LATEST NEWS
ಕೊರೋನಾ ಲಸಿಕೆ ವಿತರಣೆಗೆ ವಿಶೇಷ ಯೋಜನೆ : ಆಧಾರ್ ಕಡ್ಡಾಯ..!?
ಕೊರೋನಾ ಲಸಿಕೆ ವಿತರಣೆಗೆ ವಿಶೇಷ ಯೋಜನೆ : ಲಸಿಕೆ ಪಡೆಯಲು ಆಧಾರ್ ಕಡ್ಡಾಯ..!?
ನವದೆಹಲಿ: ಕೊರೋನಾ ಲಸಿಕೆ ವಿತರಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ ರೂಪಿಸುತ್ತಿದ್ದು, ಪ್ರತ್ಯೇಕ ಯೋಜನೆ ರೂಪಿಸಬಾರದೆಂದು ರಾಜ್ಯಸರ್ಕಾರಗಳಿಗೆ ಸೂಚಿಸಿದೆ. ಅಲ್ಲದೇ ಲಸಿಕೆ ಪಡೆಯಲು ಆಧಾರ್ ಕಡ್ಡಾಯ ಮಾಡಲಿದೆ..
ಲಸಿಕೆ ಲಭ್ಯವಾಗುತ್ತಿದ್ದ ಅಂತೆ ದೇಶದ 130 ಕೋಟಿ ಜನರಿಗೆ ಲಸಿಕೆ ವಿತರಿಸಲು ವಿಶೇಷ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತದೆ.
ಕೇಂದ್ರ ಸರ್ಕಾರವೇ ನೇರವಾಗಿ ಲಸಿಕೆ ಖರೀದಿಸಿ ಆದ್ಯತಾ ವಲಯಗಳಿಗೆ ಉಚಿತವಾಗಿ ಹಂಚಿಕೆ ಮಾಡಲಾಗುವುದು. ರಾಜ್ಯ, ಜಿಲ್ಲೆಗಳಲ್ಲಿರುವ ವ್ಯವಸ್ಥೆಗಳ ಮೂಲಕ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಭಾರತದಲ್ಲಿ ನವೆಂಬರ್ ಅಂತ್ಯದ ವೇಳೆಗೆ ಆದ್ಯತಾ ಗುಂಪನ್ನು ಪಟ್ಟಿ ಮಾಡುವಂತೆ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ ನೀಡಲಾಗಿದೆ.
ಲಸಿಕೆ ಪಡೆದ ಫಲಾನುಭವಿಗಳ ಸಂಪರ್ಕವನ್ನು ಕಾಯ್ದುಕೊಳ್ಳಲು ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಲಸಿಕೆಯ ಫಲಾನುಭವಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದ್ದು, ಆರಂಭಿಕವಾಗಿ ವೈದ್ಯರು ಹಾಗೂ ಕೊರೊನಾ ವಾರಿಯರ್ಸ್ ಸೇರಿದಂತೆ 30 ಕೋಟಿ ಫಲಾನುಭವಿಗಳಿಗೆ ಮೊದಲ ಆದ್ಯತೆ ಮೇರೆಗೆ ವ್ಯಾಕ್ಸಿನ್ ದೊರೆಯಲಿದೆ.
ಈ ಮಧ್ಯೆ, ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕಳೆದ 2 ತಿಂಗಳಲ್ಲಿ ಇದೇ ಮೊದಲ ಬಾರಿಗೆ 7 ಲಕ್ಷಕ್ಕಿಂತ ಕೆಳಗಿಳಿದಿದೆ. ಕಳೆದ 24 ಗಂಟೆಯಲ್ಲಿ 54,356 ಹೊಸ ಪ್ರಕರಣಗಳು ವರದಿಯಾಗಿವೆ. 73,979 ಸೋಂಕಿತರು ಗುಣಮುಖರಾಗಿದ್ದಾರೆ.
FILM
ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಉಡುಪಿ: ಇಂದು ಬೆಳಂಬೆಳಗ್ಗೆ ರಾಜಕೀಯ ನಾಯಕರು, ಜನಸಾಮಾನ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ ಉಡುಪಿಯ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ.
ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 197 ಕ್ಕೆ ಆಗಮಿಸಿ ಮತ ಚಲಾಯಿಸಿದರು. ರಕ್ಷಿತ್ ಶೆಟ್ಟಿ ಮನೆಯ ಮುಂಭಾಗದಲ್ಲೇ ಇರುವ ಮತಗಟ್ಟೆಗೆ ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದರು. ರಕ್ಷಿತ್ ಶೆಟ್ಟಿ ಈ ಸಂದರ್ಭದಲ್ಲಿ ಸೆಲೆಬ್ರೆಟಿಯನ್ನು ಕಂಡ ಇತರ ಮತದಾರರು ಹರ್ಷಚಿತ್ತರಾಗಿ ಸೆಲ್ಫೆ ಕ್ಲಿಕಿಸಲು ಮುಂದಾದ ಘಟನೆ ನಡೆಯಿತು.
DAKSHINA KANNADA
ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು
ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
LATEST NEWS
ಅಯೋಧ್ಯೆಯ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?
ಮಹಿಳೆಯರಿಗೆ ಸೀರಿಯಲ್ ನೋಡುವುದಂದರೆ ಒಂತಾರ ಹುಚ್ಚು. ಮನೆಯಲ್ಲೇ ಇರುವ ಮಹಿಳೆಯರು ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೆ ಟಿವಿಯಲ್ಲಿ ಸೀರಿಯಲ್ ನೋಡುತ್ತಾ ಇರುತ್ತಾರೆ. ಸೀರಿಯಲ್ ನೋಡೊದು ಮಾತ್ರ ಅಲ್ಲ ಅದರ ಬಗ್ಗೆ ಸಂವಾದ ಕೂಡ ಮನೆಯವರಲ್ಲಿ ಮಾಡುತ್ತಾ ಇರುತ್ತಾರೆ.
ಈ ನಡುವೆ ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ದೇಶದ ಜನರು ತುಂಬಾ ಸಂತೋಷದಲ್ಲಿದ್ದಾರೆ. ಅದೆಷ್ಟೋ ಜನ ಹಿಂದೂಗಳ ಕನಸು ನನಸಾದ ಕ್ಷಣ ಎಂದು ಹೇಳಬಹುದು. ಒಮ್ಮೆಯಾದ್ರೂ ಅಯೋಧ್ಯೆಗೆ ಹೋಗಿಬರಬೇಕು ಅಂತಾ ಪ್ಲಾನ್ ಅಂತೂ ಮಾಡ್ತಾ ಇರೋದು ಕಂಡಿತ. ಕೆಲವರು ಹೋಗಿ ಬಂದಿದ್ದಾರೆ ಕೂಡ ಆದರೆ ಇನ್ನು ಕೆಲವರು ಇನ್ನು ಹೋಗಬೇಕು. ಇದುವರೆಗೆ ಅಯೋಧ್ಯೆ ರಾಮಮಂದಿರದಲ್ಲಿ ಯಾವೂದೇ ರೀತಿದ ಫಿಲ್ಮ್ ಶೂಟಿಂಗ್, ಸೀರಿಯಲ್, ಕಿರುಚಿತ್ರ ಯಾವೂದು ಶೂಟಿಂಗ್ ಆಗಲಿಲ್ಲ. ಆದರೇ ಇದೇ ಮೊದಲ ಬಾರಿಗೇ ಕನ್ನಡ ಸೀರಿಯಲ್ ಇಂಡಸ್ಟ್ರಿಯಲ್ಲಿ ಕನ್ಯಾದಾನ ಸೀರಿಯಲ್ ಹೊಸ ದಾಖಲೆ ಬರೆದಿದೆ.
ಉದಯ ಟಿವಿಯಲ್ಲಿ ಪ್ರಸಾರವಾಗೋ ಕನ್ಯಾದಾನ ಧಾರಾವಾಹಿ ಈಗ ಹೊಸ ದಾಖಲೆ ಬರೆದಿದ್ದಾರೆ. ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಸೀರಿಯಲ್ ಎಂಬ ಹೆಗ್ಗಳಿಕೆಗೆ ಕನ್ಯಾದಾನ ಧಾರಾವಾಹಿ ಪಾತ್ರವಾಗಿದೆ.
ಜನವರಿ 22ರಂದು ಅಂದ್ರೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಇಲ್ಲಿಯವೆರೆಗೂ ಯಾವುದೇ ಸಿನಿಮಾವಾಗ್ಲಿ, ಅಥವಾ ಸೀರಿಯಲ್ ಆಗ್ಲಿ ಶೂಟ್ ಮಾಡಿರಲಿಲ್ಲ. ಆದ್ರೆ, ಕನ್ಯಾದಾನ ಧಾರವಾಹಿ ತಂಡ ಫಸ್ಟ್ಟೈಮ್ ಅಯೋಧ್ಯೆಗೆ ಹೋಗಿ ಚಿತ್ರೀಕರಣ ಮಾಡಿದೆ.
ಈ ಸೀರಿಯಲ್ನಲ್ಲಿ ಬಹುತೇಕ ಪಾತ್ರಗಳು ಒಂದಲ್ಲ ಒಂದು ಸಮಸ್ಯೆ ಎದುರಿಸ್ತಿವೆ. ಹಾಗಾಗಿ ರಾಮನ ದರ್ಶನ ಪಡೆದು ಆ ಕಷ್ಟಗಳಿಂದ ಹೊರಬರಬೇಕು ಎಂದು ನಿರ್ಧರಿಸಿ, ರಾಮಮಂದಿರಕ್ಕೆ ಹೋಗಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯಲ್ಲಿ ಶೂಟಿಂಗ್ ಮಾಡಿರೋ ಬಗ್ಗೆ ಸೀರಿಯಲ್ ತಂಡ ಸಂತಸ ಹಂಚಿಕೊಂಡಿದೆ.