Connect with us

    bangalore

    ಸೋನು ಗೌಡ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ…!

    Published

    on

    ಸೋಷಿಯಲ್ ಮೀಡಿಯಾದಲ್ಲೇ ಸೋನು ಗಳಿಸೋ ಆದಾಯ ಕೇಳಿದ್ರೆ ನಿಜಕ್ಕೂ ನಾವು-ನೀವೆಲ್ಲ ದಂಗಾಗೋದು ಗ್ಯಾರಂಟಿ.

     

    ಬೆಂಗಳೂರು : ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಕ್ವೀನ್ ಸೋನುಗೆ ಸಿಕ್ತಿರೋ ರಿಯಾಕ್ಷನ್ ಅವರ ರಿಯಲ್ ಬೂಸ್ಟರ್. ನೆಗೆಟಿವ್ ಇರಲಿ ಪಾಸಿಟಿವ್ ಇರಲಿ ಸುದ್ದಿಯಲ್ಲಿದ್ದುಕೊಂಡು ಹವಾ ಮೇಂಟೇನ್ ಮಾಡ್ತಿರೋ ಕಾರಣ ಸೋನು ಗೌಡ ಪಾಪ್ಯುಲಾರಿಟಿಗೆ ಏನೂ ಕಮ್ಮಿ ಆಗಿಲ್ಲ.


    ಸೋನು ಗೌಡ ಇತ್ತೀಚೆಗೆ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೊ ಅತೀ ಹೆಚ್ಚು ವೀವ್ಸ್ ಪಡೆದುಕೊಂಡಿತು. 18 ಮಿಲಿಯನ್ ಗೂ ಅಧಿಕ ವೀವ್ಸ್ ಪಡೆದುಕೊಂಡು ಫುಲ್ ವೈರಲ್ ಆಗಿತ್ತು.

    ಕೆಲವು ಸೋನು ಗೌಡ ಮಾಲ್ಡೀವ್ಸ್‌ನಲ್ಲಿ ಸಖತ್‌ ಎಂಜಾಯ್‌ ಮಾಡುವ ಫೋಟೊಗಳನ್ನು ಹಂಚಿಕೊಂಡಿದ್ದರು ಬಿಕಿನಿ ವಿಡಿಯೊ ಜತೆ ಹಾಟ್‌ ಫೋಟೊಗಳ ಮೂಲಕ ಸಖತ್‌ ಸುದ್ದಿಯಲ್ಲಿದ್ದರು.


    ಇನ್‌ಸ್ಟಾಗ್ರಾಮ್‌ನಲ್ಲಿ 1 ಪೋಸ್ಟ್‌ ಮಾಡಲು ಪ್ರಮೋಷನ್ ಕಂಟೆಂಟ್ 40 ಸಾವಿರಕ್ಕೂ ಅಧಿಕ ಹಣ ಪಡೆಯುತ್ತಾರೆ ಎಂಬ ವರದಿಯಿದೆ.

    ಈ ಮುಂಚೆ ಬಿಗ್‌ ಬಾಸ್‌ ಆದ ಮೇಲೆ ಸಂದರ್ಶನದ ಸಮಯದಲ್ಲಿ ತಿಂಗಳಿಗೆ ಮೂರು ಲಕ್ಷ ರೂ ದುಡಿಯುವೆ ಎಂದು ಸೋನು ಹೇಳಿಕೊಂಡಿದ್ದರು.

    ಯುಟ್ಯೂಬ್‌ನಿಂದ ಬಂದ ಹಣ ಪ್ರಮೋಷನ್‌ ಕಂಟೆಂಟ್‌ಗಳಿಂದ ಬರುವ ಹಣ ಇನ್‌ಸ್ಟಾಗ್ರಾಮ್‌ನಿಂದ ಬರುವ ಹಣ ಎಲ್ಲ ಸೇರಿದರೆ 3 ಲಕ್ಷ ರೂಪಾಯಿ ಆಗಲೂ ಬಹುದು.

    Click to comment

    Leave a Reply

    Your email address will not be published. Required fields are marked *

    bangalore

    ಮಂಜುಮ್ಮೆಲ್ ಬಾಯ್ಸ್ ಸಿನಿಮಾ ರೀತಿಯ ಘಟನೆ; ಸೆಲ್ಫಿ ಹುಚ್ಚಿಗೆ ಬಲಿಯಾಗಬೇಕಿದ್ದ ಯುವತಿ ರೋಚಕ ಪಾರು !

    Published

    on

    ತುಮಕೂರು: ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿನಿ ಕೆಳಕ್ಕೆ ಬಿದ್ದು ಪೊಟರೆಗೆ ಸಿಲುಕಿಕೊಂಡ ಘಟನೆ ತುಮಕೂರು ತಾಲೂಕಿನ ಮಂದಾರಗಿರಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ (ಅ.27) ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ ಸಿಬ್ಬಂದಿ, ಇಂದು (ಅ.28) ಆಕೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿ ಬದುಕಿ ಬಂದಿದ್ದಾರೆ.

    ಕೊಚ್ಚಿಯಿಂದ ಹತ್ತು ಜನ ಸ್ನೇಹಿತರು ಕೊಡೈಕೆನಾಲ್‌ಗೆ ಹೋಗುತ್ತಾರೆ. ಕಮಲ್ ಹಾಸನ್ ಅಭಿನಯದ ಗುಣ ಚಿತ್ರದಲ್ಲಿನ ಗುಹೆಗಳನ್ನು ನೋಡಲೆಂದು ತೆರಳುತ್ತಾರೆ. ನಿರ್ಬಂಧಿತ ಪ್ರದೇಶ ಎಂದು ಗೊತ್ತಿದ್ದರೂ ಆಳವಾದ ಗುಹೆಗಳನ್ನು ಪ್ರವೇಶಿಸುತ್ತಾರೆ. ಆದರೆ, ಸ್ನೇಹಿತನೊಬ್ಬ ಆಕಸ್ಮಿಕವಾಗಿ ಆಳವಾದ ಕಣಿವೆಯಲ್ಲಿ ಬೀಳುತ್ತಾನೆ. ಉಳಿದ ಸ್ನೇಹಿತರು ಅವನನ್ನು ಹೇಗೆ ಹೊರಗೆ ಕರೆತಂದರು ಎಂಬುದೇ ಮಂಜುಮ್ಮೆಲ್ ಬಾಯ್ಸ್​ ಸಿನಿಮಾದ ಕತೆ.

    ನಿನ್ನೆ (ಅ.27) ತುಮಕೂರು ನಗರದ ಸಮೀಪದ ಮಂದಾರಗಿರಿ ಬೆಟ್ಟದ ತಪ್ಪಲಿನಲ್ಲಿರುವ ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿನಿ ಹಂಸ (20) ಕೆಳಕ್ಕೆ ಬಿದ್ದು ಕಾಣೆಯಾಗಿದ್ದಳು. ಸಂಜೆಯಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಪಾಯಕ್ಕೆ ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿತ್ತು. ಅಲ್ಲದೆ, ಒಂದು ಹಂತದಲ್ಲಿ ಹಂಸ ಸತ್ತೇ ಹೋಗಿದ್ದಾಳೆ ಎಂದು ಭಾವಿಸಲಾಗಿತ್ತು. ಆದರೆ, ಅದೃಷ್ಟವಶಾತ್​ ಹಂಸ ಬದುಕಿದ್ದಾಳೆ. ಪೊಟರೆಯಲ್ಲಿ ಸಿಲುಕಿಕೊಂಡಿದ್ದ ಆಕೆಯನ್ನು ಇದೀಗ ರಕ್ಷಣೆ ಮಾಡಲಾಗಿದೆ.

    ಗುಬ್ಬಿ ತಾಲೂಕಿನ ಶಿವಪುರದ ಸೋಮನಾಥ್ ಎಂಬುವವರ ಪುತ್ರಿ ಹಂಸ ಸ್ನೇಹಿತರೊಂದಿಗೆ ಮೈದಾಳ ಕೆರೆ ನೋಡಲು ತೆರಳಿದ್ದರು. ಈ ವೇಳೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು. ನೀರಿನಲ್ಲಿ ಜಾರಿ ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದರು.

    Continue Reading

    bangalore

    ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು ; ವಾರ್ನ್ ಮಾಡಿದ್ದಕ್ಕೆ ಬರ್ಬರ ಹ*ತ್ಯೆ

    Published

    on

    ಮಂಗಳೂರು/ಬೆಂಗಳುರು : ನಿನ್ನೆ (ಅ.26) ತಡರಾತ್ರಿ ಸುಲ್ತಾನ್​ ತಿಪ್ಪಸಂದ್ರದ ಅಮ್ಜಾದ್ ಎಂಬಾತ ರೋಹಿದ್​ ಅಲಿಯಾಸ್ ಅರ್ಬಾಜ್​ನನ್ನು ಕೊ*ಲೆ‌ ಮಾಡಿರುವ ಘಟನೆ ಜಮಾಲ್ ಷಾ ನಗರದಲ್ಲಿ ನಡೆದಿದೆ.

    ರೋಹಿದ್​ ಅಲಿಯಾಸ್ ಅರ್ಬಾಜ್(26) ಮೃ*ತ ವ್ಯಕ್ತಿ.

    ಘಟನೆ ಹಿನ್ನಲೆ :

    ರೋಹಿದ್​ ಮತ್ತು ಅಮ್ಜಾದ್ ದೂರದ ಸಂಬಂಧಿಗಳು ಮತ್ತು ಸ್ನೇಹಿತರಾಗಿದ್ದರು. ಹೀಗಿರುವಾಗ‌ ಅಮ್ಜಾದ್ ಆಗಾಗ ರೋಹಿದ್​ ಮನೆಗೆ ಬರುತ್ತಿದ್ದ. ಈ ವೇಳೆ ರೋಹಿದ್​ ಅಣ್ಣನ ಹೆಂಡತಿ ಅಂದರೆ ಅತ್ತಿಗೆ‌ ಮೇಲೆ‌ ಕಣ್ಣು‌ ಹಾಕಿದ್ದಾನೆ. ರೋಹಿದ್‌ಗೆ ತಿಳಿಯದಂತೆ ತನ್ನ ಅತ್ತಿಗೆ ಮೊಬೈಲ್ ನಂಬರ್​ ಪಡೆದುಕೊಂಡು ಆಗ್ಗಾಗ ಫೋನ್​  ಹಾಗೂ ವಿಡಿಯೋ ಕಾಲ್​ ಮಾಡಿ‌‌‌ ರೋಹಿದ್​ ಅತ್ತಿಗೆಗೆ ಪಿಡಿಸುತ್ತಿದ್ದ ವಿಷಯ ತಿಳಿದ ರೋಹಿದ್​ ಮತ್ತು ಸಂಬಂಧಿಕರು ಕಳೆದ ಎರಡು ತಿಂಗಳ‌ ಹಿಂದೆ ಅಮ್ಜಾದ್‌ ಮನೆ ಬಳಿ ಹೋಗಿ‌ ಗಲಾಟೆ ಮಾಡಿ ಎಚ್ಚರಿಕೆ ಕೊಟ್ಟು ಬಂದಿದ್ದರು.

    ನಿನ್ನೆ (ಅ.26) ಬೆಂಗಳೂರಿಗೆ ಕೆಲಸದ ಮೇಲೆ ಹೋಗಿದ್ದ ರೋಹಿದ್​ ರಾತ್ರಿ ವಾಸಪ್ ಬರುತ್ತಿದ್ದಂತೆ ‘ನಿನ್ನ ಜೊತೆಗೆ ಮಾತನಾಡಬೇಕು ಬಾ’ ಎಂದು ಅಮ್ಜಾದ್​ ಜಮಾಲ್​ ಷಾ ನಗರದ ಹೊರಗೆ ಕರೆದಿದ್ದಾನೆ. ಅಮ್ಜಾದ್ ಕರೆದ ಜಾಗಕ್ಕೆ ರೋಹಿದ್ ಹೋಗಿದ್ದಾನೆ. ಈ ವೇಳೆ ಜಗಳ ತೆಗೆದು ರೋಹಿದ್​​ ಎದೆಗೆ ಚಾಕು*ವಿನಿಂದ ಇ*ರಿದು ಅಲ್ಲಿಂದ ಅಮ್ಜಾದ್ ಪರಾರಿಯಾಗಿದ್ದಾನೆ.

    ಆರೋಪಿ ಬಂಧನ :

    ಇನ್ನು ವಿಷಯ ತಿಳಿಯುತ್ತಿದ್ದಂತೆ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕ್ಷಿಪ್ರಕಾರ್ಯಾಚರಣೆ ನಡೆಸಿ ಕೊ*ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಮ್ಜದ್​ನನ್ನು ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಕಲೆ*ಹಾಕುತ್ತಿದ್ದಾರೆ. ಇತ್ತ ಮಾಡಿದ ತಪ್ಪನ್ನು ಪ್ರಶ್ನೆ ಮಾಡಿದ್ದಕ್ಕೆ ರೋಹಿದ್​ ಕುಟುಂಬ ಇವತ್ತು ಅನಾಥವಾಗಿ ಕಣ್ಣೀಕು ಹಾಕುವಂತಾಗಿದೆ.

    Continue Reading

    bangalore

    ಏನಾಶ್ಚರ್ಯ! ನಿದ್ದೆ ಮಾಡಿ 9 ಲಕ್ಷ ಗೆದ್ದ ಬೆಂಗಳೂರಿನ ಯುವತಿ

    Published

    on

    ಮಂಗಳೂರು/ಬೆಂಗಳೂರು : ಬೆಂಗಳೂರು ಮೂಲದ ಇನ್ವೆಸ್ಟ್ಮೆಂಟ್ ಬ್ಯಾಂಕರ್ ಒಬ್ಬರು ಹೆಚ್ಚು ನಿದ್ದೆ ಮಾಡುವ ಕನಸನ್ನು ಲಾಭದಾಯಕವಾಗಿ ಪರಿವರ್ತಿಸಿಕೊಂಡು 9 ಲಕ್ಷ ರೂಪಾಯಿಗಳನ್ನು ಗೆದ್ದು, ಫುಲ್ ಫೇಮಸ್ ಆಗಿದ್ದಾರೆ. ‘ವೇಕ್ಫಿಟ್’ ಎಂಬ ಬೆಂಗಳೂರಿನ ಸ್ಮಾರ್ಟ್ಅಪ್ ಸಂಸ್ಥೆಯ ಸ್ಲೀಪ್ ಇಂಟರ್ನ್ಶಿಪ್ ಕಾರ್ಯಕ್ರಮದ ಮೂರನೇ ಸೀಸನಲ್ಲಿ ಸಾಯಿಶ್ವರಿ ಪಾಟೀಲ್ ‘ಸ್ಲೀಪ್ ಚಾಂಪಿಯನ್’ ಎಂಬ ಬಿರುದನ್ನು ಪಡೆದಿದ್ದಾರೆ.


    ಏನಿದು ಸ್ಪರ್ಧೆ?
    ಕಾರ್ಯಕ್ರಮದ ಇತರ 12 ಸ್ಲೀಪ್ ಇಂಟರ್ನ್ಗಳಲ್ಲಿ ಸಾಯಿಶ್ವರಿ ಪಾಟೀಲ್ ಕೂಡ ಒಬ್ಬರಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ರಾತ್ರಿ ಎಂಟರಿಂದ ಒಂಬತ್ತು ಗಂಟೆಗಳ ಕಾಲ ಸಂಪೂರ್ಣವಾಗಿ ನಿದ್ರೆ ಮಾಡಬೇಕಾಗಿತ್ತು.
    ಪ್ರತಿಯೊಬ್ಬರಿಗೂ ತಮ್ಮ ನಿದ್ರೆಯ ಮಾದರಿಗಳನ್ನು ಮೇಲ್ವಿಚಾರಣೆ ಮಾಡಲು ಪ್ರೀಮಿಯಂ ಹಾಸಿಗೆ ಮತ್ತು ಕಾಂಟ್ಯಾಕ್ಟ್ಲೆಸ್ ಸ್ಲೀಪ್ ಟ್ರ್ಯಾಕರ್ಗಳನ್ನು ಒದಗಿಸಲಾಗಿತ್ತು. ಇಂಟರ್ನ್ಗಳು ತಮ್ಮ ನಿದ್ರೆಯ ಅಭ್ಯಾಸವನ್ನು ಹೆಚ್ಚಿಸಲು ಅನುಭವಿ ನಿದ್ರೆ ಮಾರ್ಗದರ್ಶಕರ ನೇತೃತ್ವದಲ್ಲಿ ಕಾರ್ಯಾಗಾರಗಳಿಗೆ ಹಾಜರಾಗಿದ್ದರು.
    ಯಾಕೆ ಈ ಸ್ಪರ್ಧೆ?
    ಜಡ ಜೀವನಶೈಲಿಯಿಂದಾಗಿ ಜನರು, ವಿಶೇಷವಾಗಿ ಯುವಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಿಗೆ ಒಡ್ಡಿಕೊಳ್ಳುವುದು, ಯಾವುದೇ ಪೌಷ್ಟಿಕ ಆಹಾರ ಮತ್ತು ನಿದ್ರೆಯ ತೀವ್ರ ಕೊರತೆಯು ಯುವ ವಯಸ್ಕರಲ್ಲಿ ಒಂದು ಪ್ರವೃತ್ತಿಯಾಗಿದ್ದು, ಇದು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
    ಇಂಟರ್ನ್ಗಳಿಗೆ ಸ್ಟೈಫಂಡ್ನೊಂದಿಗೆ ಪ್ರೋತ್ಸಾಹಿಸುವ ಮೂಲಕ ನಿದ್ರೆಯೊಂದಿಗೆ ಭಾರತದ ಸಂಬಂಧವನ್ನು ಪುನರುಜ್ಜೀವನಗೊಳಿಸಲು ವೇಕ್ಫಿಟ್ ಕಂಪನಿ ಸ್ಪರ್ಧೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending