LATEST NEWS
ಗೋಮಾಂಸ ತಿನ್ನುವವರ ಡಿಎನ್ಎ ಹಿಂದೂಗಳಲ್ಲಿ ಕಂಡುಬರುವುದಿಲ್ಲ: ಸಾಧ್ವಿ ಪ್ರಾಚಿ
ಜೈಪುರ: ‘ಗೋಮಾಂಸ ತಿನ್ನುವವರ ಡಿಎನ್ಎ ಹಿಂದೂಗಳಲ್ಲಿ ಎಂದಿಗೂ ಕಂಡುಬರುವುದಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸದಸ್ಯೆ ಸಾಧ್ವಿ ಪ್ರಾಚಿ ಪ್ರತಿಪಾದಿಸಿದ್ದಾರೆ.
ಇತ್ತೀಚೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ‘ಧರ್ಮವನ್ನು ಹೊರತು ಪಡಿಸಿ ಭಾರತೀಯರೆಲ್ಲರ ಡಿಎನ್ಎಗಳು ಒಂದೇ. ಆಚರಣೆಯ ಆಧಾರದಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಾಧ್ವಿ ಭಾರತೀಯರು ಒಂದೇ ಡಿಎನ್ಎ ಹಂಚಿಕೊಂಡಿರಬಹುದು. ಆದರೆ, ಗೋಮಾಂಸ ತಿನ್ನುವವರ ಡಿಎನ್ಎ ನಮ್ಮ ನಡುವೆ ಕಂಡುಬರಲು ಎಂದಿಗೂ ಸಾಧ್ಯವಿಲ್ಲ’ ಎಂದಿದ್ದಾರೆ.
DAKSHINA KANNADA
3 ದಿನದಲ್ಲಿ 60 ಜನರನ್ನು ಮದುವೆಯಾದ ಮಹಿಳೆ
ಇಲ್ಲೊಬ್ಬ ಮಹಿಳೆ ಮದುವೆಯ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಲೇ ಒಬ್ಬರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವುದನ್ನು ನೋಡಿ ಬೇಸತ್ತಿದ್ದಾಳೆ. ಇದರಿಂದ ತಾನು ಮದುವೆ ವಿಚಾರದಲ್ಲಿ ಏನಾದರೂ ಭಿನ್ನವಾಗಿರುವುದನ್ನು ಮಾಡಬೇಕೆಂದು 3 ದಿನ ಮದುವೆ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಬರೋಬ್ಬರಿ 60 ಜನರನ್ನು ಮದುವೆ ಮಾಡಿಕೊಂಡಿದ್ದಾಳೆ.
ಹೌದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಛಾಯಾಗ್ರಾಹಕಿ ಆಗಿರುವ ಈ ಮಹಿಳೆ ಮದುವೆ ಸಮಾರಂಭಗಳಲ್ಲಿ ಎಲ್ಲರೂ ಒಟ್ಟಿಗೆ ಸೇರುವುದು, ಹಾಡು, ಕುಣಿತ, ಪಾರ್ಟಿ ಮಾಡುವುದನ್ನು ಕಂಡಿದ್ದಾಳೆ. ಇದರಿಂದ ತಾನು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಬೇಕು ಎಂದು ಉದ್ದೇಶ ಹೊಂದಿದ್ದಳು. ಮುಂದುವರೆದು ಮದುವೆ ಆಗುವುದನ್ನು ಇನ್ನೂ ವಿಶೇಷವಾಗಿ ಆಚರಣೆ ಮಾಡಬೇಕು ಎಂದು ತನಗೆ ಗೊತ್ತಿರುವ ಎಲ್ಲ ಸ್ನೇಹಿತರಿಗೂ ಮದುವೆ ಆಮಂತ್ರಣ ಪತ್ರವನ್ನು ನೀಡಿದ್ದಾಳೆ.
ಆದರೆ, ಮದುವೆ ಗಂಡು ಯಾರೆಂದು ಯಾರಿಗೂ ಹೇಳಿಲ್ಲ. ಆದರೆ, ತಾನು ಮದುವೆ ಮಾಡಿಕೊಳ್ಳುವವರಿಗೆ ಮಾತ್ರ ನಮ್ಮಿಬ್ಬರ ಮದುವೆಗೆ ಸಿದ್ಧವಾಗಿ ಬನ್ನಿ ಎಂದು ಹೇಳಿದ್ದಾಳೆ. ಹೀಗೆ, ಒಂದು ಮದುವೆ ಹೆಣ್ಣನ್ನು ಮದುವೆಯಾಗಲು ಬರೋಬ್ಬರಿ 60 ಜನರು ವೇದಿಕೆಯ ಬಳಿ ಬಂದಿದ್ದಾರೆ. ಆದರೆ, ಯಾರನ್ನೂ ನಿರಾಕರಿಸದೇ ಮೂರು ದಿನಗಳಲ್ಲಿ ಎಲ್ಲರನ್ನೂ ಮದುವೆ ಆಗಿದ್ದಾಳೆ. ಈ ಮೂಲಕ ತಾನು ‘ಒಬ್ಬ ವ್ಯಕ್ತಿಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಇಷ್ಟವಿಲ್ಲ, ನನ್ನ ಇಡೀ ಜೀವನವನ್ನು ಒಬ್ಬ ವ್ಯಕ್ತಿಗೆ ಮೀಸಲಿಡಲು ಇಷ್ಟ ಪಡುವುದಿಲ್ಲ’ ಹೀಗಾಗಿ, 60 ಜನರನ್ನು ಮದುವೆ ಮಾಡಿಕೊಂಡಿದ್ದಾಳೆ. ಈಗ ಈಕೆಯ ಮದುವೆಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕೇವಲ ಮೂರು ದಿನದಲ್ಲಿ ಬರೋಬ್ಬರಿ 60 ಜನರನ್ನು ಮದುವೆಯಾದ ಮಹಿಳೆ ಆಸ್ಟ್ರೇಲಿಯಾದ ಕಾರ್ಲಿ ಸಾರೆ (40). ತನ್ನ ಮದುವೆಯ ಬಗ್ಗೆ ಮಾತನಾಡಿದ ಕಾರ್ಲಿ ಸಾರೆ ಅವರು, ‘ನನಗೆ ನನ್ನ ನಿರ್ಧಾರದ ಬಗ್ಗೆ ಹೆಮ್ಮೆಯಿದೆ. ನನ್ನ ಜೀವನದಲ್ಲಿ ಇವರೆಲ್ಲರೂ ಬಹಳ ಮುಖ್ಯ. ಆದ್ದರಿಂದ ನನಗೆ ಬೇಕು ಎನಿಸಿದ ಎಲ್ಲ ಆಪ್ತರನ್ನೂ ಒಟ್ಟಿಗೆ ಮದುವೆಯಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾಳೆ.
LATEST NEWS
ರಾಜ್ ಕೋಟ್ ವಿಮಾನ ನಿಲ್ದಾಣದ ಹೊರಗಿನ ಮೇಲ್ಫಾವಣಿ ಕುಸಿತ!
ರಾಜ್ ಕೋಟ್ : ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದು ಓರ್ವ ವ್ಯಕ್ತಿ ಬಲಿಯಾದ ಘಟನೆ ಶುಕ್ರವಾರ(ಜೂ.28) ನಡೆದಿತ್ತು. ಈಗ ಗುಜರಾತಿನ ರಾಜ್ ಕೋಟ್ ವಿಮಾನ ನಿಲ್ದಾಣದ ಹೊರಗಿನ ಮೇಲ್ಫಾವಣಿ ಕುಸಿದು ಬಿದ್ದಿದೆ.
ಭಾರೀ ಮಳೆಯ ನಡುವೆ ರಾಜ್ಕೋಟ್ ವಿಮಾನ ನಿಲ್ದಾಣದ ಟರ್ಮಿನಲ್ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿನ ಮೇಲ್ಛಾವಣಿ ಕುಸಿದಿದೆ. ಆದರೆ, ಯಾವುದೇ ಹಾನಿ ಬಗ್ಗೆ ಇನ್ನೂ ವರದಿಯಾಗಿಲ್ಲ.
ಇದನ್ನೂ ಓದಿ : ದೆಹಲಿ ವಿಮಾನ ನಿಲ್ದಾಣದಲ್ಲಿ ದುರಂ*ತ : ಟರ್ಮಿನಲ್ 1 ರ ಮೇಲ್ಛಾವಣಿ ಕುಸಿದು ಓರ್ವ ಸಾ*ವು; ಹಲವರಿಗೆ ಗಾ*ಯ
ಶುಕ್ರವಾರ ದೆಹಲಿ ಟರ್ಮಿನಲ್ 1ರ ಛಾವಣಿಯ ಒಂದು ಭಾಗ ಕುಸಿದಿದ್ದರಿಂದ ಒಬ್ಬರು ಮೃತಪಟ್ಟು, ಎಂಟು ಜನರು ಗಾಯಗೊಂಡಿದ್ದರು. ಈ ಘಟನೆ ಸಂಭವಿಸಿದ ಮಾರನೇ ದಿನವೇ ಗುಜರಾತ್ ನ ರಾಜ್ ಕೋಟ್ ನಲ್ಲಿಯೂ ಇಂತಹುದೇ ಘಟನೆ ನಡೆದಿದೆ.
LATEST NEWS
ಚೀನಾ ಗಡಿ ಭಾಗದಲ್ಲಿ ನದಿ ದಾಟುವಾಗ ಟ್ಯಾಂಕ್ ಅಪ*ಘಾತ – ಐವರು ಭಾರತೀಯ ಯೋಧರು ಹುತಾ*ತ್ಮ
ನವದೆಹಲಿ: ಲೇಹ್ನ ದೌಲತ್ ಬೇಗ್ ಓಲ್ಡಿ ಪ್ರದೇಶದ ಎಲ್ಎಸಿ ಬಳಿ ನದಿ ದಾಟುವ ಅಭ್ಯಾಸದ ವೇಳೆ ಟ್ಯಾಂಕ್ ಅಪ*ಘಾತದಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾ*ತ್ಮರಾಗಿದ್ದಾರೆ.
ಶನಿವಾರ ಮುಂಜಾನೆ 1 ಗಂಟೆ ಸುಮಾರಿಗೆ ಸಂಭವಿಸಿದ ಅಪ*ಘಾತದಲ್ಲಿ ಹುತಾ*ತ್ಮರಾದ ಐವರಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಅಥವಾ ಜೆಸಿಒ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈನಿಕರು ತರಬೇತಿ ಕಾರ್ಯಾಚರಣೆಯಲ್ಲಿದ್ದರು. ಲೇಹ್ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್ ಬಳಿ ಬೋಧಿ ನದಿಯನ್ನು ತಮ್ಮ T-72 ಟ್ಯಾಂಕ್ ಮೂಲಕ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಏರಲು ಪ್ರಾರಂಭಿಸಿತು. ತಕ್ಷಣವೇ ಟ್ಯಾಂಕ್ನೊಂದಿಗೆ ಸೈನಿಕರು ಉಬ್ಬುವ ನದಿಯಲ್ಲಿ ಮುಳುಗಿ ಹೋದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ. ‘ಲಡಾಖ್ನಲ್ಲಿ ಸಂಭವಿಸಿದ ದುರ*ದೃಷ್ಟಕರ ಅಪ*ಘಾತದಲ್ಲಿ ನಮ್ಮ ಐವರು ವೀರ ಭಾರತೀಯ ಸೇನೆಯ ಯೋಧರು ಪ್ರಾಣ ಕಳೆದುಕೊಂಡಿದ್ದಕ್ಕಾಗಿ ತೀವ್ರ ದುಃಖವಾಗಿದೆ. ನಾವು ಎಂದಿಗೂ ಆದರ್ಶಪ್ರಾಯವನ್ನು ಮರೆಯುವುದಿಲ್ಲ. ದೇಶಕ್ಕೆ ನಮ್ಮ ಧೀರ ಸೈನಿಕರ ಸೇವೆ ಅಪಾರ. ದುಃಖದ ಸಮಯದಲ್ಲಿ ಅವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಎಕ್ಸ್ನಲ್ಲಿ ಸಚಿವರು ಪೋಸ್ಟ್ ಮಾಡಿದ್ದಾರೆ.
- LATEST NEWS4 days ago
ಪ್ರೀತಂ ಗೌಡ ಸೇರಿ ನಾಲ್ವರ ಮೇಲೆ ಎಫ್ಐಆರ್..! ಪ್ರಜ್ವಲ್ ಗೆ ಮತ್ತೊಂದು ಸಂಕಷ್ಟ
- DAKSHINA KANNADA5 days ago
ಕರಾವಳಿಯಲ್ಲಿ ಬಿರುಸು ಪಡೆದುಕೊಂಡ ಮಳೆ; ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ
- DAKSHINA KANNADA5 days ago
ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ
- LATEST NEWS6 days ago
ನನ್ನದೂ ತಪ್ಪಿದೆ, ಯುವ ಹೇಳಿದ್ದಕ್ಕೆ ನಾನು ಮುಂದುವರೆದೆ…ಸಪ್ತಮಿ ಗೌಡ ಆಡಿಯೋ ವೈರಲ್!?