ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗಂಡು ಮಗುವಿನ ಜನ್ಮ ನೀಡಲು ಕಾರಣನಾದ ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಕಿನ್ನಿಗೋಳಿ ಕೊಲ್ಲೂರು ನಿವಾಸಿ ಅಶ್ವಥ ಬಂಧಿತ ಆರೋಪಿ.
ಪಾಣೆಮಂಗಳೂರು ಗ್ರಾಮದ ಉಪ್ಪುಗುಡ್ಡೆ ನಿವಾಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಅಪ್ರಾಪ್ತ ಬಾಲಕಿಯು 2 ವರ್ಷಗಳ ಹಿಂದೆ ಕಿನ್ನಿಗೋಳಿಗೆ ತನ್ನ ಸ್ನೇಹಿತೆಯ ಮದುವೆಗೆ ತೆರಳಿದ್ದ ವೇಳೆ ಆರೋಪಿ ಅಶ್ವಥನ ಪರಿಚಯವಾಗಿತ್ತು.
ಬಳಿಕ ಇಬ್ಬರೂ ಮೊಬೈಲ್‌ನಲ್ಲಿ ಅನ್ಯೋನ್ಯವಾಗಿ ಮಾತನಾಡಿಕೊಂಡಿದ್ದರು.
ಕಳೆದ ವರ್ಷ ಜುಲೈನಲ್ಲಿ ಬಾಲಕಿಯು ಮನೆಗೆ ಹೋಗಿದ್ದಾಗ ಮಧ್ಯಾಹ್ನ ಈತ ಅಲ್ಲೇ ಪಕ್ಕದಲ್ಲಿರುವ ಆತನ ಅಣ್ಣನ ಖಾಲಿಯಿರುವ ಮನೆಗೆ ಕರೆದುಕೊಂಡು ಹೋಗಿ ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿರುತ್ತಾನೆ.
ಆ ನಂತರವೂ ಕೂಡಾ ಇಬ್ಬರ ಮೊಬೈಲ್ ಸಂಭಾಷನೆ ಮುಂದುವರೆದಿತ್ತು.
ಕಳೆದ ವರ್ಷ ಕಾಲೇಜಿಗೆ ರಜೆ ಇದ್ದು, ಆ ದಿನವೂ ಬಾಲಕಿ ಅಶ್ವಥನ ಮನೆಗೆ ಹೋಗಿದಾಗಲೂ ಆತ ಮತ್ತೆ ದೈಹಿಕ ಸಂಪರ್ಕ ಮಾಡಿದ್ದ.
ಇದೀಗ ಬಾಲಕಿಯು ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಲು ಅಶ್ವಥನು ಕಾರಣನಾಗಿರುತ್ತಾನೆ. ಹೀಗಾಗಿ ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.