Connect with us

FILM

ಅಯೋಧ್ಯೆಯಲ್ಲಿ ಪತ್ನಿ ಜೊತೆ ರಿಷಬ್​ ಶೆಟ್ಟಿ- ಕುಟುಂಬದ ಜೊತೆಗೆ ನಿಖಿಲ್​ ಕುಮಾರಸ್ವಾಮಿ

Published

on

ಅಯೋದ್ಯೆ: ಕೋಟ್ಯಾಂತರ ಭಾರತೀಯರ ಕನಸು ಇಂದಿ ನನಸಾಗುತ್ತಿದೆ. ಅಯೋಧ್ಯೆ ಪ್ರತಿಷ್ಟಾಪನೆಗೆಇನ್ನು ಕೆಲವೇ ಗಂಟೆಗಳು ಬಾಕಿಯಿದ್ದು, ಇದೀಗ ಸ್ಟಾರ್ ನಟಗಳು ಈಗಾಗಲೇ ಅಯೋದ್ಯೆಗೆ ತಲುಪಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಯನ್ನು ಕಣ್ಣುಂಬ್ತಿಕೊಳ್ಳಲಿದ್ದಾರೆ. ಅದರಂತೆಯೇ ಸ್ಯಾಂಡಲ್​ವುಡ್​ ಸ್ಟಾರ್ಸ್​​ಗಳು ಕೂಡ ಅಯೋಧ್ಯೆಗೆ ಹೋಗಿದ್ದಾರೆ. ನಿಖಿಲ್​ ಕುಮಾರಸ್ವಾಮಿ ಕುಟುಂಬ, ರಿಷಬ್​ ಶೆಟ್ಟಿ ಕುಟುಂಬ ಕೂಡ ರಾಮಜನ್ಮಭೂಮಿಯಲ್ಲಿ ಬೀಡುಬಿಟ್ಟಿದ್ದಾರೆ. ಸ್ಯಾಂಡಲ್​ವುಡ್​​ ಖ್ಯಾತ ನಟ ರಿಷಬ್​ ಶೆಟ್ಟಿ ತನ್ನ ಮಡದಿಯೊಂದಿಗೆ ರಾಮಜನ್ಮಭೂಮಿಗೆ ತೆರಳಿದ್ದಾರೆ. ಇಂದು ನಡೆಯುವ ರಾಮಲಲ್ಲಾ ಪ್ರಾಣಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಈ ಬಗ್ಗೆ ನಟ ‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ, ಹನುಮನ ದರ್ಶನ..’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಹಾಕಿದ್ದಾರೆ. ಇವರ ಫೋಟೋ ನೋಡಿ ಅನೇಕರು ‘ಜೇ ಶ್ರೀರಾಮ್’ ಎಂದು ಬರೆದುಕೊಂಡಿದ್ದಾರೆ. ಯುವರಾಜ ನಿಖಿಲ್​ ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತನ್ನ ಜನ್ಮ ದಿನದಂದು ನಿಖಿಲ್​ ಕುಟುಂಬ ಸಮೇತರಾಗಿ ಅಯೋಧ್ಯೆಯ ರಾಮಮಂದಿರದತ್ತ ಹೆಜ್ಜೆ ಹಾಕಿದ್ದಾರೆ.

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ತಂದೆ,ಅಜ್ಜಿ ತಾತ ಜೊತೆ ನಿಖಿಲ್ ಪ್ರಯಾಣ ಬೆಳೆಸಿದ್ದಾರೆ.

Click to comment

Leave a Reply

Your email address will not be published. Required fields are marked *

FILM

ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

Published

on

ಮುಂಬೈ : ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪಠಾಣ್, ಜವಾನ್, ಡಂಕಿ ಸಿನಿಮಾದ ನಂತರ ಹೊಸ ಸಿನಿಮಾ ಘೋಷಣೆ ಮಾಡದೇ ಉಳಿದಿದ್ದ ಅವರು, ಅಭಿಮಾನಿಗಳಿಗೆ ಹೊಸ ಚಿತ್ರದ ಅಪ್ ಡೇಟ್ ನೀಡಿದ್ದಾರೆ. ತಮ್ಮ ಹೊಸ ಸಿನಿಮಾ ಜುಲೈ ಅಥವಾ ಆಗಸ್ಟ್ ನಿಂದ ಶುರುವಾಗಲಿದೆ ಎಂದಿದ್ದಾರೆ. ಉಳಿದಂತೆ ಅವರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

 

ಈ ನಡುವೆ ಶಾರುಖ್ ಖಾನ್ ಕುರಿತಾಗಿ ದಕ್ಷಿಣದ ಹೆಸರಾಂತ ನಟ ಕಮಲ್ ಹಾಸನ್ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ.  ಪುತ್ರಿ ಶ್ರುತಿ ಹಾಸನ್ ಜೊತೆಗಿನ ಮಾತುಕತೆಯಲ್ಲಿ ಶಾರುಕ್ ಆಸೆಗಳನ್ನು ಅವರು ರಿವೀಲ್ ಮಾಡಿದ್ದಾರೆ.

ತಂದೆಗೆ ಇನ್ನೂ ಏನಾದರೂ ಆಸೆಗಳು ಉಳಿದಿದ್ದವಾ? ಎಂದು ಶ್ರುತಿ ಕೇಳ್ತಾರೆ. ಆಗ ಯಾವುದೇ ಆಸೆಗಳು ಇಲ್ಲ ಎಂದು ಹೇಳುವ ಕಮಲ್ ಹಾಸನ್, ಈ ಸಮಯದಲ್ಲಿ ಶಾರುಖ್ ಆಸೆಯನ್ನು ಹೊರ ಹಾಕುತ್ತಾರೆ. ಮಣಿರತ್ನಂ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಶಾರುಖ್ ಆಸೆ. ಅದಕ್ಕಾಗಿ ಅವರು ಪ್ರೈವೆಟ್ ಜೆಟ್ ತಗೆದುಕೊಳ್ಳೊ ಕನಸು ಕಂಡಿದ್ದಾರೆ ಎಂದಿದ್ದಾರೆ ಕಮಲ್.

ಶಾರುಖ್ ಅವರಿಗೆ ವಿಮಾನ ಖರೀದಿಸುವ ಮತ್ತು ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತ ಪಡಿಸಿರುವ ವಿಚಾರ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಅಚ್ಚರಿ ತರಿಸಿದೆ. ವಿಮಾನ ಏನೋ ಖರೀದಿಸಬಹುದು. ಆದರೆ, ಮಣಿರತ್ನಂ ಅವರನ್ನು ಖರೀದಿಸೋಕೆ ಆಗಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Continue Reading

FILM

ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

Published

on

ದೆಹಲಿ: ಆಗ್ರಾದ ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಶಿಕ್ಷಕಿ ನಡುವೆ ಮಾತಿನ ಚಕಾಮಕಿ ನಡೆದು ಬಳಿಕ ದೈಹಿಕವಾಗಿ ಹೊಡೆದಾಡಿಕೊಂಡಿರುವ ಘಟನೆ ಮೇ.3ರಂದು ನಡೆದಿದೆ.

fight

ಮುಂದೆ ಓದಿ..; ಮಹಿಳೆಯರ ಸುರಕ್ಷತೆಗೆ ಬಂತು ‘ವುಮೆನ್ ಸೇಫ್ಟೀ’ ಅಪ್ಲಿಕೇಷನ್‌..!

ಪ್ರಾಂಶುಪಾಲರು ಶಿಕ್ಷಕಿ ಶಾಲೆಗೆ ತಡವಾಗಿ ಬರುವುದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಶಿಕ್ಷಕಿ ಪ್ರಾಂಶುಪಾಲೆಗೆ ನೀವು ಕೂಡ ನಾಲ್ಕು  ದಿನಗಳಿಂದ ತಡವಾಗಿ ಬರುತ್ತಿದ್ದೀರಲ್ವಾ ಎಂದು ಮರುತ್ತರಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಹೆಚ್‌ಎಮ್ ಶಿಕ್ಷಕಿ ಜೊತೆ ವಾಗ್ವಾದಕ್ಕಿಳಿದು ಕೊನೆಗೆ ಹೊಡೆದಾಡಿಕೊಂಡಿದ್ದಾರೆ. ಶಿಕ್ಷಕಿ ಗುಂಜಾ ಚೌಧರಿ ಹಾಗೂ ಪ್ರಾಂಶುಪಾಲೆ ಇಬ್ಬರೂ  ಹಿಡಿದು ಎಳೆದಾಡಿದ್ದಾರೆ.  ಈ ವೇಳೆ ಶಿಕ್ಷಕಿಯ ಕಣ್ಣಿಗೆ ಗಾಯಗಳಾಗಿದೆ. ಇನ್ನು ಶಿಕ್ಷಕಿ ಪ್ರಾಂಶುಪಾಲರ ಬಟ್ಟೆಯನ್ನು ಹರಿದು ಹಾಕಿದ್ದಾರೆ. ಈ ಮಧ್ಯೆ ಅಲ್ಲೇ ಇದ್ದ ಸಿಬಂದಿಗಳು ಗಲಾಟೆಯನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಇನ್ನು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಚರ್ಚೆ ಒಳಗಾಗಿದೆ.

Continue Reading

FILM

ಬಾಲಿವುಡ್ ಜನಪ್ರಿಯ ನಿರೂಪಕಿ ಭಾರತಿ ಸಿಂಗ್ ಆಸ್ಪತ್ರೆ ದಾಖಲು..!

Published

on

ಮುಂಬೈ: ಬಾಲಿವುಡ್ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಡ್ಯಾನ್ಸ್ ದೀವಾನೆ ಸೀಸನ್ 4 ಅನ್ನು ಹೋಸ್ಟ್ ಮಾಡುತ್ತಿರುವ ಖ್ಯಾತ ನಿರೂಪಕಿ ಭಾರತಿ ಸಿಂಗ್  ತೀವ್ರ ಹೊಟ್ಟೆ ನೋವಿನಿಂದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

bharathi

‘ಕಳೆದ ಮೂರು ದಿನಗಳಿಂದ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದೇನೆ’ ಎಂದು ತನ್ನ ವ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅದನ್ನು ಗ್ಯಾಸ್ಟ್ರೊನಲ್ ಅಥವಾ ಆಮ್ಲೀಯ ಅಸ್ವಸ್ಥತೆ ಆಗಿರಬಹುದೆಂದು ಭಾವಿಸಿ ನಿರ್ಲಕ್ಷ ಮಾಡಿದ್ದರಂತೆ. ಆದರೆ, ನೋವು ತಡೆದುಕೊಳ್ಳಲಾಗದೆ ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರ್ಧರಿಸಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ವ್ಲಾಗ್‌ನಲ್ಲಿ ಹೇಳಿದ್ದಾರೆ. ಇನ್ನು ವೈದ್ಯಕೀಯ ಪರೀಕ್ಷೆ ಬಳಿಕ ಭಾರತಿಗೆ ಪಿತ್ತಕೋಶದಲ್ಲಿ ಕಲ್ಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಏನೂ ತಿನ್ನಲು ಆಗುತ್ತಿಲ್ಲ ತಿಂದರೂ ವಾಂತಿ ಆಗುತ್ತಿದೆ ಎಂದ ಹೇಳಿದ ಅವರು ಭಾವುಕರಾದರು.

ಮುಂದೆ ಓದಿ..;‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

ಈ ನಡುವೆ ಭಾರತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೇಗ ಚೇತರಿಸಿಕೊಳ್ಳುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಕಮೆಂಟ್‌ಗಳನ್ನು ಹಾಕಿದ್ದಾರೆ.

 

Continue Reading

LATEST NEWS

Trending