Connect with us

FILM

ರಾಜ್‌ ಕುಂದ್ರಾಗೆ ಶಿಲ್ಪಾ ಶೆಟ್ಟಿಯಿಂದ ಡೈವೋರ್ಸ್‌? ಕುಂದ್ರಾನ ಒಂದು ಪೈಸೆ ಮುಟ್ಟದಿರಲು ನಿರ್ಧಾರ

Published

on

ಮುಂಬೈ: ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಬಂಧನ ಒಳಗಾಗಿರುವ ಪತಿ ರಾಜ್ ಕುಂದ್ರಾ ಅವರನ್ನು ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿಯಿಂದ ಬೇರೆ ಆಗಲು ಅವರು ಚಿಂತನೆ ನಡೆಸಿದ್ದಾರೆ ಎನ್ನುವ ವರದಿ ಬಿತ್ತರವಾಗಿದೆ. ಈ ಮೂಲಕ ತನ್ನ ಮಕ್ಕಳ ಭವಿಷ್ಯ ರೂಪಿಸಲು ಚಿಂತಿಸಿದ್ದಾರೆ.

ಮಗ ವಿಯಾನ್ ರಾಜ್ ಕುಂದ್ರಾ ಮತ್ತು ಮಗಳು ಶಮೀಶಾ ಕುಂದ್ರಾ ಜೊತೆ ಇರಲು ಸುರಕ್ಷಿತ ವಾತಾವರಣ ಕಂಡುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಕಳೆದ ತಿಂಗಳು ವಿಚಾರಣೆ ವೇಳೆ ಆ ಮೊಬೈಲ್ ಆ್ಯಪ್​ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮುಂಬೈ ಕ್ರೈಂ ಬ್ರಾಂಚ್ ಬಳಿ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ರು.ಆದರೆ, ಈಗ ಕುಂದ್ರಾರ ಒಂದು ಪೈಸೆಯನ್ನೂ ಮುಟ್ಟದೇ ಇರಲು ನಿರ್ಧರಿಸಿದ್ದಾರೆ.


ರಾಜ್​ ಕುಂದ್ರಾ ಸದ್ಯ ಜೈಲಿನಲ್ಲಿದ್ದಾರೆ. ಅವರು ಎಲ್ಲಾ ರೀತಿಯ ಪ್ರಯತ್ನ ನಡೆಸಿದರೂ ಜಾಮೀನು ಸಿಗುತ್ತಿಲ್ಲ. ಎಲ್ಲಾ ಸಾಕ್ಷ್ಯಗಳು ಅವರ ವಿರುದ್ಧವಾಗಿಯೇ ಇವೆ.

ಇನ್ನು ಸಾಕ್ಷ್ಯ ನಾಶದ ಭಯ ಕೂಡ ಕಾಡುತ್ತಿದೆ. ಈ ಎಲ್ಲಾ ಕಾರಣಕ್ಕೆ ಅವರಿಗೆ ಬೇಲ್​ ಸಿಗುತ್ತಿಲ್ಲ.

ಅವರು ಜೈಲಿನಿಂದ ಹೊರ ಬಂದ ಕೂಡಲೇ ಶಿಲ್ಪಾ ವಿಚ್ಛೇದನ ವಿಚಾರ ಮಾತನಾಡಲಿದ್ದಾರೆ ಎನ್ನಲಾಗಿದೆ.
ಇನ್ನು 14 ವರ್ಷಗಳ ಬಳಿಕ ಹಂಗಾಮ-2 ಸಿನಿಮಾದಲ್ಲಿ ನಟಿಸುವ ಮೂಲಕ ಶಿಲ್ಪಾ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ಆದ್ರೆ, ಚಿತ್ರ ಬಿಡುಗಡೆಗೆ ಕೆಲ ದಿನಗಳಿರುವಾಗಲೇ ಪತಿಯನ್ನು ಬಂಧಿಸಲಾಗಿತ್ತು.

ಇವರ ನಟನೆಯ ‘ನಿಕಮ್ಮಾ’ ಸಿನಿಮಾ ಬಿಡುಗಡೆಯಾಗಬೇಕಿದೆ.

ಹಂಗಾಮ-2 ಮತ್ತು ನಿಕಮ್ಮಾ ಬಳಿಕ ಹೆಚ್ಚಿನ ಅವಕಾಶಗಳಿಗೆ ನಟಿ ಕಾಯುತ್ತಿದ್ದಾರೆ ಎಂದು ವೆಬ್ ಪೋರ್ಟಲ್​​ವೊಂದಕ್ಕೆ ಶಿಲ್ಪಾ ಶೆಟ್ಟಿಯ ಸ್ನೇಹಿತೆ ತಿಳಿಸಿದ್ದಾರೆ.

DAKSHINA KANNADA

2ನೇ ಮದುವೆಯಾದ ಕಿರುತೆರೆ ನಟಿ ಜ್ಯೋತಿ ರೈ …!

Published

on

ಕಿರುತೆರೆ ನಟಿ ಜ್ಯೋತಿ ರೈ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದು, ಈ ಫೋಟೋಸ್ ಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 

 

ಬೆಂಗಳೂರು : ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ನಟಿ ಜ್ಯೋತಿ ರೈ ಅವರ ಪರಿಚಯ ಬಹುತೇಕ ಎಲ್ಲಾ ಕನ್ನಡಿಗರಿಗೆ ಇದೆ. ಸರಿ ಸುಮಾರು 20ಕ್ಕು ಹೆಚ್ಚು ಕನ್ನಡ ಧಾರವಾಹಿಗಳಲ್ಲಿ ನಟಿ ಜನರ ಮನಸ್ಸು ಗೆದ್ದ ಸಹಜ ಸುಂದರಿ ಜ್ಯೋತಿ ರೈ. ಮೂರುಗಂಟು, ಕನ್ಯಾದಾನ, ಅನುರಾಗ ಸಂಗಮ, ಗೆಜ್ಜೆ ಪೂಜೆ, ಕಸ್ತೂರಿ ನಿವಾಸ, ಕಿನ್ನರಿ ಧಾರಾವಾಹಿಗಳನ್ನು ಜನರು ಹೇಗೆ ಮರೆಯಲು ಸಾಧ್ಯ ಅಲ್ವಾ?

ಕೊಡಗಿನಲ್ಲಿ ಹುಟ್ಟಿ ಬೆಳೆದ ಬಂಟ ಸಮುದಾಯದ ನಟಿ ಜ್ಯೋತಿ ರೈ ಓದಿದ್ದು ಪುತ್ತೂರಿನಲ್ಲಿ.8ನೇ ತರಗತಿ ಓದುವಾಗಲೇ ಆಕೆ ಅಪ್ಪನನ್ನು ಕಳೆದುಕೊಂಡರು.ಕಡು ಬಡತನದಲ್ಲಿ ಬೆಳೆದ ಈಕೆ ಅನೇಕ ಸವಾಲುಗಳನ್ನು ಎದುರಿಸಿ ಒಂದು ಎಂಎನ್‌ಸಿ ಕಂಪೆನಿಯಲ್ಲಿ ಕೆಲಸವನ್ನು ಪಡೆದುಕೊಂಡಿದ್ರು.

ಇದಾದ ನಂತರ ಬೆಂಗಳೂರಿಗೆ ಬಂದು ‘ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು.20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು .

ಜ್ಯೋತಿ ರೈ 20ನೇ ವಯಸ್ಸಿನಲ್ಲೇ ಮದುವೆ ಆಗಿದ್ದರು.ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ.

ಜ್ಯೋತಿ ರೈ ಅಂದ್ರೆ ಪಕ್ಕಾ ಸಂಪ್ರದಾಯಸ್ಥ ಹೆಣ್ಣು ಮಗಳು. ಹೆಚ್ಚಾಗಿ ಸೀರೆ ಅಥವ ಚೂಡಿದಾರ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ ರೈ ವೆಸ್ಟ್ರನ್ ಔಟ್ ಫಿಟ್ ಗಳನ್ನು ಚೂಸ್ ಮಾಡೋದು ಬಹಳಾನೆ ಕಮ್ಮಿ.

ಆದ್ರೆ ಆಗ ಜ್ಯೋತಿ ರೈ ಕಂಡು ಇಡೀ ಚಿತ್ರರಂಗವೇ ನಿಬ್ಬೆರಗಾಗಿದೆ.

ಹೌದು ಸೋಷಿಯಲ್ ಮೀಡಿಯಾಗಳಲ್ಲಿ ಒಂದಾದ ಮೇಲೆ ಒಂದರಂತೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಜ್ಯೋತಿ ರೈ. ಅಲ್ಲದೆ Age is Just A Number ಎಂದು ಕೂಡ ಸಾಬೀತುಪಡಿಸಿದ್ದಾರೆ. ತುಂಬಾನೆ ಬೋಲ್ಡ್ ಆಗಿರುವ ಫೋಟೋಸ್ ಅಪ್ಲೋಡ್ ಮಾಡಿ ಇಷ್ಟರ ಮಟ್ಟಿಗೆ ಬದಲಾವಣೆನಾ ಅಂತ ಜನ ಶಾಕ್ ನಲ್ಲಿದ್ದಾರೆ.


ಮೊದಲ ಗಂಡನಿಂದ ದೂರಾಗಿ ಈಗ ಆದ್ರೆ ಇದೀಗ ಶುಕ್ರ, ಮಾತರಾನಿ ಮೌನಮಿದಿ, ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್‌ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನುವಂತಹ ಟಾಕ್ಸ್ ಇದೀಗ ಹರಿದಾಡುತ್ತಿವೆ.

ಅಲ್ದೇ ಸುರೇಶ್‌ ಜತೆಗಿರುವ ಫೋಟೊಗಳನ್ನು ನಟಿ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗಾಗಿ ಇದೆಲ್ಲಾ ನಿಜ ಇರಬಹುದು ಅಂತ ಹೇಳಲಾಗ್ತಿದೆ.
ಯಾಕಂದ್ರೆ ಜ್ಯೋತಿ ರೈ ಅವರು ಇನ್‌ಸ್ಟಾಗ್ರಾಮ್‌ನಲ್ಲಿ Ask Me Anything Session ನಡೆಸಿದ್ದರು.

ಆ ವೇಳೆ ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅದರಲ್ಲಿ ಬಹಳ ಮುಖ್ಯವಾಗಿ ನೀವು ಸಿಂಗಲ್ ಹಾ??? ಅಂತ ನೆಟ್ಟಿಗರೊಬ್ರು ಪ್ರಶ್ನೆ ಮಾಡಿದ್ರು, ಅದಕ್ಕೆ ಜ್ಯೋತಿ ರೈ ಸುಕುಮಾರ್ ಪೂರ್ವಜ ಅವರನ್ನು ಕೇಳಿ ಅಂತ ಹೇಳಿದ್ರು.

ಎ ಮಾಸ್ಟರ್ ಪೀಸ್ ಎನ್ನುವ ಸಿರೀಸ್‌ನ್ನು ಸುಕುಮಾರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈಗ ಸುಕುಮಾರ್ ಜೊತೆಗಿನ ಫೋಟೋಗಳನ್ನೇ ಜ್ಯೋತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಲ್ಳುತ್ತಲೇ ಇದ್ದಾರೆ.

Continue Reading

FILM

ತೆಲುಗು ಸಿನಿಮಾಗೆ ಮತ್ತೆ ಬಾಲಿವುಡ್ ನಟಿ ಐಶ್ವರ್ಯ ರೈ ಗ್ರೀನ್‌ ಸಿಗ್ನಲ್‌ ..!

Published

on

ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ತೆಲುಗಿನ ಚಿತ್ರವೊಂದಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎಂದು ಸುದ್ದಿ ಅಲ್ಲಲ್ಲಿ ಗಲ್ಲಿ ಗಾಸಿಪ್ ಆಗುತ್ತಿದೆ.

 

South movies : ಮಾಜಿ ವಿಶ್ವ ಸುಂದರಿ, ಭುವನ ಸುಂದರಿ, ನೀಲಿ ಕಂಗಳ ಚೆಲುವೆ ಐಶ್ವರ್ಯ ರೈ ಮದುವೆ ಮುನ್ನವೂ ಸುದ್ದಿ, ಮದುವೆ ನಂತರವೂ ಸುದ್ದಿ, ತಾಯಿ ಆದ ಬಳಿಕವೂ ಏನೇ ಮಾಡಿದ್ರೂ ಸುದ್ದಿ. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹಲವು ವರ್ಷಗಳಿಂದ ಯಾವುದೇ ಬಾಲಿವುಡ್‌ ಸಿನಿಮಾಗಳಿಗೆ ಒಪ್ಪಿಗೆ ನೀಡದೇ ಇದೀಗ ಮತ್ತೆ ತೆಲುಗಿನ ಚಿತ್ರವೊಂದಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.

ಐಶ್ವರ್ಯ ರೈ ಸಿನೆಮಾಗಳ ಆಯ್ಕೆಗಳ ವಿಚಾರಗಳಲ್ಲಿ ತುಂಬಾನೆ ಚ್ಯೂಸಿ. ಸಿಕ್ಕ ಸಿಕ್ಕ ಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಇದೇ ವಿಚಾರವನ್ನು ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ನಟಿ ಐಶ್ವರ್ಯ ರೈ ಇತ್ತೀಚೆಗಷ್ಟೇ ತೆರೆಕಂಡಿರುವ ಮಣಿರತ್ನಂ ನಿರ್ದೇಶನದಡಿಯಲ್ಲಿ ಮೂಡಿಬಂದ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿ ನಟಿಸಿ ಎಲ್ಲರ ಗಮನಸೆಳೆದಿದ್ದರು.

ಇದೀಗ ತೆಲುಗಿನ ಚಿತ್ರವನ್ನು ಒಪ್ಪಿಕೊಂಡಿದ್ದು, ಚಿತ್ರದಲ್ಲಿ ಚಿರಂಜೀವಿ ಅವರಿಗೆ ನಾಯಕಿಯಾಗಲಿದ್ದಾರಂತೆ.

ಹೀಗೆ ದಕ್ಷಿಣ ಭಾರತದ ಸಿನಿಮಾಗಳ ಘನತೆಯನ್ನು ಎತ್ತಿ ಹಿಡಿಯುತ್ತಾ ಬಂದಿರುವ ಐಶ್ವರ್ಯಾ ರೈ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಇನ್ನೂ ಹೆಚ್ಚಾಗಿ ಕಾಣಿಸಿಕೊಳ್ಳಲಿ ಎಂಬುದು ಅನೆಕ ಭಾರತೀಯರ ಆಶಯ.

ಹಾಗೆಯೇ ಮಾತೃಭಾಷೆ ತುಳುವಿನಲ್ಲೂ ಒಂದು ಸಿನೆಮಾ ಮಾಡಿದ್ರೆ ಚಂದ ಅಂತಾರೆ ತುಳು ನಾಡ ಸಿನಿ ರಸಿಕರು.

ಇದೀಗ ಅಜಿತ್ ಅವರ ಮುಂದಿನ ಸಿನೆಮಾದಲ್ಲಿ ಐಶ್ವರ್ಯ ರೈ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿಡಾಡ್ತ ಇದೆ.

 

 

Continue Reading

FILM

ಜೆಸಿಬಿ ಹತ್ತಿ ಮಾಜಿ ಪತಿ ಆದಿಲ್ ಖಾನ್ ಊರಿಗೆ ಬಂದ ರಾಖಿ ಸಾವಂತ್

Published

on

ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್ ದುರಾನಿಯ ಊರಿಗೆ ಜೆಸಿಬಿ ಹತ್ತಿಕೊಂಡು ಬಂದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ..

ಮೈಸೂರು :  ಎಷ್ಟೇ ಕಷ್ಟ ಬಂದ್ರೂ ರಾಖಿ ಸಾವಂತ್ ಜನರನ್ನು ಎಂಟರ್ ಟೈನ್ ಮಾಡೋದಂತೂ ಬಿಡಲ್ಲ.ತನ್ನ ಗಂಡ ಆದಿಲ್ ಖಾನ್ ದುರಾನಿ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪತ್ನಿ ರಾಖಿಯೇ ಪತಿಯನ್ನು ಲಾಕಪ್ಪಿಗೂ ಹಾಕಿದ್ದಾಗಿತ್ತು.

ಬಳಿಕ ಹೆಂಡತಿ ಆರೋಪ ಕೇಳಿದ ಗಂಡ ಆದಿಲ್ ಕೂಡ ಆರೋಪಗಳ ಸುರಿಮಳೆಯನ್ನೇ ಹರಿಸಿ ನನಗೆ ರಾಖಿ ಬೇಡ್ವೇ ಬೇಡ ಅಂತೂ ನಾನೊಂದು ತೀರ ನೀನೊಂದು ತೀರ ಆಗಿ ಬಿಟ್ಟಿದ್ದಾರೆ.


ಆದ್ರೆ ಇದೀಗ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಜೆಸಿಬಿ ಹತ್ತಿಕೊಂಡು ಮಾಜಿ ಪತಿ ಆದಿಲ್ ಊರು ಮೈಸೂರಿಗೆ ಬಂದ ದೃಶ್ಯ  ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


ಜೆಸಿಬಿ ಹತ್ತಿ ಮೈಸೂರಿಗೆ ರಾಖಿ ಸಾವಂತ್ ಯಾಕೆ ಬಂದ್ರು? ಆದಿಲ್ ಮನೆ ಉರುಳಿಸೋದಕ್ಕಾ? ಎಂಬ ಪ್ರಶ್ನೆಗಳನ್ನು ರಾಖಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.

ಸದ್ಯ ರಾಖಿ ಇಸ್ಲಾಂ ಮತಕ್ಕೆ ಮತಾಂತರಗೊಂಡಿದ್ದು, ಆದಿಲ್ ಖಾನ್ ನನ್ನು ಪಡೆಯುವ ಧಾವಂತದಲ್ಲಿದ್ದಾರೆ.

ಆದ್ರೆ ಆದಿಲ್ ಮಾತ್ರ ನಾನು ರಾಖಿ ಜೀವನದಲ್ಲಿ ಬಂದ ಆರನೇ ಗಂಡಸು. ಆಕೆ ಸರಿ ಇಲ್ಲ. ಹಣ ಮಾಡುವುದೇ ಆಕೆ ಉದ್ದೇಶ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದ. ಇತ್ತ ರಾಖಿ ಮಾತ್ರ ಆದಿಲ್ ಖಾನ್ ನನ್ನು ಬಿಡೋ ಥರ ಕಾಣ್ತಿಲ್ಲ.

ರಾಖಿ ಸಾವಂತ್ ಪ್ರತಿಬಾರಿಯೂ ಬಿಗ್​ಬಾಸ್ ಮನೆಗೆ ಬರುತ್ತಾರೆ. ಅಲ್ಲಿ ಶೋನಲ್ಲಿ ಭಾಗವಹಿಸುತ್ತಾರೆ.

ರಾಖಿ ಎಂಟ್ರಿ ಕೊಟ್ಟಾಗ ಬಿಗ್​ಬಾಸ್ ರಿಯಾಲಿಟಿ ಶೋ ಟಿಆರ್​ಪಿ ಕೂಡಾ ಹೆಚ್ಚಾಗುತ್ತದೆ. ಹಾಗಾಗಿ ರಾಖಿಗೆ ಡಿಮ್ಯಾಂಡ್ ಹೆಚ್ಚಿದೆ.

Continue Reading

LATEST NEWS

Trending