LATEST NEWS
ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಶ*ವಗಳಿಗೆ ಶೋಧ – ಕಾರವಾರ ಬಂದರಿಗೆ ಡ್ರಜ್ಜಿಂಗ್ ಬೋಟ್!
ಕಾರವಾರ: ಜುಲೈ ತಿಂಗಳಿನಲ್ಲಿ ಸಂಭವಿಸಿದ್ದ ಶಿರೂರು ಭೂಕುಸಿತ ದುರಂತದ ಹಿನ್ನಲೆ ಇದೀಗ ಮತ್ತೆ ಶವಗಳ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಭೂಕುಸಿತವಾಗಿ 11 ಜನ ಮೃ*ತಪಟ್ಟಿದ್ದು, 8 ಜನರ ಶ*ವ ಶೋಧ ಮಾಡಲಾಗಿತ್ತು. ಆದರೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಮೃತದೇಹಗಳು ದೊರೆಯದೇ ಮುಳುಗು ತಜ್ಞರು ಶೋಧ ನಡೆಸಿದರೂ ಮಳೆಯ ಕಾರಣ ಯತ್ನಗಳು ವಿಫಲವಾಗಿದ್ದವು. ಹೀಗಾಗಿ ಜುಲೈ 28 ರಂದು ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ಇದರ ನಂತರ ಶೋಧಕ್ಕೆ ಪ್ರಯತ್ನ ನಡೆಸಿದರೂ ಗಂಗಾವಳಿ ನದಿಯಲ್ಲಿ ಮಳೆಯಿಂದ ನೀರು ಹೆಚ್ಚಾದ ಪರಿಣಾಮ ಮುಳುಗು ತಜ್ಞರು ಸಹ ಕೈಚೆಲ್ಲಿ ಕೂರುವಂತಾಗಿತ್ತು.
ಈ ಹಿನ್ನೆಲೆಯಲ್ಲಿ ಗೋವಾದ ಅಭಿಷೇನಿಯ ಓಷನ್ ಸರ್ವಿಸಸ್ ಕಂಪನಿಗೆ 90 ಲಕ್ಷದ ಟೆಂಡರ್ ನೀಡಿ ಇದೀಗ ಕಾರವಾರಕ್ಕೆ ಡ್ರಜ್ಜಿಂಗ್ ಬೋಟ್ ತರಿಸಲಾಗಿದ್ದು, ಶುಕ್ರವಾರದಿಂದ ಕಾರ್ಯಾಚರಣೆ ನಡೆಸಲಿದೆ.
ಇನ್ನೂ ಹೆದ್ದಾರಿ ಪ್ರಾಧಿಕಾರ, ಶಾಸಕರ ನಿಧಿ ಹಾಗೂ ದಾನಿಗಳ ಸಹಾಯದಿಂದ 90 ಲಕ್ಷ ಹಣ ಒದಗಿಸಲಾಗಿದ್ದು, ಮುಂಗಡವಾಗಿ ಡ್ರಜ್ಜಿಂಗ್ ಬೋಟ್‌ಗೆ 40 ಲಕ್ಷ ರೂ. ಹಣ ಸಂದಾಯ ಮಾಡಲಾಗಿದೆ. ಈ ಮೊದಲು ಶವ ಶೋಧದ ನಂತರ ಗಂಗಾವಳಿ ನದಿಯಲ್ಲಿ ಭೂ ಕುಸಿತದಿಂದ ಉಂಟಾದ ಗುಡ್ಡದ ಮಣ್ಣನ್ನು ತೆರವು ಮಾಡುವುದಾಗಿ ಕಾರವಾರದ ಶಾಸಕ ಸತೀಶ್ ಸೈಲ್ ತಿಳಿಸಿದ್ದರು. ಕಾರವಾರದ ಬಂದರಿನಿಂದ ಗಂಗಾವಳಿ ನದಿಯವರೆಗೆ ಸಮುದ್ರದ ಮೂಲಕ ಡ್ರಜ್ಜಿಂಗ್ ಬೋಟ್ ಕೊಂಡೊಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಅಬ್ಬರದ ಮಳೆ ನಿಂತಿದೆ. ಈಗಾಗಲೇ ಭೂ ಕುಸಿತದಿಂದ ಹಾನಿಯಾಗಿರುವ ಪ್ರದೇಶದ ಮಣ್ಣು ತೆರವಿಗೆ ಕೋಟಿಗಟ್ಟಲೇ ಹಣ ವ್ಯಯಿಸಲಾಗಿದೆ. ಜೊತೆಗೆ ದೆಹಲಿಯಿಂದ ಬಂದ ಕ್ವಿಕ್ ಸೆಕ್ಯುರಿಟಿ ಸರ್ವಿಸ್ ಸೆಲ್ಯೂಷನ್‌ನ ದ್ರೋಣ್ ವಿಶೇಷ ತಂಡಕ್ಕೆ ಲಕ್ಷಗಟ್ಟಲೆ ಹಣ ನೀಡಬೇಕಿದ್ದು, ಇದೀಗ ಹಣದ ಕೊರತೆಯಿದ್ದರೂ ದಾನಿಗಳು, ಶಾಸಕರ ನಿಧಿಯ ಹಣ ಬಳಸಿ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
BELTHANGADY
ಗಾಂಜಾ ಸಾಗಾಟ ಪ್ರಕರಣ: ಓರ್ವ ಆರೋಪಿ ಸೆರೆ
ಮಂಗಳೂರು ನಗರಕ್ಕೆ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಗುರುವಾರ ಪತ್ತೆ ಹಚ್ಚಿರುವ ಮಂಗಳೂರು ಸಿಸಿಬಿ ಪೊಲೀಸರು, ಈ ಸಂಬಂಧ ಓರ್ವನನ್ನು ಬಂಧಿಸಿ ಆತನಿಂದ 1 ಲಕ್ಷ ರೂ. ಮೌಲ್ಯದ 4 ಕೆ.ಜಿ. ಗಾಂಜಾ, ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಸಹಿತ ಒಟ್ಟು 1,75,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿಯ ಕುಕ್ಕೇಡಿಯ ಗೋಳಿಯಂಗಡಿ ನಿವಾಸಿ ಅಬುತಾಹಿರ್ ಯಾನೆ ಅನ್ವರ್ (25) ಬಂಧಿತ ಆರೋಪಿ. ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್‌ನಲ್ಲಿ ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್‌ಐ ನರೇಂದ್ರ, ಎಎಸ್‌ಐ ಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಸುಜನ್ ಶೆಟ್ಟಿ, ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.
DAKSHINA KANNADA
ಫ್ರಾಡ್ ಕಾಲ್; ಬ್ಯಾಂಕ್ ಖಾತೆಯಿಂದ 76 ಸಾವಿರ ವಂಚನೆ
ಕಾರ್ಕಳ: ಬ್ಯಾಂಕ್ ಅಕೌಂಟ್‌ನಲ್ಲಿ ಸಮಸ್ಯೆಯಾಗಿದ್ದು, ಅದನ್ನು ನಿವಾರಿಸುವುದಾಗಿ ವ್ಯಕ್ತಿಯೊಬ್ಬರಿಗೆ 76 ಸಾವಿರ ರೂ. ವಂಚನೆ ಮಾಡಿರುವ ಘಟನೆ ಕಾರ್ಕಾಳದಲ್ಲಿ ನಡೆದಿದೆ.
ಕಸಬಾ ಗ್ರಾಮದ ಬಾಲಚಂದ್ರ ಅವರು ಆಕ್ಸಿಸ್ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿದ್ದರು. ಸೆ. 30 ರಂದು ಮನೋಜ್ ಶರ್ಮಾ ಕರೆ ಮಾಡಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸಮಸ್ಯೆಯನ್ನು ನಿವಾರಿಸುತ್ತೇವೆ ಎಂದು ಹೇಳಿ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು, ಕೊನೆಯದ್ದಾಗಿ ಒಟಿಪಿ ಪಡೆದುಕೊಂಡನು.
ಅ.1 ರಂದು ಸಂಜೆ 4 ರಿಂದ 6 ರ ಅವಧಿಯಲ್ಲಿ ಎರಡೂ ಬ್ಯಾಂಕ್‌ನ ಕ್ರೆಡೀಟ್ ಕಾರ್ಡ್ ಮೂಲಕ 76,118 ರೂ. ಕಡಿತವಾಗಿತ್ತು. ಈ ಬಗ್ಗೆ ಕಾರ್ಕಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸುತ್ತಿದ್ದಾರೆ.
LATEST NEWS
SHOCKING NEWS : ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳ ಹಾವಳಿ ಹೆಚ್ಚಾಗುತ್ತಿದ್ದು, ಪೀಣ್ಯದಲ್ಲಿ ವಾಸವಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ಬೆಂಗಳೂರು ಹೊರವಲಯದ ಜಿಗಣಿಯಲ್ಲಿ ನಾಲ್ವರನ್ನು ಬಂಧಿಸಿಲಾಗಿತ್ತು. ಇದೀಗ ಪೀಣ್ಯದಲ್ಲಿ ಗಂಡ, ಹೆಂಡತಿ ಮತ್ತು ಅವರ ಮಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಕೂಡಾ ಜಿಗಣಿಯಲ್ಲಿದ್ದಂತೆ ನಕಲಿ ಗುರುತಿನ ಚೀಟಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಇತರರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
- DAKSHINA KANNADA7 days ago
ಕೆಬಿಬಿಯಲ್ಲಿ ಮಿಂಚಿದ ಮಂಗಳೂರು ಬೆಡಗಿ; ಕೊನೆಗೂ ನನಸಾದ ಅಪೂರ್ವ ಶೆಟ್ಟಿ ಕನಸು
- BIG BOSS4 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- BIG BOSS4 days ago
ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್
- BIG BOSS4 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!