FILM
ಇರಲು ಮನೆ ಇರಲಿಲ್ಲ; ಮೆಜೆಸ್ಟಿಕ್ನಲ್ಲೇ ಸುತ್ತಾಡಿದ್ದ ಸಿಹಿ ಕುಟುಂಬ; ಕಷ್ಟಗಳ ನೆನೆದು ಪುಟಾಣಿ ಕಣ್ಣೀರು
ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದು. ಸೀತಾರಾಮ ಸೀರಿಯಲ್ನಲ್ಲಿ ಮುಖ್ಯವಾಗಿ ಸಿಹಿ ಪಾತ್ರ ವೀಕ್ಷಕರಿಗೆ ತುಂಬಾ ಇಷ್ಟವಾಗಿ ಬಿಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ ಇಂಥ ಮಗುವಿನ ಮಗಳನ್ನು ಕೊಡು ಅಂತ ಹೇಳಿಕೊಳ್ಳಿದ್ದಾರೆ ವೀಕ್ಷಕರು. ಅಷ್ಟರ ಮಟ್ಟಿಗೆ ಸಿಹಿ ಪಾತ್ರ ವೀಕ್ಷಕರಲ್ಲಿ ನಾಟಿದೆ.
ಇನ್ನು ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರಕ್ಕೆ ರಿತು ಸಿಂಗ್ ಅವರು ಜೀವ ತುಂಬುತ್ತಿದ್ದಾರೆ. ಸಿಹಿಯ ಮುದ್ದಾದ ಮಾತು, ನಟನೆ ಎಲ್ಲರಿಗೂ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಹಿ ನಟನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತವೆ. ಆದರೆ ಇದೇ ಸಿಹಿ ಕುಟುಂಬಸ್ಥರು ಡ್ರಾಮಾ ಜೂನಿಯರ್ಸ್ ಬರುವ ಮುನ್ನ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ.
ಡ್ರಾಮಾ ಜೂನಿಯರ್ಸ್ ಮುನ್ನ ಸಿಹಿ ತಾಯಿ ಬೆಂಗಳೂರಿಗೆ ಬಂದಾಗ ತುಂಬಾನೆ ಕಷ್ಟದಲ್ಲಿದ್ದರು. ಇರೋದಕ್ಕೆ ಮನೆ ಇರಲಿಲ್ಲ, ಕೈಯಲ್ಲಿ ಹಣ ಇಲ್ಲದೇ ಮೆಜೆಸ್ಟಿಕ್ನಲ್ಲಿ ಸುತ್ತಾಡುತ್ತಿದ್ದರಂತೆ. ನಾಳೆಯ ಜೀವನ ಹೇಗೆ ಅನ್ನೋ ಪ್ರಶ್ನೆಗೆ ಅವರ ಬಳಿ ಉತ್ತರನೇ ಇರಲಿಲ್ಲವಂತೆ. ಆದರೆ ಸಿಹಿಗೆ ಅವಕಾಶ ಸಿಕ್ಕಮೇಲೆ ಎಲ್ಲವೂ ಬದಲಾಗಿದೆ. ಆ ಮನೆಯ ಧೈರ್ಯ ಅಂದ್ರೆ ಸಿಹಿ ಎನ್ನುವಷ್ಟು ಸಹಾಯ ಮಾಡುತ್ತಿದ್ದಾಳೆ ಈ ರೀತು ಸಿಂಗ್. ಇನ್ನು ಈ ವಿಚಾರ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ನಿರೂಪಕ ಅಕುಲ್ ಬಾಲಾಜಿ ಹೇಳುತ್ತಿದ್ದರು. ಈ ವೇಳೆ ರೀತು ಸಿಂಗ್ ತಾಯಿ ಮತ್ತು ಸಿಹಿ ಕಣ್ಣೀರು ಹಾಕಿದ್ದಾರೆ.
BIG BOSS
‘ಮೆಟ್ಟು ತಗೊಂಡು ಹೊಡಿತೀನಿ’: ಮತ್ತೆ ನಾಲಿಗೆ ಹರಿಬಿಟ್ಟ ಚೈತ್ರಾ ಕುಂದಾಪುರ
ಜಾಸ್ತಿ ಮಾತನಾಡುತ್ತಾರೆ ಎಂಬ ಕಾರಣದಿಂದಲೇ ಚೈತ್ರಾ ಕುಂದಾಪುರ ಅವರು ಹೈಲೈಟ್ ಆಗುತ್ತಾರೆ. ಆದರೆ ಆ ಮಾತೇ ಅವರಿಗೆ ಮುಳುವಾಗುತ್ತಿದೆ. ಕಳೆದ ವಾರ ಅವರು ‘ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್ಗೆ ಹೇಳಿದ್ದರು. ಆ ಮಾತನ್ನು ಕಿಚ್ಚ ಸುದೀಪ್ ಅವರು ಕಟುವಾಗಿ ಖಂಡಿಸಿದ್ದರು. ಹಾಗಂತ ಚೈತ್ರಾ ಅವರು ತಮ್ಮ ಮಾತಿನ ವರಸೆಯನ್ನು ಬದಲಿಸಿಕೊಂಡಿದ್ದಾರಾ? ಖಂಡಿತಾ ಇಲ್ಲ. ಸೋಮವಾರದ (ಅಕ್ಟೋಬರ್ 21) ಸಂಚಿಕೆಯಲ್ಲಿ ಅವರು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಚಪ್ಪಲಿಯಲ್ಲಿ ಹೊಡೆಯುವ ಬಗ್ಗೆ ಅವರು ಮಾತನಾಡಿದ್ದಾರೆ.
ಕಳೆದ ವಾರ ಜಗದೀಶ್ ಅವರಿಗೆ ಉಗ್ರಂ ಮಂಜು ಅವರು ಚಪ್ಪಲಿ ತೋರಿಸಿದ್ದರು. ಅದು ಸರಿಯಲ್ಲ ಎಂದು ಸುದೀಪ್ ಅವರು ಹೇಳಿದ್ದರು. ಇಂಥ ಹಲವು ಕಾರಣಗಳಿಂದಾಗಿ ಮನೆಯ ಸದಸ್ಯರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಅಷ್ಟಾದರೂ ಕೂಡ ಚೈತ್ರಾ ಅವರು ಮಾತಿನ ವರಸೆ ಬದಲಾಯಿಸಿಕೊಂಡಿಲ್ಲ. ಸಂದರ್ಭ ಬಂದರೆ ತಾವು ಮೆಟ್ಟಿನಲ್ಲಿ ಹೊಡೆಯುವುದಾಗಿ ಚೈತ್ರಾ ಹೇಳಿದ್ದಾರೆ.
ಈ ಮೊದಲು ಹಂಸಾ ಅವರ ಬಗ್ಗೆ ಗೋಲ್ಡ್ ಸುರೇಶ್ ಏನೇನೋ ಕಮೆಂಟ್ ಮಾಡಿದ್ದರು. ಹಂಸಾ ಅವರದ್ದು ಲವ್ ಸ್ಟೋರಿ ನಡೆಯುತ್ತಿತ್ತು ಎಂದು ಅವರು ಹೇಳಿದ್ದರು. ಅದರಿಂದ ಹಂಸಾಗೆ ಬೇಸರ ಆಯಿತು. ಹಾಗಾಗಿ ಅವರು ಈ ವಿಚಾರವನ್ನು ಚೈತ್ರಾ ಕುಂದಾಪುರ ಜೊತೆ ಚರ್ಚೆ ಮಾಡುತ್ತಿದ್ದರು. ಆಗ ಚೈತ್ರಾ ಅವರ ಮಾತುಗಳು ಮೆಟ್ಟಿನ ತನಕ ಹೋಯಿತು.
‘ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತಾಡಿದರೆ ಮೆಟ್ಟು ತಗೊಂಡು ಹೊಡಿತೀನಿ. ಅದರಿಂದ ನಾನು ಹೊರಗೆ ಹೋದ್ರೂ ಚಿಂತೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ’ ಎಂದು ಚೈತ್ರಾ ಕುಂದಾಪುರ ಅವರ ಹೇಳಿದ್ದಾರೆ. ಇಂಥ ಮಾತುಗಳನ್ನು ಆಡಿದ್ದಕ್ಕೆ ಸುದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ಯಾವ ರೀತಿ ಪಂಚಾಯ್ತಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.
FILM
‘ಮನಸಾರೆ ನಿನ್ನ’ ಎನ್ನುತ್ತಾ ರೊಮ್ಯಾಂಟಿಕ್ ಮೂಡ್ಗೆ ಜಾರಿದ ನಿವೇದಿತಾ ಗೌಡ
‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗಿನತ್ತ ಮುಖ ಮಾಡಿರುವ ನಿವೇದಿತಾ ಸಿನಿಮಾ ಬದಲು ಆಲ್ಬಂ ಸಾಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ.
ತೆಲುಗಿನ ‘ವಾಲು ಕಳ್ಳತಾ’ ಎಂಬ ಆಲ್ಬಂ ಸಾಂಗ್ನಲ್ಲಿ ಗೌರಿ ನಾಯ್ಡು ಜೊತೆ ನಿವೇದಿತಾ ನಟಿಸಿದ್ದು, ಇದು ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ‘ಮನಸಾರೆ ನಿನ್ನ’ ಎಂದು ಕನ್ನಡದಲ್ಲೂ ಸಾಂಗ್ ಮಾಡಲಾಗಿದೆ. ಆದರೆ ಸಾಂಗ್ ರಿಲೀಸ್ ಆಗೋದು ಯಾವಾಗ? ಎಂದು ಕಾದುನೋಡಬೇಕಿದೆ.
ತೆಲುಗಿನಲ್ಲಿ ನಟ, ಬರಹಗಾರ, ಸಂಕಲನಕಾರ, ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿರುವ ಗೌರಿ ನಾಯ್ಡು ಜೊತೆ ಹಾಡಿನಲ್ಲಿ ನಿವೇದಿತಾ ರೊಮ್ಯಾನ್ಸ್ ಮಾಡಿದ್ದಾರೆ. ಸದ್ಯ ರಿಲೀಸ್ ಮಾಡಿರುವ ಪೋಸ್ಟರ್ಗೆ ಬಗೆ ಬಗೆಯ ಕಾಮೆಂಟ್ಗಳು ಬರುತ್ತಿವೆ.
ಇನ್ನೂ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾದಲ್ಲಿ ನಿವೇದಿತಾ ನಾಯಕಿಯಾಗಿ ನಟಿಸಿದ್ದಾರೆ. ಸೃಜನ್ ಲೋಕೇಶ್ ನಟನೆಯ ‘ಜಿಎಸ್ಟಿ’ ಸಿನಿಮಾದಲ್ಲಿ ನಿವೇದಿತಾ ನಟಿಸಿದ್ದಾರೆ.
FILM
‘ಪುಷ್ಪ-2’ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ನಟಿ !! ಯಾರು ಗೊತ್ತಾ ?
ಮಂಗಳೂರು/ಹೈದರಾಬಾದ್: ‘ಅನಿಮಲ್’ ನಟಿ ತೃಪ್ತಿ ದಿಮ್ರಿ ‘ಪುಷ್ಪ-2’ ನಲ್ಲಿ ಸ್ಪೆಷೆಲ್ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತು ಕೇಳಿ ಬರುತಿದ್ದು. ಇದೀಗ ಬಾಲಿವುಡ್ನ ಖ್ಯಾತ ನಟಿ ಶ್ರದ್ಧಾ ಕಪೂರ್ ‘ಪುಷ್ಪ-2’ ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂದು ವರದಿಯಾಗಿದೆ.
ಖ್ಯಾತ ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಪುಷ್ಪ-2ʼರಿಲೀಸ್ಗೆ ದಿನಗಣನೆ ಪ್ರಾರಂಭವಾಗಿದೆ. ವರ್ಷದ ಕೊನೆಯಲ್ಲಿ ಸಿನಿಮಂದಿಗೆ ಭರ್ಜರಿ ಮನರಂಜನೆ ನೀಡುವ ನಿಟ್ಟಿನಲ್ಲಿ ‘ಪುಷ್ಪ-2’ ತೆರೆಕಾಣಲಿದೆ.
2022ರಲ್ಲಿ ತೆರೆಕಂಡ ‘ಪುಷ್ಪ’ ಮೊದಲ ಭಾಗ ಪ್ಯಾನ್ ಇಂಡಿಯಾದಲ್ಲಿ ಮೋಡಿ ಮಾಡಿತ್ತು. ನಟನೆ, ಹಾಡು, ಡ್ಯಾನ್ಸ್, ಮಾಸ್ ಹೀಗೆ ಎಲ್ಲ ವಿಭಾಗದಲ್ಲೂ ಸಿನಿಮಾ ಸಖತ್ ಸದ್ದು ಮಾಡಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.
‘ಸ್ತ್ರೀ-2’ ಮೂಲಕ ತೆಲುಗು ಭಾಷಾ ವಲಯದಲ್ಲಿ ಮಿಂಚಿರುವ ಶ್ರದ್ಧಾ ಕಪೂರ್ ‘ಪುಷ್ಪ-2’ ಸಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜತೆ ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್, ಡಾಲಿ ಧನಂಜಯ್, ಜಗದೀಶ್ ಪ್ರತಾಪ್ ಭಂಡಾರಿ, ಸುನಿಲ್ ಮುಂತಾದವರು ನಟಿಸಿದ್ದಾರೆ. ಬರುವ ಡಿಸೆಂಬರ್ 6 ರಂದು ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ.
- BIG BOSS6 days ago
ಲಾಯರ್ ಜಗದೀಶ್ ಹೊರಗೆ, ಪತ್ನಿ ಒಳಗೆ: ಕಲರ್ಸ್ ಶೋನಲ್ಲಿ ಜಗದೀಶ್ ಪತ್ನಿ
- BIG BOSS5 days ago
ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ: ಬಿಗ್ ಬಾಸ್ ನಿಂದ ಹೊರಬಂದ ಜಗದೀಶ್ ಫಸ್ಟ್ ರಿಯಾಕ್ಷನ್!
- BIG BOSS6 days ago
ಕೊನೆಗೂ ಸುದೀಪ್ ಹೇಳಿದ ಬದಲಾವಣೆಯನ್ನು ಜಾರಿಗೆ ತಂದ ಬಿಗ್ ಬಾಸ್; ಏನದು ?
- LATEST NEWS5 days ago
ಕೀಬೋರ್ಡ್ನಲ್ಲಿ ಎಫ್ ಮತ್ತು ಜೆ ಅಕ್ಷರಗಳ ಕೆಳಗೆ ಗೆರೆ ಏಕೆ ಇರುತ್ತದೆ ಗೊತ್ತಾ?