Connect with us

    LATEST NEWS

    ಶಿರೂರು ಗುಡ್ಡ ಕುಸಿತ; ಮೂರನೇ ಹಂತದ ಕಾರ್ಯಾಚರಣೆ ವೇಳೆ ಸಿಕ್ಕಿತು ಮೂಳೆ..!

    Published

    on

    ಅಂಕೋಲಾ: ಶಿರೂರು ಗುಡ್ಡ ಕುಸಿತದ ಮೂರನೇ ಹಂತದ ಮೂರನೇ ದಿನದ ಶೋಧ ಕಾರ್ಯಾಚರಣೆ ವೇಳೆ ಮೂಳೆಯೊಂದು ಸಿಕ್ಕಿದೆ.

    ಗಂಗಾವಳಿ ನದಿಯ ಆಳದಿಂದ ಮೇಲೆತ್ತಲಾದ ಮಣ್ಣು ರಾಶಿಯಲ್ಲಿ ಮೂಳೆಯ ತುಂಡೊಂದು ಪತ್ತೆಯಾಗಿದ್ದು, ಇದು ಜುಲೈ 16 ರಂದು ನಡೆದ ದುರ್ಘಟನೆಯಲ್ಲಿ ಕಣ್ಮರೆಯಾಗಿ ಇದುವರೆಗೂ ಪತ್ತೆಯಾಗದ ಮೂವರಲ್ಲಿ ಯಾರದಾದರೂ ಆಗಿರಬಹುದೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಇದು ಮನುಷ್ಯರ ಮೂಳೆಯೇ ಅಥವಾ ಯಾವುದೋ ಪ್ರಾಣಿಯ ಮೂಳೆಯೇ ಎನ್ನುವ ಪ್ರಶ್ನೆಯೂ ಕಾಡಲಾರಂಭಿಸಿದ.

    ಶಿರೂರು ದುರಂತದಲ್ಲಿ ಕಣ್ಮರೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ, ಮತ್ತು ಕೇರಳದ ಲಾರಿ ಚಾಲಕ ಅರ್ಜುನ್ ಅವರ ಮೃತದೇಹಗಳು ಘಟನೆ ಸಂಭವಿಸಿ ಎರಡು ತಿಂಗಳು ಕಳೆದರೂ ಪತ್ತೆಯಾಗಿಲ್ಲ. ಕಣ್ಮರೆಯಾದವರ ಎಲುಬಿನ ತುಂಡಾದರೂ ಸಿಕ್ಕರೆ ಸಂಸ್ಕಾರ ಕಾರ್ಯ ನಡೆಸುವ ನಿರೀಕ್ಷೆಯಲ್ಲಿ ಅವರ ಕುಟುಂಬದವರಿದ್ದಾರೆ.

    ಹೀಗಾಗಿ ಪ್ರತಿದಿನ ಶೋಧ ಕಾರ್ಯಾಚರಣೆ ಸ್ಥಳದಲ್ಲಿ ಕುಟುಂಬದವರು ಹಾಜರಿರುವುದು ಕಂಡುಬರುತ್ತಿದೆ. ವೈಜ್ಞಾನಿಕ ಪರೀಕ್ಷೆ ಬಳಿಕವೇ ಈ ಮೂಳೆಯ ಕುರಿತು ನಿಖರವಾದ ಮಾಹಿತಿ ಸಿಗಲಿದೆ.

    LATEST NEWS

    ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್‌ಗೆ ಬಿಗ್‌ ಟ್ವಿಸ್ಟ್..!ಕಮೀಷನರ್ ಹೇಳಿದ್ದೇನು?

    Published

    on

    ಬೆಂಗಳೂರು/ಮಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್‌ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. 50 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಹಂತಕ ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಪ್ರತಿಯೊಂದು ಆಯಾಮದಲ್ಲೂ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮಹಾಲಕ್ಷ್ಮಿ ಕುಟುಂಬಸ್ಥರು ಆರೋಪಿಸಿದ್ದ ಅಶ್ರಫ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ.

    ಮಹಾಲಕ್ಷ್ಮಿ ದುರಂತ ಸಾವು ಬೆಳಕಿಗೆ ಬಂದ ಮೇಲೆ ಕುಟುಂಬಸ್ಥರು ಆಕೆಯ ಗೆಳೆಯ ಆಶ್ರಫ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಎಲ್ಲರಿಗೂ ಬಲವಾದ ಶಂಕೆ ಈತನ ಮೇಲೆ ಇತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಕೂಡಲೇ ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್‌ ಅನ್ನು ವಶಕ್ಕೆ ಪಡೆದಿದ್ದಾರೆ.

    ಸಂಬಂಧ ಇರುವುದಾಗಿ ಸತ್ಯ ಒಪ್ಪಿಕೊಂಡ ಅಶ್ರಫ್..!
    ಮಹಾಲಕ್ಷ್ಮಿ ಕೇಸ್‌ನಲ್ಲಿ ಅನುಮಾನಕ್ಕೆ ಗುರಿಯಾಗಿದ್ದ ಅಶ್ರಫ್, ಪೊಲೀಸರ ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡಿದ್ದಾನೆ. ಮಹಾಲಕ್ಷ್ಮಿ ಜೊತೆ ನನಗೆ ಸಂಬಂಧ ಇದ್ದಿದ್ದು ನಿಜ ಎಂದು ಹೇಳಿದ ಆತ ಇವರಿಬ್ಬರ ಪಿನ್ ಟು ಪಿನ್ ಡೀಟೈಲ್ಸ್‌ ನೀಡಿದ್ದಾನೆ. 6 ತಿಂಗಳ ಹಿಂದೆ ಮಹಾಲಕ್ಷ್ಮಿ ಜೊತೆ ಸಂಪರ್ಕ ಇದ್ದಿದ್ದು ನಿಜ. ಆದ್ರೆ ನಾನು ಕೊಲೆ ಮಾಡಿಲ್ಲ ಎಂದು ಅಶ್ರಫ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ನಾನು ಆರು ತಿಂಗಳಿಂದ ಆಕೆಯಿಂದ ದೂರ ಇದ್ದೀನಿ. ನಮ್ಮ ಸಂಬಂಧದ ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿ ಜಗಳ ಆಯ್ತು. ಆಮೇಲೆ ನಾನು ಆಕೆಯ ತಂಟೆಗೆ ಹೋಗಿಲ್ಲ. ಈ ಕೊಲೆಗೂ ನನಗೂ ಸಂಬಂಧ ಇಲ್ಲ ಎಂದು ಅಶ್ರಫ್ ಹೇಳಿದ್ದಾನೆ.

    ಈ ಹೇಳಿಕೆಯನ್ನು ದಾಖಲಿಸಿಕೊಂಡಿರುವ ವೈಯಾಲಿಕಾವಲ್‌ ಪೊಲೀಸರು ಅಶ್ರಫ್ ಹಾಗೂ ಮಹಾಲಕ್ಷ್ಮಿಯ ಕಾಂಟ್ಯಾಕ್ಟ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಕಳೆದ ಆರು ತಿಂಗಳಿಂದ ಸಂಪರ್ಕ ಇಲ್ಲದಿರೋದು ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ಅಶ್ರಫ್‌ಗೂ ಮಹಾಲಕ್ಷ್ಮಿಯ ಸಾವಿಗೂ ಸಂಬಂಧ ಇಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಸದ್ಯ ಅಶ್ರಫ್ ಅನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹ*ತ್ಯೆ – 20ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಎಸ್ಕೇಪ್

    ಹಾಗಾದ್ದಲ್ಲಿ ಮಹಾಲಕ್ಷ್ಮಿ ಪೀಸ್‌, ಪೀಸ್ ಮಾಡಿದ್ದು ಯಾರು?
    ವೈಯಾಲಿಕಾವಲ್ ಮಹಿಳೆಯ ಸಾವಿನ ಪ್ರಕರಣವನ್ನು ಇಡೀ ಶೇಷಾದ್ರಿಪುರಂ ಸಬ್ ಡಿವಿಷನ್ ಪೊಲೀಸರ ತಂಡ ತನಿಖೆ ನಡೆಸುತ್ತಿದೆ. ವೈಯಾಲಿಕಾವಲ್, ಸದಾಶಿವನಗರ, ಹೈಗ್ರೌಂಡ್ಸ್, ಶೇಷಾದ್ರಿಪುರಂ ಇನ್ಸಪೆಕ್ಟರ್‌ಗಳ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಲಾಗಿದೆ. ಎಸಿಪಿ ಪ್ರಕಾಶ್ ರೆಡ್ಡಿ ಅವರು ಇಡೀ ಟೀಂ ಮಾನಿಟರ್ ಮಾಡುತ್ತಿದ್ದಾರೆ. ಒಬ್ಬ ಎಸಿಪಿ, ನಾಲ್ವರು ಇನ್ಸ್‌ಪೆಕ್ಟರ್ ಕಡೆಯಿಂದ ಡಿಸಿಪಿ ಶೇಖರ್ ಅವರು ತನಿಖೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಕಮಿಷನರ್ ದಯಾನಂದ್ ಹೇಳಿದ್ದೇನು?
    ವೈಯಾಲಿಕಾವಲ್‌ ಮಹಾಲಕ್ಷ್ಮಿ ಕೇಸ್‌ ಬಗ್ಗೆ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ್​ ಹೇಳಿಕೆ ನೀಡಿದ್ದಾರೆ. ಮಹಾಲಕ್ಷ್ಮಿ ಹ*ತ್ಯೆ ಮಾಡಿದ್ದು ಯಾರು ಎಂಬುದು ಗೊತ್ತಾಗಿದೆ. ಆತ ಹೊರರಾಜ್ಯದವನಾಗಿದ್ದು ಸದ್ಯ ಬೆಂಗಳೂರಲ್ಲಿ ವಾಸವಿದ್ದ. ಆತನ ಪತ್ತೆ ಹಚ್ಚಿ ಬಂಧನ ಮಾಡುವ ಕಾರ್ಯಾಚರಣೆ ನಡೆದಿದೆ. ಸದ್ಯದಲ್ಲೇ ಆತನನ್ನ ಬಂಧಿಸೋದಾಗಿ ಬಿ.ದಯಾನಂದ್​ ಹೇಳಿದ್ದಾರೆ.

    ಈಗಾಗಲೇ ಅನುಮಾನಾಸ್ಪದ ಆರೋಪಿಯ ಬೆನ್ನಟ್ಟಿರೋ ಪೊಲೀಸರು ಎರಡು ರಾಜ್ಯಗಳಿಗೆ ಎರಡು ಟೀಮ್‌ ಕಳಿಸಿದೆ. ಪಶ್ಚಿಮ ಬಂಗಾಳ ಹಾಗೂ ಬಿಹಾರಕ್ಕೆ ತೆರಳಿರುವ ಪೊಲೀಸರ ತಂಡ ಮಹಾಲಕ್ಷ್ಮಿ ಹಂತಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ.

    Continue Reading

    LATEST NEWS

    WATCH : ಎಸಿ ಕೋಚ್ನಲ್ಲಿ ಟಿಕೇಟ್ ಇಲ್ಲದೆ ಪ್ರಯಾಣಿಸಿದ ಹಾವು; ವೀಡಿಯೋ ವೈರಲ್

    Published

    on

    ಮಂಗಳೂರು/ಜಬಲ್ಪುರ : ಸಾಮಾನ್ಯವಾಗಿ ನಾವೆಲ್ಲ ರೈಲಿನಲ್ಲಿ ಪ್ರಯಾಣಿಸುವಾಗ ಟಿಕೇಟ್ ಪಡೆಯುತ್ತೇವೆ. ಇಲ್ಲದಿದ್ದರೆ ದಂಡ ತೆರಬೇಕಾಗುತ್ತೆ ಅಲ್ವಾ? ಆದರೆ, ಇಲ್ಲೊಬ್ರು ಟಿಕೇಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಹೌದು, ಜಬಲ್ಪುರ-ಮುಂಬೈ ಗರೀಬ್ ರಥ್ ಎಕ್ಸ್ಪ್ರೆಸ್ ರೈಲಿನ ಹವಾನಿಯಂತ್ರಿತ ಬೋಗಿಯೊಂದರಲ್ಲಿ ಭಾನುವಾರ(ಸೆ.22) ಟಿಕೇಟ್ ಇಲ್ಲದೆ ಪ್ರಯಾಣಿಸಿದ್ದು ಬೇರ್ಯಾರು ಅಲ್ಲ, ಅದೊಂದು ಹಾವು. ಸದ್ಯ ಈ ಹಾವಿನ ವೀಡಿಯೋ ವೈರಲ್ ಆಗಿದೆ.


    ವೀಡಿಯೋ ವೈರಲ್ :
    ಹಾವು ರೈಲಿನಲ್ಲಿ ಪ್ರಯಾಣಿಸಿದ ವೀಡಿಯೋ ವೈರಲ್ ಆಗಿದೆ. ರೈಲು ಜಬಲ್ಪುರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಜಿ 3 ಬೋಗಿಯ ಮೇಲಿನ ಬಂಕ್ ನಲ್ಲಿ ಹಾವು ಪತ್ತೆಯಾಗಿದೆ.
    ವೀಡಿಯೋದಲ್ಲಿ, ಹಾವು ರೈಲಿನ ಉನ್ನತ ಬೋಗಿಯ ಹ್ಯಾಂಡಲ್ ನ ತಿರುಗುತ್ತಿರುವುದು ಕಂಡುಬಂದಿದೆ. ಪ್ರಯಾಣಿಕರು ಹಾವನ್ನು ಕಂಡು ಭಯಭೀತರಾಗಿದ್ದಾರೆ. ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
    ಪ್ರಯಾಣಿಕರನ್ನು ಮತ್ತೊಂದು ಬೋಗಿಗೆ ವರ್ಗಾಯಿಸಲಾಯಿತು. ನಂತರ, ಬೋಗಿಗಳನ್ನು ಬೇರ್ಪಡಿಸಲಾಯಿತು. ಅಲ್ಲದೇ, ರೈಲನ್ನು ಜಬಲ್ಪುರಕ್ಕೆ ಹಿಂದಿರುಗಿಸಲಾಯಿತು ಎಂದು ತಿಳಿದು ಬಂದಿದೆ.

     

    ಇದನ್ನೂ ನೋಡಿ:

    Continue Reading

    DAKSHINA KANNADA

    ಮಂಗಳೂರು: ಮುಚ್ಚುವ ಶಾಲೆಯನ್ನು ಉಳಿಸಿದ ಮುಖ್ಯಶಿಕ್ಷಕಿ; ಸ್ಲಂ ಮಕ್ಕಳ ಮನೆಮನೆಗೆ ತೆರಳಿ ಶಾಲೆಗೆ ಸೇರಿಸಿ ಕ್ರಾಂತಿ

    Published

    on

    ಮಂಗಳೂರು : ರಾಜ್ಯದಲ್ಲಿ ದಕ್ಷಿಣ ಕನ್ನಡ ಶೈಕ್ಷಣಿಕ ಕ್ರಾಂತಿ ಮಾಡಿದ ಜಿಲ್ಲೆಯೆಂದೇ ಹೆಸರುವಾಸಿ. ಈ ಕ್ರಾಂತಿಯ ಹಿಂದೆ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ಶಿಕ್ಷಕ – ಶಿಕ್ಷಕಿಯರ ಪರಿಶ್ರಮವೂ ಅಷ್ಟೇ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಲ್ಲೊಬ್ಬ ಶಿಕ್ಷಕಿ ಮಕ್ಕಳ ಪಾಲಿಗೆ ವರವಾಗಿದ್ದಾರೆ.

    ಹೌದು, ಬೋಳಾರದ ದ.ಕ.ಜಿ.ಪಂ.ಹಿ.ಪ್ರಾ‌.ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸಲ್ಢಾನಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ. ಕ್ಲಸ್ಟರ್ ಸಿ.ಆರ್.ಪಿ. ಆಗಿದ್ದ ಗೀತಾ ಜುಡಿತ್ ಸಲ್ದಾನಾ ಕೌನ್ಸೆಲಿಂಗ್‌ ಸಂದರ್ಭ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಆಗಸ್ಟ್ 31ರ ವರೆಗೆ ದಾಖಲಾಗಿದ್ದ ಮಕ್ಕಳ ಸಂಖ್ಯೆ ಕೇವಲ 9. ಹಾಜರಾಗುತ್ತಿದ್ದವರು ಐದು ಅಥವಾ ಆರು ಮಂದಿ ಮಾತ್ರ. ಒಂದರ್ಥದಲ್ಲಿ ಶಾಲೆಯನ್ನು ಮುಚ್ಚುವ ಸ್ಥಿತಿಯೇ ಎದುರಾಗಿತ್ತು. ಸೆ.1 ರಂದು ಪ್ರಭಾರ ಮುಖ್ಯಶಿಕ್ಷಕಿಯಾಗಿ ಇವರು ಶಾಲೆಗೆ ಬಂದಾಗ ಇಲ್ಲಿದ್ದ ಮಕ್ಕಳ ಸಂಖ್ಯೆ ನೋಡಿ ದಂಗಾದರು.

    ತಕ್ಷಣ ಕಾರ್ಯಪ್ರವೃತ್ತರಾದ ಗೀತಾ ಜುಡಿತ್ ಸಲ್ದಾನಾ ಪರಿಸರದ ಸ್ಲಂ ಪ್ರದೇಶಗಳಲ್ಲಿ ಸರ್ವೇಗೆ ಇಳಿದರು. ಬಿಹಾರದ ವಲಸೆ ಕಾರ್ಮಿಕರು ಬೋಳಾರ ಪರಿಸರದಲ್ಲಿ ಮೀನು ಕಾರ್ಖಾನೆಯಲ್ಲಿ ಮೀನು ಕಟ್ಟಿಂಗ್ ಕೆಲಸ ಮಾಡುತ್ತಿದ್ದರು. ಇವರ ಮಕ್ಕಳು ಶಾಲೆಗೆ ಹೋಗದೆ ಅಲ್ಲಿಯೇ ಇರುತ್ತಿದ್ದರು. ಆದ್ದರಿಂದ ವಲಸೆ ಕಾರ್ಮಿಕರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡಿದ್ದರು. ಪರಿಣಾಮ ಒಂದೇ ತಿಂಗಳಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ 52ಕ್ಕೆ ಏರಿದೆ.

    ಇದನ್ನೂ ಓದಿ : ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಯುವಕನ ಮೇಲೆರಗಿ ಬಾಲಕಿಯ ರಕ್ಷಿಸಿದ ಕೋತಿಗಳು!

    ಸದ್ಯ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸೇರಿ ಇಬ್ಬರು ಶಿಕ್ಷಕಿಯರಿದ್ದಾರೆ.‌ ಅಕ್ಷರದಾಸೋಹದಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿದೆ. ಸದ್ಯ ದಾನಿಗಳ ಸಹಕಾರದಿಂದ ಸ್ಲೇಟ್, ಕಡ್ಡಿಗಳು ಮಾತ್ರ ಲಭ್ಯವಾಗಿದೆ. ಆದರೆ ಶಾಲೆಯಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ವಿದ್ಯಾರ್ಥಿಗಳಿಗೆ ಯೂನಿಫಾರಂ ಇಲ್ಲ. ತೊಡಲು ಬಟ್ಟೆಯಿಲ್ಲ. ಪುಸ್ತಕ, ಬ್ಯಾಗ್, ಚಪ್ಪಲಿಗಳಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಈ ಶಾಲೆಯನ್ನು ಉಳಿಸಲು ದಾನಿಗಳ ಸಹಕಾರ ಅಗತ್ಯವಿದೆ. ದಾನಿಗಳು ಗೀತಾ ಜುಡಿತ್ ಸಲ್ದಾನಾ(9845901136) ರನ್ನು ಸಂಪರ್ಕಿಸಬಹುದು.

    Continue Reading

    LATEST NEWS

    Trending