Connect with us

    DAKSHINA KANNADA

    ಮಂಗಳೂರು: ಇಂಡಿಯಾನಾ ಆಸ್ಪತ್ರೆಯಲ್ಲಿ ಟ್ಯೂಮರ್ ಬಾಧಿತ ಬೆನ್ನೆಲುಬಿಗೆ ಸವಾಲಿನ ಶಸ್ತ್ರಚಿಕಿತ್ಸೆ

    Published

    on

    ಮಂಗಳೂರು: ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್‌ನ ಆರ್ಥೋಪಡಿಕ್ ಅಂಕೊಲಾಜಿ ವಿಭಾಗ ಮತ್ತು ಬೆನ್ನುಮೂಳೆ ಶಸ್ತ್ರಚಿಕಿತ್ಸೆ ವಿಭಾಗದ ಶಸ್ತ್ರಚಿಕಿತ್ಸಕರು ಕೆಳ ಬೆನ್ನುಮೂಳೆಯಲ್ಲಿ ಅಂಟಿಕೊಂಡಿದ್ದ ಮೃದು ಅಂಗಾಂಶದ ಗೆಡ್ಡೆಯೊಂದಿಗೆ ಬಂದಂತಹ 33 ವರ್ಷ ಪ್ರಾಯದ ರೋಗಿಯ ಮೇಲೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.


    ಈ ಕ್ಯಾನ್ಸರ್ ಕಾಯಿಲೆಯನ್ನು ನಿವಾರಿಸಲು 2-3 ಕಶೇರು ಖಂಡಗಳನ್ನು ಒಳಗೊಂಡಿರುವ ಬೆನ್ನುಮೂಳೆಯ ಪ್ರಮುಖ ಭಾಗ ಮತ್ತು ಆತನ ಸೊಂಟದ ಒಂದು ಭಾಗವನ್ನು ಒಳಗೊಂಡಿರುವ ಗೆಡ್ಡೆಯನ್ನು ತೆಗೆದುಹಾಕುವ ಅಗತ್ಯವಿತ್ತು.

    ಇಂತಹ ಶಸ್ತ್ರಚಿಕಿತ್ಸೆಗಳು ಸಾಮಾನ್ಯವಾಗಿ ಕೆಳ ಅಂಗದ ತಾತ್ಕಾಲಿಕ ಅಥವಾ ಶಾಶ್ವತ ಪಾರ್ಶ್ವವಾಯು, ಬೆನ್ನುಮೂಳೆಯ ಅಸ್ಥಿರತೆ ಮತ್ತು ಕೆಲವೊಮ್ಮೆ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಅಸಾಧ್ಯತೆಗಳಂತಹ ಅಪಾಯಗಳೊಂದಿಗೆ ಸಂಬಂಧಿಸಿವೆ.

    ಇಂಡಿಯಾನಾ ಆಸ್ಪತ್ರೆಯ ಡಾ.ನವನೀತ್ ಎಸ್.ಕಾಮತ್ ಮತ್ತು ಡಾ.ಹಶೀರ್ ಸಫಾನ್ ನೇತೃತ್ವದ ತಜ್ಞ ಮೂಳೆ ಕ್ಯಾನ್ಸರ್ ಶಸ್ತ್ರಚಿಕಿತ್ಸಕರ ತಂಡ ಬೆನ್ನುಮೂಳೆಯ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲು ಸುದೀರ್ಘ 14 ಗಂಟೆಗಳ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.

    ರೋಗಿಯ ಚೇತರಿಕೆ ಸುಗಮವಾಗಿದ್ದು ಈಗ ಸ್ವತಂತ್ರವಾಗಿ ಕಾರ್ಯನಿರ್ವಸಬಲ್ಲ ಈ ಪ್ರಕರಣದ ಮುಖ್ಯ ಸಮಸ್ಯೆಯೆಂದರೆ ಬೆನ್ನುಹುರಿಗೆ ಸಂಭವನೀಯ ಹಾನಿ, ಬೆನ್ನುಮೂಳೆಯ ಸ್ಥಿರತೆಗೆ ಹಾನಿ ಮತ್ತು ಭಾರೀ ರಕ್ತಸಾವದ ಅಪಾಯಗಳೊಂದಿಗೆ ಪ್ರಯೋಗಿಸಬೇಕಾದಂತಹ ಕಷ್ಟಕರವಾದ ಶಸ್ತ್ರಚಿಕಿತ್ಸಾ ವಿಧಾನ.

    ಇಂತಹ ಕ್ಯಾನ್ಸರ್ ಗೆಡ್ಡೆಗಳಿಗೆ ಶಸ್ತ್ರಚಿಕಿತ್ಸೆಯು ಮುಖ್ಯ ಚಿಕಿತ್ಸಾವಿಧಾನವಾಗಿದೆ ಮತ್ತು ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ವಿಫಲವಾದಲ್ಲಿ ರೋಗಿಯ ಬದುಕುಳಿಯುವಿಕೆಯ ಮೇಲೆ ಪರಿಣಾಮ ಬೀರಬಹುದು.

    ಇಂಡಿಯಾನಾ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸೆಯ ಸೂಪರ್ ಸ್ಪೆಷಾಲಿಟಿ ವಿಭಾಗಗಳ ವಿಕಸನ, ವ್ಯಾಪಕವಾದ ಪೂರ್ವಭಾವಿ ಯೋಜನೆ ಮತ್ತು ತಜ್ಞರ ತಂಡದಿಂದ ಉತ್ತಮ ಸಂಘಟಿತ ಕೆಲಸ. ಇಂತಹ ಶಸ್ತ್ರಚಿಕಿತ್ಸೆಗಳನ್ನು ಸಾಧ್ಯವಾಗಿಸಿದೆ ಎಂದು ಆರ್‌ತ್ರೋಪೆಡಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಜಲಾಲುದ್ದೀನ್ ಹೇಳಿದರು.

    ಈ ಶಸ್ತ್ರಚಿಕಿತ್ಸೆಯ ತಂಡ ಡಾ. ವಿನಯ್ ಕುಮಾರ್ (ಸರ್ಜಿಕಲ್ ಆಂಕೊಲಾಜಿಸ್ಟ್), ಡಾ. ನಿಖಿಲ್ ಎಂ.ಪಿ. ಮತ್ತು ಡಾ. ಹರೀಶ್ ಬಿ.ಜೆ. (ಅರಿವಳಿಕೆ ತಜ್ಞರು) ಮತ್ತು ಡಾ. ನಿಖಿಲ್ ಶೆಟ್ಟಿ (ಪ್ಲಾಸ್ಟಿಕ್ ಸರ್ಜನ್) ಇವರನ್ನು ಒಳಗೊಂಡಿತ್ತು.

    ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ತಂಡವನ್ನು ಅಭಿನಂದಿಸಿದ ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಇಂಟರ್‌ವೆನ್ಷನಲ್‌ ಕಾರ್ಡಿಯಾಲಜಿಸ್ಟ್ ಡಾ. ಯೂಸುಫ್ ಕುಂಬ್ಳೆ, ‘ಕಷ್ಟವಾದ ಹೃದಯ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುವ ನಮ್ಮ ವಿಧಾನದಂತೆಯೇ, ಇಂಡಿಯಾನಾ ಆಸ್ಪತ್ರೆಯು ಕಷ್ಟಕರವಾದ ಮೂಳೆಚಿಕಿತ್ಸೆಯ ಸೂಪರ್ ಸ್ಪೆಷಾಲಿಟಿ ಸಮಸ್ಯೆಗಳನ್ನು ನಿಭಾಯಿಸಲು ತಂಡ ಆಧಾರಿತ ವಿಧಾನವನ್ನು ಅಳವಡಿಸಿಕೊಂಡಿದೆ’ ಎಂದು ಹೇಳಿದರು.

    DAKSHINA KANNADA

    WATCH: ಕೆಪಿಟಿ ಬಳಿ ಭೀಕರ ಅಪಘಾ*ತ: ಲಾರಿಯಡಿ ಬಿದ್ದ ಬೈಕ್ ಸವಾರ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Published

    on

    ಮಂಗಳೂರು : ಬೈಕ್ ಸವಾರನ ಮೇಲೆ ಲಾರಿ ಹರಿದು ಸವಾರ ಗಂಭೀ*ರವಾಗಿ ಗಾ*ಯಗೊಂಡಿರುವ ಘಟನೆ ಮಂಗಳೂರಿನ ಕೆಪಿಟಿ ಬಳಿ ನಡೆದಿದೆ. ತಲಪಾಡಿ ಕಿನ್ಯಾ ಮೂಲದ ಅಶೋಕ್(44) ಗಂಭೀ*ರವಾಗಿ ಗಾಯಗೊಂಡವರು.

    ಯೆಯ್ಯಾಡಿಯಿಂದ ಕೆ.ಪಿ.ಟಿ ಜಂಕ್ಷನ್​ ಬಳಿಯ ಪೆಟ್ರೋಲ್ ಪಂಪ್ ಕಡೆ ಬೈಕ್ ಸವಾರ ಬರುತ್ತಿದ್ದರು. ಅದೇ ವೇಳೆ ಪೆಟ್ರೋಲ್ ಪಂಪ್ ಕಡೆಗೆ ಇಂಡೇನ್ ಗ್ಯಾಸ್ ತುಂಬಿದ್ದ ಗೂಡ್ಸ್ ಲಾರಿ ಬರುತ್ತಿತ್ತು. ಗೂಡ್ಸ್ ಲಾರಿಯ ಚಾಲಕ ಏಕಾಏಕಿ ಎಡಬದಿಗೆ ತಿರುಗಿಸಿದ್ದರಿಂದ ಬೈಕ್‌ಗೆ ಡಿ*ಕ್ಕಿ ಹೊಡೆದಿದೆ.

    ಇದನ್ನೂ ಓದಿ : ಕಳ್ಳರ ಜೊತೆ ಕೈ ಜೋಡಿಸಿ ಲಕ್ಷಗಟ್ಟಲೆ ಕೊಳ್ಳೆ ಹೊಡೆದ ಪೊಲೀಸ್; ತಗಲಾಕ್ಕೊಂಡಿದ್ದು ಹೇಗೆ?

    ಪರಿಣಾಮ ಬೈಕ್ ಸವಾರ ಲಾರಿಯಡಿಗೆ ಸಿಲುಕಿ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.  ಅಪಘಾ*ತದ ದೃಶ್ಯ ಪೆಟ್ರೋಲ್‌ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Continue Reading

    DAKSHINA KANNADA

    ಮೂಡುಬಿದಿರೆ : ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರ ಬಂಧನ

    Published

    on

    ಮೂಡುಬಿದಿರೆ : ಆತ ಒಬ್ಬ ಖತರ್ನಾಕ್‌ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ಹಲವು ಪೊಲೀಸ್ ಠಾಣೆಯಲ್ಲಿ 42 ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿತ್ತು. ಹಲವು ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ವಾರೆಂಟ್ ಇದ್ರೂ ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್‌ ಆಗ್ತಾನೆ ಇದ್ದ. ಇತ್ತೀಚೆಗೆ ಆಗಸ್ಟ್‌ ತಿಂಗಳಲ್ಲಿ ಮೂಡುಬಿದ್ರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆತ ವೃದ್ಧ ಮಹಿಳೆಯರನ್ನು ಗುರಿಯಾಗಿಸಿ ಅವರ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದ.

    ಮೂಡಬಿದ್ರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ನಿರ್ಮಲಾ ಪಂಡಿತ್ ಎಂಬ 70 ವರ್ಷದ ವೃದ್ದೆಯ 24 ಗ್ರಾಂ ಚಿನ್ನದ ಸರ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಾರ್ನಾಡು ಗ್ರಾಮದ ಬಸದಿ ಬಳಿ 82 ವರ್ಷ ಪ್ರಾಯದ ಪ್ರೇಮಾ ಎಂಬ ವೃದ್ಧೆಯ 24 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಈ ಎರಡೂ ಪ್ರಕರಣದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಈ ಕೃತ್ಯ ನಡೆಸಿದ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು.

    ಇದನ್ನೂ ಓದಿ :ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾ*ತ; ಸವಾರ ಸಾ*ವು

    ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿದಾಗ ಇದು ಖತರ್ನಾಕ್‌ ಖದೀಮ ಚೆಂಬುಗುಡ್ಡೆಯ ಹಬೀಬ್‌ ಹಸನ್‌ ಕೃತ್ಯ ಎಂಬುದು ಗೊತ್ತಾಗಿದೆ. ಈತನ ಮೇಲೆ ವಿವಿಧ ಠಾಣೆಯಲ್ಲಿ 15 ಕ್ಕೂ ಹೆಚ್ಚು ಬಂಧನದ ವಾರೆಂಟ್ ಇದ್ರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಇದೀಗ ಮೂಡುಬಿದ್ರೆಯಲ್ಲಿ ಕೊ*ಲೆ ಆರೋಪಿ ಬಂಟ್ವಾಳದ ಉಮ್ಮರ್ ಸಿಯಾಫ್ ಎಂಬಾತನ ಜೊತೆ ಸೇರಿ ಸರ ಕಳ್ಳತನಕ್ಕೆ ಇಳಿದಿದ್ದ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃ*ತ್ಯಕ್ಕೆ ಬಳಿಸಿದ್ದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.

    Continue Reading

    DAKSHINA KANNADA

    ಸೌದಿ ಅರೇಬಿಯಾದಲ್ಲಿ ಭೀಕರ ಕಾರು ಅ*ಪಘಾತ; ಉಳ್ಳಾಲದ ತಾಯಿ – ಮಗು ಮೃ*ತ್ಯು

    Published

    on

    ಉಳ್ಳಾಲ: ಸೌದಿ ಅರೇಬಿಯಾದ ಧಮಾಮ್ ಬಳಿ ಶುಕ್ರವಾರ(ಸೆ.20) ನಡೆದ ಭೀಕರ ರಸ್ತೆ ಅಪ*ಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ತಾಯಿ, ಮಗು ಸಾ*ವನ್ನಪ್ಪಿದ್ದಾರೆ.


    ಹೈದರ್ ಉಳ್ಳಾಲ್ ಅವರ ಪುತ್ರಿ ಸಫಾ ಫಾತಿಮಾ (30) ಹಾಗೂ ಎರಡೂವರೆ ವರ್ಷದ ಮೊಮ್ಮಗ ಮೃತ ದು*ರ್ದೈವಿಗಳು. ಶುಕ್ರವಾರ ಸಂಜೆ ವೇಳೆ ಮದೀನದಿಂದ ಕಾರಿನಲ್ಲಿ ಸಫಾ ಫಾತಿಮಾ ತನ್ನ ಪತಿ ಮಲಪುರಂ ಆರಿಕೋಡ್ನ ಸುಹೈಲ್ (35) ಮತ್ತು ಸಹೋದರ ಮುಹವಿಯ(23) ಜೊತೆಗೆ ದಮಾಮ್ ನಲ್ಲಿರುವ ಹೈದರ್ ಉಳ್ಳಾಲ್ ಅವರ ಮನೆಗೆ ತೆರಳುತ್ತಿದ್ದರು.
    ಈ ವೇಳೆ ಕಾರು ಅ*ಪಘಾತವಾಗಿದ್ದು, ಕಾರಿನಲ್ಲಿದ್ದ ಸುಹೈಲ್, ಮಕ್ಕಳಾದ ಅಬ್ದುಲ್ ಮಲಿಕ್ (7), ಅಬ್ದುಲ್ ರಹಿಮಾನ್ (6) ಹಾಗೂ ಅಹ್ಮದ್ (5) ತೀವ್ರ ಗಾ*ಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ

    Continue Reading

    LATEST NEWS

    Trending