LATEST NEWS
ಯುವಕನ ಜೀವ ತೆಗೆಯಿತು ಮಧ್ಯರಾತ್ರಿ ಟೆರೇಸ್ ಮೇಲೆ ಗೆಳತಿ ಜೊತೆಯ ಕುಚಿಕು.!!!
ಗೆಳತಿಯನ್ನು ಭೇಟಿ ಮಾಡಲು ಆಕೆಯ ಮನೆಯ ಟೆರೇಸ್ ಏರಿದ್ದ ಯುವಕನೊಬ್ಬ ಮೇಲಿಂದ ಕೆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಸಂಭವಿಸಿದೆ.
ಸೇಲಂ : ಗೆಳತಿಯನ್ನು ಭೇಟಿ ಮಾಡಲು ಆಕೆಯ ಮನೆಯ ಟೆರೇಸ್ ಏರಿದ್ದ ಯುವಕನೊಬ್ಬ ಮೇಲಿಂದ ಕೆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಸಂಭವಿಸಿದೆ.
ಸೇಲಂನ ಚಿನ್ನ ಕೊಲ್ಲಪಟ್ಟಿ ಎಂಬ ಪ್ರದೇಶದಲ್ಲಿ ಯುವಕನ ಗೆಳತಿಯ ಮನೆ ಇತ್ತು. ಆಕೆಯನ್ನು ಭೇಟಿ ಮಾಡುವ ಉದ್ದೇಶದಿಂದ 2 ಅಂತಸ್ತಿನ ಕಟ್ಟಡವನ್ನು ಯುವಕ ಏರಿದ್ದ.
ಈ ವೇಳೆ, ಯುವತಿಯ ತಾಯಿ ತನ್ನನ್ನು ಗುರುತಿಸಬಹುದು, ಆಕೆ ನನ್ನನ್ನು ಹಿಡಿಯಬಹುದು ಎಂಬ ಭಯದಿಂದ ಕಟ್ಟಡದಿಂದ ಕೆಳಗೆ ಹಾರಿದ್ದಾನೆ.
ಯುವಕನ ಈ ಹುಚ್ಚಾಟ ಮಾರಣಾಂತಿಕವಾಗಿ ಪರಿಣಮಿಸಿದೆ.ಮೃತ ಯುವಕನನ್ನು ಎಸ್ ಸಂಜಯ್ ಎಂದು ಗುರ್ತಿಸಲಾಗಿದೆ.
ಈತ ಮೂಲತಃ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾಮರಾಜ ನಗರದ ನಿವಾಸಿ. ಸೇಲಂನ ಚಿನ್ನ ಕೊಲ್ಲಪಟ್ಟಿಯಲ್ಲಿ ಇರುವ ಕೇಂದ್ರೀಯ ಕಾನೂನು ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ.
ತನ್ನ ಸಹಪಾಠಿಗಳ ಜೊತೆಗೆ ಇದೇ ಪ್ರದೇಶದಲ್ಲಿ ಒಂದು ರೂಂ ಬಾಡಿಗೆಗೆ ಪಡೆದುಕೊಂಡಿದ್ದ.ತನ್ನ ಕಾಲೇಜಿನ ಸಹಪಾಠಿಯಾಗಿದ್ದ ಯುವತಿಯನ್ನು ಸಂಜಯ್ ಪ್ರೀತಿಸುತ್ತಿದ್ದ.
ಆಕೆಯನ್ನು ಶಾಲಾ ದಿನಗಳಿಂದಲೂ ಸಂಜಯ್ ಪ್ರೀತಿಸುತ್ತಿದ್ದ. ತನ್ನ ತಾಯಿ, ಅಕ್ಕನ ಜೊತೆಗೆ ಯುವತಿಯು ಇದೇ ಪ್ರದೇಶದಲ್ಲಿ ವಾಸವಿದ್ದಳು. ಆಕೆಯನ್ನು ನೋಡುವ ಸಲುವಾಗಿ ಮನೆಯ ಬಳಿ ಬಂದಿದ್ದ ಯುವಕ ಸಾವನ್ನಪ್ಪಿದ್ದಾನೆ ಎಂದು ಸೇಲಂನ ಕಣ್ಣಕುರಿಚಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.
ಸುಮಾರು 6 ರಿಂದ 8 ಕುಟುಂಬಗಳು ವಾಸ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಯುವತಿ ತನ್ನ ತಾಯಿಯ ಜೊತೆ ಇದ್ದಳು.
ಆಕೆಯನ್ನು ನೋಡುವ ಸಲುವಾಗಿ ಶನಿವಾರ ಬೆಳಗಿನ ಜಾವ 1 ಗಂಟೆಗೆ ಯುವಕ ಸಂಜಯ್ ಕಟ್ಟಡ ಪ್ರವೇಶಿಸಿದ್ದ. ಕಟ್ಟಡದ ಕಾಂಪೌಂಡ್ ದಾಟಿ ಮೆಟ್ಟಿಲುಗಳ ಸಹಾಯದಿಂದ ಟೆರೇಸ್ ಪ್ರವೇಶಿಸಿದ್ದ.
ತನ್ನ ಗೆಳತಿಯನ್ನು ಸಂಜಯ್ ಇದೇ ರೀತಿ ಹಲವು ಬಾರಿ ಭೇಟಿ ಮಾಡಿದ್ದ. ಇದು ಇಬ್ಬರಿಗೂ ಮಾಮೂಲಾಗಿತ್ತು.
ಆದ್ರೆ ಶನಿವಾರ ಮಾತ್ರ ಪರಿಸ್ಥಿತಿ ಕೈಕೊಟ್ಟಿತ್ತು. ಯುವತಿಯ ತಾಯಿ ಮಗಳನ್ನು ಹುಡುಕಿಕೊಂಡು ಟೆರೇಸ್‌ಗೆ ಬಂದು ಬಿಟ್ಟರು.
ಯುವತಿಯ ತಾಯಿಯನ್ನು ಕಂಡ ಕೂಡಲೇ ಗಾಬರಿಯಾದ ಯುವಕ ಸಂಜಯ್, ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ನಿರ್ಧರಿಸಿ ಏಕಾಏಕಿ ಟೆರೇಸ್‌ನಿಂದ ಹಾರಿ ಬಿಟ್ಟ.
ಆದ್ರೆ, ಕೆಳಗೆ ಬಿದ್ದ ಸಂಜಯ್ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ.. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
LATEST NEWS
ಬೋರ್ ವೆಲ್ ನಲ್ಲಿ ಸುರಿದ ಹಾಲು – ಪಾತ್ರೆ ಹಿಡಿದು ಓಡೋಡಿ ಬಂದ ಜನ..!
ಉತ್ತರ ಪ್ರದೇಶ: ಸಾಮನ್ಯವಾಗಿ ಬೋರ್ ವೆಲ್ ನಲ್ಲಿ ನೀರು ಬರುವದನ್ನು ನೋಡಿದ್ದೇವೆ ಆದರೆ ಇಲ್ಲೊಂದು ಕಡೆ ಹಾಲಿನ ಬಣ್ಣದ ನೀರು ಸುರಿದ ವಿಸ್ಮಯ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.
ಇಲ್ಲಿನ ಸಾರ್ವಜನಿಕ ಸ್ಥಳವೊಂದರಲ್ಲಿರುವ ಬೋರ್ ವೆಲ್ ನಲ್ಲಿ ನೀರಿನ ಬದಲು ಬಿಳಿ ಬಣ್ಣ ಇರುವ ನೀರು ಸುರಿದಿದೆ. ಇದನ್ನು ಕಂಡ ಸ್ಥಳಿಯರಿಗೆ ಅಚ್ಚರಿಯ ಪ್ರಶ್ನೆ ಮೂಡಿದೆ. ಅಲ್ಲದೆ ಇದೀಗ ಇದರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಸ್ಥಳಕ್ಕೆ ಸಾಕಷ್ಟು ಜನ ಬಂದು ಸೇರಿದ್ದಾರೆ.
ಇದನ್ನು ಕಂಡ ಜನರು ಇದು ನೀರಲ್ಲ ಹಾಲು ಎಂದು ಪಾತ್ರ , ಬಾಟಲಿ ಹಾಗೂ ಕೈಗೆ ಸಿಕ್ಕಿದ ಪಾತ್ರವನ್ನು ಹಿಡಿದು ಓಡಾಡಿಕೊಂಡು ಬಂದು ಸರತಿ ಸಾಲಿನಲ್ಲಿ ನಿಂತು ತಮ್ಮ ಪಾತ್ರೆಗಳಿಗೆ ತುಮಬಿಸಿ ಮನೆಗೆ ಕೊಂಡೊಯ್ಯುತ್ತಿದ್ದರು. ಈ ವಿಚಾರ ತಿಳಿದ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದು ಹಾಲಲ್ಲ ಇದು ಕಲುಷಿತ ನೀರು ಎಂದು ಸ್ಪಷ್ಟನೆ ನೀಡಿದ್ದಾರೆ. ಬೋರ್ ವೆಲ್ ನಲ್ಲಿರುವ ಹ್ಯಾಂಡ್ ಪಂಪ್ ನ ಕೆಳಭಾಗ ಹಾನಿಗೊಳಗಾದ ಕಾರಣ ಇದರಲ್ಲಿ ಹಾಲಿನ ಬಣ್ಣದ ಕಲುಷಿತ ನೀರು ಸೊರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದು ವರದಿಯಾಗಿದೆ.
जैसे हर चमकती चीज सोना नहीं होती, वैसे सफ़ेद रंग केवल दूध का ही नहीं होता। मगर लोगों को कैसे समझाया जाए? मुरादाबाद की बिलारी तहसील में सरकारी हैंड पंप से सफेद पानी को लोगो ने दूध मान कर न केवल पिया बल्कि भर-भरकर साथ भी ले गए। pic.twitter.com/CSUPdezWNV
— SANJAY TRIPATHI (@sanjayjourno) November 27, 2023
DAKSHINA KANNADA
ನ.30ರಂದು ಶ್ರೀ ಆದಿ ಕ್ಷೇತ್ರ ಜಾರದಲ್ಲಿ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ
ಮಂಗಳೂರು: ಧಾರ್ಮಿಕ ಕ್ಷೇತ್ರ ಜಾರದಲ್ಲಿ ನ. 30ರಂದು ಬೆಳಿಗ್ಗೆ 8 ಗಂಟೆಯಿಂದ ಜಾರಂದಾಯ ಬಂಟ ಪರಿವಾರ ಸಾನಿಧ್ಯ ಮತ್ತು ಕ್ಷೇತ್ರ ಕಲ್ಲುರ್ಟಿ ಸಾನಿಧ್ಯಗಳ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಲಿದೆ ಎಂದು ದೈವಜ್ಞ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಖ್ಯಾತ ವಾಸ್ತು ತಜ್ಞಮಹೇಶ್ ಮುನಿಯಂಗಳ ಇವರ ವಾಸ್ತು ವಿನ್ಯಾಸದೊಂದಿಗೆ ಸುಮಾರು 12 ರಿಂದ 15 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಕ್ಷೇತ್ರ ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಈಗಾಗಲೇ ನವೆಂಬರ್ 11ರಂದು ಜಾರಚಾವಡಿಯಲ್ಲಿ ಪ್ರಧಾನ ದೈವ ಜಾರಂದಾಯ ಬಂಟ ಮಾಯಾಂದಾಲ್ ದೈವಗಳ ನೇಮೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿದೆ. ನವೆಂಬರ್ 30ರಂದು
ಬೆಳಿಗ್ಗೆ 9.00 ಗಂಟೆಗೆ ಸರಳ ಜುಮಾದಿ ಬಂಟ ಹಾಗೂ ಪರಿವಾರ ದೈವಗಳಿಗೆ ಹಾಗೂ 11.00 ಗಂಟೆಗೆ ಶ್ರೀ ಜಾರ ಆದಿ ಕ್ಷೇತ್ರದ ಗಿರಿಯಲ್ಲಿ ಗ್ರಾಮ ದೈವ ಶ್ರೀ ಬಂಟ ಸರಳ ಜುಮಾದಿ ಬಂಟ ಮತ್ತು ಪರಿವಾರ ದೈವಗಳಿಗೆ ನಿಧಿ ಕುಂಬ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ತನು ಮನ ಧನಗಳಿಂದ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಬಳಿಕ ಮಾತಾಡಿದ ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯ ಅವರು, “ಶ್ರೀ ಆದಿ ಕ್ಷೇತ್ರ ಜಾರ ಇದು ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾನಿಧ್ಯ ಪ್ರಧಾನ ದೈವಗಳಾಗಿ ಶ್ರೀ ಉಳ್ಳಾಯ, ಶ್ರೀ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ, ಕಾಂತೇರಿ ಧೂಮಾವತಿ ಬಂಟ, ಮಾಯಾಂದಾಲ್ ದೈವ, ಪಿಲಿ ಚಾಮುಂಡಿ, ಬಬ್ಬರ್ಯ ದೈವಗಳು ಕ್ಷೇತ್ರ ಹಾಗೂ ಗ್ರಾಮದ ಮಾಗಣೆಯ ದೈವಗಳಾಗಿವೆ. ಕ್ಷೇತ್ರದ ಆದಿ ದೈವಗಳಾಗಿ ಕಲ್ಲುರ್ಟಿ, ಪಟ್ಟದ ಅಣ್ಣಪ್ಪ ಸ್ವಾಮಿ, ಸ್ಥಳದ ಪಂಜುರ್ಲಿ, ನಾಗಬ್ರಹ್ಮ ಪ್ರಧಾನ ಸಾನಿಧ್ಯಗಳಾಗಿವೆ” ಎಂದರು. ಸುದ್ದಿಗೋಷ್ಠಿಯಲ್ಲಿ ದೈವಜ್ಞ ಶ್ರೀ ಪ್ರಕಾಶ ವಿ. ಹೊಳ್ಳ ಶಕ್ತಿನಗರ, ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ , ಕ್ಷೇತ್ರದ ಗಡಿ ಪ್ರಧಾನರಾದ ಜತ್ತಿ ಪೂಜಾರಿ ಜಾರ, ಅಧ್ಯಕ್ಷರಾದ ಉದಯಶಂಕರ ಜಾರಮನೆ, ಕಾರ್ಯದರ್ಶಿ ಎಂ. ವಿಠಲ್ ಪೂಜಾರಿ ಕುಕ್ಕುದಡಿ, ಕೋಶಾಧಿಕಾರಿ ಜೀವನ್ ದಾಸ್ ಜಾರ ಮತ್ತಿತರರು ಉಪಸ್ಥಿತರಿದ್ದರು.
FILM
ಖಡಕ್ ಪೊಲೀಸ್ ಅಧಿಕಾರಿಯಾದ ರೂಪೇಶ್ ಶೆಟ್ಟಿ
ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 9ರ ರೂಪೇಶ್ ಶೆಟ್ಟಿ ‘ಅಧಿಪತ್ರ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿನ ರೂಪೇಶ್ ಲುಕ್ ಇದೀಗ ರಿವೀಲ್ ಆಗಿದೆ.
ಚಹನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಅಧಿಪತ್ರ ಚಿತ್ರದಲ್ಲಿ ಹೀರೋ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ಜಾಹ್ನವಿ ನಟಿಸುತ್ತಿದ್ದಾರೆ. ಬೃಹತಿ ಎಂಬ ಪಾತ್ರಕ್ಕೆ ಗಿಚ್ಚಿ ಗಿಲಿ ಗಿಲಿ ನಟಿ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
‘ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೂಲಿಂಗ್ ಗ್ಲಾಸ್ ಧರಿಸಿ ಬೈಕ್ ಮೇಲೆ ಕುಳಿತು ಖಡಕ್ ಆಗಿ ಕ್ಯಾಮೆರಾ ಕಣ್ಣಿಗೆ ರೂಪೇಶ್ ಪೋಸ್ ನೀಡಿದ್ದಾರೆ.
- FILM6 days ago
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ‘ಕತ್ತೆ’ ಎಂದ ಕಿಚ್ಚ ಸುದೀಪ
- DAKSHINA KANNADA7 days ago
ಅಡ್ಡೂರು ಹೊಳೆಗೆ ಹಾರಿ ನಾಪತ್ತೆಯಾದ ಪ್ರಶಾಂತ್ – ಪತ್ತೆಗಾಗಿ ಶೋಧ ಕಾರ್ಯ
- bengaluru5 days ago
ಇನ್ಸ್ಟಾಗ್ರಾಂನಲ್ಲಿ 11 ಸಾವಿರ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಸಂಗೀತಾ
- DAKSHINA KANNADA5 days ago
Breaking news :ಮಂಗಳೂರಿನ ಹೊಟೇಲ್ ರೂಂನಲ್ಲಿ ಬೆಂಕಿ-ಒಳಗಿದ್ದ ವ್ಯಕ್ತಿ ಸಾವು