Connect with us

    BIG BOSS

    BBK11: ಬಿಗ್​ಬಾಸ್​ ಸ್ಪರ್ಧಿಗಳಿಗೆ ಮೈಚಳಿ ಬಿಡಿಸಿದ ಸುದೀಪ್​; ಇಲ್ಲಿವೆ ಟಾಪ್​ 10 ಕಿಚ್ಚನ ಪಂಚಿಂಗ್ ಡೈಲಾಗ್‌ಗಳು 

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಈ ಬಾರಿಯ ಬಿಗ್​ಬಾಸ್​ ಸೀಸನ್​ 11ರ ಮೂರನೇ ವಾರದಲ್ಲಿ ಕಿಚ್ಚ ಸುದೀಪ್​ ಸ್ಪರ್ಧಿಗಳ ವಿರುದ್ಧ ಕೆಂಡಮಂಡಲರಾಗಿ ಮಾತಾಡಿದ್ದಾರೆ.

    ಜೊತೆಗೆ ಸ್ಪರ್ಧಿಗಳು ಮಾಡುತ್ತಿರೋ ಸರಿ ತಪ್ಪುಗಳ ಬಗ್ಗೆ ಮಾತಾಡಿದ್ದಾರೆ. ಅಲ್ಲದೇ ಕೆಲವು ಸ್ಪರ್ಧಿಗಳಿಗೆ ಕೆಂಡಮಂಡಲವಾಗಿ ಮಾತಾಡಿದ್ದಲ್ಲದೇ ಮೈಚಳಿ ಬಿಡಿಸಿದ್ದಾರೆ. ಹೌದು, ನಿನ್ನೆಯ ಎಪಿಸೋಡ್​ನಲ್ಲಿ ಬಿಗ್​ಬಾಸ್​ ವೇದಿಕೆಗೆ ಬಂದ ಕಿಚ್ಚ ತುಂಬಾ ಸಿಟ್ಟಾಗಿದ್ದರು. ಸಿಟ್ಟಿನಿಂದಲೇ ಶೋ ಶುರು ಮಾಡಿದ ಕಿಚ್ಚ ಮನೆಯಲ್ಲಿರೋ ಸ್ಪರ್ಧಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಈ ವಾರದ ಬಿಗ್​ಬಾಸ್​ ಮನೆ ರಣಾಂಗಣವಾಗಿತ್ತು. ಇನ್ನು ಕಿಚ್ಚ ಸುದೀಪ್​ ಒಬ್ಬೊಬ್ಬ ಸ್ಪರ್ಧಿಗಳಿಗೆ ಅರ್ಥ ಪೂರ್ಣವಾದ ಮಾತನ್ನು ಹೇಳಿದ್ದಾರೆ. ಅದರಲ್ಲಿ ಟಾಪ್​ 10 ಪಂಚ್​ಗಳನ್ನು ಈ ಕೆಳಕಂಡತೆ ನೀಡಲಾಗಿದೆ.

    ಕಿಚ್ಚ ಸುದೀಪ್​ ಸ್ಪರ್ಧಿಗಳಿಗೆ ಕೊಟ್ಟ ಟಾಪ್​ 10 ಪಂಚ್ ಇಲ್ಲಿವೆ:

    1. ತಪ್ಪು ಮಾಡಿದವರು ಹೊರಗಡೆ ಹೋಗಿದ್ದಾರೆ. ಆದರೆ, ನಿಮ್ಮ ಪೈಕಿ ಎಷ್ಟು ಜನರು ಸರಿ ಇದ್ದೀರಿ ಎಂದೇ ಕಿಚ್ಚ ಸುದೀಪ್‌ ಪ್ರಶ್ನೆ ಮಾಡಿದ್ದಾರೆ.

    2. ಒಬ್ಬ ವ್ಯಕ್ತಿ ತನ್ನ ಚಪ್ಪಲಿಯನ್ನು ಉಗ್ರಂ ಮಂಜು ಎತ್ತಿ ಬಿಸಾಡುತ್ತಾನೆ. ಅದು ನಿಮಗೆ ಒಕೆನಾ? ಪ್ರಾಮಾಣಿಕತೆ ಅನ್ನೋ ಶಬ್ದವೇ ಈ ಮನೆಗೆ ಎಂದೂ ಸೂಟ್‌ ಆಗೋದಿಲ್ಲ ಅಂತ ಕಿಡಿಕಿಡಿಯಾಗಿದ್ದಾರೆ.

    3. ಮಾತುಗಳಿಂದಲೇ ಒಬ್ಬ ವ್ಯಕ್ತಿ ಮನೆಯಿಂದ ಹೊರಗಡೆ ಹೋದ ಅನ್ನೋದಾಗಿದ್ರೆ, ನೀವು ಮಾತಾಡಿರೋ ಕೆಲವು ತಪ್ಪು ಮಾತುಗಳನ್ನು ಇಟ್ಟುಕೊಂಡು ನಿಮ್ಮನ್ನು ಯಾಕೆ ಮನೆಯಲ್ಲಿ ಇಟ್ಟುಕೊಂಡಿರಬೇಕು ಎಂದು ಮಾನಸಗೆ ನೇರಪ್ರಶ್ನೆ ಮಾಡಿದ್ದಾರೆ.

    4. ಹೆಣ್ಣುಮಕ್ಕಳ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ ಎಂದು ನೀವು ಹೇಳುತ್ತೀರಿ. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂದ್ರೆ ಅಲ್ಲಿ ಯಾರೂ ಕೂಡ ಅಪ್ಪನಿಗೆ ಬೈತಾ ಇರೋದಿಲ್ಲ. ಅವನು ಅಲ್ಲಿ ತಾಯಿಗೆ ಬೈತಾ ಇರ್ತಾನೆ ಎಂದು ಸಿಟ್ಟಿನಲ್ಲಿಯೇ ಚೈತ್ರಾಗೆ ತಿರುಗೇಟು ಕೊಟ್ಟಿದ್ದಾರೆ.

    5. ಕ್ಯಾಪ್ಟನ್​ ಶಿಶಿರ್​ ಅನುಷಾ ರೈ ಅವರನ್ನು ಮನೆಯಿಂದ ಹೊರಗೆ ಹಾಕಲು ನೇರವಾಗಿ ನಾಮಿನೇಟ್ ಮಾಡಿದ್ದರು. ಇದೇ ಕೋಪದಲ್ಲಿ ನನಗೆ ಬಕೆಟ್ ಹಿಡಿಯೋದಕ್ಕೆ ಬರೋದಿಲ್ಲ ಗುರು ಅಂತ ಕಿಡಿಕಾಡಿದ್ದಾರೆ. ಆದರೆ ಇದನ್ನು ಐಶ್ವರ್ಯಾ ಶಿಶಿರ್​ ನಿಮಗೆ ಹೇಳಿದ್ದು ಅಂತ ಪರೋಷವಾಗಿ ಸನ್ನೆ ಮಾಡಿ ತೋರಿಸಿದ್ದರು. ಈ ವಿಚಾರದ ಬಗ್ಗೆ ಕೂಡ ಕಿಚ್ಚ ಸುದೀಪ್ ಪಂಚಾಯ್ತಿಯಲ್ಲಿ ಬಿಟ್ಟಿದ್ದಾರೆ.

    6. ಬಿಗ್​ಬಾಸ್​ ಮನೆಗೆ ತಾವೇ ಅಭಿನಂದನೆ ಬರೆದಿದ್ದ ಕೇಕ್​ ಕಳುಹಿಸಿದ ಕಿಚ್ಚ ಸುದೀಪ್​ ಸ್ಪರ್ಧಿಗಳ ಕೈಯಲ್ಲೇ ಕಟ್​ ಮಾಡಿದ್ದರು. ಇದಕ್ಕೆ ಮುಖ್ಯ ಕಾರಣ ​ಈ ಸೀಸನ್​ ನನಗೆ ಇಷ್ಟವಾಗದ ಕಳೆದ ಸೀಸನ್​ ಅನ್ನು ಬಿಟ್​ ಮಾಡುತ್ತೆ ಅಂತ ಎಂದು ಹೇಳಿದ್ದಾರೆ.

    7. ನನಗೆ ಯಾರಾದರೂ ಕೇಳಿದ್ರೆ ಯಾವ ಸೀಸನ್​ ಇಷ್ಟ ಇಲ್ಲ ಅಂತ ಕೇಳಿದ್ರೆ ನಾನು 6 ಅಂತ ಹೇಳುತ್ತಿದ್ದೆ. ಆದರೆ ​ಈಗ ಸೀಸನ್​ 11 ಅಂತ ಹೇಳಬೇಕು ಅಂತ ಪಂಚ್​ ಕೊಟ್ಟಿದ್ದಾರೆ.

    8. ಹಂಸ ಅವರ ವಿಚಾರವಾಗಿಯೂ ಕಿಚ್ಚ ಸುದೀಪ್​ ಅವರು ಮಾತಾಡಿದ್ದಾರೆ. ಜಗದೀಶ್ ಅವರು ಯಾಕೆ ಸಿಟ್ಟಾಗಿದ್ದರು ಅನ್ನೋ ಸತ್ಯವನ್ನ ಸುರೇಶ್ ತಮ್ಮ ಬಾಯಿಂದ ಹೇಳಿದ್ದಾರೆ. ಕ್ರಶ್ ಆಫ್ ದಿ ಕರ್ನಾಟಕ ಆದ್ಮೇಲೆ ಹಂಸ ಆದ್ಮೇಲೆ ಮನೆಯ ಮಂದಿ ಬದಲಾದ್ರು. ಆ ವಿಚಾರದಲ್ಲಿ ಹಂಸ ಕೂಡ ಬದಲಾಗಿದ್ದರು. ಜಗದೀಶ್ ಅವರನ್ನ ದೂರವೇ ಇಟ್ಟರು ಅಂತ ಹೇಳಿದ್ದಾರೆ. ಇದೇ ವಿಚಾರಕ್ಕೆ ಕಿಚ್ಚ ಸುದೀಪ್​ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

    9. ಬಿಗ್​ಬಾಸ್​ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಜಗದೀಶ್​ ಅವರು ಒಂದು ಕಡೆ ಕುಳಿತುಕೊಂಡಾಗ ತಮಾಷೆ ಮಾಡುತ್ತಿದ್ದರು. ಆಗ ಅನುಷಾ ರೈ ನೀವು ಎದ್ದು ಹೋಗಬೇಕಾಗಿತ್ತು ಅಂತ ಕಿಚ್ಚ ಉದಾಹರಣೆ ಕೊಡುವ ಮೂಲಕವೇ ಕ್ಲಾಸ್​ ತೆಗೆದುಕೊಂಡಿದ್ದಾರೆ. ಜೊತೆಗೆ ಅವರ ವ್ಯಕ್ತಿತ್ವದ ಬಗ್ಗೆ ಕೂಡ ಮಾತಾಡಿದ್ದಾರೆ.

    10. ಹೊಸಬರು ನಮ್ಮ ಮನೆ ಬಾಗಿಲಿಗೆ ಬಂದಾಗ ಆಗ ನಾನು ಅವರ ಕೈ ಹಿಡಿದುಕೊಂಡು ಎತ್ತಿ ನಿಂತುಕೊಂಡು ಇರುತ್ತೇವೆ. ಆದರೆ, ಅವರು ನನ್ನ ಪರವಾಗಿಯೇ ನಿಂತಿದ್ದಾರೆ ಅಂತ ನಾನು ಹೇಳಿಲ್ಲ. ಆದರೆ ಇನ್ನೊಬ್ಬರು ತಮಾಷೆ ಮಾಡಬೇಕಾದರೇ ಇಡೀ ಪ್ರಪಂಚ ಅವರ ಬಗ್ಗೆ ಮಾತಾಡುತ್ತಿದ್ದಾಗ ಅವರ ಪಕ್ಕ ಕುಳಿತುಕೊಳ್ತಾರೆ ಅಲ್ವಾ ಮೇಡಂ ಅಲ್ಲಿಗೆ ಅವರು ನನ್ನ ಭಾಗಕ್ಕೆ ಸತ್ರು ಅಂತ ಲೆಕ್ಕ ಟಾಂಗ್​ ಕೊಟ್ಟಿದ್ದಾರೆ.

    ಸುದೀಪ್‌ ಅವರ ಒಂದೊಂದು ಪ್ರಶ್ನೆಗಳಿಗೂ ಮನೆಯ ಸದಸ್ಯರ ತಲೆ ಕೆಳಗಾಗಿದೆ. ಸ್ಪರ್ಧಿಗಳ ಮುಖಕ್ಕೆ ಹೊಡೆದಂತೆ ಮಾತಾಡಿ ತಮ್ಮ ತಪ್ಪನ್ನು ಹೇಳಿದ್ದಾರೆ.

    BIG BOSS

    BBK11: ಬಿಗ್​ಬಾಸ್‌ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್​ ಸುರೇಶ್ ಗೆ ಈ ವಾರದ ಕಳಪೆ

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರ ಈ ವಾರದ ಕಳಪೆ ಪಟ್ಟವನ್ನು ಮನೆಮಂದಿ ಈ ಸ್ಪರ್ಧಿಗೆ ಕೊಟ್ಟಿದ್ದಾರೆ. ಮನೆಯ ಮಂದಿಯ ನಿರ್ಧಾರಕ್ಕೆ ಕೆಂಡ ಕಾರಿದ್ದಾರೆ ಈ ಸ್ಪರ್ಧಿ. ಹೌದು, ಈ ವಾರದ ಕಳಪೆ ಪಟ್ಟವನ್ನು ಸ್ಪರ್ಧಿಗಳು ಗೋಲ್ಡ್​ ಸುರೇಶ್​ಗೆ ಕೊಟ್ಟಿದ್ದಾರೆ. ಅಲ್ಲದೇ ಅವರ ಆಟ ಹೇಗಿತ್ತು? ಏನ್​ ಮಾಡಬಾರದಾಗಿತ್ತು ಅಂತ ಹೇಳಿದ್ದಾರೆ.

    ಕನ್ನಡದ ಬಿಗ್​ಬಾಸ್​ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 13ರಲ್ಲಿ ಓರ್ವ ಸ್ಪರ್ಧಿಗೆ ಬಿಗ್​ಬಾಸ್​ ಮನೆಯ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಗೋಲ್ಡ್​ ಸುರೇಶ್​ಗೆ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳೇ ಗೋಲ್ಡ್​ ಸುರೇಶ್​ಗೆ ಏಕೆ ಕಳಪೆ ಪಟ್ಟ ಕೊಟ್ಟಿದ್ದೇವೆ ಅಂತ ವಿವರವಾಗಿ ಮಾಹಿತಿ ನೀಡಿದ್ದಾರೆ.

    ಇನ್ನೂ, ಮನೆಯ ಎಲ್ಲ ಸ್ಪರ್ಧಿಗಳು ಅವರ​ ಹೆಸರನ್ನು ಎತ್ತಿದ ಕೂಡಲೇ ಗೋಲ್ಡ್​ ಸುರೇಶ್ ಕೆಂಡಾಮಂಡಲ ಆಗಿದ್ದಾರೆ. ನನ್ನ ಕೈಗೆ ನೋವಾಗಿದ್ದರು, ನೀವು ಎಲ್ಲರೂ ನನ್ನನ್ನೂ ಎಳೆದಿದ್ದೀರಾ ಅಂತ ಸಿಟ್ಟಾಗಿದ್ದಾರೆ. ಆದರೂ ಕೂಡ ಈ ವಾರ ಬಿಗ್​ಬಾಸ್​ನ ಕಳಪೆ ಪಟ್ಟ ಗಿಟ್ಟಿಸಿಕೊಂಡು ಜೈಲಿಗೆ ಹೋಗಿದ್ದಾರೆ.

    Continue Reading

    BIG BOSS

    ಚೈತ್ರಾ ಕುಂದಾಪುರ ವಿಚಿತ್ರ ಪೂಜೆಗೆ ಬಿಗ್‌ಬಾಸ್ ಮನೆಯ ಎಲ್ರೂ ಶಾಕ್‌; ವಿಡಿಯೋ!

    Published

    on

    ಬಿಗ್ ಬಾಸ್ ಸೀಸನ್‌ 11ರ ಆಟದ ಶೈಲಿ ಬದಲಾಗಿದೆ. ವಾರಗಳು ಕಳೆದಂತೆ ಒಬ್ಬೊಬ್ಬರು ತಮ್ಮದೇ ಗೇಮ್ ಪ್ಲಾನ್ ಮಾಡುತ್ತಾ, ಮನೆಯ ಸದಸ್ಯರಿಗೆ ಟಫ್ ಫೈಟ್ ನೀಡುತ್ತಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಮತ್ತು ಪೈಪೋಟಿಯ ಮಧ್ಯೆ ಪ್ರತಿಯೊಬ್ಬ ಸ್ಪರ್ಧಿಗಳ ಅಸಲಿ ಮುಖವಾಡ ಬಯಲಾಗುತ್ತಿದೆ.

    5ನೇ ವಾರದಲ್ಲಿ ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು ಜಿದ್ದಾಜಿದ್ದಿಗೆ ಇಳಿದಿದ್ದಾರೆ. ಕಳೆದ 4 ವಾರದಲ್ಲಿ ಆದ ತಪ್ಪುಗಳನ್ನು ಸರಿ ಪಡಿಸಿಕೊಂಡಿರುವ ಸ್ಪರ್ಧಿಗಳು ಆಟ ಆಡುವುದನ್ನ ಕಲಿತಿದ್ದಾರೆ. ಸೀಸನ್ 11ರ ಸ್ಪರ್ಧಿಗಳು ತಮ್ಮ ಎದುರಾಳಿಗಳಿಗೆ ಟಕ್ಕರ್ ಕೊಡೋಕೆ ಶುರು ಮಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿರುವ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಅವರು ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಪಟ, ಪಟ ಅಂತ ಮಾತನಾಡುತ್ತಿದ್ದ ಚೈತ್ರಾ ಅವರು ಆಟದಲ್ಲಿ ಈಗ ಚಿತ್ರ, ವಿಚಿತ್ರ ಪಟ್ಟು ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರ ಆಟದ ಶೈಲಿ ಬದಲಾಗಿರೋದಕ್ಕೆ ಈ ಪೂಜಾ ಶೈಲಿಯೇ ಸಾಕ್ಷಿಯಾಗಿದೆ.

    ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ವಿಶೇಷವಾಗಿದೆ. ದೇವರ ಪಕ್ಕದಲ್ಲಿ ನಿಂತು ಐ ಆ್ಯಮ್ ಗಾಡ್‌, ಗಾಡ್ ಈಸ್ ಗ್ರೇಟ್ ಅನ್ನೋ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಿ ಮುಂದೆ ತನಗೆ ತಾನೇ ಪೂಜೆ ಮಾಡಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರನ್ನು ಶಿಶಿರ್ ನೋಡಿ ಫುಲ್ ಶಾಕ್ ಆಗಿದ್ದಾರೆ. ಚೈತ್ರಾ ಅವರ ವಿಚಿತ್ರ ಪೂಜೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

    Continue Reading

    BIG BOSS

    ಬಿಗ್ ಬಾಸ್ ಸ್ಪರ್ಧಿ ‘ಗೋಲ್ಡ್ ಸುರೇಶ್’ ಕಾಲಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು.!

    Published

    on

    ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಆಟ ಆಡುವಾಗ ಸ್ಪರ್ಧಿ ‘ಗೋಲ್ಡ್ ಸುರೇಶ್’ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವ ಸಂದರ್ಭದಲ್ಲಿ ಗೋಲ್ಡ್ ಸುರೇಶ್ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.

    ಆಟದ ವೇಳೆ ಗೋಲ್ಡ್ ಸುರೇಶ್ ಮೇಲೆ ಆಕಸ್ಮಿಕವಾಗಿ ನೀರು ತುಂಬಿದ ಡ್ರಮ್ ಬಿದ್ದು ಅವಘಡ ನಡೆದಿದೆ. ನನ್ನ ಕಾಲು ಹೋಯಿತು ಎಂದು ಸುರೇಶ್ ಕೂಗಿಕೊಂಡಿದ್ದಾರೆ. ಸುರೇಶ್ ಗೆ ಏನೋ ಆಯಿತು ಎಂದು ಉಳಿದವರು ಕೂಗಿಕೊಂಡಿದ್ದಾರೆ. ಸದ್ಯ ಸುರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Continue Reading

    LATEST NEWS

    Trending