Connect with us

    LATEST NEWS

    ಸೀಲ್ಡ್​ ತಂಪು ಪಾನೀಯ ಬಾಟಲ್ ಒಳಗಿತ್ತು ಜೇಡರ ಹುಳ!

    Published

    on

    ಬೆಂಗಳೂರು: ಐಸ್ ಕ್ರೀಮ್ ಕೋನ್‌ನಲ್ಲಿ ಮಾನವ ಬೆರಳಿನ ತುಂಡು ದೊರೆತ ವಿಚಾರದ ನೆನಪು ಮಾಸುವ ಮುನ್ನವೇ ಕರ್ನಾಟಕದ ತುಮಕೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಸೀಲ್ಡ್ ತಂಪು ಪಾನೀಯದ ಬಾಟಲ್​​​ನಲ್ಲಿ ಜೇಡರ ಹುಳ ದೊರೆತಿದೆ. ಬಾಟಲ್ ಒಳಗೆ ಜೇಡರ ಹುಳ ಇದ್ದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

    ಜೇಡರ ಹುಳು ಪತ್ತೆಯಾದ ತಂಪು ಪಾನೀಯದ ಕಂಪನಿ, ಸ್ಥಳ ಅಥವಾ ತಯಾರಿಕೆಯ ದಿನಾಂಕದ ಕುರಿತು ಯಾವುದೇ ಮಾಹಿತಿ ಈವರೆಗೆ ದೊರೆತಿಲ್ಲ. ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

    ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳಲ್ಲಿ ಕೀಟಗಳು ಪತ್ತೆಯಾದ ಘಟನೆ ಇದೇ ಮೊದಲಲ್ಲ. ಪ್ಯಾಕ್ ಮಾಡಿದ ಆಹಾರಗಳಲ್ಲಿ ಜಿರಳೆಗಳು, ನೊಣಗಳು ಪತ್ತೆಯಾದ ಬಗ್ಗೆ ಈ ಹಿಂದೆಯೂ ಅನೇಕ ದೂರುಗಳು ಕೇಳಿಬಂದಿವೆ.

    DAKSHINA KANNADA

    ಅಲ್ಪಕಾಲದ ಅಸೌಖ್ಯದಿಂದ ಉಳ್ಳಾಲ ಖಾಝಿ ಸ್ವರ್ಗಸ್ಥ

    Published

    on

    ಮಂಗಳೂರು : ಉಳ್ಳಾಲದ ಖಾಝಿ ಸಯ್ಯದ ಫಝಲ್ ಕೋಯಮ್ಮ ತಂಙಳ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು. ಕಣ್ಣೂರಿನ ತಮ್ಮ ನಿವಾಸದಲ್ಲಿ ಇಂದು(ಜು.8) ಮುಂಜಾನೆ ಖಾಝಿ ಅವರು ಸ್ವರ್ಗಸ್ಥರಾಗಿದ್ದಾರೆ ಎಂದು ಕುಟುಂಬ ವಲಯ ಮಾಹಿತಿ ನೀಡಿದೆ.

    ಮೂಲತಃ ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿದ್ದ ಖಾಝಿಯವರು ಕೂರ ತಂಙಳ್‌ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ಬಹಳಷ್ಟು ವರ್ಷಗಳ ಹಿಂದೆ ಕಾಣಿಯೂರು ಸಮೀಪದ ಕೂರ ಎಂಬಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ‘ಕೂರ ತಂಙಳ್‌’ ಎಂದು ಹೆಸರು ಪಡೆದುಕೊಂಡಿದ್ದರು. ಬಳಿಕ ಉಳ್ಳಾಲ ಖಾಝಿಯಾಗಿ ನೇಮಕವಾದ ಬಳಿಕ ಉಳ್ಳಾಲದಲ್ಲಿ ನೆಲೆಸಲು ಆರಂಭಿಸಿದ ಅವರು ಕೆಲ ಸಮಯದ ಹಿಂದೆ ಅಸ್ವ*ಸ್ಥರಾಗಿದ್ದರು.

    ಇದನ್ನು ಓದಿ : ಚಿರತೆ ಸೆರೆ ಹಿಡಿಯುವಲ್ಲಿ ವಿಫಲವಾದ ಅರಣ್ಯ ಇಲಾಖೆ; ಗ್ರಾಮಸ್ಥರು ಏನು ಮಾಡಿದ್ರು ಗೊತ್ತಾ!?

    ಸ್ವರ್ಗಸ್ಥರಾದ ಖಾಝಿ ಅವರು ಪತ್ನಿ ಹಾಗೂ ಮಕ್ಕಳು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಕೂರ ಮಸೀದಿಯ ವಠಾರದಲ್ಲಿ ದಫನ ಕಾರ್ಯ ನಡೆಯಲಿದ್ದು, ಸಂಜೆ 5 ಗಂಟೆಗೆ ಮಸೀದಿಯಲ್ಲಿ ಸ್ವರ್ಗಸ್ಥರ ಸದ್ಗತಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಈ ಪ್ರಾರ್ಥನೆಯಲ್ಲಿ ಸುಲ್ತಾನುಲ್ ಉಲೇಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಭಾಗವಹಿಸುವ ನಿರೀಕ್ಷೆ ಇದೆ.

     

     

     

    Continue Reading

    LATEST NEWS

    ಚಿರತೆ ಸೆರೆ ಹಿಡಿಯುವಲ್ಲಿ ವಿಫಲವಾದ ಅರಣ್ಯ ಇಲಾಖೆ; ಗ್ರಾಮಸ್ಥರು ಏನು ಮಾಡಿದ್ರು ಗೊತ್ತಾ!?

    Published

    on

    ಮಂಗಳೂರು / ರಾಯಚೂರು : ಕಾಡಿನಿಂದ ನಾಡಿಗೆ ಚಿರತೆ ಬರೋದು ಇತ್ತೀಚೆಗೆ ಸಾಮಾನ್ಯವಾಗಿ ಕೇಳಿ ಬರೋ ಸುದ್ದಿ. ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗುತ್ತೆ. ಇಲಾಖೆಯವರು ಬೋನಿಟ್ಟು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಮಾಡುತ್ತಾರೆ. ಆದರೆ, ರಾಯಚೂರಿನಲ್ಲಿ ಮಾತ್ರ ಭಿನ್ನವಾದ ಘಟನೆ ನಡೆದಿದೆ.

    ಚಿರತೆ ಹಿಡಿದು ಕೊಂದ ಗ್ರಾಮಸ್ಥರು :

    ಜಮೀನಿಗೆ ತೆರಳುತ್ತಿದ್ದ ಮೂವರ ಮೇಲೆ ಮಾರ*ಣಾಂತಿಕವಾಗಿ ದಾಳಿ ಮಾಡಿದ ಚಿರತೆಯನ್ನು ಸ್ಥಳೀಯರು ಹೊಡೆದು ಕೊಂ*ದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ.


    ರೈತರ ಮೇಲೆ ಚಿರತೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಚಿರತೆಯ ಬಂಧನಕ್ಕೆ ಅರಣ್ಯ ಇಲಾಖೆಗೆ ಒತ್ತಡ ಹಾಕಿದ್ದರು. ಆದ್ರೆ, ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ಹರಸಾಹಸ ಪಟ್ಟರೂ ಚಿರತೆ ಕೈಗೆ ಸಿಕ್ಕಿರಲಿಲ್ಲ. ಅರಣ್ಯ ಇಲಾಖೆಯ ಕಾರ್ಯಾಚರಣೆ ವೇಳೆ ಸಾವಿರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದ ಕಾರಣ ಲಾಠಿ ಚಾರ್ಜ್ ಕೂಡ ನಡೆಸಲಾಗಿತ್ತು. ಇದಾದ ಬಳಿಕ ಮತ್ತಷ್ಟು ಆಕ್ರೋಶಗೊಂಡ ಜನರು ತಾವೇ ಚಿರತೆ ಹಿಡಿಯಲು ಮುಂದಾಗಿದ್ದಾರೆ.

    ಇದನ್ನೂ ಓದಿ : ಧೋನಿ ಬರ್ತ್​ಡೇ ಆಚರಿಸಿ ಹೊಸ ನಿಕ್ ನೇಮ್ ಕೊಟ್ಟ ಸಲ್ಮಾನ್ ಖಾನ್

    ಕೈನಲ್ಲಿ ಬಡಿಗೆ ಹಿಡಿದು ಕಾರ್ಯಾಚರಣೆ ನಡೆಸಿದ ಗ್ರಾಮಸ್ಥರು ಚಿರತೆಯನ್ನು ಹೊಡೆದು ಕೊಂ*ದಿದ್ದಾರೆ. ಬಳಿಕ ಚಿರತೆಯನ್ನು ತಂದು ಪಶು ಅಂಬ್ಯುಲೆನ್ಸ್‌ಗೆ ಹಾಕಿದ್ದಾರೆ. ಅರಣ್ಯ ಅಧಿಕಾರಿಗಳ ಮುಂದೆಯೇ ಈ ಘೋರ ಕೃ*ತ್ಯ ನಡೆದಿದ್ದರೂ ಅಧಿಕಾರಿಗಳು ಮಾತ್ರ ಅಸಹಾಯಕರಾಗಿ ನೋಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಪ್ರಕರಣದ ತನಿಖೆ ನಡೆಸಲು ಆದೇಶ ನೀಡಿದ್ದಾರೆ.

    Continue Reading

    LATEST NEWS

    ಧೋನಿ ಬರ್ತ್​ಡೇ ಆಚರಿಸಿ ಹೊಸ ನಿಕ್ ನೇಮ್ ಕೊಟ್ಟ ಸಲ್ಮಾನ್ ಖಾನ್

    Published

    on

    ಮುಂಬೈ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜುಲೈ 7 ಭಾನುವಾರದಂದು 43ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರ ಬರ್ತ್​ಡೇನ ನಟ ಸಲ್ಮಾನ್ ಖಾನ್ ಅವರು ಮುಂಬೈನಲ್ಲಿರುವ ತಮ್ಮ ಗ್ಯಾಲಾಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಅದ್ದೂರಿಯಾಗಿ ಆಚರಿಸಿದ್ದಾರೆ. ಈ ವೇಳೆ ಧೋನಿ ಜೊತೆ ಅವರ ಪತ್ನಿ ಸಾಕ್ಷಿ ಕೂಡ ಇದ್ದರು. ಬರ್ತ್​ಡೇ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.

    ಧೋನಿ ಅವರಿಗಾಗಿ ಸಲ್ಮಾನ್ ಖಾನ್ ಅವರು ವಿಶೇಷ ಕೇಕ್ ತರಿಸಿದ್ದರು. ಈ ಕೇಕ್​ನ ಧೋನಿ ಅವರು ಕತ್ತರಿಸಿದ್ದಾರೆ. ಸಲ್ಮಾನ್ ಖಾನ್ ಅವರು ಧೋನಿ ಜೊತೆ ಇರೋ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಜನ್ಮದಿನದ ಶುಭಾಶಯಗಳು ಕಪ್ತಾನ್ ಸಹಾಬ್’ ಎಂದಿದ್ದಾರೆ. ಧೋನಿಗೆ ಸಲ್ಮಾನ್ ಖಾನ್ ಕೊಟ್ಟಿರೋ ವಿಶೇಷ ಹೆಸರು ಇಷ್ಟ ಆಗಿದೆ.

    ಸಲ್ಮಾನ್ ಹಾಗೂ ಧೋನಿ ಒಟ್ಟಾಗಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಸಂಗೀತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಸಲ್ಮಾನ್ ಖಾನ್ ಅವರು ಧೋನಿಯವರನ್ನು ತಮ್ಮ ಮನೆಗೆ ಆಮಂತ್ರಿಸಿರಬಹುದು ಎಂದು ಅನೇಕರು ಹೇಳಿದ್ದಾರೆ.

    ಸಲ್ಮಾನ್ ಖಾನ್ ಅವರು ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ಶೀಘ್ರವೇ ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿ ಇದೆ.

    Continue Reading

    LATEST NEWS

    Trending