ಮಂಗಳೂರು: ಕ್ರೇನ್ ಢಿಕ್ಕಿಯಾಗಿ ಎಮ್ಆರ್ಪಿಎಲ್ ಉದ್ಯೋಗಿಯೋರ್ವರು ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಮಂಗಳೂರಿನಲ್ಲಿ ನಡೆದಿದೆ.
ಎಮ್ಆರ್ಪಿಎಲ್ ಉದ್ಯೋಗಿ ಕೇಶವ ಕೋಟ್ಯಾನ್ (40) ಮೃತ ದುರ್ದೈವಿ.
ಎಮ್ಆರ್ಪಿಎಲ್ ನ ಒಳಗೆ ವರ್ಕ್ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕ್ರೇನ್ ಢಿಕ್ಕಿ ಆಗಿ ತೀವ್ರ ಗಂಭೀರ ಗಾಯಗೊಂಡಿದ್ದರು.
ನಂತರ ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.