನ್ನಿಗೋಳಿಯಿಂದ ಮುಂಡ್ಕೂರು ಕಡೆಗೆ ತೆರಳುತ್ತಿದ್ದ ಜೀಪಿನಲ್ಲಿ ಚಾಲಕನ ಸಹಿತ ಆರು ಮಂದಿ...
ಬಂಟ್ವಾಳ: ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಜ್ವರಕ್ಕೆ ಯುವಕನೋರ್ವ ಬಲಿಯಾದ ಘಟನೆ ಜೂನ್ 9 ರಂದು ಬಂಟ್ವಾಳದ ವಾಮದಪದವು ಎಂಬಲ್ಲಿ ನಡೆದಿದೆ. ವಾಮದಪದವು ನಿವಾಸಿ ಕೃಷಿಕ ಸಂದೀಪ್ ಪೂಜಾರಿ (31) ಮೃತಪಟ್ಟ ಯುವಕ. ಇವರು ಕಳೆದ...
ಬಂಟ್ವಾಳ: ರಿಕ್ಷಾ ಟೆಂಪೋವೊಂದರಲ್ಲಿ ಸಿಮೆಂಟ್ ಸೀಟು ಲೋಡ್ ಮಾಡುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬಂಟ್ವಾಳದ ಕಲ್ಲಡ್ಕ ಪೂರ್ಲಿಪ್ಪಾಡಿಯಲ್ಲಿ ನಡೆದಿದೆ. ನೌಶಾದ್ ಸುರಿಬೈಲು...
ಮಂಗಳೂರು: ಕ್ರಿಕೆಟ್ ಆಡುತ್ತಿದ್ದ ವೇಳೆ ಕ್ಯಾಚ್ ಹಿಡಿಯಲು ಹೋದ ಆಟಗಾರನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ನಿನ್ನೆ ಉರ್ವ ಮೈದಾನದಲ್ಲಿ ನೂತನ್ ಫ್ರೆಂಡ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಉರ್ವದ...
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಸ್ವಿಪ್ಟ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು 20 ಅಡಿ ಅಳಕ್ಕೆ ಬಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಬಂಟ್ವಾಳದ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ....
ಬಂಟ್ವಾಳ: ದ್ವಿಚಕ್ರವಾಹನವೊಂದಕ್ಕೆ ಖಾಸಗಿ ಬಸ್ ಢಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಕೋಡಾಜೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅನಂತಾಡಿ...
ಸುರತ್ಕಲ್: ನಗರದ ಹೊರವಲಯದ ಸುರತ್ಕಲ್ ಸಮೀಪದ ಎನ್ಐಟಿಕೆಯ ಅಸಿಸ್ಟೆಂಟ್ ಪ್ರೊಫೆಸರ್ ಮನೀಶ್ ಕುಮಾರ್ (36) ಎಂಬವರು ಬಾಡಿಗೆ ಮನೆಯ ಐದನೆ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೂಲತಃ ಉತ್ತರ ಪ್ರದೇಶದ ಅಶೋಕ್ ಕುಮಾರ್...