Connect with us

STATE

ಕೊಠಡಿಗಳಿಲ್ಲದೆ ಬಿರುಬಿಸಿಲಿನಲ್ಲಿ ಕುಳಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳು..! ಪೋಷಕರ ಕೆಂಗಣ್ಣಿಗೆ ಗುರಿಯಾದ ಶಿಕ್ಷಕರು!

Published

on

ಪಾವಗಡ:ಶೈಕ್ಷಣಿಕ ಗುಣಮಟ್ಟ ಹೆಚ್ಚಿುಸುವ ಹಿನ್ನೆಲೆಯಲ್ಲಿ ಆದರ್ಶ ಶಾಲೆಗೆ ಸ್ವಂತ ಕಟ್ಟಡವಿದ್ದರೂ ಪಟ್ಟಣದಲ್ಲಿ ನಿರ್ವಹಣೆ ಮಾಡುತ್ತಿರುವ ಪರಿಣಾಮ ಮೂಲಭೂತ ಸೌಲಭ್ಯದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಇದರ ಪರಿಣಾಮ ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆಯನ್ನು ಕೊಠಡಿಗಳ ಕೊರತೆಯ ನೆಪದ ಮೇರೆಗೆ, ಅನೈರ್ಮಲ್ಯದಿಂದ ಕೂಡಿದ ಹಾಗೂ ಅಡುಗೆಯ ಕಸಕಟ್ಟಿ ಸಂಗ್ರಹ ಮಾಡಿದ್ದ ಮತ್ತು ಸೊಳ್ಳೆ ಇತರೆ ಕ್ರೀಮಿಕೀಟಗಳ ಹಾವಳಿ ವ್ಯಾಪಿಸಿದ್ದ ಗುರುಭವನ ಹಿಂಭಾಗದ ಬಯಲು ಪ್ರದೇಶದಲ್ಲಿ 6 ಮತ್ತು 7ನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಇಂತಹ ದುಸ್ಥಿತಿ ಬಂದೋದಗಿರುವುದು ದುರ್ದೈವದ ಸಂಗತಿ ಎಂಬ ಆರೋಪ ಕೇಳಿ ಬಂದಿದೆ.

ಇದೇ ಶಾಲೆಯ ಮುಖ್ಯ ಶಿಕ್ಷಕ, ಆದರ್ಶ ಶಾಲೆ ನಿರ್ವಹಣೆ ಜತೆಗೆ ಕ್ಷೇತ್ರ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, (ಬಿಆರ್‌ಸಿ) ಎರಡು ಹುದ್ದೆ ಒಬ್ಬರೇ ನಿರ್ವಹಿಸುವ ಕಾರಣ, ಆದರ್ಶ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಈ ಸಂಬಂಧ ಮಕ್ಕಳ ಪರೀಕ್ಷೆಯ ಅಧೋಗತಿ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಆದರ್ಶ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕಡಮಲಕುಂಟೆ ರಾಮಾಂಜಿನಪ್ಪರಿಗೆ ದೂರು ಸಲ್ಲಿಸಿದರೂ ವಿದ್ಯಾರ್ಥಿಗಳ ಬಗ್ಗೆ ಆಸಕ್ತಿ ವಹಿಸಲಿಲ್ಲ. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುವ ಗೋಜಿಗೆ ಹೋಗಲಿಲ್ಲ. ಇವರಿಗೆ ವಿದ್ಯಾರ್ಥಿಗಳ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂದು ಪ್ರಶ್ನಿಸಿದರು.

ಕೊಠಡಿಯ ಕೊರತೆ ಹಿನ್ನೆಲೆಯಲ್ಲಿ ಪಕ್ಕದಲ್ಲಿಯೇ ಇರುವ ಸರ್ಕಾರಿ ಜೂನಿಯರ್‌ ಕಾಲೇಜ್‌ ಕೊಠಡಿಗಳನ್ನು ಕಲ್ಪಿಸುವಂತೆ ಮನವಿ ಮಾಡಿದರೂ ಕಾಲೇಜಿನ ಪ್ರಾಂಶುಪಾಲ ಆಸಕ್ತಿ ವಹಿಸಲಿಲ್ಲ. ಇದರಿಂದ ಎಲ್ಲೂ ಕೊಠಡಿಗಳ ಲಭ್ಯವಿಲ್ಲದ ಕಾರಣ, ಗುರುಭವನ ಹಿಂಭಾಗದ ಮರಗಳ ನೆರಳಿನಲ್ಲಿ 6 ಮತ್ತು 7ನೇ ತರಗತಿಯ 200 ಮಂದಿ ವಿದ್ಯಾರ್ಥಿಗಳ ಪರೀಕ್ಷೆ ಬರೆಸಲಾಗುತ್ತಿದೆ. ಶೀಘ್ರ ವ್ಯವಸ್ಥೆ ಸರಿಪಡಿಸುವುದಾಗಿ ಬಿಆರ್‌ಸಿ ಹಾಗೂ ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಜಿ.ವಿ.ವೆಂಕಟೇಶ್‌ ತಿಳಿಸಿದರು.

ಸರ್ಕಾರಿ ಶಾಲೆಯಲ್ಲಿ ಹೆಚ್ಚು ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇಂತಹ ಅಧುನಿಕ ವ್ಯವಸ್ಥೆಯಲ್ಲಿಯೂ ಕೊಠಡಿಗ‍ಳಿಲ್ಲ ಎಂದು ಹೊರವಲಯದ ಪ್ರದೇಶದಲ್ಲಿ ಪರೀಕ್ಷೆ ಬರೆಸುತ್ತಿದ್ದು, ಇನ್ನೂ ಶಿಕ್ಷಣ ವ್ಯವಸ್ಥೆ ಸುಧಾರಣೆ ಕಂಡಿಲ್ಲ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ದಲಿತ ಹಾಗೂ ರೈತ ಮುಖಂಡ ಗುಂಡ್ಲಹಳ್ಳಿ ರಾಮಾಂಜಿನೇಯ ಆರೋಪಿಸಿದರು.

LATEST NEWS

ಮೊಸಳೆ ಇದ್ದ ನಾಲೆಗೆ ಕಂದಮ್ಮನನ್ನು ಎಸೆದ ಹೆತ್ತ ತಾಯಿ..! ಗಂಡ-ಹೆಡತಿ ಜಗಳದಲ್ಲಿ ಮೊಸಳೆ ಪಾಲಾದ ಮಗು..!

Published

on

ಉತ್ತರ ಕನ್ನಡ/ಮಂಗಳೂರು: ತಾಯಿಯೊಬ್ಬಳು ಕೋಪದಲ್ಲಿ ತನ್ನ ಮಗುವನ್ನೇ ಕಾಲುವೆಗೆ (Murder case ) ಎಸೆದಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿಯಲ್ಲಿ ಘಟನೆ ನಡೆದಿದೆ. ಸಾವಿತ್ರಿ ಎಂಬಾಕೆ ತನ್ನ ಆರು ವರ್ಷದ ಮಗನನ್ನು ನಾಲೆಗೆ ಎಸೆದಿದ್ದಾಳೆ. ವಿನೋದ್ (6) ಮೃತ ದುರ್ದೈವಿ.

child death

ಮಗುವು ಮೂಕನಾಗಿದ್ದರಿಂದ ಸಾವಿತ್ರಿ ಹಾಗೂ ರವಿಕುಮಾರ್ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ರವಿಕುಮಾರ್‌ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಎಂದು ಸಾವಿತ್ರಿಗೆ ಬೈಯ್ಯುತ್ತಿದ್ದ.

ನಿನ್ನೆ ಶನಿವಾ(ಏ.5) ರಾತ್ರಿಯೂ ಸಹ ಸಾವಿತ್ರಿ ಹಾಗೂ ಪತಿ ರವಿಕುಮಾರ್‌ ಜತೆಗೆ ಜಗಳ ನಡೆದಿದೆ. ಪತಿ ಜತೆಗೆ ಗಲಾಟೆ ಆದಾಗ ಸಾವಿತ್ರಿ ಕೋಪದಲ್ಲಿ ಮಗುವನ್ನು ಎತ್ತಿಕೊಂಡು ಹೋಗಿ ನಾಲೆಗೆ ಎಸೆದಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಗುವನ್ನು ಹುಡುಕಾಡಲು ಮುಂದಾಗಿದ್ದಾರೆ.

ಮುಂದೆ ಓದಿ..; ನಡುರಸ್ತೆಯಲ್ಲಿ ಗರ್ಭಿಣಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ದುಷ್ಕರ್ಮಿಗಳು..!

ಆದರೆ ಮಗು ಸಿಗದಿದ್ದಾಗ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹಾಲಮಡ್ಡಿಯಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ ಮೃತದೇಹವು ಪತ್ತೆಯಾಗಿದೆ. ನಾಲೆಗೆ ಎಸೆಯಲ್ಪಟ್ಟಾಗ ಮೊಸಳೆಯೊಂದು ಮಗುವಿನ ಬಲಗೈ ಕಚ್ಚಿ ಎಳೆದು ಹೋಗಿತ್ತು. ಆರು ವರ್ಷದ ಗಂಡು ಮಗುವಿಗಾಗಿ ನಿನ್ನೆ ಶನಿವಾರ ರಾತ್ರಿಯಿಂದ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.

ಭಾನುವಾರ ಬೆಳಗ್ಗೆ ಕಾರ್ಯಾಚರಣೆ ವೇಳೆ ಮಗುವಿನ ಜತೆ ಆಗಾಗ ಮೊಸಳೆಯು ಕಾಣಿಸಿಕೊಂಡಿತ್ತು. ದಾಂಡೇಲಿಯ ಗ್ರಾಮೀಣ ಠಾಣಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಮಗುವಿನ ಮೃತದೇಹ ಪತ್ತೆ ಮಾಡಲಾಗಿದೆ. ಮುಳುಗು ತಜ್ಞರು ಮೊಸಳೆಯ ಬಾಯಿಯಿಂದ ಮಗುವಿನ ಮೃತದೇಹ ಬಿಡಿಸಿಕೊಂಡು ಬಂದಿದ್ದಾರೆ.

ಇನ್ನೂ ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಅಪ್ಪ-ಅಮ್ಮನ ಜಗಳದಲ್ಲಿ ಏನು ತಿಳಿಯದ ಮಗುವೊಂದು ಪ್ರಾಣವನ್ನೇ ಕಳೆದುಕೊಂಡಿದೆ.

Continue Reading

LATEST NEWS

ನಡುರಸ್ತೆಯಲ್ಲಿ ಗರ್ಭಿಣಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ದುಷ್ಕರ್ಮಿಗಳು..!

Published

on

ಮಧ್ಯಪ್ರದೇಶ: ದರೋಡೆ ಮಾಡಲು ಬಂದವರು ನಡುರಸ್ತೆಯಲ್ಲಿ ಸೀರೆಯಿಂದ ಕತ್ತು ಹಿಸುಕಿ ಗರ್ಭಿಣಿಯ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ.

pregnant death

ಮೊದಲು ಕಾರಿನ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ, ಬಳಿಕ ಗರ್ಭಿಣಿಯನ್ನು ಆಕೆಯ ಸೀರೆಯಿಂದಲೇ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಧೋಟಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಕಾಜರವಾರದ ನಿವಾಸಿ ಶುಭಂ ಚೌಧರಿ ಅವರು ಪತ್ನಿ ರೇಷ್ಮಾ ಹಾಗೂ ಒಂದೂವರೆ ವರ್ಷದ ಪುತ್ರನೊಂದಿಗೆ ವಾಕಿಂಗ್‌ಗೆ ತೆರಳಿದ್ದರು.

ಪಟ್ಬಾಬಾದಿಂದ ಹಿಂದಿರುಗಿದ ನಂತರ, ಮದರ್ ತೆರೆಸಾ ನಗರದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಲು ಬೊಲೆರೋ ಕಾರಿನಲ್ಲಿ ಹೊರಟಿದ್ದಾಗ, ದಾರಿಯಲ್ಲಿ 3-4 ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಆಗ ಪ್ರತಿಭಟಿಸಲು ಮುಂದಾದ ಮಹಿಳೆಯನ್ನು ಹತ್ಯೆ ಮಾಡಿ ಬಳಿಕ ಆಕೆಯ ಪತಿಯನ್ನೂ ಥಳಿಸಿದ್ದಾರೆ. ಶುಭಂ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಇನ್ನು ಶೂಭಂ ತಲೆಗೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಪತ್ನಿಯ ಮಂಗಳಸೂತ್ರವನ್ನು ದೋಚಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಮಾಧೋಳ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ..; ನಾಲ್ಕು ತಿಂಗಳ ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ..! ಅಜ್ಜಿ ಮಾಡಿದ ಎಡವಟ್ಟಿಗೆ ಕೋಮಾಗೆ ಜಾರಿದ ಮಗು !!

ಶುಭಂ ಅವರ ಬೊಲೆರೋ ದುಷ್ಕರ್ಮಿಗಳಿಗೆ ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಿವಾದಗಳುಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಈ ದುರಂತ ನಡೆದಿರಬಹುದೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ರೇಷ್ಮಾ ಸಾವಿನ ಮರಣೋತ್ತರ ಪರೀಕ್ಷಾ ವರದಿ ಬಳಿಕ ಸಾವಿಗೆ ಕಾರಣ ತಿಳದು ಬರಬೇಕಿದೆ ಎಂದು ಮಧೋಳ ಠಾಣೆ ಪ್ರಭಾರಿ ವಿಪಿನ್ ತಾಮ್ರಕರ ಹೇಳಿದ್ದಾರೆ.

 

Continue Reading

LATEST NEWS

ಮತ್ತೆ ಬಂತು ಅಕ್ಷಯ ತೃತೀಯ; ಆಚರಣೆಯ ಮಹತ್ವವೇನು?

Published

on

ಮಂಗಳೂರು : ಭಾರತೀಯ ಹಿಂದೂ ಸಂಪ್ರದಾಯದಲ್ಲಿ ‘ಅಕ್ಷಯ ತೃತೀಯ’ಕ್ಕೆ ವಿಶೇಷ ಸ್ಥಾನವಿದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಮೇ 10 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀ ಆರಾಧನೆ ಈ ದಿನ ನಡೆಯುತ್ತದೆ.


ಪೌರಾಣಿಕ ಹಿನ್ನೆಲೆ :

ಅಕ್ಷಯ ತೃತೀಯ ಆಚರಣೆಯ ಹಿಂದೆ ಹಲವು ಪೌರಾಣಿಕ ಹಿನ್ನೆಲೆ ಇದೆ. ಭಗವಾನ್ ವಿಷ್ಣುವಿನ ಪರಶುರಾಮ ಅವತಾರ ಈ ದಿನವೇ ಆಗಿದ್ದು ಎಂಬ ನಂಬಿಕೆಯಿದೆ.
ಕೃಷ್ಣ ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ್ದು ಇದೇ ದಿನ ಎಂಬ ನಂಬಿಕೆ ಇದೆ. ಈ ಅಕ್ಷಯ ಪಾತ್ರೆಯಲ್ಲಿ ಆಹಾರ ಖಾಲಿಯಾಗದು ಎಂಬ ಕಥೆಯೂ ಇದೆ. ಹಾಗಾಗಿ ಅಕ್ಷಯ ತೃತೀಯದಂದೂ ದಾನ ಧರ್ಮಕ್ಕೆ, ದಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ತಾಯಿ ಅನ್ನಪೂರ್ಣೆಯ ಜನ್ಮದಿನವೂ ಅಕ್ಷಯ ತೃತೀಯಾದಂದೇ ಆಗಿದೆ ಎಂದು ಹೇಳಲಾಗಿದೆ.


ಇನ್ನು ಅಕ್ಷಯ ತೃತೀಯದಂದು ತ್ರೇತಾಯುಗ ಆರಂಭವಾಯಿತು ಎಂದೂ ಹೇಳಲಾಗಿದೆ. ಗಂಗೆಯೂ ಭೂಮಿಗಿಳಿದ ದಿನ ಎಂಬುದಾಗಿಯೂ ಹೇಳಲಾಗಿದೆ. ಭಗೀರಥ ರಾಜನು ಗಂಗಾಮಾತೆಯನ್ನು ಭೂಮಿಗೆ ಇಳಿಸಲು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿದ್ದನು. ಹಾಗಾಗಿ ಅಕ್ಷಯ ತೃತೀಯದಂದು ಗಂಗಾ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ : ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

ಮಹತ್ವವೇನು?

ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಉತ್ತಮ ಕೆಲಸಗಳನ್ನು ಮಾಡುವುದರಿಂದು ಜೀವನದಲ್ಲಿ ಏಳಿಗೆ ಕಾಣಬಹುದು ಎಂಬ ನಂಬಿಕೆಯಿದೆ. ಈ ದಿನ ದಾನ ಧರ್ಮ ಮಾಡಿದರೆ ಉತ್ತಮ ಎನ್ನಲಾಗುತ್ತದೆ. ಹಾಗಾಗಿಯೇ ಹಲವರು ದಾನ ಧರ್ಮದಲ್ಲಿ ತೊಡಗಿಕೊಳ್ಳುತ್ತಾರೆ.

ಈ ದಿನ ಹೊಸ ವಸ್ತುಗಳನ್ನು ಖರೀದಿಸುವಲ್ಲಿ ಜನ ಮುಗಿ ಬೀಳುತ್ತಾರೆ. ಅದರಲ್ಲೂ ಚಿನ್ನಕ್ಕೆ ಬಲು ಬೇಡಿಕೆಯಿದೆ. ಆಭರಣ ಮಳಿಗೆಗಳು ತುಂಬಿ ತುಳುಕುತ್ತವೆ. ಈ ದಿನ ಆಭರಣ ಖರೀದಿ ಮಾಡಿದಲ್ಲಿ ‘ಅಕ್ಷಯ’ವಾಗಲಿದೆ ಎಂಬ ನಂಬಿಕೆ ಜನರದು. ಲಕ್ಷ್ಮೀಯನ್ನು ಆರಾಧಿಸಲಾಗುತ್ತದೆ. ಆಕೆ ಒಲಿದರೆ ಸಂಪತ್ತು ವೃದ್ಧಿಯಾಗುತ್ತದೆ. ಹಾಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಈ ಬಾರಿಯ ಅಕ್ಷಯ ತೃತೀಯ ಸಮಯ :


ಅಕ್ಷಯ ತೃತೀಯ ಶುಕ್ರವಾರ, ಮೇ 10 ರಂದು ಬೆಳಗ್ಗೆ 4:17 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 11 ರಂದು 2:50 AM ಕ್ಕೆ ಕೊನೆಗೊಳ್ಳುತ್ತದೆ. ಅಕ್ಷಯ ತೃತೀಯದ ಶುಭ ಸಮಯವು ಮೇ 10 ರಂದು ಬೆಳಗ್ಗೆ 5:49 ರಿಂದ ಮಧ್ಯಾಹ್ನ 12:23 ರ ನಡುವೆ ಇರುತ್ತದೆ. ಅಕ್ಷಯ ತೃತೀಯದ ಶುಭ ಸಮಯದಲ್ಲಿ ಮಾಡುವ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ.

Continue Reading

LATEST NEWS

Trending