Connect with us

  DAKSHINA KANNADA

  ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

  Published

  on

  ಮಂಗಳೂರು : ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಆರ್ಯಭಟ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಹಬ್ಬಿರುವ ದಿನೇಶ್‌ ಕೋಡಪದವು ಅವರು ಕುಸಾಲ್ದ ಗುರಿಕ್ಕಾರೆ ಎನ್ನುವ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ.

  ದಿನೇಶ್ ಕೋಡಪದವು ಕುರಿತು :

  ಈಶ್ವರ ಶೆಟ್ಟಿಗಾರ್ ಮತ್ತು ಲೀಲಾವತಿ ದಂಪತಿಯ ಸುಪುತ್ರರಾದ ದಿನೇಶ್ ಶೆಟ್ಟಿಗಾರ್, ಕೋಡಪದವು ಹುಟ್ಟಿದ್ದು ಒಕ್ಕೆತ್ತೂರುವಿನಲ್ಲಿಯಾದರೂ, ಪ್ರಸ್ತುತ ವಾಸ ಕೋಡಪದವಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಪಡೆಯುತ್ತಿದ್ದಂತೆ ಯಕ್ಷಗಾನ ಕೈಬೀಸಿ ಕರೆಯಿತು.

  ರತ್ನಾಕರ್ ಹೆಗ್ಡೆ ಪುತ್ತೂರು, ಸಬ್ಬಣ್ಣಕೋಡಿ ಕೃಷ್ಣ ಭಟ್ ಅಂತಹ ಮಹಾನ್ ಯಕ್ಷಗಾನ ಗುರುಗಳಿಂದ ಯಕ್ಷಗಾನ ಕಲೆಯನ್ನು ಕಲಿತು ಮಂಗಳಾದೇವಿ ಮೇಳದಲ್ಲಿ 5 ವರ್ಷ, ಸುಂಕದಕಟ್ಟೆ ಮತ್ತು ಸಸಿಹಿತ್ಲು ಮೇಳದಲ್ಲಿ 4 ವರ್ಷ, ಬಾಚಕೆರೆ ಮೇಳದಲ್ಲಿ 3 ವರ್ಷ, ಕರ್ನಾಟಕ ಮೇಳ ಹಾಗೂ ಕದ್ರಿ ಮೇಳದಲ್ಲಿ 1 ವರ್ಷ , ಪ್ರಸ್ತುತ ಬಪ್ಪನಾಡು ಮೇಳದಲ್ಲಿ 8 ವರುಷಗಳಿಂದ ಯಕ್ಷಗಾನ ತಿರುಗಾಟ ನಡೆಸುತ್ತಾ ಬಂದಿದ್ದಾರೆ.

  ಕನ್ನಡ ಭಾಷೆಯ ಯಕ್ಷಗಾನಗಳಲ್ಲಿ ಅಭಿಮನ್ಯು ಚಂಡ-ಮುಂಡ, ಸುಧನ್ವ ಬಬ್ರುವಾಹನ, ಕಮಲಧ್ವಜ, ಕೃಷ್ಣ ಬಲರಾಮ, ಪ್ರಹ್ಲಾದ, ಲೋಹಿತಾಶ್ವದಂತಹ ಪುಂಡು ವೇಷಧಾರಿಯಾಗಿಯೂ ಮಾಲಿನಿಧೂತ, ವಿದ್ಯುನ್ಮಾಲಿದೂತ, ಚಿಕ್ಕ, ದಾರುಕ, ಮಕರಂದ, ಪ್ರಾತಿಕಾಮಿಯಂತದ ಹಾಸ್ಯ ಪಾತ್ರಧಾರಿಯಾಗಿಯೂ, ನಾರದ ಮುಂತಾದ ಪುರಾಣ ಪಾತ್ರಗಳ ಮೂಲಕ ಪ್ರತಿಭೆ ಮೆರೆದಿದ್ದಾರೆ.
  ತುಳು ಭಾಷೆಯ ಯಕ್ಷಗಾನ ಪ್ರಸಂಗಗಳಾದ ಬನತ ಬಂಗಾರ್, ಬನತ ಬಬ್ಬರ್ಯೆ, ನಿಧಿ ನಿರ್ಮಲ, ಬಾಲೆ ಭಗವಂತದಂತಹ ಪ್ರಸಂಗಗಳಲ್ಲಿ ಕ್ರಮವಾಗಿ ನರಸಿಂಹ, ಪೈಕುಲ, ಚಾವುಂಡರಾಯ, ಗುಡ್ಡಪ್ಪ ಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ಹಲವಾರು ಹೊಸಹೊಸ ಪ್ರಸಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಹೆಸರುವಾಸಿಯಾಗಿದ್ದಾರೆ.

   

  ಸಂಘಟಕನಾಗಿ…ಸಮಾಜ ಸೇವಕನಾಗಿ…

  ಯಕ್ಷಗಾನದಲ್ಲಿ ಮಾತ್ರವಲ್ಲದೇ ”ತೆಲಿಕೆದ ತೇಟ್ಲ” ಎಂಬ ತಂಡ ಕಟ್ಟಿ ಹಲವಾರು ಕಡೆಗಳಲ್ಲಿ “ಯಕ್ಷ ಹಾಸ್ಯ ವೈಭವ” , ”ಯಕ್ಷಗಾನ ಹಾಸ್ಯ ಕಲಾವಿದರ ಒಕ್ಕೂಟ” ಎಂಬ ತಂಡ ಕಟ್ಟಿ “ಆಟದ ಆಯನ” ಕಾರ್ಯಕ್ರಮ ನೀಡಿರುವುದಲ್ಲದೇ ಕೊರೊನಾ ಸಮಯದಲ್ಲಿ 25ಕ್ಕೂ ಹೆಚ್ಚು ಕಲಾವಿದರಿಗೆ ಆಹಾರ ಕಿಟ್ ಗಳನ್ನು ವಿತರಿಸಿ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿದ್ದಾರೆ.

  ಈ ಮೆರು ಕಲಾವಿದ “ಕುಸಲ್ದ ಗುರಿಕಾರೆ”, “ಯಕ್ಷಮಾಣಿಕ್ಯ”, ”ಹಾಸ್ಯದರಸು” ಇತ್ಯಾದಿ ಬಿರುದುಗಳಿಂದ ಮೇಳೈಸಿಕೊಂಡವರು ಯಕ್ಷಲೋಕದಲ್ಲಿ ತನ್ನದೇ ವ್ಯಕ್ತಿತ್ವದಲ್ಲಿ ಜನಮಾನದಲ್ಲಿ ಗುರುತಿಸಿಕೊಂಡವರು.

  ಇಂತಹ ಅದ್ಭುತ ಯಕ್ಷಲೋಕದಲ್ಲಿ ಮಿಂಚುತ್ತಿರುವ ಯಕ್ಷಾಭಿಮಾನಿಗಳಲ್ಲಿ ಸಂಚಲನವನ್ನುಂಟು ಮಾಡುತ್ತಿರುವ “ಯಕ್ಷಧ್ರುವತಾರೆ”ಯನ್ನು ಗುರುತಿಸಿ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ 317ಡಿ ಕಂದಾಯ ಜಿಲ್ಲೆಗಳಾದ ದಕ್ಷಿಣಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರಿನ ಹಲವಾರು ಉನ್ನತಮಟ್ಟದ ಲಯನ್ಸ್ ಕಾರ್ಯಕ್ರಮಗಳಲ್ಲಿ ಶ್ರೀಯುತರನ್ನು ಗೌರವಿಸಿ ಸನ್ಮಾನಿಸಿದ್ದು ಅವರ ಸಾಧನೆಗೆ ಸಂದ ಗೌರವ.

  ‘ನಮ್ಮ ಕುಡ್ಲ’ದ ‘ಯಕ್ಷ ತೆಲಿಕೆ’ಯ ಹೆಮ್ಮೆಯ ಕಲಾವಿದ :

  ಕರಾವಳಿ ಕರ್ನಾಟಕದ ಪ್ರಪ್ರಥಮ ತುಳು ವಾರ್ತಾವಾಹಿನಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ನಮ್ಮಕುಡ್ಲ ವಾಹಿನಿಯಲ್ಲಿ ಕೋಡಪದವು ಸಾರಥ್ಯದಲ್ಲಿ “ಯಕ್ಷ ಹಾಸ್ಯ ಕಾರ್ಯಕ್ರಮ “ಯಕ್ಷ ತೆಲಿಕೆ” ಕಾರ್ಯಕ್ರಮವನ್ನು ಆರಂಭಿಸಿದರು. ಇಂದು ಯಕ್ಷತೆಲಿಕೆ ಕಾರ್ಯಕ್ರಮ ಕರಾವಳಿ ಮಾತ್ರವಲ್ಲದೇ ದೇಶವಿದೇಶಗಳಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ.

  ಇದನ್ನೂ ಓದಿ : ಟೀಸರ್ ಮೂಲಕ ಭಾರಿ ಸದ್ದು ಮಾಡುತ್ತಿದೆ ‘ಸಾಂಕೇತ್’

  ಯಕ್ಷತೆಲಿಕೆ ಕಾರ್ಯಕ್ರಮವು ಹಾಸ್ಯದ ಜೊತೆಗೆ ಉತ್ತಮ ಸಂದೇಶವನ್ನು ನೀಡುವ ಕಾರ್ಯಕ್ರಮವಾಗಿದೆ. ಕೋಡಪದವು ಬೊಬ್ಬಿರಿದು ಗೋಗರೆಯುವ ಅಬ್ಬರದ ಗಾಂಭೀರ್ಯ ವೇಷಕ್ಕೂ ಸೈ, ವೀಕ್ಷಕರನ್ನು ನಕ್ಕುನಗಿಸುವ ಹಾಸ್ಯ ಪಾತ್ರಕ್ಕೂ ಸೈ…ಹಾಸ್ಯ ಅಂದರೆ ಕೋಡಪದವು, ಕೋಡಪದವು ಅಂದರೆ ಹಾಸ್ಯ ಎನ್ನುವಷ್ಟರ ಮಟ್ಟಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿದೆ.

  Click to comment

  Leave a Reply

  Your email address will not be published. Required fields are marked *

  DAKSHINA KANNADA

  ಕಳ್ಳರನ್ನು ಹಿಡಿದ 60 ರ ವೃದ್ಧೆ..!

  Published

  on

  ಮಂಗಳೂರು :ವೃದ್ಧೆ ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದ ಕಳ್ಳರಿಬ್ಬರಿನ್ನು ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುಂಡ್ಯಾ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

  ಅಂಗಡಿಯಲ್ಲಿ ವೃದ್ಧ ಮಹಿಳೆ ಒಬ್ಬರೇ ಇದ್ದ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ವೃದ್ಧೆಯ ಕತ್ತಿನ ಸರ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಜಾಗೃತಗೊಂಡ ಮಹಿಳೆ ತಕ್ಷಣ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

  ತ್ರೇಸಿಯಾಮ್ಮ ಅವರಿಗೆ 60 ವರ್ಷ ವಯಸ್ಸಾಗಿದ್ದು, ಅಡ್ಡಹೊಳೆ ಹೆದ್ದಾರಿಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಕಳ್ಳತನ ನಡೆಸಲೆಂದೇ ಬಂದಿದ್ದ ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25), ಎಂಬವರು ಮಂಗಳೂರಿನಲ್ಲಿ ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿ ಕಳ್ಳತನ ಮಾಡಿದ್ದಾರೆ. ಅದೇ ಸ್ಕೂಟಿಯಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಚಿನ್ನದ ಸರ ಎಳೆಯಲು ಹೋಗಿ‌ ಸಿಕ್ಕಿಬಿದ್ದಿದ್ದಾರೆ.

  ಕಳ್ಳರಿಬ್ಬರನ್ನೂ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  Continue Reading

  DAKSHINA KANNADA

  ಜುಲೈ 16. ದ.ಕ, ಉಡುಪಿ ಶಾಲಾ ಕಾಲೇಜಿಗೆ ರಜೆ..!

  Published

  on

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು,ಸೋಮವಾರ ಜುಲೈ 15 ರಂದು ರಜೆ ನೀಡಲಾಗಿತ್ತು. ನಾಳೆ (ಜುಲೈ 16 )ಕೂಡಾ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ ನದಿಗಳು ಉಕ್ಕಿ ಹರಿಯುತ್ತಿದೆ. ಜುಲೈ 15 ರ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಜನರು ತೊಂದರೆ ಅನುಭವಿಸಿದ್ದಾರೆ.

  ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಘಟನೆ ಕೂಡಾ ನಡೆದಿದೆ. ಕೆಲೆವಡೆ ಶಾಲೆಯ ಗೋಡೆ ಕುಸಿತವಾಗಿದ್ದು, ಕೆಲವೆಡೆ ಗಾಳಿಗೆ ಶಾಲೆಯ ಹೆಂಚು ಹಾರಿ ಹೋಗಿದೆ. ನದಿಯ ನೀರು ಉಕ್ಕಿ ಹರಿಯುತ್ತಿದ್ದು, ಅಪಾಯದ ಅಂಚಿನಲ್ಲಿದೆ.

  ಹವಾಮಾನ ಇಲಾಖೆಯ ಸೂಚನೆಯಂತೆ ಜುಲೈ 16 ರಂದು ಕೂಡಾ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
  ಭಾನುವಾರದಿಂದ ಶಾಲೆಗೆ ನಿರಂತರ ರಜೆ ಅನುಭವಿಸಿದ ಮಕ್ಕಳಿಗೆ ಬುಧವಾರ ಮೊಹರಂ ಪ್ರಯುಕ್ತ ಸರ್ಕಾರಿ ರಜೆ ಕೂಡ ಸಿಗಲಿದೆ. ಗುರುವಾರದಿಂದ ಮಳೆ ಕಡಿಮೆ ಆಗುವ ಸೂಚನೆ ಇದೆ.

  Continue Reading

  DAKSHINA KANNADA

  ಶಾಲೆಯೊಳಗೆ RSS ಕಾರ್ಯಕ್ರಮ : DC ಗೆ ದೂರು..!

  Published

  on

  ಮಂಗಳೂರು : ಕಡಬ ತಾಲೂಕಿನ ಕರಿಂಬಿಲ ಕಿ.ಪ್ರಾ. ಶಾಲೆಯಲ್ಲಿ ಜು. 14 ರಂದು ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂಜೆ ಕಾರ್ಯಕ್ರಮ ನಡೆಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

  ಸರಕಾರಿ ಶಾಲೆಯ ಆವರಣದೊಳಗೆ ಅಥವಾ ಮೈದಾನವನ್ನು ಕೂಡಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೊಡಬಾರದೆಂಬ ಸುತ್ತೋಲೆ ಇರುವಾಗ ಶಾಲೆಯ ಒಳಗೆಯೇ RSS ಕಾರ್ಯಕ್ರಮವನ್ನು ಮಾಡಲು ಅವಕಾಶ ಕೊಟ್ಟದ್ದು ಹೇಗೆ ಎಂದು ಸ್ಥಳೀಯ ಕೆಲವರು ಶಿಕ್ಷಣ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದ್ದಾರೆ. ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಬುಲಾವ್ ಹೋಗಿ ಅವರಿಂದ ವಿವರಣೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

  ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಕೆಲವರು ಫೋಟೋವನ್ನು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ.

  ಈ ಭಾವಚಿತ್ರದಲ್ಲಿ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಕರಿಂಬಿಲ ಎಂಬ ಹೆಸರಿರುವ ಕರಿಹಲಗೆ ಮತ್ತು ಕೊಟಡಿಯೊಳಗಿನ ದೃಶ್ಯಗಳು ಕಂಡುಬರುತ್ತಿವೆ.

  ಸರ್ಕಾರಿ ಶಾಲೆಯಲ್ಲಿ RSS ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.

  Continue Reading

  LATEST NEWS

  Trending