Saturday, July 2, 2022

ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಮೇಳ: ನವೆಂಬರ್ 27ರಿಂದ ಈ ವರ್ಷದ ತಿರುಗಾಟ ಆರಂಭ

ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಮೇಳ: ನವೆಂಬರ್ 27ರಿಂದ ಈ ವರ್ಷದ ತಿರುಗಾಟ ಆರಂಭ:

ಮಂಗಳೂರು: ಪಾವಂಜೆಯ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ ನವಂಬರ್ 27ರ ಶುಕ್ರವಾರ ಸೇವೆ ಬಯಲಾಟದೊಂದಿಗೆ ಪ್ರಾರಂಭವಾಗಲಿದೆ ಎಂದು ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಆಡಳಿತ ಮೊಕ್ತೇಸರ ಎಂ ಶಶೀಂದ್ರ ಕುಮಾರ್ ಹೇಳಿದರು.


ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನವಂಬರ್ 27 ರಂದು ವಿವಿಧ ಕಾರ್ಯಕ್ರಮಗಳ ಮೂಲಕ ನೂತನ ಮೇಳದ ಯಾನಾರಂಭಗೊಳ್ಳಲಿದೆ.

ಸಂಜೆ 6 ರಿಂದ ರಾತ್ರಿ 11 ರ ವರೆಗೆ ಕಾಲ ಮಿತಿಯಲ್ಲಿ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.ಮೇಳದ ಸಂಚಾಲಕ ಪ್ರಧಾನ  ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಸರಕಾರದ ಕೊವಿಡ್ ನಿಯಮಗಳಿಗನುಸಾರವಾಗಿ ಬಯಲು ರಂಗ ಭೂಮಿಯಲ್ಲಿ ಹೆಚ್ಚು ಆಟಗಳು ನಡೆಯಲಿವೆ. ಆಟಕ್ಕೆ ಪ್ರಯಾಣ ಸಹಿತ ಖರ್ಚು ವೆಚ್ಚಗಳು ಸೇರಿ  50 ಸಾವಿರ ರೂ ವೀಳ್ಯ ನಿಗಧಿಪಡಿಸಲಾಗಿದೆ.

ಉತ್ತಮ ನುರಿತ ಯುವ ಕಲಾವಿದರನ್ನು ಆರಿಸಲಾಗಿದ್ದು ಅವರಿಗೆ ಪಿಎಫ್, ಕಲಾವಿದರ ಕುಟುಂಬವನ್ನೂ ಸೇರಿಸಿ ಆರೋಗ್ಯ ವಿಮೆ ಮುಂತಾದ ಸವಲತ್ತು ನೀಡಲಾಗುವುದು. ಆರು ತಿಂಗಳ ಪ್ರದರ್ಶನದಲ್ಲಿ ಮೇ 25 ರ ವರೆಗೆ ಈಗಾಗಲೇ 150 ಪ್ರದರ್ಶನ ಬುಕ್ಕಿಂಗ್ ಹಾಗೂ ಉಳಿದ ಪ್ರದರ್ಶನಕ್ಕೆ ದೇವಳದ ಭಕ್ತರು ಅವಕಾಶ ಕೋರಿದ್ದು ಪತ್ತನಾಜೆಯವರೆಗೆ ಮೇಳಗಳ ಬುಕ್ಕಿಂಗ್ ಆಗಿರುತ್ತದೆ. ದ.ಕ., ಉಡುಪಿ, ಚಿಕ್ಕಮಗಳೂರು, ಕಾಸರಗೋಡು ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರದರ್ಶನ ಜರಗಲಿದ್ದು, ಮಳೆಗಾಲದ ಅವಧಿಯಲ್ಲಿ ಭಕ್ತರ ಅಪೇಕ್ಷೆಗೆ ಅನುಗುಣವಾಗಿ ದೇವಳದಲ್ಲಿ ಪ್ರದರ್ಶನ ಮುಂದುವರಿಯಲಿದೆ ಎಂದರು.

ವಾಗಿದ್ದು ಶ್ರೀ ಕ್ಷೇತ್ರದ ಯಕ್ಷಗಾನ ಮಂಡಳಿಯು ವಿವಿಧ ಪ್ರಸಂಗಗಳ ಮೂಲಕ ಜ್ಞಾನ ಪ್ರಸಾರ ಗೈಯಲಿದೆ ಮಧ್ಯಾಹ್ನ 1ರಿಂದ ತೆಂಕು ಬಡಗಿನ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನಾರಾಧನೆ ನಡೆಯಲಿದ್ದು, ಬಲಿಪ ಪ್ರಸಾದ್ ಭಟ್, ಜನ್ಸಾಲೆ ರಾಘವೇಂದ್ರ ರಾವ್, ರವಿಚಂದ್ರ ಕನ್ನಡಿಕಟ್ಟೆ ಸತ್ಯನಾರಾಯಣ ಪುಣಿಂಚಿತ್ತಾಯ ಮತ್ತಿತರ ಕಲಾವಿದರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ದೇವಳದಿಂದ ಯಕ್ಷಗಾನದ ಚೌಕಿಗೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಯ ಭವ್ಯ ಮೆರವಣಿಗೆ ಮತ್ತು ದಾನಿಗಳು ಕೊಡುಗೆಯಾಗಿ ನೀಡಿದ ದೇವರ ಬೆಳ್ಳಿಯ ಪ್ರಭಾವಳಿ, ಶ್ರೀ ದೇವಿಯ ಉಯ್ಯಾಲೆ, ಕಿರೀಟ, ಚಕ್ರ, ಗದೆ ಹಾಗೂ ಇನ್ನಿತರ ಸುವಸ್ತುಗಳು ದೇವರಿಗೆ ಸಮರ್ಪಣೆಯಾಗಲಿದೆ.

ಸಂಜೆ ೪ ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದು ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ವೇದ ಕೃಷಿಕ ಕೆ ಎಸ್ ನಿತ್ಯಾನಂದ ಶುಭಾಶಂಸನೆಗ್ಯೆಯಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಡಾ. ವೈ. ಭರತ್ ಶೆಟ್ಟಿ, ಮಾಜಿ ಸಚಿವ ಕೆ. ಅಭಯಚಂದ್ರ ಜ್ಯೆನ್, ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಡಾ.ಎಂ ಮೋಹನ್ ಆಳ್ವ, ಅಜಿತ್ ಕುಮಾರ್ ರ‍್ಯೆ ಮಾಲಾಡಿ, ಕೆ ಡಿ ಶೆಟ್ಟಿ ಯುಎಸ್ ಎ ನ್ಯೂಜೆರ್ಸಿ ಪುತ್ತಿಗೆ ಮಠದ ವಿದ್ವಾನ್ ಯೋಗೀಂದ್ರ ಭಟ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ 6 ಗಂಟೆಗೆ ಸೇವಾ ಬಯಲಾಟವಾಗಿ ಪಾಂಡವಾಶ್ವಮೇಧ ಯಕ್ಷಗಾನ ಪ್ರದರ್ಶನ ನಡೆಯಲಿದೆ ದೇವಳದ ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್ ತಿಳಿಸಿದರು.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳದಲ್ಲಿ ಕಾರುಗಳ ಮಧ್ಯೆ ಭೀಕರ ಅಪಘಾತ: ಓರ್ವನ ಸ್ಥಿತಿ ಚಿಂತಾಜನಕ

ಬಂಟ್ವಾಳ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಓರ್ವ ಗಂಭೀರ ಗಾಯಗೊಂಡ ಘಟನೆ ಬಿ.ಸಿ.ರೋಡು ಪುಂಜಾಲಕಟ್ಟೆ ರಾಜ್ಯ ಹೆದ್ದಾರಿಯ ಬಡಗುಂಡಿ ಎಂಬಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ. ಉಳಿದಂತೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು...

ಅಗ್ನಿಪಥ್‌ ರಾಜಕೀಯ ಪ್ರೇರಿತ ಬಿಜೆಪಿ ಅಸ್ತ್ರ-ಮಾಜಿ ಶಾಸಕ ಲೋಬೋ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಗರ ಹಾಗು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ಅಗ್ನಿಪಥ್‌ ಯೋಜನೆ ವಿರುದ್ದ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಇಂದು...

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ: ವಾಹನ ಸವಾರರ ಪರದಾಟ

ಸುಳ್ಯ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಇದರಿಂದ ಹೆದ್ದಾರಿಯಲ್ಲಿ ಸ್ವಲ್ಪ ಪ್ರಮಾಣದ ಟ್ರಾಫಿಕ್‌ ಜಾಂ ಉಂಟಾಗಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವೆ ರಸ್ತೆಗೆ ಮಣ್ಣು ಕುಸಿದಿದೆ.ಚರಂಡಿಗೆ ಮಣ್ಣು ಬಿದ್ದಿದ್ದರಿಂದ...