Monday, October 18, 2021

ನಿಯಂತ್ರಣಕ್ಕೆ ಬಾರದ ಕೊರೊನಾ ಭಾರತದೊಂದಿಗಿನ ಎಲ್ಲಾ ವಿಮಾನಯಾನಗಳನ್ನು ರದ್ದುಗೊಳಿಸಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ : ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಲ್ಲಿದ್ದು, ಈಗಾಗಲೇ ಕೊರೊನಾ ಪ್ರಕರಣಗಳಲ್ಲಿ ಭಾರತ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನಲೆ ಸೌದಿ ಅರೇಬಿಯಾ ಭಾರತಕ್ಕೆ ತನ್ನಲ್ಲಿಂದ ತೆರಳುವ ಹಾಗೂ ಭಾರತದಿಂದ ತನ್ನ ದೇಶಕ್ಕೆ ಬರುವ ವಿಮಾನ ಪ್ರಯಾಣವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.


ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರವು (ಜಿಎಸಿಎ) ಈ ಆದೇಶ ಹೊರಡಿಸಿದೆ. ಭಾರತ ಮಾತ್ರವಲ್ಲದೆ ಬ್ರೆಜಿಲ್ ಹಾಗೂ ಅರ್ಜೆಂಟೈನಾ ದೇಶಗಳೊಂದಿಗೆ ಓಡಾಟಗಳಿಗೂ ಸೌದಿ ನಿರ್ಬಂಧ ವಿಧಿಸಿದೆ. ಇದು ಸೌದಿಗೆ ಪ್ರಯಾಣಿಸಲು ಈಗಾಗಲೇ ಮಾಹಿತಿ ನೀಡಿರುವ, ವಿಮಾನ ಟಿಕೆಟ್ ಕಾಯ್ದಿರಿಸುವವರಿಗೂ ಅನ್ವಯವಾಗಲಿದೆ.


ಈ ಸಂಬಂಧ ಜಿಎಸಿಎ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ‘ಸೌದಿ ಅರೇಬಿಯಾವು ಭಾರತ, ಬ್ರೆಜಿಲ್ ಮತ್ತು ಅರ್ಜೆಂಟೈನಾಗಳಿಗೆ ತೆರಳುವ ಮತ್ತು ಅವುಗಳಿಂದ ಆಗಮಿಸುವ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದೆ. ಸೌದಿಗೆ ಆಗಮಿಸುವ 14 ದಿನಗಳ ಮುಂಚಿನ ಪ್ರಸ್ತಾವನೆಯನ್ನು ನೀಡಿರುವ ಯಾವುದೇ ವ್ಯಕ್ತಿಗೂ ಇದು ಅನ್ವಯವಾಗಲಿದೆ’ ಎಂದು ಅದು ತಿಳಿಸಿದೆ.
ಸೌದಿ ಅರೇಬಿಯಾದ ಎಲ್ಲ ವಿಮಾನ ನಿಲ್ದಾಣಗಳ ವಿಮಾನ ಸಂಸ್ಥೆಗಳಿಗೂ ಇದರ ಮಾಹಿತಿ ನೀಡಲಾಗಿದೆ. ಈ ಮೂರೂ ದೇಶಗಳಿಂದ ಅಧಿಕೃತ ಸರ್ಕಾರಿ ಆಮಂತ್ರಣ ಹೊಂದಿರುವವರಿಗೆ ಮಾತ್ರವೇ ಸೌದಿಗೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...