Connect with us

    LATEST NEWS

    4 ಲಕ್ಷಕ್ಕೆ ಮಗು ಮಾರಾಟ: ವೈದ್ಯೆ ಸೇರಿ 6 ಮಂದಿ ಬಂಧನ

    Published

    on

    ಮಂಗಳೂರು/ದಾವಣಗೆರೆ: ನಕಲಿ ದಾಖಲೆಗಳನ್ನು ಸೃಷ್ಟಿಸಿ ನವಜಾತ ಶಿಶುವೊಂದನ್ನು ರೂ.4 ಲಕ್ಷಕ್ಕೆ ಮಾರಾಟ ಮಾಡಿದ ಜಾಲ ಭೇದಿಸಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಠಾಣೆಯ ಪೊಲೀಸರು, ವೈದ್ಯೆ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.


    ದಾವಣಗೆರೆಯ ಎಂ.ಕೆ.ಮೆಮೋರಿಯಲ್‌ ಆಸ್ಪತ್ರೆಯ ವೈದ್ಯೆ ಭಾರತಿ, ಶಿಶುವಿನ ತಾಯಿ ಕಾವ್ಯಾ, ಶಿಶು ಖರೀದಿಸಿದ್ದ ಜಯಾ ಹಾಗೂ ಪ್ರಶಾಂತ್‌ ಕುಮಾರ್‌ ದಂಪತಿ, ಮಧ್ಯವರ್ತಿಗಳಾದ ವಾದಿರಾಜ್‌, ಮಂಜಮ್ಮ, ಬಂಧಿತರು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರಾಟವಾಗಿದ್ದ ಎರಡೂವರೆ ತಿಂಗಳ ಗಂಡು ಶಿಶುವಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
    ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ಕಾವ್ಯಾ ಎಂಬುವರಿಗೆ ಸೇರಿದ ಮಗುವನ್ನು ಮಧ್ಯವರ್ತಿಗಳಾದ ವಾದಿರಾಜ್ ಮತ್ತು ಮಂಜಮ್ಮ ಎಂಬುವರ ಮೂಲಕ ಎಂಕೆ ಸ್ಮಾರಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ ಭಾರತಿ ಅವರು ಜಯ ಮತ್ತು ಪ್ರಶಾಂತ್ ಕುಮಾರ್ ಕುರುಡೇಕರ್ ಅವರಿಗೆ ಮಾರಾಟ ಮಾಡಿದ್ದಾರೆಂದು ಮಾಹಿತಿ ದೊರಕಿತ್ತು.
    ಈ ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಟಿ.ಎನ್.ಕವಿತಾ ಮತ್ತು ತಂಡ ವಿನೋಭನಗರದಲ್ಲಿರುವ ಜಯ ಮತ್ತು ಪ್ರಶಾಂತ್ ಅವರ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಜನನ ಪ್ರಮಾಣಪತ್ರ ಸೇರಿ ಹಲವು ನಕಲಿ ಪ್ರಮಾಣಪತ್ರಗಳನ್ನು ವಶಕ್ಕೆ ಪಡೆಯುವ ಮುಖಾಂತರ ಪ್ರಕರಣ ದಾಖಲಿಸಲಾಯಿತು

    LATEST NEWS

    ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌‌ಗೆ ಬೈಕ್ ಡಿ*ಕ್ಕಿ; ಮೂವರ ದು*ರ್ಮರಣ

    Published

    on

    ಮಂಗಳೂರು/ಕಲಬುರಗಿ : ರಸ್ತೆ ಬದಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌‌ಗೆ ಬೈಕ್ ಡಿ*ಕ್ಕಿಯಾಗಿ ಮೂವರು ಸವಾರರು ಮೃ*ತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ಬುಧವಾರ(ಅ.10) ರಾತ್ರಿ ಸಂಭವಿಸಿದೆ.

    ಗುರೂಜಿ ತಾಂಡಾ ನಿವಾಸಿಗಳಾದ ಅರ್ಜುನ್ ರಾಠೋಡ್, ರೋಹಿತ್ ಹಾಗೂ ಕೃಷ್ಣ ಮೃ*ತ ದುರ್ದೈವಿಗಳು. ಮೂವರು ಲಾಡ್ಲಾಪುರ ಗ್ರಾಮದಿಂದ ತಾಂಡಾಕ್ಕೆ ಹೋಗುತ್ತಿದ್ದರು. ಟ್ರ್ಯಾಕ್ಟರ್‌‌ಗೆ ಬೈಕ್​ ಡಿ*ಕ್ಕಿ ಹೊಡೆದ ಪರಿಣಾಮ ತೀವ್ರ ಗಾ*ಯಗೊಂಡ ಮೂವರೂ ಸ್ಥಳದಲ್ಲೇ ಕೊ*ನೆಯುಸಿರೆಳೆದಿದ್ದಾರೆ.

    ಇದನ್ನೂ ಓದಿ : ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರು ಸಿಗರೇಟ್ ಸೇದ್ತಾರೆ, ಆದರೆ ತೋರಿಸಲ್ಲ!

    ಸ್ಥಳಕ್ಕೆ ವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    ಈ ವರ್ಷ ಹಾಲಿನ ದರ ಏರಿಕೆಗೆ ತಾತ್ಕಾಲಿಕ ಸ್ಥಗಿತ

    Published

    on

    ಬೆಂಗಳೂರು: ಹಾಲಿನ ದರ ಏರಿಕೆ ಮಾಡುವುದಾಗಿ ಕೆಎಂಎಫ್ ಹಲವು ಬಾರಿ ಸರ್ಕಾರದೊಂದಿಗೆ ಮಾತು ಕತೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈಗ ಸರ್ಕಾರ ಹಾಗೂ ಕೆಎಂಎಫ್ ದರ ಏರಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

    ಕಳೆದ ಕೆಲ ದಿನಗಳ ಹಿಂದಷ್ಟೇ ಸಿಎಂ ಸಮಾವೇಶವೊಂದರಲ್ಲಿ ಬಹಿರಂಗವಾಗಿ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಅದು ಕೂಡ ಏರಿಕೆ ಕಂಡ ಹಣವನ್ನ ನೇರವಾಗಿ ರೈತರಿಗೆ ತಲುಪಿಸುವ ಬಗ್ಗೆ ಕೂಡ ಸುಳಿವು ಕೊಟ್ಟಿದ್ದರು.

    ಆ ಬೆನ್ನಲ್ಲೆ ಕೆಎಂಎಫ್ ಕೂಡ ಏರಿಕೆ ಸಂಬಂಧ ಕೆಲ ಸಭೆಗಳನ್ನು ಮಾಡಿ ಏರಿಕೆಗೆ ಬೇಕಾದಂತ 2023ರ ಪ್ರಸ್ತಾವನೆ ಸಲ್ಲಿಕೆಗೂ ತಯಾರಿ ಮಾಡಿತ್ತು. ಈ ಬೆನ್ನಲ್ಲೆ ಸದ್ಯ ದರ ಏರಿಕೆ ಬೇಡ ಅನ್ನೋ ನಿರ್ಧಾರಕ್ಕೆ ಸರ್ಕಾರ ಬಂದಿದೆ.

    ಇದೇ ವರ್ಷ ಈಗಾಗಲೇ ಎರಡು ಬಾರಿ ಏರಿಕೆ ಕಂಡಿದ್ದ ಹಾಲಿನ ದರ, ಮತ್ತೆ ಏರಿಕೆಯಾದ್ರೆ ಹೇಗೆ ಅನ್ನೋ ಆತಂಕ ಗ್ರಾಹಕರಲ್ಲಿ ಮನೆ ಮಾಡಿತ್ತು. ಅಲ್ಲದೇ ಈಗಾಗಲೇ . ಲೀಟರ್ ಗೆ 48 ರೂ ತಲುಪಿದ್ದು, ಮತ್ತೆ ಹೆಚ್ಚಾದರೆ ಹೇಗೆ ಅನ್ನೋ ಆತಂಕ ಕೂಡ ಗ್ರಾಹಕರಲ್ಲಿ ಮೂಡಿತ್ತು.

    Continue Reading

    LATEST NEWS

    ‘ಕ್ರೈಂ ಗಣೇಶ್‌’ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ ಗಣೇಶ್‌ ಇನ್ನಿಲ್ಲ

    Published

    on

    ಮಂಗಳೂರು/ಬೆಂಗಳೂರು : ಕ್ರೈಂ ಗಣೇಶ್‌ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ ಗಣೇಶ್‌ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದಾಗಿ ನಗರದ ಮಹಾವೀರ್ ಜೈನ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಕಳೆದ 20 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಸದ್ಯ ಟಿವಿ 5 ಚಾನಲ್ ನಲ್ಲಿ ಔಟ್ ಪುಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.

    ಇದನ್ನೂ ಓದಿ : WATCH VIDEO : ಅಬ್ಬಬ್ಬಾ! ಕಾಳಿಂಗ ಸರ್ಪಕ್ಕೆ ನೀರುಣಿಸಿದ ಭೂಪ! ದೈತ್ಯ ಹಾವು ಏನ್ಮಾಡಿತು ಗೊತ್ತಾ!?

    ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯವರಾಗಿದ್ದ ಗಣೇಶ್‌ ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.  ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್‌ ಎಂದು ಪರಿಚಿತರಾಗಿದ್ದ ಗಣೇಶ್‌ ಅವರ ಕ್ರೈಂ ವರದಿಗಾರಿಕೆಯಲ್ಲಿ ಹೆಸರುವಾಸಿಯಾಗಿದ್ದರು.

    Continue Reading

    LATEST NEWS

    Trending