Connect with us

    DAKSHINA KANNADA

    ಸುರತ್ಕಲ್ – ಬಿ.ಸಿ ರೋಡ್ ಹೆದ್ದಾರಿಯ ಗುಂಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿಗೆ ಮನವಿ; ಡಿವೈಎಫ್ಐ

    Published

    on

    ಸುರತ್ಕಲ್ ನಿಂದ ಬಿ.ಸಿ ರೋಡ್ ವರೆಗಿನ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮಂಗಳೂರು ಜಿಲ್ಲಾಧಿಕಾರಿಗೆ  ದ.ಕ. ಜಿಲ್ಲಾ ಸಮಿತಿ ಡಿವೈಎಫ್ಐ ಮನವಿ ನೀಡಿದೆ.

    ಮಂಗಳೂರು: ಸುರತ್ಕಲ್ ನಿಂದ ಬಿ.ಸಿ ರೋಡ್ ವರೆಗಿನ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮಂಗಳೂರು ಜಿಲ್ಲಾಧಿಕಾರಿಗೆ  ದ.ಕ. ಜಿಲ್ಲಾ ಸಮಿತಿ ಡಿವೈಎಫ್ಐ ಮನವಿ ನೀಡಿದೆ.

    ಸುರತ್ಕಲ್ ನಿಂದ ಬಿ.ಸಿ ರೋಡ್ ವರೆಗಿನ ಹೆದ್ದಾರಿಯು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

    ಮಾತ್ರವಲ್ಲ ಅಪಾಯಕಾರಿ ಪರಿಸ್ಥಿತಿಯನ್ನು ನಿರ್ಮಿಸಿದೆ.

    ಹೆದ್ದಾರಿಗಳನ್ನು ಮಳೆಗಾಲಕ್ಕೆ ಮುಂಚಿತವಾಗಿ ಸರಿಯಾದ ನಿರ್ವಹಣೆ ಮಾಡದಿರುವುದರಿಂದ ಮಳೆಗಾಲದ ಆರಂಭದಲ್ಲೇ ಸುರತ್ಕಲ್ ಟೋಲ್ ಬೂತ್ ಬಳಿಯಿಂದ ಬಿ.ಸಿ.ರೋಡ್ ಉದ್ದಕ್ಕೂ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದ ಮಾರಣಾಂತಿಕ ಗುಂಡಿಗಳು ಉಂಟಾಗಿವೆ.

    ಈ ಅಪಾಯಕಾರಿ ಗುಂಡಿಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ದ್ವಿಚಕ್ರ ಸವಾರರಂತೂ ಪ್ರಾಣವನ್ನು ಅಂಗೈನಲ್ಲಿ ಹಿಡಿದು ಸಾಗುವಂತಾಗಿದೆ.

    ಮಳೆ ಸುರಿಯುವ ಸಂದರ್ಭ ಆಳವಾದ ಈ ಗುಂಡಿಗಳು ಗೋಚರಿಸದೆ ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ.

    ಒಟ್ಟಾರೆ ಈ ಹೆದ್ದಾರಿಯಲ್ಲಿ ಪ್ರಯಾಣ ಮೃತ್ಯುವಿನೊಂದಿಗೆ ಸರಸ ಎಂಬಂತಾಗಿದೆ.

    ಕೂಳೂರು ನೂತನ ಸೇತುವೆ ನಿರ್ಮಾಣ ಮೂರು ವರ್ಷ ದಾಟಿದರೂ ಪೂರ್ಣಗೊಳ್ಳದೆ ಕಾಮಗಾರಿ ಪೂರ್ತಿಯಾಗಿ ಕುಂಠಿತಗೊಂಡಿದೆ.

    ನಿನ್ನೆ ಪಣಂಬೂರು ಸಮೀಪ ರಸ್ತೆ ನಡುವೆ ದಿಢೀರ್ ಎದುರಾದ ಹೊಂಡ ತಪ್ಪಿಸಲು ಯತ್ನಿಸಿದ ದ್ವಿಚಕ್ರ ವಾಹನ ಸವಾರ ರಸ್ತೆಗೆ ಉರುಳಿ ಬಿದ್ದು ಹಿಂಬದಿಯ ಘನವಾಹನದಡಿ ಸಿಲುಕಿ

    ಸಾವನ್ನಪ್ಪಿದ ದಾರುಣ ಘಟನೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬೇಜವಾಬ್ದಾರಿತನ, ಕರ್ತವ್ಯಲೋಪವನ್ನು ಎತ್ತಿತೋರಿಸುತ್ತಿದೆ.

    ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು.

    ಅಪಘಾತಕ್ಕೆ ಬಲಿಯಾದ ಸವಾರನ ಕುಟುಂಬಕ್ಕೆ‌ ಹೆದ್ದಾರಿ ಪ್ರಾಧಿಕಾರ ಪರಿಹಾರ ಧನ ಒದಗಿಸಲು ಕ್ರಮಕೈಗೊಳ್ಳಲು ಮುಂದಾಗಬೇಕು.

    ವರ್ಷಕ್ಕೆ ಹತ್ತಾರು ಕೋಟಿ ರೂಪಾಯಿ ಈ ರಸ್ತೆಯ ನಿರ್ವಹಣೆಗಾಗಿ ಹೆದ್ದಾರಿ ಪ್ರಾಧಿಕಾರ ಮೀಸಲಿಡುತ್ತದೆ.

    ಆದರೆ ಗುಣಮಟ್ಟದ ನಿರ್ವಹಣೆ, ಮಳೆಗಾಲಕ್ಕೆ ಮುಂಚಿತವಾಗಿ ದುರಸ್ಥಿಗಳು ನಡೆಯುವುದೇ ಇಲ್ಲ.

    ಈ ಹಿನ್ನಲೆಯಲ್ಲಿ ಬಿ.ಸಿ ರೋಡ್, ಸುರತ್ಕಲ್ ವರೆಗಿನ ಹೆದ್ದಾರಿಯ ಎಲ್ಲಾ ಗುಂಡಿಗಳನ್ನು ಗುಣಮಟ್ಟದ ಕಾಮಗಾರಿಯ ಮೂಲಕ ತಕ್ಷಣವೇ ಮುಚ್ಚಬೇಕು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಕೆ ಇಮ್ತಿಯಾಜ್ ಹಾಗೂ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಂಬಳ ಕ್ಷೇತ್ರದಲ್ಲಿ ಹಲವು ಮೆಡಲ್‌ಗಳನ್ನು ಗಳಿಸಿದ “ಲಕ್ಕಿ” ಇನ್ನಿಲ್ಲ..

    Published

    on

    ಕಿನ್ನಿಗೋಳಿ: ಕಂಬಳ ಕ್ಷೇತ್ರದ ಸಾಧಕ, ಹಲವಾರು ಮೆಡಲ್ ಗಳನ್ನು ತನ್ನದಾಗಿಸಿದ ಕೋಣ  ಲಕ್ಕಿ ಸಾವನ್ನಪ್ಪಿದೆ. ಐಕಳ ದಿವಾಕರ ಚೌಟ ಮಾಲಕತ್ವದ ಕೋಣ ಲಕ್ಕಿ ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ(ಜು.16) ಕಾರ್ಕಳದಲ್ಲಿ ಲಕ್ಕಿಗೆ ಅಪರೇಷನ್ ಕೂಡ ನಡೆದಿತ್ತು.

    ಮಳೆ ಸೃಷ್ಟಿಸಿದ ಅವಾಂತರ.. ಲಾರಿ ಏರಿ ಜಿಲ್ಲಾಧಿಕಾರಿ ಪ್ರಯಾಣ..!!

    ಖ್ಯಾತ ವೈದ್ಯ ವಾಸುದೇವ ಪೈ ಅಪರೇಷನ್ ನಡೆಸಿದ್ದು, ಮತ್ತೆ ಇಂದು ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ವೈದ್ಯರನ್ನು ನೋಡಿದ ಲಕ್ಕಿ ಹೆದರಿ ಅತ್ತಿಂದಿತ್ತ ಓಡತೊಡಗಿತ್ತು. ಲಕ್ಕಿಯ ಮಾಲಕರು ಮತ್ತು ಒಡನಾಡಿಗಳಿಗೂ ನಿಯಂತ್ರಣಕ್ಕೆ ಸಿಗದಾಯಿತು. ಕೊನೆಗೆ ಮರಕ್ಕೆ ಕಟ್ಟಿ ಹಾಕಿದ್ದು ಸ್ವಲ್ಪ ಹೊತ್ತಿನಲ್ಲೇ ಅಸು ನೀಗಿದೆ. ಲಕ್ಕಿ ಒಬ್ಬಂಟಿ ಕೋಣವಾಗಿದ್ದು ಕಂಬಳ ಸಂದರ್ಭ ಅದಕ್ಕೆ ಸರಿಯಾದ ಜೊತೆ ಹುಡುಕಿ ಕಂಬಳದಲ್ಲಿ ಓಡಿಸಲಾಗುತ್ತಿತ್ತು. ಈ ಬಾರಿ 5 ಮತ್ತು ಕಳೆದ ವರ್ಷ 5 ಮೆಡಲ್ ಗಳನ್ನು ತನ್ನದಾಗಿಸಿದ್ದ ಲಕ್ಕಿ ಹಲವಾರು ಮೆಡಲ್ ಗಳನ್ನು ಪಡೆದುಕೊಂಡಿತ್ತು.

    Continue Reading

    DAKSHINA KANNADA

    ಹಳೆಯ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ: ವಿ.ಸೋಮಣ್ಣ

    Published

    on

    ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದು ಹೋಗಿದ್ದಾರೆ. ಹಳೆ ಸಿದ್ದರಾಮಯ್ಯನವರು ಇಲ್ಲ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

    ಬುಧವಾರ ಮಂಗಳೂರಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣ ವಿಚಾರದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಸೋಮಣ್ಣ ಅವರು ಈ ಉತ್ತರ ನೀಡಿದರು.

    ನಾನು‌ ಅವರ ಜೊತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಆ ಸಿದ್ದರಾಮಯ್ಯನವರು ಇವತ್ತು ಇಲ್ಲ. ಇವತ್ತು ಇರುವ ಸಿದ್ದರಾಮಯ್ಯನವರ ಕುರಿತು ನನಗೂ ಒಂದು ರೀತಿ ಅನುಮಾನ ಆಗಿದೆ ಎಂದರು. ‘ವಾಸ್ತವವನ್ನು ಯಾರೂ ಮುಚ್ಚಿಡಲು ಆಗಲ್ಲ. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಯಾರೂ ತಿಳಿದುಕೊಳ್ಳಬಾರದು’

    ಸಿದ್ದರಾಮಯ್ಯನವರು ಅದನ್ನು ತಿದ್ದಿಕೊಂಡು ಜನರಿಗೆ ವಾಸ್ತವಾಂಶ ಏನೆಂದು ತಿಳಿಸಲಿ. ಆಗ ಅವರು ಹಳೆ ಸಿದ್ದರಾಮಯ್ಯ ಆಗುತ್ತಾರೆ ಎಂದು ಸಚಿವ ಸೋಮಣ್ಣ ಅವರು ಹೇಳಿದರು.

    Continue Reading

    DAKSHINA KANNADA

    ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಮಂಗಳೂರಿಗೆ ಭೇಟಿ

    Published

    on

    ಮಂಗಳೂರು: ರೈಲ್ವೆ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ರಾತ್ರಿ ಆಗಮಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಸಂಸದ ಬ್ರಿಜೇಶ್ ಚೌಟ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

    ಮೇಯರ್ ಸುಧೀರ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು.

    ಸಚಿವ ಸೋಮಣ್ಣ ಅವರು ಜುಲೈ 17 ರಂದು ಬೆಳಗ್ಗೆ ಒಂಭತ್ತು ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣ, ಬಳಿಕ ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಭೇಟಿ ನೀಡಿದರು. ಬಳಿಕ ಕೊಟ್ಟಾರದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೈಲ್ವೆ ಸಂಬಂಧಿಸಿ ಸಭೆಯ ನೇತೃತ್ವ ವಹಿಸಲಿದ್ದಾರೆ.

    Continue Reading

    LATEST NEWS

    Trending