ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರ ಮಹಿಳೆ ರಾಣಿ ಅಬ್ಬಕ್ಕನ ಹೆಸರಿಡಲು ಆಗ್ರಹ
ಮಂಗಳೂರು: ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ ಗಾರ್ತಿ ವೀರ ವನಿತೆ , 450 ವರ್ಷಗಳ ಹಿಂದೆ ಪರಕೀಯ ಪೋರ್ಚುಗೀಸರ ವಿರುದ್ಧ ಮುಸ್ಲಿಂ, ಮೊಗವೀರ, ಗಾಣಿಗ, ಹಿಂದುಳಿದ ವರ್ಗ ಹಾಗೂ ಎಲ್ಲಾ ಸಮುದಾಯದವರನ್ನು ಸೇರಿಸಿ ಉಳ್ಳಾಲದ ಕಡಲತಡಿಯಲ್ಲಿಯೇ ಹೆಡೆಮುರಿ ಕಟ್ಟಿ, ಈ ನೆಲಕ್ಕೆ ಉಳ್ಳಾಲಕ್ಕೆ ತೌಳವ ಪರಂಪರೆಗೆ, ದೇಶಕ್ಕೆ ಕೆಚ್ಚೆದೆಯ ಕೀರ್ತಿ ತಂದಾಕೆ, ಭಾರತದ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕಳ ಹೆಸರನ್ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡುವುದು ಸೂಕ್ತ ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ್ ಉಳ್ಳಾಲ್ಅಭಿಪ್ರಾಯಪಟ್ಟಿದ್ದಾರೆ..ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ, ರಾಜ್ಯದ ಮುಖ್ಯಮಂತ್ರಿಯವರಿಗೂ, ದ.ಕ ಜಿಲ್ಲಾಧಿಕಾರಿಯವರಿಗೂ ಹಾಗೂ ಇನ್ನಿತರ ಅಧಿಕಾರಿಗಳಿಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರಿಡುವಂತೆ ಒತ್ತಾಯಿಸುತ್ತಾ ಬಂದಿದ್ದು,ಅಬ್ಬಕ್ಕಳ ಹೆಸರಿಡುವಂತೆ ಹಲವು ಬಾರಿ ನಗರಸಭೆಯ ಎದುರು, ಜಿಲ್ಲಾಧಿಕಾರಿಯವರ ಕಚೇರಿ ಬಳಿ ಪ್ರತಿಭಟನೆ ಕೂಡ ಮಾಡಿರುತ್ತೇವೆ,
ಇಷ್ಟರವರೆಗೆ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರು ಮಾತ್ರ ಚಾಲ್ತಿಯಲ್ಲಿತ್ತು, ಈಗ ಬೇರೆ ಬೇರೆ ಹೆಸರುಗಳು ಕೇಳಿ ಬರತೊಡಗಿದೆ ಎಂದು ಸ್ವಾಗತಾಧ್ಯಕ್ಷ ಜಯರಾಮ ಶೆಟ್ಟಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಉಪಾಧ್ಯಕ್ಷ ಆಲಿಯಬ್ಬ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ ಉಪಸ್ಥಿತರಿದ್ದರು.