Connect with us

LATEST NEWS

Shivamogga: ತುಂಗಾ ಜಲಾಶಯ ಬಳಿ ಯುವಕ ನೀರುಪಾಲು..!

Published

on

ಪ್ರವಾಸಿಗ ಯುವಕನೋರ್ವ ತುಂಗಾ ಡ್ಯಾಂನಲ್ಲಿ ನೀರುಪಾಲಾದ ಘಟನೆ ಆ.12ರಂದು ಶಿವಮೊಗ್ಗ ತಾಲೂಕಿನ ಗಾಜನೂರು ಜಲಾಶಯದ ಸಮೀಪದಲ್ಲಿ ನಡೆದಿದೆ.

ಶಿವಮೊಗ್ಗ: ಪ್ರವಾಸಿಗ ಯುವಕನೋರ್ವ ತುಂಗಾ ಡ್ಯಾಂನಲ್ಲಿ ನೀರುಪಾಲಾದ ಘಟನೆ ಆ.12ರಂದು ಶಿವಮೊಗ್ಗ ತಾಲೂಕಿನ ಗಾಜನೂರು ಜಲಾಶಯದ ಸಮೀಪದಲ್ಲಿ ನಡೆದಿದೆ.

ಮಿಳಘಟ್ಟ ಮೂಲದ ಹರೀಶ್ (22) ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ.

ಡ್ಯಾಂ ಪ್ರವೇಶಕ್ಕೆ ನಿಷೇಧ ಹಿನ್ನಲೆ ಚಾನಲ್ ಪಕ್ಕದ ದಾರಿಯಲ್ಲಿ  ಕಾಮಗಾರಿ ನಡೆಯುತ್ತಿರುವ ಸೇತುವೆ ಬಳಿ  ಹರೀಶ್ ಹಾಗೂ ಆತನ ಸ್ನೇಹಿತರು ಹೋಗಿದ್ದರು.

ಈ ಸಂದರ್ಭ ಹರೀಶ್ ನೀರು ಪಾಲಾಗಿದ್ದಾನೆ ಎನ್ನಲಾಗಿದೆ.

ಯುವಕನ ಪತ್ತೆಗಾಗಿ ಗಾಜನೂರು ಡ್ಯಾಂ ಗೇಟ್ ನ ಮುಂಭಾಗದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ತುಂಗಾನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!

Published

on

ಮಂಗಳೂರು ( ಜಾರ್ಖಂಡ್‌ ): ಆತ ತಿಂಗಳಿಗೆ 15 ಸಾವಿರ ಸಂಬಳ ಪಡೆಯುವ ಒಬ್ಬ ಸಾಮಾನ್ಯ ನೌಕರ. ಆದ್ರೆ ಆತನ ಮನೆಗೆ ಇಡಿ ದಾಳಿ ಮಾಡಿ ಬರೋಬ್ಬರಿ 30 ಕೋಟಿ ಹಣವನ್ನು ಜಪ್ತಿ ಮಾಡಿದೆ. ಇದು ಜಾರ್ಖಂಡ್‌ನಲ್ಲಿ ನಡೆದ ಘಟನೆಯಾಗಿದ್ದು, ಹತ್ತು ಸಾವಿರ ಲಂಚ ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಇಡಿ  ಸಾಮಾನ್ಯ ನೌಕರನ ಮನಗೆ ದಾಳಿ ಮಾಡಿತ್ತು. ಅಲ್ಲಿ ಅಡಗಿಸಿಟ್ಟಿದ್ದ ಹಣ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹಣ ಎಣಿಸಲು ಮೆಷಿನ್ ಹಾಗೂ ಹೆಚ್ಚುವರಿ ನೌಕರರನ್ನು ಮನೆಗೆ ಕರೆಸಿಕೊಂಡಿದ್ದಾರೆ.

ನೌಕರನ ಮನೆಗೆ ಲಂಚದ ಹಣ…!

ಜಾರ್ಖಂಡ್‌ ನ ಸಚಿವ ಅಲಂಗೀರ್ ಆಲಂ ಅವರ ಖಾಸಗಿ ಕಾರ್ಯದರ್ಶಿ ಮನೆ ಮೇಲೆ ರಾಂಚಿಯ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಅಲಂಗೀರ್ ಆಲಂ ಅವರ ಸಚಿವಾಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಲ್ಲಿನ ಲಂಚದ ಹಣ ನೌಕರನ ಮನೆಗೆ ಹೋಗುತ್ತದೆ ಅನ್ನೋ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸಚಿವರ ಆಪ್ತ ಕಾರ್ಯದರ್ಶಿಯ ಅಡಿಯಲ್ಲಿ ಮಾಸಿಕ 15 ಸಾವಿರಕ್ಕೆ ಕೆಲಸ ಮಾಡುತ್ತಿದ್ದ ನೌಕರನ ಮನೆಗೆ ದಾಳಿ ಮಾಡಿದಾಗ ಇಷ್ಟೊಂದು ಪ್ರಮಾಣದ ಹಣ ಪತ್ತೆಯಾಗಿದೆ.

ವಿಡಿಯೋ ನೋಡಿ :

ಹತ್ತು ಸಾವಿರ ಲಂಚದ ಹಿಂದೆ ಬಿದ್ದಿದ್ದ ಇಡಿ..!

ಕಳೆದ ವರ್ಷ ಹತ್ತು ಸಾವಿರ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಇಂಜೀನಿಯರ್ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಇಂಜೀನಿಯರ್ ಅವರ ಹೇಳಿಕೆಯನ್ನು ದಾಖಲಿಸಿದಾಗ ಲಂಚದ ಹಣ ಸಚಿವರಿಗೆ ತಲುಪಿಸಲಾಗುತ್ತದೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದರು. ಬಳಿಕ ಜಾರ್ಖಂಡ್‌ನ ಗ್ರಾಮೀಣ ಅಭಿವೃದ್ದಿ ಸಚಿವ ಅಲಂಗೀರ್ ಆಲಂ ಹಾಗೂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಹೆಸರು ಮುನ್ನಲೆಗೆ ಬಂದಿತ್ತು . ಹೀಗಾಗಿ ಸಂಜೀವ್‌ ಲಾಲ್ ಅವರ ಬಳಿ ನೌಕರನಾಗಿದ್ದ ವ್ಯಕ್ತಿಯ ಮನೆಗೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!

ಜಾರ್ಖಂಡ್ ಕಾಂಗ್ರೆಸ್ ಸರ್ಕಾರದ ಸಚಿವ…!

ಅಲಂಗೀರ್ ಆಲಂ ಜಾರ್ಖಂಡ್‌ನ ಪಾಕುರ್ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದಾರೆ. ಈ ಹಿಂದೆ 2006 ರಿಂದ 2009 ರ ವರೆಗೆ ಅವರು ಸ್ಪೀಕರ್ ಕೂಡಾ ಆಗಿದ್ದರು. 2023ರ ಡಿಸೆಂಬರ್‌ ತಿಂಗಳಲ್ಲಿ ಜಾರ್ಖಂಡ್‌ನ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಉದ್ಯಮಿ ಧೀರಜ್ ಸಾಹು ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮನೆಯಲ್ಲಿ 350 ಕೋಟಿಯಷ್ಟು ಹಣ ಪತ್ತೆಯಾಗಿತ್ತು. ಈ ವೇಳೆ ಧೀರಜ್ ಸಾಹು ಅದು ಮದ್ಯದ ವ್ಯವಹಾರದ ಹಣವಾಗಿದ್ದು, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು.

Continue Reading

LATEST NEWS

ಮದುವೆಯಲ್ಲಿ ಅವಧಿ ಮುಗಿದ ಐಸ್ ಕ್ರೀಂ​ ಸೇವನೆ.. 80ಕ್ಕೂ ಹೆಚ್ಚು ಜನರು ಅಸ್ವಸ್ಥ!

Published

on

ರಾಮನಗರ: ಮದುವೆಯಲ್ಲಿ ಐಸ್ ಕ್ರೀಂ ತಿಂದು ಜನರು ಅಸ್ವಸ್ಥಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಸಾತನೂರು ಸರ್ಕಲ್ ಬಳಿಯ ಟಿಪ್ಪುನಗರದ ಮಿಲನ್ ಶಾದಿ ಮಹಲ್ ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದ್ದು, ಪರಿಣಾಮ 80 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚನ್ನಪಟ್ಟಣದ ವಧು ಮತ್ತು ಮಾಗಡಿಯ ವರನ ವಿವಾಹ ಸಮಾರಂಭ ಮಿಲನ್ ಶಾದಿ ಮಹಲ್ ನಲ್ಲಿ ನಡೆದಿತ್ತು. ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ಐಸ್​ ಕ್ರೀಂ ತಿಂದ ಜನರು ಇದ್ದಕ್ಕಿದ್ದಂತೆಯೇ ಅಸ್ವಸ್ಥಗೊಂಡಿದ್ದಾರೆ. ಊಟದ ನಂತರ ಐಸ್ ಕ್ರೀಂ ತಿಂದ ಅರ್ಧಗಂಟೆಯಲ್ಲಿ ವಾಂತಿ, ಭೇದಿ ಶುರುವಾಗಿದೆ. 50ಕ್ಕೂ ಹೆಚ್ಚು ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಹೆಚ್ಚಿನವರು ಚನ್ನಪಟ್ಟಣದ ಯಾರಬ್ ನಗರ ಹಾಗೂ ಕೋಟೆ ನಿವಾಸಿಗಳು ಎಂದು ಗುರುತಿಸಲಾಗಿದೆ.

ಐಸ್​ ಕ್ರೀಂ ತಿಂದು ಆಸ್ವಸ್ಥಗೊಂಡವರಲ್ಲಿ 40 ಜನರು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದವರು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅವಧಿ ಮುಗಿದಿದ್ದ ಐಸ್ ಕ್ರೀಂ ತಿಂದಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.

ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಅಸ್ವಸ್ಥಗೊಂಡವರ ಕುಟುಂಬಸ್ಥರು ಆಗಮಿಸಿದ್ದಾರೆ. ಎಲ್ಲರಿಗೂ ಡ್ರಿಪ್ಸ್ ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

Continue Reading

LATEST NEWS

ಡ್ರಗ್‌ ನೀಡಿ ಸಂಸದೆ ಮೇಲೆ ಲೈಂಗಿಕ ದೌರ್ಜನ್ಯ..! ಜಾಲತಾಣದಲ್ಲಿ ಹರಿಬಿಟ್ಟ ಆ ವೀಡಿಯೋ..!

Published

on

ಆಸ್ಟ್ರೇಲಿಯಾ/ಮಂಗಳೂರು: ದಿನೇ ದಿನೇ ದೇಶ ವಿದೇಶಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿರುವುದು ವಿಪರ್ಯಾಸವೇ ಹೌದು. ಈಗಾಗಲೇ ದೇಶದೆಲ್ಲೆಡೆ ಪ್ರಜ್ವಲ್ ರೇವಣ್ಣ ಪೆಂಡ್ರೈವ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಈ ಕ್ರೂರ ಕೃತ್ಯಕ್ಕೆ ಜನ ಛೀಮಾರಿ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಸಂಸದೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ದುರಂತ ಘಟನೆ ನಡೆದಿದೆ.

mp

ಸಂಸದೆ ಮೇಲೆ ಲೈಂಗಿಕ ದೌರ್ಜನ್ಯ:

ಆಸ್ಟ್ರೇಲಿಯಾ ಸಂಸದೆ ಬ್ರಿಟ್ಟಾನಿ ಲೌಗಾ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಖುದ್ದು ಸಂಸದೆ ಪೊಲೀಸ್ ಮೆಟ್ಟಿಲೇರಿದ್ದಾರೆ. ಸಂಸದೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದರ ವೀಡಿಯೋ ಕೂಡಾ ಹರಿದಾಡ್ತಾ ಇದೆ.  ಕ್ವೀನ್ಸ್‌ಲ್ಯಾಂಡ್ ನಗರದ ಲೇಬರ್ ಪಾರ್ಟಿ ಸಂಸದೆ ಬ್ರಿಟ್ಟಾನಿ ಲೌಗಾ ಸೇರಿದಂತೆ ಹಲವು ಮಹಿಳೆಯರು ನೈಟ್‌ಔಟ್‌ ಪಾರ್ಟಿಗೆ ತೆರಳಿದ್ದರು. ಅಲ್ಲಿ ಅವರ ಅರಿವಿಗೆ ಬಾರದೇ ಮಾದಕ ವಸ್ತುಗಳನ್ನು ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅಲ್ಲದೆ ಸಂಸದೆ ಬ್ರಿಟ್ಟಾನಿ ಮೇಲಿನ ಲೈಂಗಿಕ ದೌರ್ಜನ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ಇನ್ನು ಈ ಪಾರ್ಟಿಯಲ್ಲಿದ್ದ ಇತರ ಮಹಿಳೆಯರ ಮೇಲೂ ಇದೇ ರೀತಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ವರದಿಯಾಗಿದೆ.

ಮುಂದೆ ಓದಿ..; ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್‌..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ

ವೈದ್ಯಕೀಯ ತಪಾಸಣೆಗೆ ಒಳಗಾದ ಸಂಸದೆ ಬ್ರಿಟ್ಟಾನಿ:

ತತ್‌ಕ್ಷಣ ಸಂಸದೆ ಯೆಪ್ಪೂನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗಿದ್ದಾರೆ.ಈ ವೇಳೆ ಅವರ ದೇಹದಲ್ಲಿ ಡ್ರಗ್ಸ್‌ ಇರುವುದು ಕಂಡುಬಂದಿದೆ. ಡ್ರಗ್ಸ್ ಸೇವನೆ ಮಾಡದಿದ್ದರೂ ದೇಹದಲ್ಲಿ ಡ್ರಗ್‌ ಅಂಶ ಕಂಡುಬಂದಿರುವುದು ಹೇಗೆ? ನೈಟ್ ಔಟ್ ನಲ್ಲಿ ಸೇರಿದ್ದ ಎಲ್ಲರಿಗೂ ಮಾದಕ ವಸ್ತುಗನ್ನು ನೀಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮಹಿಳೆಯರನ್ನು ಮನಬಂದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಂಸದೆ ಆರೋಪಿಸಿದ್ದಾರೆ. ಇದೇ ರೀತಿ ನೈಟ್‌ಔಟ್‌ನಲ್ಲಿ ಸೇರಿದ್ದ ಮಹಿಳೆಯರೂ ಕೂಡಾ ಆರೋಪ ಮಾಡಿದ್ದು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಮಹಿಳೆಯರಿಗೆ ಅರಿವಿಲ್ಲದೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದ ಕೂಡಲೇ ಕ್ವೀನ್ಸ್‌ಲ್ಯಾಂಡ್ ಪಟ್ಟಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇನ್ನೂ ಈ ಕುರಿತಾಗಿ ಆಸ್ಟ್ರೇಲಿಯಾ ಕೆಲ ನಾಯಕರು ಸಂಸದೆ ಬ್ರಿಟ್ಟಾನಿಗೆ ಬೆಂಬಲ ನೀಡಿದ್ದಾರೆ.

 

 

Continue Reading

LATEST NEWS

Trending