FILM
ಸೀರೆಯುಟ್ಟು ಮಿಂಚಿದ ರುಕ್ಮಿಣಿ-‘ಪುಟ್ಟಿ ಫೋಟೋ ಸೂಪರ್’ ಎಂದ ಫ್ಯಾನ್ಸ್..
ಸಪ್ತ ಸಾಗರದಾಚೆ ಸಿನೆಮಾ ಮೂಲಕ ಕೋಟಿ ಹೃದಯಗಳನ್ನು ಗೆದ್ದ ರುಕ್ಮಿಣಿ ವಸಂತ್ ಈಗ ಸೀರೆಯುಟ್ಟು ಮಿಂಚುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು : ಸ್ಯಾಂಡಲ್ವುಡ್ನ ಬ್ಯೂಟಿ ರುಕ್ಮಿಣಿ ವಸಂತ್ ನೈಜ ಸೌಂದರ್ಯವತಿ.ಹಾಲು ಗಲ್ಲದ ಮುಖ, ನಿಷ್ಕಲ್ಮಶ ನಗುವಿನಿಂದ ಎಲ್ಲರನ್ನೂ ಸೂಜಿ ಗಲ್ಲಿನಂತೆ ಸೆಳೆಯುವಾಕೆ.
ಇದೀಗ ರುಕ್ಮಿಣಿ ಸೋಷಿಯಲ್ ಮೀಡಿಯಾದಲ್ಲಿ ಸೀರೆಯುಟ್ಟು ಮಿಂಚುತ್ತಿದ್ದಾರೆ.ಗಣೇಶ ಹಬ್ಬದ ಸಂಭ್ರಮದಂದು ನೇರಳೆ ಬಣ್ಣದ ಸೀರೆಯುಟ್ಟು ನಸು ನಕ್ಕಿದ್ದಾರೆ.
ಟ್ರೇಡಿಷನಲ್ ಲುಕ್ ಹಾಗೇ ಮಾಡ್ರನ್ ಲುಕ್ ಎರಡರಲ್ಲೂ ರುಕ್ಮಿಣಿ ಗೊಂಬೆಯಂತೆ ಕಾಣುತ್ತಾರೆ. ಸಪ್ತ ಸಾಗಾರದಾಚೆ ಸಿನೆಮಾ ಬಂದ ಮೇಲಂತೂ ರುಕ್ಮಿಣಿ ಕ್ರಶ್ ಆಗಿ ಬಿಟ್ಟಿದ್ದಾರೆ.
ಸೀರೆಯುಟ್ಟು ರುಕ್ಮಿಣಿ ಫೋಟೋ ಅಪ್ಲೋಡ್ ಮಾಡ್ತಾ ಇದ್ದಂತೆ ಪುಟ್ಟಿ ಫೋಟೋ ಸೂಪರ್ ಅಂತ ಕಮೆಂಟ್ ಗಳ ಸುರಿಮಳೆ ಬಂದಿದೆ.
ಸಿಂಪಲ್ ಲುಕ್ ಮೂಲಕ ಸಿನಿ ರಸಿಕರ ಮನಸ್ಸು ಗೆದ್ದ ರುಕ್ಮಿಣಿ ಸದ್ಯ ಸಾಲು ಸಾಲು ಚಿತ್ರಗಳ ಮೂಲಕ ಮನರಂಜಿಸಲು ಸಿದ್ದರಾಗಿದ್ದಾರೆ.
FILM
ಮೊದಲ ಬಾರಿ ಮದುವೆ ರಹಸ್ಯ ಬಿಚ್ಚಿಟ್ಟ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್
ಬೆಂಗಳೂರು : ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಹಲವು ಸ್ಪರ್ಧಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಇದರಲ್ಲಿ ಹುಲಿ ಉಗುರು ಧರಿಸಿದ ಕಾರಣಕ್ಕೆ ಪೊಲೀಸರಿಂದ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರ ಬಂಧನವಾಗಿತ್ತು. ಈಗ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ.
ಬಿಗ್ ಬಾಸ್ ಮನೆಯಲ್ಲಿಯೇ ತಮ್ಮ ಮದುವೆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ವರ್ತೂರು ಸಂತೋಷ್ ಅವರಿಗೆ ಮದುವೆ ಆಗಿದೆ. ಒಬ್ಬಳು ಹೆಣ್ಣು ಮಗು ಕೂಡ ಇದೆ. ಆದರೆ ಅವರು ಮದುವೆ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕೆಲದಿನಗಳ ಹಿಂದೆ ಸೋಷಿಯಲ್‌ಮೀಡಿಯಾದಲ್ಲಿ ಗುಲ್ಲೆದ್ದಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಸ್ವತಃ ವರ್ತೂರ್ ಅವರೇ ತಮ್ಮ ಮದುವೆ, ಪತ್ನಿ ಜೊತೆಗಿನ ಭಿನ್ನಾಭಿಪ್ರಾಯಗಳ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಬಿಗ್‌ಬಾಸ್ ಮನೆ ಸೇರಿದಾಗಿನಿಂದ ಈ ವರೆಗೂ ತನಗೆ ಮದುವೆ ಆಗಿದೆ ಎಂಬ ಒಂದೇ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ ವರ್ತೂರು ಸಂತೋಷ್. ಈಗ ಗುಟ್ಟು ರಟ್ಟಾಗಿದೆ.
‘ವರ್ತೂರ ಸಂತೋಷ್ ಒಳಗಡೇ ಏನೈತೆ ಅನ್ನೋದನ್ನು ಹೇಳ್ತಿದ್ದೇನೆ. ನೋಡು ದೊಡ್ಡಪ್ಪ ನೀನು ಹೀಗು ತಾಳಿಕಟ್ಟು ಅಂದ್ರೆ ಕಟ್ಟಿಬಿಡ್ತಿನಿ. ನಾನು ಅವರಿಗೆ ಮಾತು ಕೊಟ್ಟು ಒಪ್ಪಿಕೊಂಡು ಬಿಟ್ಟೆ. ಮದುವೆಯೂ ಆಯ್ತು, ದಿನ ಕಳೆದಂತೆ, ಅಮ್ಮನನ್ನು ಇಗ್ನೋರ್ ಮಾಡೋಕೆ ಶುರು ಮಾಡಿದ್ರು. ನಾನು ಸಂಪಾದನೆ ಮಾಡಿದ ಜನರನ್ನು ತೊರೆದು ಇವರ ಹಿಂದೆ ಹೋಗಬೇಕು ಎಂದರೆ ಅದು ಸಾಧ್ಯವಾಗದ ಮಾತು. ಆಗ ಹೆಂಡತಿ ಮನೆ ಹತ್ತಿರ ಹೋಗ್ತಿನಿ. ನನ್ನ ಮಾತಿನ ಪ್ರಕಾರ ಬಂದ್ರೆ, ನೀನು ರಾಣಿನೇ ಎಂದು ಕರೆದೆ. ಮೊದಲು ನೀನು ಗೇಟಿಂದ ಆಚೆ ಹೋಗು ಎನ್ನುತ್ತಾರೆ. ಆವತ್ತು ನಾನು ಮಾತು ಕೊಟ್ಟು ಬಂದಿದ್ದೀನಿ ಇವತ್ತು ಆ ಮಾತಿನ ಮೇಲೆ ನಿಂತಿದ್ದೀನಿ’ ಎಂದಿದ್ದಾರೆ ವರ್ತೂರು.
ಮುಂದೇನಾಗುತ್ತೆ ಅನ್ನುವುದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡ್ಬೇಕಷ್ಟೆ..
bengaluru
41ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಕ್ವೀನ್ ರಮ್ಯಾ
ಬೆಂಗಳೂರು : ಇಂದು ಸ್ಯಾಂಡಲ್‌ವುಡ್ ಕ್ವೀನ್.. ಮೋಹಕತಾರೆ ರಮ್ಯಾ ಜನ್ಮದಿನ.. ಸೋಷಿಯಲ್ ಮಿಡಿಯಾದಲ್ಲಿ ಅವರ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
ಈ ಹುಟ್ಟುಹಬ್ಬಕ್ಕೆ ಅವರ ಹೊಸ ಸಿನಿಮಾದ ಅಪ್ಡೇಟ್ ನೀಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಈವರೆಗೆ ರಮ್ಯಾರ ಹೊಸ ಸಿನಿಮಾಗಳ ಯಾವುದೇ ಅಪ್ಡೇಟ್ಗಳು ಹೊರಬಿದ್ದಿಲ್ಲ. ಆದರೆ ರಮ್ಯಾ ಈ ಹುಟ್ಟುಹಬ್ಬವನ್ನು ಸರಳವಾಗಿ, ತಮಗೆ ಇಷ್ಟವಾದವರೊಟ್ಟಿಗೆ ಸಮಯ ಕಳೆಯುತ್ತಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದಾರೆ.
ನಟಿ ರಮ್ಯಾ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.. ಈ ಚೆಲುವೆ 2003ರಲ್ಲಿ ‘ಅಭಿ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು.. ಇವರು ಮೊದಲು ನಾಯಕಿಯಾಗಿ ನಟಿಸಿದ್ದು ಡಾ. ರಾಜ್ ಪುತ್ರ ಅಪ್ಪು ಅಲಿಯಾಸ್ ಪುನೀತ್ ರಾಜ್‌ಕುಮಾರ್ ಅವರ ಜೊತೆ.. ಇದೇ ಚಿತ್ರದ ಅಪಾರ ಅಭಿಮಾನಿಗಳ ಜೊತೆಗೆ ಜನಪ್ರಿಯತೆ ಗಳಿಸಿದ ರಮ್ಯಾ ‘ಎಕ್ಸ್ಕ್ಯೂಸ್ ಮಿ’ ಸಿನಿಮಾದಿಂದ ಮತ್ತೊಂದು ದೊಡ್ಡ ಯಶಸ್ಸು ಗಳಿಸಿದರು.. ನಂತರ ಹಲವಾರು ಸ್ಟಾರ್ ನಟರ ಜೊತೆಯಲ್ಲಿ ತೆರೆಹಂಚಿಕೊಂಡಿದ್ದಾರೆ.
ಪುಟ್ಟ-ಪುಟ್ಟ ನಾಯಿ ಮರಿಗಳೊಟ್ಟಿಗೆ ಆಟವಾಡುತ್ತಿರುವ ವಿಡಿಯೋ ಒಂದನ್ನು ರಮ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘‘ನಿಮ್ಮ ಹುಟ್ಟುಹಬ್ಬದ ಶುಭಾಶಯಗಳು ನನ್ನ ಮನಸ್ಸಿಗೆ ಮುದ ನೀಡಿದಂತೆ ಈ ಪುಟ್ಟ ವಿಡಿಯೋ ನಿಮ್ಮ ಮನಸ್ಸಿಗೆ ಮುದ ನೀಡುವ ವಿಶ್ವಾಸವಿದೆ’’ ಎಂದು ವಿಡಿಯೋಕ್ಕೆ ಕ್ಯಾಪ್ಷನ್ ಬರೆದಿದ್ದಾರೆ ನಟಿ ರಮ್ಯಾ.
ಮತ್ತೊಮ್ಮೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.
bengaluru
ಮನ್ಸಿಂದ ಯಾರೂನು ಕೆಟ್ಟೋರಲ್ಲ..ಬಿಗ್ ಬಾಸ್ ವಿನಯ್ ಕಣ್ಣೀರು
ಬೆಂಗಳೂರು : ಬಿಗ್‌ಬಾಸ್ ಮನೆಯಲ್ಲಿ ವಿನಯ್ ಅತ್ಯಂತ ಗಟ್ಟಿ ಸ್ಪರ್ಧಿ ಎಂದು ಕರೆಸಿಕೊಳ್ಳುವ ವಿನಯ್ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಮಂಗಳವಾರ ಪ್ರಸಾರವಾದ ಎಪಿಸೋಡ್ನಲ್ಲಿ ಮಾತ್ರ ವಿನಯ್ ಕಣ್ಣೀರು ಹಾಕಿದ್ದಾರೆ.
ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೆ. ಅವರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ಸ್ನೇಹಿತ್, ವಿನಯ್ ಜೊತೆ ಮಾತನಾಡುತ್ತಿದ್ದಾಗ ಸ್ನೇಹಿತ್ ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗಿರುವ ಅಭಿಪ್ರಯಾದ ಬಗ್ಗೆ ತಿಳಿಸುವಂತೆ ಹೇಳ್ತಾರೆ.ಆಗ ಪವಿ ಬಳೆಯ ಎಪಿಸೋಡ್ ಭಾರಿ ಸದ್ದು ಮಾಡಿತು ಎಂದರು.ಆ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಾಯಿತು ಎಂದು ಸಹ ಹೇಳಿದರು.
ಇದರಿಂದಾಗಿ ವಿನಯ್ ತೀರಾ ಡಲ್ ಆಗ್ಬಿಟ್ಟರು. ಬಾತ್‌ರೂಮ್ ಒಳಗೆ ಹೋಗಿ ವಿನಯ್ ಗಳಗಳನೆ ಅತ್ತುಬಿಟ್ಟರು. ಬಳಿಕ ‘ಬಿಗ್ ಬಾಸ್’ ಬಳಿ ಮಾತನಾಡಿದ್ಮೇಲೆ ವಿನಯ್ ಸಮಾಧಾನಗೊಂಡರು.
- bengaluru6 days ago
ಸಿಂಪಲ್ ಆಗಿ ಮದುವೆಯಾದ ಒಳ್ಳೆ ಹುಡುಗ ಪ್ರಥಮ್
- bangalore6 days ago
ವಿನಯ್ ತರ ದುಷ್ಮಾನ್ ಆದ್ರೂ ಓಕೆ, ಆದ್ರೆ ಸಂಗೀತಾ ತರ ಪ್ರೆಂಡ್ಸ್ ಬೇಡ..!
- bangalore3 days ago
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿಯಾದ ಈ ಸ್ಪರ್ಧಿಗಳು ಯಾರು..?
- DAKSHINA KANNADA6 days ago
Puttur: ಮಹಿಳೆಗೆ ಅಮಲು ಬರಿಸುವ ಪಾನೀಯ ಕುಡಿಸಿ ಅತ್ಯಾಚಾರ..!