Home ಪ್ರಮುಖ ಸುದ್ದಿ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಮಂಗಳೂರು: ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ಇವರ ಸಹಕಾರದೊಂದಿಗೆ ಶಕ್ತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸ ಕೊಠಡಿ ಯಲ್ಲಿ ಹೊಸ ಶಿಕ್ಷಣ ನೀತಿ ಎಂಬ ವಿಷಯದ ಮೇಲೆ ಉಪನ್ಯಾಸ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ನೆರವೇರಿಸಿದರು. ಹೊಸ ಶಿಕ್ಷಣ ನೀತಿಯ ವಿಚಾರದಲ್ಲಿ ಉಪನ್ಯಾಸ ನೀಡಿದ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯ ಉಡುಪಿಯ ಸಂಯೋಜಕರಾದ ಡಾ.ಮಹಾಬಲೇಶ್ವರ ರಾವ್, ಶಿಕ್ಷಣ ಕ್ಷೇತ್ರಕ್ಕೆ ಹಣಕಾಸಿನ ಕೊರತೆ ಇದೆ. ಸರಕಾರದ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ದಿ, ಬಡತನ ನಿವಾರಣೆ, ರಕ್ಷಣೆ ಇತ್ಯಾದಿಗಳಿಗ ಹೆಚ್ಚಿನ ಹಣಕಾಸನ್ನು ಒದಗಿಸಿ, ಕೊನೆಯ ಆದ್ಯತೆ ಶಿಕ್ಷಣಕ್ಕೆ. ಆದ್ದರಿಂದ ಬಹಳ ಪ್ರಗತಿಪರವಾದಂತಹ ಸಲಹೆಗಳು ಸರಿಯಾದ ರೀತಿಯಲ್ಲಿ ಜಾರಿ ಬರೋದಿಲ್ಲ ಎಂದರು.

ನಮ್ಮ ದೇಶದಲ್ಲಿ ಶಾಲಾ ಶಿಕ್ಷಣದಲ್ಲಿ ಗಮನಾರ್ಹ ಬದಲಾವಣೆಗಳು ಆಗದಿದ್ದರೆ , ಪಠ್ಯ ಕ್ರಮದಲ್ಲಿ ಬೋಧನಾ ಕ್ರಮದಲ್ಲಿ ವ್ಯತ್ಯಾಸಗಳಾಗದಿದ್ರೆ ಹೊಸ ನೀತಿಯಲ್ಲಿ ಬದಲಾವಣೆ ತರಲು ಅಸಾಧ್ಯ ಎಂದರು…ಉಪನ್ಯಾಸದ ಮುನ್ನ ಡಅ.ಮಹಾಬಲೇಶ್ವರರಾವ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲೆ, ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ ಮತ್ತು ಶಕ್ತಿ ಪಿಯು.ಕಾಲೇಜು ಇದರ ಆಡಳಿತ ಮಂಡಳಿ ಮುಖ್ಯಸ್ಥರು ಉಪಸ್ಥಿತರಿದ್ದರು.

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...