Connect with us

LATEST NEWS

ಸುಳ್ಯ ನಗರ ಪಂಚಾಯತ್ ಕಚೇರಿ ಆವರಣದಲ್ಲಿಯೇ ಕಸದ ರಾಶಿ ನೋಡಿ ದಂಗಾದ ದ.ಕ ಡಿಸಿ…!

Published

on

ಸುಳ್ಯ: ನಗರ ಪಂಚಾಯತ್ ಕಚೇರಿ ಆವರಣದಲ್ಲಿಯೇ ತುಂಬಿಡಲಾಗಿರುವ ಕಸದ ರಾಶಿಯನ್ನು ನೋಡಿ ದ.ಕ.ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಅವರು ಕೋಪಗೊಂಡು ನಗರ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.


ಸುಳ್ಯ ನಗರ ಪಂಚಾಯತ್‌ಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಕಸದ ರಾಶಿಯನ್ನು ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಷ್ಟೇ ಅಲ್ಲದೆ ರಾಶಿಯನ್ನು ಕೂಡಲೇ ತೆರವು ಮಾಡಲು ಕ್ರಮ ಕೈಗೊಳ್ಳಲು ಆದೇಶ ನೀಡಿದರು. ಕಸ ಸಾಗಾಟಕ್ಕೆ ಟೆಂಡರ್ ಮಾಡಲು ಕಡತಗಳನ್ನು ಸಿದ್ಧಪಡಿಸಿ ಕಳಿಸುವಂತೆ ಅವರು ಮುಖ್ಯಾಧಿಕಾರಿಗಳಿಗೆ ಆದೇಶ ನೀಡಿದರು.

ಈ ಬಗ್ಗೆ ಆಕ್ರೋಶಿತರಾದ ಅವರು ‘ಈ ರೀತಿ ಕಸದ ರಾಶಿ ಹಾಕಿರುವುದರಿಂದ ಈ ಕಸದಿಂದ ಮಲಿನಗೊಂಡ ನೀರು ಹರಿದು ಹಳ್ಳ ಕೊಳ್ಳಗಳನ್ನು ಸೇರುವ ಸಾಧ್ಯತೆ ಇದೆ. ಅಲ್ಲದೆ ಭೂಮಿಗೆ ಇಂಗಿ ಬೋರ್‌ವೆಲ್‌ಗಳಿಗೂ ಸೇರಿ ನೀರು ಮಲಿನಗೊಳ್ಳುವ ಅಪಾಯ ಇದೆ.

ನೀರು ಮಲಿನವಾದರೆ ಜಾಂಡೀಸ್, ಮಲೇರಿಯಾ, ಡೆಂಗ್ಯೂ, ಇಲಿ ಜ್ಚರ ಸೇರಿದಂತೆ ಸಾಂಕ್ರಾಮಿ ರೋಗಗಳು ಹರಡುವ ಸಾಧ್ಯತೆ ಇದೆ.

ಇಲ್ಲಿ ಹಾಕಿದ ಕಸದಲ್ಲಿ ಸೊಳ್ಳೆ ಉತ್ಪಾದನೆ ಮಾಡಿ ನಗರ ಪಂಚಾಯತ್ ವತಿಯಿಂದ ಇಡೀ ತಾಲೂಕಿಗೆ ರೋಗ ಹರಡುತ್ತೀರಾ ಎಂದು ಖಾರವಾಗಿಯೇ ಪ್ರಶ್ನಿಸಿದರು.

ನಗರ ಪಂಚಾಯತ್ ಶೆಡ್‌ನಲ್ಲಿ ಮತ್ತು ಕಚೇರಿ ಹಿಂಭಾಗದಲ್ಲಿ ತುಂಬಿರುವ ಕಸದ ರಾಶಿಯನ್ನು ತೆರವು ಮಾಡಲು ಕೂಡಲೇ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

Click to comment

Leave a Reply

Your email address will not be published. Required fields are marked *

FILM

ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!

Published

on

ನವದೆಹಲಿ : ಖ್ಯಾತ ಕಿರುತೆರೆ ನಟ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಜನಪ್ರಿಯ ಕಾರ್ಯಕ್ರಮ ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಮೂಲಕ ಗಮನ ಸೆಳೆದಿರುವ ನಟ ಗುರುಚರಣ್ ಸಿಂಗ್ ಅವರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ನಟನ ತಂದೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.


ದೂರಿನಲ್ಲಿ ಏನಿದೆ?

ದೆಹಲಿ ಪೊಲೀಸರಿಗೆ ತಂದೆ ನೀಡಿರುವ ದೂರಿನ ಪ್ರಕಾರ, 50ರ ಹರೆಯದ ನಟ ಏಪ್ರಿಲ್ 22 ರಂದು ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಿದ್ದಾರೆ. ಅಂದಿನಿಂದ ಅವರು ನಾಪತ್ತೆಯಾಗಿದ್ದಾರೆ. ಅವರು ಮುಂಬೈಗೆ ಬಂದಿಳಿಯಬೇಕಿತ್ತು, ಆದರೆ ಮುಂಬೈ ತಲುಪಿಲ್ಲ. ಮನೆಗೂ ವಾಪಸಾಗಲಿಲ್ಲ. ಫೋನ್ ಸಂಪರ್ಕಕ್ಕೂ ಸಿಗಲಿಲ್ಲ. ಈ ಹಿನ್ನೆಲೆ ಪೊಲೀಸ್​ ಠಾಣಾ ಮೆಟ್ಟಿಲೇರಬೇಕಾಯಿತು ಎಂದು ತಿಳಿಸಲಾಗಿದೆ.

“ಅವರು ಮಾನಸಿಕವಾಗಿ ಸ್ಥಿರವಾಗಿದ್ದು, ನಾವು ಅವರನ್ನು ಹುಡುಕಿದ್ದೇವೆ. ಆದರೆ, ಈಗ ಅವರು ಕಾಣೆಯಾಗಿದ್ದಾರೆ” ಎಂದು ಗುರುಚರಣ್ ಸಿಂಗ್​​ ತಂದೆ ಪೊಲೀಸರಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಈ ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನಾವು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಗುರುಚರಣ್ ಸಿಂಗ್ ಕೊನೆಯದಾಗಿ ಏಪ್ರಿಲ್ 22 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬೈಗೆ ತೆರಳಿದ್ದರು ಎನ್ನಲಾಗಿದೆ. ಆದರೆ, ಅವರು ಮುಂಬೈಗೆ ತಾವು ತಲುಪಬೇಕಾಗಿದ್ದ ಸ್ಥಳಕ್ಕೆ ತಲುಪಿಲ್ಲ. ಮನೆಗೂ ಹಿಂತಿರುಗಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ. ನಟನ ದಿಢೀರ್ ಕಣ್ಮರೆ ಪ್ರಕರಣ ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ : ಕೊನೆಗೂ ಪ್ರಭಾಸ್ ‘ಕಲ್ಕಿ 2898AD’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್! ಯಾವಾಗ ತೆರೆಗೆ?

ಶೋ ತೊರೆದಿದ್ದ ನಟ :

ಗುರುಚರಣ್ ಅವರು ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಚಿತ್ರದಲ್ಲಿ ಸೋಧಿ ಪಾತ್ರ ನಿರ್ವಹಿಸಿದ್ದರು. ಈ ಮೂಲಕ ಜನಪ್ರಿಯತೆ ಸಂಪಾದಿಸಿದ್ದರು. ಅದಾಗ್ಯೂ, ಅವರು ಕೆಲ ವರ್ಷಗಳ ಹಿಂದೆ ಕಾರ್ಯಕ್ರಮವನ್ನು ತೊರೆದರು. ತಂದೆಯ ಅನಾರೋಗ್ಯ ಹಿನ್ನೆಲೆ ಶೋ ಬಿಡಬೇಕಾಯಿತು.

ಇದೀಗ ಅವರ ನಾಪತ್ತೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ, ಅವರ ಅಭಿಮಾನಿಗಳಲ್ಲಿ ಆತಂಕ ಹುಟ್ಟು ಹಾಕಿದೆ.

Continue Reading

FILM

ಕೊನೆಗೂ ಪ್ರಭಾಸ್ ‘ಕಲ್ಕಿ 2898AD’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್! ಯಾವಾಗ ತೆರೆಗೆ?

Published

on

ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಲ್ಕಿ 2898AD’ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾನಿ ಸೇರಿದಂತೆ ಮೊದಲಾದ ಖ್ಯಾತ ನಟ – ನಟಿಯರ ದಂಡೇ ಚಿತ್ರದಲ್ಲಿದೆ.
‘ಮಹಾನಟಿ’ ಚಿತ್ರದ ಮೂಲಕ ಭಾರೀ ಯಶಸ್ಸು ತನ್ನದಾಗಿಸಿಕೊಂಡಿದ್ದ, ನಾಗ್‌ ಅಶ್ವಿನ್ ಕಲ್ಕಿ ಮೂಲಕ ಮತ್ತೆ ಹವಾ ಸೃಷ್ಟಿಸಲು ಹೊರಟಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ‘ಕಲ್ಕಿ’ ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.


ಈಗಾಗಲೇ ‘ಕಲ್ಕಿ 2898AD’ ಚಿತ್ರದ ಪೋಸ್ಟರ್ಸ್, ಟೀಸರ್ ಭಾರೀ ಕತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ವಿಭಿನ್ನ ಗೆಟಪ್‌ಗಳಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಅಶ್ವತ್ಥಾಮನಾಗಿ ಅಮಿತಾಬ್ ಬಚ್ಚನ್, ಕಲಿಯಾಗಿ ಕಮಲ್ ಹಾಸನ್ ನಟಿಸುತ್ತಿದ್ದಾರೆ.

ಚುನಾವಣಾ ಲೆಕ್ಕಾಚಾರ :

‘ಕಲ್ಕಿ 2898AD’ ಸಿನಿಮಾ ರಿಲೀಸ್ ಡೇಟ್ ಪದೇ ಪದೆ ಬದಲಾಗುತ್ತಲೇ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಮತ್ತೆ ಚುನಾವಣಾ ದಿನಾಂಕ ಮುಂದೂಡಿದೆ. ಚುನಾವಣೆ ಪ್ರಚಾರ, ಮತದಾನ, ಫಲಿತಾಂಶದ ಸಮಯದಲ್ಲಿ ಸಿನಿಮಾಗಳು ಬಿಡುಗಡೆಯಾದರೆ ಹಿನ್ನಡೆಯಾಗುತ್ತದೆ. ಇದೇ ಕಾರಣಕ್ಕೆ ಚುನಾವಣೆಗಳ ಸಮಯದಲ್ಲಿ ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕುತ್ತಾರೆ. ಮೇ 9ರಂದು ‘ಕಲ್ಕಿ 2898AD’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಮೇ 13 ರಂದು ಕೂಡ ಕೆಲವೆಡೆ ಮತದಾನ ನಡೆಯಲಿದೆ. ಇಂತಹ ಸಮಯದಲ್ಲಿ ಸಿನಿಮಾ ತೆರೆಗಪ್ಪಳಿಸಿದರೆ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ ಎನ್ನುವ ಲೆಕ್ಕಾಚಾರ ನಡೆದು ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

ಈ ವರ್ಷ ಜನವರಿಯಲ್ಲಿ ಚಿತ್ರವನ್ನು ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಬಳಿಕ ಮೇ 9ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ಚಿತ್ರ ತೆರೆಗೆ ಬರುವ ದಿನಾಂಕ ಮುಂದೆ ಹೋಗಿದೆ.

ಯಾವಾಗ ಬಿಡುಗಡೆ?


‘ಕಲ್ಕಿ 2898AD’ ಚಿತ್ರ ತೆರೆಗೆ ಯಾವಾಗ ಬರುತ್ತೆ? ಎಂದು ಕಾಯುತ್ತಿದ್ದ ಪ್ರಭಾಸ್ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ಕೊನೆಗೂ ಚಿತ್ರತಂಡ ನೀಡಿದೆ. ದಿನಾಂಕ ಮುಂದೂಡುತ್ತಿದ್ದುದರಿಂದ ನಿರಾಸೆಗೊಂಡಿದ್ದ ಅಭಿಮಾನಿಗಳು ಕೊನೆಗೂ ನಿರಾಳರಾಗಿದ್ದಾರೆ.
ಹೌದು, ಮೇ 9 ರಂದು ಚಿತ್ರ ತೆರೆಗೆ ಬರಬೇಕಿತ್ತು. ಚುನಾವಣೆ ಹಿನ್ನೆಲೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಜೂನ್ 27 ರಂದು ಚಿತ್ರ ತೆರೆಗೆ ಬರಲಿದೆ. ವಿಶ್ವದಾದ್ಯಂತ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರುವ ಸಿದ್ಧತೆಯಲ್ಲಿದೆ ಚಿತ್ರತಂಡ.

ಇದನ್ನೂ ಓದಿ : “ಗಬ್ಬರ್ ಸಿಂಗ್” ಮೇ 3 ರಂದು ತೆರೆಗೆ ; ಇಂದು ವಿಡಿಯೋ ಸಾಂಗ್ ರಿಲೀಸ್..!

ಯಾವುದೇ ತೆಲುಗು ಸಿನಿಮಾ ಬಿಡುಗಡೆಯಾದರೂ, ಒಂದು ದಿನ ಮುಂಚಿತವಾಗಿ ಅಮೆರಿಕದಲ್ಲಿ ಪ್ರೀಮಿಯರ್ ನಡೆಯುತ್ತೆ. ‘ಕಲ್ಕಿ 2898 AD’ ಬಹುಕೋಟಿ ವೆಚ್ಚದ ಸಿನಿಮಾ ಆಗಿರುವುದರಿಂದ ಒಂದು ದಿನ ಮುಂಚಿತವಾಗಿ, ಅಂದರೆ, ಜೂನ್ 26ರಂದು ಅಮೆರಿಕದಲ್ಲಿ ತೆರೆಕಾಣಲಿದೆ ಎನ್ನಲಾಗಿದೆ.

ವಿಷ್ಣುಪುರಾಣ, ಕಲ್ಕಿ ಪುರಾಣ, ಭಾಗವತ ಪುರಾಣಗಳನ್ನು ಆಧರಿಸಿ ‘ಕಲ್ಕಿ 2898AD’ ಸಿನಿಮಾ ಕಟ್ಟಿಕೊಡಲಾಗುತ್ತಿದೆ. 5 ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಸಂತೋಷ್ ನಾರಾಯಣ್ ಸಂಗೀತ, ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣ ಚಿತ್ರಕ್ಕಿದೆ. ಎಎ ಫಿಲ್ಮ್ಸ್ ಉತ್ತರ ಭಾರತದಲ್ಲಿ ಸಿನಿಮಾ ವಿತರಣೆ ಹಕ್ಕು ಖರೀದಿಸಿದೆ.

Continue Reading

DAKSHINA KANNADA

“ಗಬ್ಬರ್ ಸಿಂಗ್” ಮೇ 3 ರಂದು ತೆರೆಗೆ ; ಇಂದು ವಿಡಿಯೋ ಸಾಂಗ್ ರಿಲೀಸ್..!

Published

on

ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ‘ಗಬ್ಬರ್ ಸಿಂಗ್’ ತುಳು ಚಲನ ಚಿತ್ರ ಮೇ 3 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಇದೀಗ ಈ ಸಿನೆಮಾದ ವಿಡಿಯೋ ಸಾಂಗ್‌ ರಿಲೀಸ್ ಆಗಿದ್ದು, ಜಸ್ಟ್‌ ರೋಲ್‌ ಫಿಲಂಸ್‌ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸೂಜಿ ಕಣ್‌ದ ಮೋನಾಲಿಸಾ ಎಂಬ ಉತ್ತಮ ಸಾಹಿತ್ಯವನ್ನು ಹೊಂದಿರುವ ಹಾಡನ್ನು ರಿಲೀಸ್ ಮಾಡಲಾಗಿದೆ. ಹಾಡಿಗೆ ಉಮೇಶ್ ಮಿಜಾರ್ ಸಾಹಿತ್ಯ ಬರೆದಿದ್ದರೆ, ಬೋಜರಾಜ ವಾಮಂಜೂರು, ವಿಸ್ಮಯ ವಿನಾಯಕ ಹಾಗೂ ಸ್ವತಹ ಉಮೇಶ್ ಮಿಜಾರ್ ಹಾಡುಗಳನ್ನು ಹಾಡಿದ್ದಾರೆ.


‘ಗಬ್ಬರ್ ಸಿಂಗ್’ ತುಳು ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ‌ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

‘ಗಬ್ಬರ್ ಸಿಂಗ್’ ಸಿನಿಮಾ ಮೇ 3 ರಂದು ಕರಾವಳಿ ಜಿ,ಲ್ಲೆಯಾದ್ಯಂತ ತೆರೆ ಕಾಣಲಿದೆ.  ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದ್ದು,  ಈಗಾಗಲೇ ಮಸ್ಕತ್ ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಸಾಂಸಾರಿಕ ಕತೆಯ ಜೊತೆ ಇಲ್ಲಿ ಹಾಸ್ಯವೂ ಚೆನ್ನಾಗಿ ವಕ್೯ಹೌಟ್ ಆಗಿದೆ. ನವೀನ್ ಪಡೀಲ್, ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ರವಿರಾಮ ಕುಂಜ ಇವರ ಹಾಸ್ಯ ಸಕ್ಕತ್ತಾಗಿದೆ. ಜೊತೆಗೆ ಗಿರೀಶ್ ಶೆಟ್ಟಿ ಕಟೀಲು, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್ ಮೊದಲಾದವರ ಪಾತ್ರಗಳೂ ಕೂಡಾ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಸಿನಿಮಾ ಮೇ 3 ರಂದು ತೆರೆ ಕಾಣಲಿದೆ ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ.

ಛಾಯಾಗ್ರಹಣ: ರವಿ ಸುವರ್ಣ, ಸಂಕಲನ: ಪ್ರಜ್ವಲ್ ಸುವರ್ಣ, ಕಲೆ: ವೆಂಕಟೇಶ್ ಬೆಂಗಳೂರು, ಸಂಗೀತ: ಡೊಲ್ಪಿನ್ ಕೊಳಲಗಿರಿ. ಹಿನ್ನಲೆ ಸಂಗೀತ: ಕಾರ್ತಿಕ್ ಮುಲ್ಕಿ, ಸಾಹಸ: ಅಲ್ಟಿಮೆಟ್ ಶಿವ್ ನೃತ್ಯ: ಅವಿನಾಶ್ ಬಂಗೇರ, ಶುಭಕಿರಣ್, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ : ಶರತ್ ಬರ್ಕೆ, ಸಹ ನಿರ್ದೇಶನ: ಪುಷ್ಪರಾಜ ರೈ, ಜಯರಾಜ್, ಸಹಾಯ: ಭಾಗ್ಯರಾಜ್.

 

 

Continue Reading

LATEST NEWS

Trending