Connect with us

LATEST NEWS

ಹಾವು ಹಿಡಿಯಲು ಹೋದ ಸ್ನೇಕ್​​ ಕ್ಯಾಚರ್​ ಸಾವು

Published

on

ಬಾಗಲಕೋಟೆ: ಹಾವು ಹಿಡಿಯಲು ಹೋಗಿದ್ದಾಗ ಹಾವು ಕಚ್ಚಿ ಸ್ನೇಕ್​​ ಕ್ಯಾಚರ್​ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ. ಸದಾಶಿವ ಕರಣಿ(30) ಮೃತ ಸ್ನೇಕ್ ಕ್ಯಾಚರ್.

ಬುಧವಾರ ಸಂಜೆ ಹೊಲದಲ್ಲಿ ಹಾವು ಹಿಡಿಯುತ್ತಿದ್ದ ವೇಳೆ ನಾಗರಹಾವು ಕಚ್ಚಿದೆ. ಇದಾದ ಬಳಿಕ ಸದಾಶಿವ, ಮನೆಯಲ್ಲಿ ತಾನೇ ತಯಾರಿಸಿದ ಗಿಡಮೂಲಿಕೆ ಔಷಧಿ ಪಡೆದಿದ್ದ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹಾವುಗಳನ್ನು ಹಿಡಿಯೋದನ್ನೇ ಸದಾಶಿವ ಹವ್ಯಾಸ ಮಾಡಿಕೊಂಡಿದ್ದರು. ತಂದೆ, ಮಗ ಇಬ್ಬರು ಸಹ ಹಾವು ಹಿಡಿಯುತ್ತಿದ್ದರು. ಹಾವು ಹಿಡಿವಾಗ ಅನೇಕ ಸಲ ಕಚ್ಚಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೀಗ ಮಗ ಹಾವಿನಿಂದಲೇ ಮೃತಪಟ್ಟಿದ್ದಾರೆ. ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LATEST NEWS

ಪದ್ಮಶ್ರೀ ಪುರಸ್ಕೃತ ಕಲಾವಿದನ ಈಗಿನ ಪರಿಸ್ಥಿತಿ ನೋಡಿ ‘ಅಯ್ಯೋ’ ಎನ್ನುತ್ತಿದ್ದಾರೆ ಜನ!

Published

on

ಹೈದರಾಬಾದ್ : ‘ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ’ ಎಂಬಂತೆ ಅನೇಕ ಕಲಾವಿದರು ಕಲಾಪೋಷಣೆಯಲ್ಲಿ ತೊಡಗಿಕೊಂಡಿರುತ್ತಾರೆ. ಅಂತಹ ಕಲಾವಿದರಲ್ಲಿ ಕೆಲವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಕೆಲಸಗಳೂ ನಡೆಯುತ್ತದೆ. ಹಾಗಂತ ದೊಡ್ಡ ವ್ಯಕ್ತಿಗಳಾಗಿ, ಶ್ರೀಮಂತರಾಗಿ ಕಲಾವಿದರು ಮೆರೆಯುತ್ತಾರಾ? ಇಲ್ಲ ಎಂದು ಹೇಳುತ್ತಿದೆ ಈ ವ್ಯಕ್ತಿಯ ಜೀವನ.

ಹೌದು, ಇವರು ಎರಡು ವರ್ಷಗಳ ಹಿಂದೆಯಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಆದ್ರೆ, ಈಗ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರೇ ಸಂಗೀತ ಸಾಧಕ ತೆಲಂಗಾಣದ ಸಾಧಕ ದರ್ಶನಂ ಮೊಗುಳಯ್ಯ. ಅವರು ಕೆಲಸ ಮಾಡುತ್ತಿರುವ ಫೋಟೋ, ವೀಡಿಯೋ ವೈರಲ್ ಆಗಿವೆ.


ದರ್ಶನಂ ಮೊಗುಳಯ್ಯ ಸಂಗೀತ ವಾದನವಾದ ಕಿನ್ನೇರವನ್ನು ನುಡಿಸುವಲ್ಲಿ ಖ್ಯಾತರು, ಆ ವಾದನಕ್ಕೆ ರಾಷ್ಟ್ರೀಯ ಗೌರವ ಸಿಗುವಲ್ಲಿ ದರ್ಶನಂ ಮೊಗುಳಯ್ಯ ಅವರ ಪಾತ್ರ ಹಿರಿದು. ಹೀಗಾಗಿಯೇ ಕೇಂದ್ರ ಸರ್ಕಾರವು 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆಗ ರಾಷ್ಟ್ರಪತಿಯಾಗಿದ್ದ ರಾಮನಾಥ್‌ ಕೋವಿಂದ್‌ ಅವರು ದರ್ಶನಂ ಮೊಗುಳಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದಾದ ಬಳಿಕ ದರ್ಶನಂ ಮೊಗುಳಯ್ಯ ಅವರನ್ನು ಇಡೀ ದೇಶವೇ ಮೆಚ್ಚಿಕೊಂಡಿತ್ತು. ‘ವ್ಹಾ’ ಎಂದಿತ್ತು. ಆದರೆ, ಈಗಿನ ಪರಿಸ್ಥಿತಿ ಕೇಳಿದ್ರೆ ‘ಅಯ್ಯೋ’ ಎನ್ನುವಂತಿದೆ.

ಕೂಲಿ ಕೆಲಸ ಮಾಡ್ತಿದ್ದಾರೆ ಪದ್ಮಶ್ರೀ ಪುರಸ್ಕೃತ :


ದರ್ಶನಂ ಮೊಗುಳಯ್ಯ ತಮ್ಮ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಆದರೆ, ಈಗ ತಮ್ಮ 73ನೇ ವಯಸ್ಸಿನಲ್ಲಿ ಹೈದರಾಬಾದ್ ಬಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕುಟುಂಬಕ್ಕೆ ಇವರೇ ಆಧಾರ ಸ್ತಂಭ. ಹಾಗಾಗಿ ಮೂರು ಹೊತ್ತಿನ ಊಟಕ್ಕಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇವರ ದುಸ್ಥಿತಿ ಕಂಡು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮಹಿಳೆಯರ ಸುರಕ್ಷತೆಗೆ ಬಂತು ‘ವುಮೆನ್ ಸೇಫ್ಟೀ’ ಅಪ್ಲಿಕೇಷನ್‌..!

ಒಂದು ಕೋಟಿ ರೂ. ಎಲ್ಲಿ ಹೋಯ್ತು ?

ದರ್ಶನಂ ಮೊಗುಳಯ್ಯ ಸಾಧನೆಗೆ ಸರ್ಕಾರವೇನೋ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದೆ. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರವು ಅವರಿಗೆ ಒಂದು ಕೋಟಿ ರೂ. ಪ್ರೋತ್ಸಾಹ ಧನವನ್ನೂ ನೀಡಿತ್ತು. ಅಂದಿನ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಒಂದು ನಿವೇಶನವನ್ನೂ ಮಂಜೂರು ಮಾಡಿದ್ದರು.

ಆದರೆ, ಸರ್ಕಾರ ಕೊಟ್ಟ ಪ್ರೋತ್ಸಾಹಧನದಲ್ಲಿ ಒಂದಷ್ಟು ಹಣವನ್ನು ಮಗಳ ಮದುವೆಗೆ ಖರ್ಚು ಮಾಡಿದ ಅವರು, ಉಳಿದ ಹಣವನ್ನು ಸಾಲ ತೀರಿಸಲು, ಕುಟುಂಬದ ತುರ್ತು ಸಂದರ್ಭಗಳಿಗೆ ಬಳಸಿದ್ದಾರಂತೆ. ಹಾಗಾಗಿ, ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

Continue Reading

DAKSHINA KANNADA

ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ

Published

on

ಉಪ್ಪಿನಂಗಡಿ : ಕೋವಿಶೀಲ್ಡ್‌ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮದ ಬಗ್ಗೆ ಒಪ್ಪಿಕೊಂಡಿದ್ದ ಸೀರಂ ಸಂಸ್ಥೆಯಿಂದ ಭಾರತದ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೋವಿಡ್ ಲಸಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಆರೋಗ್ಯವಾಗಿದ್ದ ಯುವಕನೊಬ್ಬ ಹೃದಯಾ*ಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.


ಗಾರೆ ಕೆಲಸ ಮಾಡಿಕೊಂಡು ಆರೋಗ್ಯವಾಗಿದ್ದ 27 ವರ್ಷದ ಜನಾರ್ದನ ಎಂಬ ಯುವಕ ಅಸು ನೀಗಿದ್ದಾನೆ. ಉಪ್ಪಿನಂಗಡಿ ಸಮೀಪದ ನಿನ್ನಿಕಲ್ಲು ನಿವಾಸಿಯಾಗಿದ್ದ ಜನಾರ್ದನ ಮೇಸ್ತ್ರಿಯಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೆಲಸಕ್ಕೆ ರಜೆ ಹಾಕಿ ಬಂದಿದ್ದ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ನಿದ್ರೆಗೆ ಜಾರಿದ ಜನಾರ್ದನ್ ಮತ್ತೆ ಮೇಲೆದ್ದಿಲ್ಲ.

ಇದನ್ನೂ ಓದಿ : ಸಿಡಿಲ ಬಡಿತಕ್ಕೆ ನವವಿವಾಹಿತ ದುರ್ಮರ*ಣ..!10 ದಿನಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ವಿಧಿಯಾಟಕ್ಕೆ ಬ*ಲಿ!!

ಮಗ ಮಲಗಿದ್ದಾನೆ ಅಂತ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು ಸಂಜೆ ಬಂದು ಮಗನನ್ನು ಎಬ್ಬಿಸಿದಾಗಲೇ ವಿಚಾರ ಗೊತ್ತಾಗಿದೆ. ಕರೆದರೂ ಮಗ ಎದ್ದಿಲ್ಲ ಎಂದು ತಾಯಿ ಮಗನನ್ನು ಅಲುಗಾಡಿಸಿ ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಆ ವೇಳೆ ಯಾವುದೇ ರೆಸ್ಪಾನ್ಸ್‌ ಇಲ್ಲದ ಕಾರಣ ತಾಯಿಗೆ ಅನುಮಾನ ಬಂದು ಉಸಿರು ಪರಿಶೀಲಿಸಿದಾಗ ಮಗ ಮೃ*ತಪಟ್ಟಿರುವುದು ಆರಿವಾಗಿದೆ.

 

Continue Reading

LATEST NEWS

ಮಹಿಳೆಯರ ಸುರಕ್ಷತೆಗೆ ಬಂತು ‘ವುಮೆನ್ ಸೇಫ್ಟೀ’ ಅಪ್ಲಿಕೇಷನ್‌..!

Published

on

ಮಂಗಳೂರು: ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರಬೇಕಾದರೆ ಕೂಡಾ ಆಭರಣ, ಪರ್ಸ್ ಕದ್ದುಕೊಂಡು ಹೋಗುವ ಜನರನ್ನು ನಾವು ನೋಡಿರುತ್ತೇವೆ. ಬಸ್ಸು ಮತ್ತು ಎಲ್ಲೆಂದರಲ್ಲಿ ಮಹಿಳೆಯರಿಗೆ ಉಪದ್ರ ಕೊಡುವ ಕಿರಾತಕರನ್ನು ನಾವು ನೋಡಿರುತ್ತೇವೆ. ಹೀಗೆ ಮಹಿಳೆಯರಿಗೆ ಎಲ್ಲಿ ಹೋದರೂ ಅಪಾಯ ಮುಗಿಯುವಂತದ್ದಲ್ಲ. ಇನ್ನು ಅಪರಿಚಿತ ಜಾಗದಲ್ಲಿ ಕೇಳಬೇಕು ಅಂತಾನೆ ಇಲ್ಲ. ಆದರೆ ಇನ್ಮುಂದೆ ಮಹಿಳೆಯರು ಸುರಕ್ಷತೆಯ ವಿಚಾರದಲ್ಲಿ ಭಯಪಡಬೇಕಾಗಿಲ್ಲ. ಏಕಾಂಗಿಯಾಗಿ ಎಲ್ಲಿ ಬೇಕಾದರೂ ಹೋಗಬಹುದು.

ಪ್ರಯಾಣದ ವೇಳೆ ಸಹ ಪ್ರಯಾಣಿಕರು ಕಿರುಕುಳ ಕೊಡುತ್ತಿದ್ದಾರೆ ಅನ್ನೋದು ಮನವರಿಕೆಯಾದರೆ ಕೂಡಲೇ ಈ ಒಂದು ಪ್ಯಾನಿಕ್ ಬಟನ್ ಒತ್ತಿದರೆ ಸಾಕು ನೀವು ಕಳುಹಿಸಬೇಕಾದ ವ್ಯಕ್ತಿಗಳಿಗೆ ಅಲರ್ಟ್ ಮೇಸೆಜ್ ಹೋಗುತ್ತದೆ. ಇಂತಹ ಒಂದು ನೂತನ ಅಪ್ಲಿಕೇಶನ್​ವೊಂದನ್ನು ಕಾಲೇಜು ವಿದ್ಯಾರ್ಥಿನಿಯೊಬ್ಬರು ಅಭಿವೃದ್ಧಿ ಪಡಿಸಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆಯೇಷಾ ಸರ್ವತ್ ವುಮೆನ್ ಸೇಫ್ಟಿ ಎನ್ನುವ ಸಾಫ್ಟ್​​ವೇರ್‌ಅಪ್ಲಿಕೇಶನ್ ಅನ್ನು ತಯಾರಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರು ಬೆಳೆದು ನಿಂತಿದ್ದಾರೆ. ಮನೆ ಕಾಯಕದ ಜೊತೆಗೆ ಮನೆಯಿಂದ ಆಚೆಗೂ ಸಹ ದುಡಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಂಪೆನಿ ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಬರಬೇಕಾದರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತೆ ಕೃತ್ಯಗಳು ನಡೆದಿರುವ ನಿದರ್ಶನಗಳು ಇವೆ. ಅಲ್ಲದೆ ಒಂಟಿಯಾಗಿ ಕ್ಯಾಬ್​ನಲ್ಲಿ ಸಂಚರಿಸುವಾಗ ಆ ಒಂದು ಭಯ ಇದ್ದೇ ಇರುತ್ತದೆ.

ಪ್ಯಾನಿಕ್​ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ:

ಹೀಗಾಗಿ ರೆಡ್ ಝೋನ್ ಪ್ರದೇಶಗಳಲ್ಲಿ ಅಥವಾ ಅಪರಿಚಿತ ಸ್ಥಳಗಳಲ್ಲಿ ಓಡಾಡುವಾಗ ಈ ಅಪ್ಲಿಕೇಶನ್​ ಮಹಿಳೆಯರ ನೆರವಿಗೆ ಬರಲಿದೆ. ಅಪಾಯದಲ್ಲಿ ಸಿಲುಕಿರುವುದು ಗೊತ್ತಾದರೆ ಕೂಡಲೇ ಪ್ಯಾನಿಕ್​ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ. ಜೊತೆಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿರುವ ಯಾರಿಗಾದರೂ ಕಳುಹಿಸಿದರೆ ಕೂಡಲೇ “ಐಯಮ್ ಇನ್ ಟ್ರಬಲ್” ಎಂದು ಲೊಕೇಶನ್‌ ಸಹಿತ ಸಂದೇಶ ರವಾನೆಯಾಗಲಿದೆ.

ಈ ಆ್ಯಪ್ ಗೆ ಇಂಟರ್ನೆಟ್, ವೈಫೈ, ಜಿಪಿಎಸ್ ಅಗತ್ಯವಿಲ್ಲ:

ಸಾರ್ವಜನಿಕ‌‌ ಪ್ರದೇಶಗಳಲ್ಲಿ ಅಪಾಯ ಎದುರಾಗುವ ಸಂದರ್ಭ ಬಂದರೆ ಕೂಡಲೇ ಮೊಬೈಲ್​ನಲ್ಲಿ ಅಳವಡಿಸಿಕೊಂಡಿರುವ ವುಮೆನ್ ಸೇಫ್ಟಿ ಅಪ್ಲಿಕೇಶನ್​ನಲ್ಲಿ ಪ್ಯಾನಿಕ್​ ಬಟನ್ ಒತ್ತಿದರೆ ಅಲಾರಂ ರೀತಿ ಸೈರನ್ ಮೊಳಗಲಿದೆ.‌ ಈ ಮೂಲಕ ಸುತ್ತಮುತ್ತಲಿನಲ್ಲಿರುವವರ ಗಮನ ಸೆಳೆದು ನೆರವು ಪಡೆಯಬಹುದು.‌ ಎರಡನೇಯದಾಗಿ ನಿರ್ಜನ ಪ್ರದೇಶಗಳಲ್ಲಿ ಅಥವಾ ಒಂಟಿಯಾಗಿ ಪ್ರಯಾಣ ಮಾಡುವಾಗ ನಿಮ್ಮ ಮೊಬೈಲ್​ನಲ್ಲಿರುವ ಸಂಪರ್ಕಿತರ ನಂಬರ್​ಗಳಿಗೆ ಸಂದೇಶ ಕಳುಹಿಸಬಹುದಾಗಿದೆ.‌

ಇದಕ್ಕೆ‌ ಯಾವುದೇ ಇಂಟರ್​ನೆಟ್, ವೈಫೈ ಹಾಗೂ ಜಿಪಿಎಸ್‌ ಸಹಾಯದ ಅಗತ್ಯವಿಲ್ಲ. ಆ್ಯಂಡ್ರಾಯ್ಡ್ ಮೊಬೈಲ್ ಇರುವವರು ಮಾತ್ರ ಅಪ್ಲಿಕೇಶನ್ ನಿಂದ ನೆರವು ಪಡೆಯಬಹುದು. ಏಕಕಾಲದಲ್ಲಿ 150 ಮಂದಿಗೆ ಅಲರ್ಟ್ ಮೆಸ್ಸೇಜ್ ಕಳುಹಿಸಬಹುದಾಗಿದೆ. ಈ ಆ್ಯಪ್ ನ ಪ್ರಯೋಜನ ಸಾಮಾನ್ಯ ಮಹಿಳೆಯರಿಗೂ ತಲುಪಲಿ ಎಂಬುವುದೇ ಆಶಯ.

Continue Reading

LATEST NEWS

Trending