Connect with us

    DAKSHINA KANNADA

    ಕೊರಗಜ್ಜನ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧಿಸಬಹುದಾ?

    Published

    on

    ಇತ್ತೀಚಿನ ದಿನಗಳಲ್ಲಿ ತುಳುನಾಡಿನ ದೈವಾರಾಧನೆ ವಿಶ್ವ ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಿದ್ದು, ಸಾವಿರಾರು ಜನ ತುಳುನಾಡ ದೈವಗಳನ್ನು ನಂಬಲು ಆರಂಭಿಸಿದ್ದಾರೆ. ಆದ್ರೆ ದೈವಗಳನ್ನು ನಂಬುವ ಬಗೆ ಹೇಗೆ ಅನ್ನೋದು ಗೊತ್ತಿಲ್ಲದೆ ಇದ್ರೂ ಭಕ್ತಿಯಿಂದ ಕೈ ಮುಗಿದವರನ್ನು ದೈವಗಳು ಎಂದಿಗೂ ಕೈ ಬಿಟ್ಟಿಲ್ಲ. ಹೀಗಾಗಿ ಸೆಲೆಬ್ರೆಟಿಗಳೂ ಸೇರಿದಂತೆ ಪ್ರತಿನಿತ್ಯ ಹಲವಾರು ಜನ ದೈವ ಸಾನಿಧ್ಯಕ್ಕೆ ಬಂದು ಭಕ್ತಿಯಿಂದ ಕೈ ಮುಗಿಯುತ್ತಿದ್ದಾರೆ. ಅದರಲ್ಲೂ ಕುತ್ತಾರು ಕೊರಗಜ್ಜನ ಕ್ಷೇತ್ರವಂತೂ ನಿತ್ಯ ಹೊರ ಜಿಲ್ಲೆಯ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ.

    ದೈವಾರಾಧನೆಯೇ ಪ್ರಮುಖವಾಗಿರುವ ತುಳುನಾಡಿನಲ್ಲಿ ಜನ ದೇವರಿಗಿಂತ ಹೆಚ್ಚು ಭಯ ಪಡೋದು ದೈವಗಳಿಗೆ. ಪ್ರಕೃತಿಯ ಆರಾಧನೆಯ ಮೂಲಕ ಇಲ್ಲಿನ ನೆಲ, ಜಲ, ಹಾಗೂ ಪರಿಸರ ಎಲ್ಲದರಲ್ಲೂ ದೈವಗಳನ್ನು ಕಾಣುವ ಸಂಸ್ಕೃತಿ ತುಳುನಾಡಿನದ್ದು. ಸಾವಿರದ ಎರಡು ದೈವಗಳು ಇಲ್ಲಿ ಆರಾಧಿಸಲ್ಪಡುತ್ತದೆ ಅನ್ನೋದು ಇತ್ತೀಚಿನ ವರೆಗೆ ಸಂಶೋಧಕರು ಕಂಡು ಕೊಂಡಿರೋ ಸತ್ಯ ಕೂಡ.

    ಕೊರಗಜ್ಜ ಯಾರು ಏನು ಅನ್ನೋದು ಇಲ್ಲಿ ಮುಖ್ಯವಾಗದೇ ಇದ್ರೂ ಕೊರಗಜ್ಜ ಸಮಸ್ಯೆಗಳಿಗೆ ಪರಿಹಾರ ನೀಡ್ತಾನೆ ಅನ್ನೋದು ನಂಬಿ ಬರುವ ಭಕ್ತರಿಗೆ ಇರುವ ಆಶಾಕಿರಣ. ಯಾವುದೇ ಮದ್ಯವರ್ತಿ ಇಲ್ಲದೆ ತಾವೇ ಕೊರಗಜ್ಜನಿಗೆ ಪೂಜೆ ಸಲ್ಲಿಸಿ ಅವರಿಗೆ ಇಷ್ಟವಾದುದನ್ನು ಕೊಟ್ಟು ಕೈ ಮುಗಿದು ಬೇಡಲು ಇಲ್ಲಿ ಅವಕಾಶ ಇದೆ. ಕೊರಗಜ್ಜನಿಗೆ ಮೇಲು ಕೀಳೆಂಬ ಭೇದ-ಭಾವ ಇಲ್ಲ. ಇನ್ನು ಕೊರಗಜ್ಜ ಶ್ರೀಮಂತನಿಂದಲೂ ಬಡವನಿಂದಲೂ ಕೇಳೋದು ಎಲೆ ಅಡಿಕೆ , ಚಕ್ಕುಲಿ, ಹಾಗೂ ಒಂದು ಸ್ವಲ್ಪ ಮದ್ಯ ಅಷ್ಟೇ…

    ಕೇವಲ ಎಲೆ-ಅಡಿಕೆಗೆ ನಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹಾರ ಮಾಡೊ ದೈವ ಎಂದರೆ ಸ್ವಾಮಿ ಕೊರಗಜ್ಜ. ಅಜ್ಜನನ್ನು ಆರಾಧಿಸಬೇಕೆಂದರೆ ದೊಡ್ಡ ದೊಡ್ಡ ದೈವ ಸ್ಥಾನಗಳೇ ಬೇಕೆಂದಿಲ್ಲ. ಕೇವಲ ಮನಸಿನಲ್ಲೇ ಸ್ವಾಮಿ ಕೊರಗಜ್ಜ ಅಂತ ಕಷ್ಟದ ಸಮಯದಲ್ಲಿ ನೆನೆಸಿದ್ರೆ ಸಾಕು ಅದ್ಯಾವುದೋ ರೂಪದಲ್ಲಿ ಬಂದು ಕಷ್ಟ ಪರಿಹಾರ ಮಾಡ್ತಾರೆ ಅನ್ನೋ ನಂಬಿಕೆ ತುಳುನಾಡಿನ ಜನರಲ್ಲಿ ಇದೆ. ಇನ್ನು ಕೊರಗಜ್ಜನ ಹಲವು ಕ್ಷೇತ್ರಗಳು ತುಳುನಾಡಿನಲ್ಲಿದ್ದು ಅಲ್ಲಿಗೆ ಎಲೆ ಅಡಿಕೆ, ಚಕ್ಕುಲಿ, ಮದ್ಯದ ಹರಕೆ ಹೇಳಿಕೊಂಡ್ರೆ ಮುಗಿತು.

    ಇನ್ನು ಕೊರಗಜ್ಜನಿಗೆ ಅಗೇಲು ನೀಡುವ ಸಂಪ್ರದಾಯವಿದ್ದು ಅಲ್ಲಿ ಕೊರಗಜ್ಜನಿಗೆ ಕೋಡೊದು ಅನ್ನ, ಬಸಳೆಯ ಸಾರು, ಮೀನಿನ ಪದಾರ್ಥ, ಕೋಳಿಯ ಪದಾರ್ಥ, ಬೇಯಿಸಿದ ಮೊಟ್ಟೆ, ನಿಂಬೆ ಹಣ್ಣಿನ ಉಪ್ಪಿನಕಾಯಿ ಹಾಗೂ ಮದ್ಯ ಮಾತ್ರ. ಇದಿಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವ ಕೊರಗಜ್ಜ “ಅಜ್ಜಾ ಕಾಪುಲೆ ನಮನ್.. ಈರೆಗ್ ಬಾಜೆಲ್ ಕೊರ್ಪೆ” ಅಂತ ಹೇಳಿದರೆ ಸಾಕು ಕ್ಷಣ ಮಾತ್ರದಲ್ಲಿ ಭಕ್ತರ ಇಚ್ಛೆಯನ್ನು ನೆರವೇರಿಸುತ್ತಾನೆ.

    ನೀವು ಕೊರಗಜ್ಜನ ಫೋಟೊವನ್ನು ಮನೆಯಲ್ಲಿ ಇಡಬಹುದಾ.. ಎಂದು ನೋಡುವುದಾದರೆ ಅಜ್ಜನ ಫೋಟೋ ಮಾತ್ರವಲ್ಲ ಯಾವ ದೈವಗಳ ಫೋಟೋವನ್ನೂ ಮನೆಯಲ್ಲಿ ಇಟ್ಟು ಆರಾಧನೆ ಮಾಡುವ ಪದ್ಧತಿ ಅಷ್ಟು ಬಳಕೆಯಲ್ಲಿಲ್ಲ. ಫೋಟೋ ಇಟ್ಟು ಆರಾಧನೆ ಮಾಡಬೇಕೆಂದು ಎಲ್ಲೂ ಹೇಳಿಲ್ಲ. ತಿನ್ನುವಂತಹ ಆಹಾರದಲ್ಲಿ, ನಾವು ನೋಡುವಂತಹ ನೋಟದಲ್ಲಿ, ನಾವು ಮಾಡುವ ಒಳ್ಳೆಯ ಕೆಲಸದಲ್ಲಿ, ಅಜ್ಜನ ಪ್ರಸಾದದಲ್ಲಿ ಅಜ್ಜ ಇರುತ್ತಾನೆ. ಹೀಗಾಗಿ ಅಜ್ಜನ ಫೋಟೋ ಇಟ್ಟು ಪೂಜಿಸುವ ಕ್ರಮ ಇಲ್ಲ. ಪವಿತ್ರವಾದ ಹೃದಯದಲ್ಲಿ ನಾವು ಯಾವ ದೈವವನ್ನು ನಂಬುತ್ತೇವೊ ಆ ದೈವಕ್ಕೆ ನೆಲೆ ಕೊಟ್ಟರೆ ನಾವು ಎಲ್ಲಿ ನಿಂತು ಕೈ ಮುಗಿದರೂ ಕೂಡ ಕೊರಗಜ್ಜ ಆಗಲಿ ಅಥವಾ ಇನ್ನು ಯಾವೂದೇ ದೈವವಾಗಲಿ ಅಲ್ಲಿ ಬಂದು ನಮ್ಮನ್ನು ಕಾಪಾಡಿಯೇ ಕಾಪಾಡುತ್ತಾರೆ.

    DAKSHINA KANNADA

    ದತ್ತಿ ಇಲಾಖೆ ದೇವಸ್ಥಾನದಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ..!

    Published

    on

    ಮಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕದ ದತ್ತಿ ಇಲಾಖೆ ಫುಲ್ ಅರ್ಲರ್ಟ್‌ ಆಗಿದೆ. ಕರ್ನಾಟಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.

    ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ದತ್ತಿ ಇಲಾಖೆ ದೇವಸ್ಥಾನದ ಸೇವೆಗಳಿಗೆ , ದೀಪಗಳಿಗೆ, ಪ್ರಸಾದ ತಯಾರಿಗೆ ಮತ್ತು ಅನ್ನಛತ್ರದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚಿಸಿದೆ.

    ತಿರುಪತಿ ದೇವಾಲಯದ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪವೇ ರವಾನೆ ಆಗುತ್ತಿದೆ. ಆದ್ರೆ ಜಗನ್‌ ರೆಡ್ಡಿಯ ಸರ್ಕಾರದ ನಾಲ್ಕು ವರ್ಷ ನಂದಿನಿ ತುಪ್ಪ ತಿರುಪತಿಗೆ ಪೂರೈಕೆ ಮಾಡಿರಲಿಲ್ಲ. ಹೀಗಾಗಿ ತಿರುಪತಿ ಲಡ್ಡುವಿಗೆ ಬಳಕೆ ಮಾಡಿದ ತುಪ್ಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಭಂಧ ಇಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಹೇಳಿದ್ದಾರೆ.

    Continue Reading

    BELTHANGADY

    ಬೆಳ್ತಂಗಡಿ : ನೇಣು ಬಿಗಿದು ದಂಪತಿ ಆತ್ಮ*ಹತ್ಯೆ

    Published

    on

    ಬೆಳ್ತಂಗಡಿ : ದಂಪತಿ ನೇ*ಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಾಶಿಪಟ್ನ ಗ್ರಾಮದ ಉರ್ದು ಗುಡ್ಡೆಯಲ್ಲಿ ನಡೆದಿದೆ. ಉರ್ದುಗುಡ್ಡೆ ನಿವಾಸಿಗಳಾದ ನೋಣಯ್ಯ ಪೂಜಾರಿ (63) ಹಾಗೂ ಬೇಬಿ (46) ಆತ್ಮ*ಹತ್ಯೆ ಮಾಡಿಕೊಂಡವರು.


    ಮನೆ ಸಮೀಪ ಇರುವ ಕಾಡಿನಲ್ಲಿ ದಂಪತಿ ನೇ*ಣಿಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳಿಂದ ನೋಣಯ್ಯ ಪೂಜಾರಿ ತಲೆ ನೋವಿನಿಂದ ಬಳಲುತ್ತಿದ್ದು, ಬೇಬಿ ಅವರಿಗೆ ಮಕ್ಕಳಿಲ್ಲದ ಕೊರಗು ಇತ್ತು ಎಂದು ತಿಳಿದು ಬಂದಿದೆ.
    ನೋಣಯ್ಯ ಪೂಜಾರಿಯವರಿಗೆ ಇದು ಎರಡನೇ ವಿವಾಹವಾಗಿದ್ದು , ಮೊದಲ ಪತ್ನಿ 10 ವರ್ಷದ ಹಿಂದೆಯೇ ಸಾವನ್ನಪ್ಪಿದ್ದು, ಮೊದಲ ಪತ್ನಿಗೆ 5 ಜನ ಗಂಡು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ. ಆತ್ಮ*ಹತ್ಯೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಉದ್ಯಮಿ ಮನೆ ದರೋಡೆ ಪ್ರಕರಣ; ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಸೇರಿ ಮೂವರ ಬಂಧನ

    Published

    on

    ಮಂಗಳೂರು : ಉದ್ಯಮಿ ಐಕಳ ಹರೀಶ್‌ ಶೆಟ್ಟಿ ಅವರ ಮನೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿದ್ದಕಟ್ಟೆ ನಿವಾಸಿ ಹುಸೈನಬ್ಬ ಯಾನೆ ಸುಹೈಲ್ , ಕೊಲ್ನಾಡು ನಿವಾಸಿ ಝುಬೈರ್‌ ಹಾಗೂ ಕಾಸರಗೋಡು ನಿವಾಸಿ ಕಲಾಮ್‌  ಬಂಧಿತರು.  ಈ ಪೈಕಿ ಸುಹೈಲ್ ಹಾಗೂ ಝುಬೈರ್‌ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಕಲಾಮ್‌ ಆರೋಪಿಗಳು ತಲೆ ಮರೆಸಿಕೊಳ್ಳಲು ನಕಲಿ ಪಾಸ್‌ ಪೋರ್ಟ್‌ ಮಾಡಿಸಿಕೊಟ್ಟ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

    ಬಂಧಿತರಿಂದ ನಕಲಿ ಪಾಸ್‌ ಪೋರ್ಟ್‌, ಮೊಬೈಲ್‌ ಫೋನ್‌, ಪಿಸ್ತೂಲು, ಸಜೀವ ಮದ್ದುಗುಂಡುಗಳು, ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು 2023ರಲ್ಲಿ ಉದ್ಯಮಿ ಹರೀಶ್‌ ಶೆಟ್ಟಿ ಐಕಳ ಅವರ ಮನೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಕಾಸರಗೋಡು ನಿವಾಸಿ ಕಲಾಮ್‌ನ ಸಹಕಾರದಲ್ಲಿ ನಕಲಿ ಪಾಸ್‌ ಪೋರ್ಟ್‌ ಮಾಡಿಸಿಕೊಂಡು  ವಿದೇಶಕ್ಕೆ ತೆರಳಿ ಅಲ್ಲಿ ತಲೆ ಮರೆಸಿಕೊಂಡಿದ್ದರು. ಇತ್ತೀಚೆಗೆ ಊರಿಗೆ ಬಂದಿದ್ದ ಆರೋಪಿಗಳು ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಲ್ನಾಡು ಕೋರ್ದಬ್ಬು ದೈವಸ್ಥಾನ ಬಳಿ ಮುಲ್ಕಿ ಸುಂದರರಾಮ ಶೆಟ್ಟಿ ಸಭಾಭವನದ ಬಳಿ ಇರುವುದನ್ನು ಖಚಿತ ಪಡಿಸಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಇದನ್ನೂ ಓದಿ : ಕಿನ್ನಿಗೋಳಿ : ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿಗಳು

    ಈಗಾಗಲೇ ಮುಲ್ಕಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬುಧವಾರ ಸಿಸಿಬಿ ಪೊಲೀಸರು ಮತ್ತಿಬ್ಬರನ್ನು ಬಂದಿಸಿದ್ದು, ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 5ಕ್ಕೇರಿದೆ.

    Continue Reading

    LATEST NEWS

    Trending